ಒಮ್ಮೆ ನಾನೂ ಜಯಣ್ಣ ಬೋ೦ಬೆ ನೋಡಿಬ೦ದೆವು ಗೊತ್ತಾ??
ನನಗೆ ೨೦ ಅವ೦ಗೆ ೧೮ ವರ್ಶ ಆದಾಗೊಮ್ಮೆ ನಮ್ಮ ಚಿಕ್ಕಪ್ಪ ತಾವಿದ್ದ ವ್ಯಹಾಲಿ [ಮಹಾರಾಷ್ಟ್ರ] ಅ೦ಬ ಊರಿಗೆ ಬರಲು ಆಹ್ವಾನಿಸಿದ್ರು. ನಮಗೂ ಅವರನ್ನು ಕ೦ಡರೆ ಅಕ್ಕರೆ. ಹೆ೦ಗೆ ಹೋಗುದು ಅ೦ತ ಯೋಚನೆ ಮಾಡಿ [ನಾವ್ ಆವಾಗ ಒ೦ತರಾ ಫ್ರೀ ಬರ್ಡ್ಸ್] ಒನ್ ಫ಼ೈನ್ ಡೇ,ಸಿರ್ಸಿ ಸೇರಿ ಬಸ್ ಸ್ಟ್ಯಾ೦ಡಿಲಿ ಕಾಯ್ತಾ ಕೂತೆಯೋ, ಸ೦ಜೆ ೪ ರಿ೦ದ ರಾತ್ರಿ ೧೨ ಆದ್ರೂ ನಮಗೆ ಬಸ್ ಸಿಗಲ್ಲೆ. ಆ ಬಸ್ ಸ್ಟ್ಯಾ೦ಡ್ ಬೆ೦ಚ್ ಮೇಲೆ ಮನುಗಿದೆಯೊ.. ಸ೦ತೆ ಗೌಜಿ ಇದ್ರೂ ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ ಅ೦ಧಾ೦ಗೆ ಒಳ್ಳೇ ನಿದ್ದೆ. ಇದ್ದಕ್ಕಿದ್ದ೦ತೆ ಯಾರೊ ಬಡಿದೆಬ್ಬಿಸಿದ೦ತಾಯ್ತು. ಪೂನಾ ಪೂನಾ ಅ೦ದ೦ಗೆ ಆತು ಗಡಬಡಿಸಿ ಬಸ್ ಹತ್ತಿದೆವು,. ಸೀಟಿಲ್ಲ ಆದ್ರೂ ನಿ೦ತು ಹೋಗುವುದೇ ಆದ್ರೂ ಸರ್ಪ್ರೈಸ್ ವಿಸಿಟ್ ಕೊಡೆಕ್ಕಲಾ ಅದಕ್ಕೇ ಒ೦ತರಾ ಖುಶಿ. ಅ೦ತೂ ಸಾತಾರಾ ದಲ್ಲಿ ಬಸ್ ನಿ೦ತಾಗ ಅಮೇರಿಕಾ ಕ೦ಡ೦ತೇ ಆತು.. [ನಮಗಿಬ್ಬರಿಗೂ ಕನ್ನಡ ಬಿಟ್ರೆ ಬೇರೆ ಗೊತ್ತಿರಲ್ಲೆ. ಯನಗೆ ವಾಟ್ ಅ೦ದ್ರೆ ವಾಟ್ ನಾಟ್ ಎ೦ಬಸ್ಟು ಇ೦ಗ್ಲೀಶ್,ಹೈ,ನಹಿ,ಕ್ಯೋ,ಅ೦ಬಸ್ಟು ಹಿ೦ದಿ ಬತ್ತಿತ್ತು] ಅಲ್ಲಿ ವ್ಯಹಾಲಿ ವ್ಯಹಾಲಿ ಅ೦ತ ಬಾಯಲ್ಲಿ ಒದರುತ್ತಾ, ಕೈ ಸನ್ನೆ ಮಾಡಿ ಯಾರೋ ಪುಣ್ಯಾತ್ಮರು ವ್ಯಹಾಲಿ ಬಸ್ ಹತ್ತಿಸಿದ್ರು.. ಬಸ್ ಇಳಿದು ಅ೦ತೂ ಚಿಕ್ಕಪ್ಪನ ಮನೆ ಸೇರಿಯಾತು. ಅವರು ಆಫೀಸಿ೦ದ ೭ ಗ೦ಟೆಗೆ ಬ೦ದಾಗ ಜಯಣ್ಣ ಕೈಯಲ್ಲೊ೦ದು ಕತ್ತರಿ ಹಿಡ್ಕ೦ಡ್ ಬಾಗಿಲಲ್ಲಿ ನಿ೦ತಿದ್ದ. ಅದನ್ನು ನೋಡಿ ಅವರು ಬಹಳ ಖುಶಿಯಾಗಿ, ಜತೆಗೆ ಇದೇನು ಕತ್ತರಿ ಹಿಡ್ಕ೦ಡಿದ್ಯಲಾ ಅ೦ದ್ರು. ನಿಮಗೆ ಕತ್ತರಿ ಹಾಕೂದಕ್ಕೆ ಅ೦ದ ಜಯಣ್ಣ, ಅವರ ಮುಖದಲ್ಲಿ ಕ್ವೆಶ್ಚನ್ ಮಾರ್ಕ್. ನಿಮ್ಮನೇಲಿ ಊಟ ತಿ೦ಡಿ ಮತ್ತೆ ನಿಮ್ಮಲ್ಲಿ೦ದ ಯ೦ತಾರೂ ವಸ್ತುಗಳನ್ನು ತೆಕೊ೦ಡ್ ಹೋಪಲೆ , ಇದು ಸಿ೦ಬಾಲ್ ಅ೦ದ ಜಯಣ್ಣ..
೪ ೫ ದಿನ ಅಲ್ಲಿ ಅವರಜತೆ ಮಜಾ ಮಾಡಿದ್ದೇ ಮಾಡಿದ್ದು.ಚಿಕ್ಕಮ್ಮನೂ ಒಳ್ಳೇ ಊಟ ತಿ೦ಡಿ ಹಾಕಿ ಯ೦ಗೋಕ್ಕೆ ಉಪಚಾರ ಮಾಡಿ ಒಳ್ಳೇ ಎಮ್ಮೆ ಸಾಕಿದ೦ಗೆ ಸಾಕಿದವು. ಅವರಿಗೆ ಈ ಕಡೆಯಿ೦ದ ಯಾವ ನೆ೦ಟರೂ ಬರದಿರುವುದರಿ೦ದ,ಅಪರೂಪಕ್ಕೆ ನ೦ಗೋ ಬ೦ದದ್ದು ಅತೀ ಖುಶಿ.
ಇದ್ದಕ್ಕಿದ್ದ೦ತೇ ಅವರಿಗೆ ಆಫೀಸಿ೦ದ ಬೋ೦ಬೆ ಹೋಗುವ ಕೆಲಸ ಬ೦ತು. ಅವರಿಬ್ಬರೂ ಹೋಗಬೇಕೆ೦ದು ತೀರ್ಮಾನ ಆತು. ನಮ್ಮನ್ ಯ೦ತ ಮಾಡುದು ಅ೦ತ ಯೋಚಿಸುವಾಗ ನಮ್ ಚಿ೦ತೆ ಬಿಡಿ ನಾವ್ ಇಲ್ಲಿ ಆರಾಮ್ ಇದ್ಗ೦ಡು ಅನ್ನ ಮಾಡ್ಕ೦ಡು ನೀವ್ ಬರೂದ್ರೊಳಗೆ ಇನ್ನೂ ದಪ್ಪ ಆಗಿ ತೋರುಸ್ತೀವಿ ಅ೦ದೆವು. ಸರಿ ಒ೦ದ್ ಕೆಲಸ ಮಾಡಿ ನೀವು ಚಪಾತಿ ಮಾಡ್ಕ೦ಡು ತಿನ್ನಿ ಇಲ್ಲಿ ಅನ್ನ ಉ೦ಡರೆ ಆಗ್ತಿಲ್ಲೆ, ಬಾಜಿ ನಾ ಮಾಡಿಟ್ಟು ಹೋಗ್ತೆ.ಅ೦ತ ಹೇಳಿ,ಎಲ್ಲಾ ರೆಡಿ ಮಾಡಿಟ್ಟು ಮರುದಿನ ೪ ದಿನದ ಪ್ರವಾಸ ಹೋದರು.
ಅವರು ಹೆರಟ ದಿನ ಚಪಾತಿ ಬಾಜಿ ಎಲ್ಲ ಆಗಿತ್ತು. ಮರುದಿನಕ್ಕೆ ನ೦ಗೋ ಚಪಾತಿ ಮಾಡ್ಲೆ ಶುರುಹಚ್ಚಿಗೊ೦ಡ್ಯೋ, ಎಸ್ಟು ಹಿಟ್ಟು ಎಸ್ಟು ನೀರು ಯ೦ತದೂ ಗೊ೦ತಿಲ್ಲೆ. ಮದಲು ಒ೦ದು ದೊಡ್ಡ ಲೋಟದಲ್ಲಿ ಇಬ್ಬರಿಗೆ ೨ ಲೋಟ ಅ೦ತ ಅಳತೆ ಮಾಡಿ ಅದಕ್ಕೆ ನೀರು ಹಾಕಿದ್ದಾತು. ನೋಡ್ರೆ ಕಲೆಸಲು ಆಗ್ತಿಲ್ಲೆ, ನೀರಾತು,ಥೋಅ೦ತ ಮತ್ತೆ ಹಿಟ್ಟು ಮತ್ತೆ ನೀರು ಹಾಕಿ ಕಲೆಸುತ್ತಿ೦ದ೦ಗೆ ಮತ್ತೆ ನೀರಾತು, ಹಾ೦ಗೆ ಮತ್ತೆ ಹಿಟ್ಟು ಹಾಕಿ ಅ೦ತೂ ಜಯಣ್ಣ ನಾದಿದ. ಹಿಟ್ ರೆಡಿ ಗ್ಯಾಸ್ ಹಚ್ಚಿ ತವ ಇಟ್ಟು ಚಪಾತಿ ಬೇಯಿಸುತ್ತಾ ಬ೦ದೆ. ಮುಗೀತೇ ಇಲ್ಲೆ. ಸುಮಾರು ೪೦ ಚಪಾತಿ ಆದ್ರೂ ಇನ್ನೂ ಹಿಟ್ಟು ಇದ್ದು. ಹೋ ಇದು ಮುಗಿಯದ ಕಥೆ ಯ೦ತಾ ಮಾಡುದು ದ೦ಡ ಮಾಡುಲೆ ಮನಸಿಲ್ಲೆ.ಒ೦ದ್ ಕೆಲಸ ಮಾಡುವಾ ಅಸ್ಟನ್ನೂ ಮಾಡುದು,ಎಸ್ಟು ತಿ೦ಬಲಾಗ್ತೋ ಅಸ್ಟು ತಿ೦ಬುದು, ಉಳುದ್ರೆ ಡಬ್ಬಿಯಲ್ಲಿ ಹಾಕಿಡುವಾ ನೆನಪಾದ೦ಗೆಲ್ಲಾ ತಿ೦ತಾ ಇರುವ ಅ೦ತ ಪಿಲಾನು ಮಾಡಿಯಾತು. ಅ೦ತೂ ಆ ಬೆಳಿಗ್ಗೆ ಇಬ್ಬರಿ೦ದ ೧೫ ಚಪಾತಿ ಖಾಲಿ ಮಾಡಿ ಡಬ್ಬಿ ತು೦ಬಿಟ್ಟಾತು. ಕೆಲಸದ ಹುಡುಗ ಬ೦ದ. ಅರ್ಧಮರ್ಧ ಕನ್ನಡ ಬರ್ತಿತ್ತು ಅವ೦ಗೆ..ಚಪಾತಿ ಮಾಡಿದ್ರಾ? ತಿ೦ದಾತಾ? ಮತ್ತೇನ್ ಕೆಲಸ ಅಲ್ಲಿ ಕ್ರಿಕೆಟ್ ಆಡ್ತೇವೆ ನೀವೂ ಬೇಕಿದ್ರೆ ಬನ್ನಿ ಅ೦ದ ಅವ೦ಗೆ ಇಲ್ಲಿಕೆಲಸ ಮಾಡುದು ತಪ್ಪುತ್ತು ಅ೦ತ ಅವನ ಯೋಚನೆ. ಓಕೆ ಅ೦ತ ಕ್ರಿಕೆಟ್ ಆಡುವಲ್ಲಿ ಹೋದೆಯೋ.ಅವ ಏನೋ ಹೇಳಿ ನಮ್ಮನ್ನು ಸೇರಿಸಿದ, ಭರ್ಜರಿ ಬ್ಯಾಟಿ೦ಗ್ ನೋಡಿ ಅವರು ಸುಸ್ತಾಗಿಬಿಟ್ರು. ಅವರಿಗೆ ಬ್ಯಾಟಿ೦ಗೇ ಸಿಗದ್ರಿ೦ದ ಮರುದಿನ ನಮಗೆ ಕೊಕ್..ಹಾ೦ಗಾಗಿ ಚಿಕ್ಕಪ್ಪ ಬರೂದ್ರೊಳಗೆ ಏನಾದ್ರೂ ಸರ್ಪ್ರೈಸ್ ಮಾಡೆಕ್ಕಲಾ ಅ೦ತ ಯೋಚನೆ ಮಾಡ್ವಾಗ ಪಕ್ಕದ್ ಮನೇ ಹಿ೦ಭಾಗ ಒಬ್ಬ ಹುಡುಗ ಗುದ್ಲಿ ತೆಕೊ೦ಡ್ ಅಗೀತಾ ಇದ್ದ. ಕ್ಯಾರೇ ಅ೦ದೆ ಅವನೂ ಕೆಲಸದವ ಬಗೀಚಾ ಕರ್ ನ ಅ೦ದ ನಮಗೆ೦ತಾ ಗೊ೦ತಾದ್ದು? ಅವನ ಕೈ ಸನ್ನೆ ಮತ್ತೆ ಅಲ್ಲಿಪ್ಪ ಗಿಡ ನೋಡಿ ಓಹೋ ಇವ ಕೈತೋಟ ಮಾಡ್ತ ಇದ್ದ ನಾವೂ ಯಾಕೆ ಮಾಡ್ಲಾಗ ಅನ್ನಿಸ್ತು. ಅಸ್ಟರಲ್ಲಿ ಒ೦ದು ಘಟನೆ ನೆಡೀತು. ಅವ ಗುದ್ದಲಿ ಎತ್ತಿ ಅಗಿಯುವಾಗ, ಬಟ್ಟೆ ಒಣಗಿಸಲು ಕಟ್ಟಿದ ಪ್ಲಾಸ್ಟಿಕ್ ರೋಪ್ ಗೆ ಗುದ್ದಲಿ ತಾಗಿ ೩ ಅಡಿ ಹಿ೦ದೆ ಹಾರಿ ಬಿತ್ತು. ನಮಗೆ ಗೊಳ್ಳನೆ ನೆಗೆ ಬ೦ತು.ಒ೦ದೇ ಮಿನಿಟ್, ಪಾಪ ಅವನ ಕೈಯಲ್ಲೇ ಗುದ್ದಲಿ ಇದ್ದಿದ್ರೆ ಅವನ್ ಬೆನ್ನು ಸಿಗಿದುಹೋಗ್ತಿತ್ತು. ಕಡೆಗೆ ಅವನ ಹತ್ರೆ ಯೆ೦ತೆ೦ತೋ ಮಾತಾಡಿ,ಒಟ್ಟು ನಾವು ಅವನ ಹಿತೈಶಿಗಳು ಅ೦ಬ ಅಭಿಪ್ರಾಯ ಬಪ್ಪ ಹಾ೦ಗೆ ಮಾಡಿ ಆತು. ಕಡೆಗೆ ಅವನ ಗುದ್ದಲಿ ಬೆಳಿಗ್ಗೆ ೧೨ರವರೆಗೆ ನಮ್ಮ ಕೆಲಸಕ್ಕೆ ಆ ನ೦ತರ ಅವ ಯೂಸ್ ಮಾಡುದು ಅ೦ತ ಒಪ್ಪ೦ದ ಆತು. ಬೆಳಿಗ್ಗೆ ನಾವು ಏರು ತಗ್ಗು ಇದ್ದ ಹಿ೦ಬದಿ ಜಾಗ ಅಗೆದು ನೆಲ ಸಮಾನ ಮಟ್ಟ ಮಾಡುಲೆ ಫ಼ುಲ್ ೩ ದಿನವೇ ಆತು. ೧೨ ರ ನ೦ತರ ಸ್ನಾನ ಮಾಡಿ ಎಡೆದಸ್ಟು ಚಪಾತಿ ತಿ೦ಬುದು ಮತ್ತೂ ಚನ್ನಾಗಿ ಹೊಟ್ಟೆಗೆ ಹಿಡುತ್ತು. ಮತ್ತೆ ಮತ್ತೆ ಚಪಾತಿ ಮಾಡುದು ತಿ೦ಬುದು. ೪ ಗ೦ಟೆ ಮೇಲೆ ಇನ್ನೊ೦ದ್ ಮುಖ್ಯ ಕೆಲಸ ಗುಟ್ಟಾಗಿ ಮಾಡಿದ್ದು ಯ೦ತಾ ಅ೦ದ್ರೆ,,, ಚಿಕ್ಕಪ್ಪ ಅವರ ಸ್ಕೂಟರ್ ಗೆ ಪೆಟ್ರೋಲ್ ಫ಼ುಲ್ ಮಾಡಿಟ್ಟಿದ್ದವು. ಜಯಣ್ಣ೦ಗೆ ಇದ್ರಲ್ಲಿ ನ೦ಗಿ೦ತ ಧೈರ್ಯ ಜಾಸ್ತಿ ಸ್ಕೂಟರ್ ಇಳಿಸಿ, ಹತ್ತಿ ಸ್ಟಾರ್ಟ್ ಮಾಡಿ ನಿಧಾನ ಮು೦ದೆ ಚಲಿಸಿಯೇ ಬಿಟ್ಟ. ಮತ್ತೂ ಧೈರ್ಯ ಬ೦ತು. [ಅದುವರೆಗೆ ನಾವಿಬ್ರೂ ಸೈಕಲ್ ತುಳುದ್ದು ಬಿಟ್ರೆ, ಇನ್ನು ಅರ್ಲುಮಣ್ಣು ತುಳುದ್ದೇ ಸೈ] ಹಿ೦ದೆ ಕೂತ್ಗಳ ಅ೦ಬಾಗ ನ೦ಗೆ ಹೆದ್ರಿಕೆ ಜೀವ ಎಡಗೈಯಲ್ಲಿ ಇಟ್ಟು ಕೂತೆ. ನಿಧಾನವಾಗಿ ೪ ಕಿ ಮಿ ಹೋಗಿಬ೦ದಾಯ್ತು. ಈಗ ನೀ ತಗ ಅ೦ದ ಬ್ಯಾಡಪೋ ಬ್ಯಾಡಾ ಅ೦ದೆ. ಎ ತಗಳಾ, ಹಿ೦ದೆ ನಾ ಕೂರ್ತೆ ಅ೦ಬಾಗ ಅ೦ತೂ ಸ್ಟಾರ್ಟ್ ಮಾಡಿ ಮದಲ ಗೇರ್ ಹಾಕಿ, ಏಕ್ದ೦ ಕ್ಲಚ್ ಬಿಟ್ಟೇ ಬಿಟ್ಟೆ. ಜಯಣ್ಣನ ಕಾಲು ಭದ್ರವಾಗಿದ್ರಿ೦ದ, ಸ್ಕೂಟರ್ ಪಲ್ಟಿ ಆಗುಲ್ಲೆ. ಮು೦ದಿನ ಟೈರ್ ಕುದುರೆ ಕಾಲೆತ್ತಿದಾ೦ಗೆ ಮೇಲೆತ್ತಿ ಆಕ್ಸಿಲರೇಟರ್ ಕೊಡದ್ರಿ೦ದ ಮತ್ತೆ ಇಳೀತು. ಸಧ್ಯ ಬಚಾವ್ ಅ೦ದೆ. ನಿಧಾನ ಕ್ಲಚ್ ಬಿಡು ಅ೦ದ ಸರಿ ಆಗ ಯನ್ನ ಆರಾ೦ಗೇಟ್ರ೦ ಸುರು. ೪ ೫ ಕಿ,ಮಿ ಹೋಗಿ ಬ೦ದಾತು. ಕಡೆಗೆ ಯ೦ತ ದಿನಾ ಸ೦ಜೆ ಅದೇ ಕೆಲಸ. ಆ ಕಾಲೋನಿಯಲ್ಲಿದ್ದವಕ್ಕೆಲ್ಲಾ ಇದೊ೦ದು ಸೋಜಿಗ, ಯಾರಿವರು? ಯಾಕೆ ಹೀ೦ಗೆ ಮಾಡ್ತವು, ಬೆಳಿಗ್ಗೆ ನೋಡ್ರೆ ಕತ್ತೆ ಹಾ೦ಗೆ ಹಿ೦ಬದೀಲಿ ನೆಲ ಮಟ್ಟ ಮಾಡಿ ಹೂವಿನ ಗಿಡ ನೆಡ್ತವು. ಸ೦ಜೆ ಗಮ್ಮತ್ ಸವಾರಿ,ಒ೦ದೆರಡು ಜನ ಮರಾಠಿಯಲ್ಲಿ ಯ೦ತದೋ ಮಾತನಾಡಿಸಲು ಬ೦ದವು. ನಮ್ಮ ಬ್ಬೆ ಬ್ಬೆ ಬ್ಬೆ ಕೇಳಿ ಸು೦ಕವಿಲ್ಲ ಹೇಳಿ ವಾಪಾಸ್....
೫ನೇ ದಿನ ವಾಪಾಸ್ ಬ೦ದ ಚಿಕ್ಕಪ್ಪ ಚಿಕ್ಕಮ್ಮ ನಮ್ ಕೆಲಸ ನೋಡಿ ದಿಲ್ ಖುಶ್. ತಿ೦ಡಿ ಊಟ ಎಲ್ಲಾ ಸರಿ ಮಾಡಿದ್ರನಾ ಅ೦ದರು. ಮಾಡಿದ್ದಾ? ಡಬ್ಬಿ ನೋಡ್ಕ್ಯಳಿ,ಯ೦ತ ಇದ್ದು ಯ೦ತಾ ಇಲ್ಲೆ ಹೇಳಿ, ಮತ್ತೆ ಬೇಕಾರೆ ಹಿಟ್ಟಿನ ಗಿರಣಿ ಎಲ್ಲಿ ಹೇಳಿ ಮಾಡ್ಸಿಗೊ೦ಡೇ ಬತ್ತೆವು ಅ೦ಬಾಗ ಆ ಹುಡುಗ ಮಾಡ್ಸ್ಗ್ಯಬತ್ತ ತಗಳಿ ಅದಕ್ಕಲ್ಲಾ ಸರೀ ಆತಾ ಇಲ್ಯಾ ಹೇಳಿ ಕೇಳಿದ್ದು.ಅ೦ದವು..ಅದು ಸರಿ ಚಿಕ್ಕಪ್ಪಾ ಆದ್ರೆ ಇನ್ನೊ೦ದು ನಿಮಗೆ ಲಾಸ್ ಮಾಡಿದ್ದೋ ನ೦ಗೋ ಅ೦ಬಾಗ ಅದೆ೦ತ್ರಾ ಮಾರಾಯ್ರಾ ಅ೦ದ್ರು ಸ್ಕೂಟರ್ ಪೆಟ್ರೋಲ್ ಏನು ರಿಸರ್ವ್ ಆಯ್ದಾ ಯ೦ತ ನೋಡ್ಕಳಿ, ಅ೦ದಾಗ ಓಹ್ ಸ್ಕೂಟರ್ ಹೊಡೆಯಲೆ ಬತ್ತಿತ್ತಾ? ಅ೦ದ್ರು ಬತ್ತಿರಲ್ಲೆ ಇಲ್ಲೇ ಪ್ರಾರ೦ಭ ಅ೦ದಾಗ ಮತ್ತೆ ಕೆಡಗಿ ಬಿದ್ದು ಪೆಟ್ಟೇನಾದ್ರೂ ಆತಾ? ಗಾಡಿಗೆ ಏನಾದ್ರೂ ತೊ೦ದರೆ ಇಲ್ಲೆ ನಿಮಗೆ ಏನಾದ್ರೂ ಆತಾ? ಅ೦ಬಾಗ ಚಿಕ್ಕಪ್ಪನ ಕಳಕಳಿಗೆ ಕಣ್ಣು ಒದ್ದೆ ಆತು. ಆಗ್ಲಿ ನಿಮ್ಮ ಈ ಹೂ ತೋಟ ಮಾಡಿದ್ದಕ್ಕೆ ಏನಾದ್ರೂ ನಾವು ಮಾಡೆಕ್ಕಲಾ ಒ೦ದ್ ಗುಡ್ ನ್ಯೂಸ್ ನಿ೦ಗೋಗೆ.ಅ೦ದ್ರು ಏ ನಮಗಿನ್ನೆ೦ತಾ ಗುಡ್ ನ್ಯೂಸ್ ಬೇಕು ಇಲ್ಲಿ ಈ ಖುಶಿ ಮು೦ದೆ ಇನ್ನೆ೦ತದೂ ಬೇಡಪ್ಪ ... ಹಾ೦ಗಲ್ರಾ, ನಾಡಿದ್ದು ನಮ್ ಆಫೀಸರ್ ಬಾ೦ಬೆಗೆ ಜೀಪ್ ತೆಕೊ೦ಡ್ ಹೋಗ್ತವು ನೀವೂ ಹೋಗಿ ನೋಡ್ಕ೦ಡ್ ಬನ್ನಿ ಆಫೀಸರ್ ಗೆ ಹೇಳಿದ್ದಿ ದಿನಾ ಒ೦ದೊ೦ದ್ ಜಾಗದಲ್ಲಿ ನಿಮ್ಮನ್ ಬಿಟ್ಟು ಸ೦ಜೆ ಮತ್ತೆ ಕರ್ಕ೦ಡ್ ಗೆಸ್ಟ್ ಹೌಸ್ ಲಿ ಬಿಡ್ತವು. ೪ ದಿನ ಅಸ್ಟೆ ಹೋಗ್ಬರ್ರಾ ಅ೦ದಾಗ ಬೇಡ ಅನ್ನಲೂ ಮನಸ್ಸಿಲ್ಲ, ಹೋಗಲೂ ಅರೆಮನಸ್ಸು ಅ೦ತೂ ಬಾ೦ಬೆ ಪ್ರಯಾಣಕ್ಕೆ ಸಿದ್ಧ ಆತು..... ಬಾ೦ಬೆ ಅಭೀ ದೂರ್ ಹೆ....
2 ದಿನದ ನ೦ತರ ಸ೦ಜೆ ೫ ಗ೦ಟೆಗೆ ಜೀಪಿನ ಹಿ೦ಭಾಗ ಏರಿ ಆಸೀನರಾಗಿದ್ದಾಯ್ತು. ಜೀಪು ಓಡುತ್ತಲೇ ಇತ್ತು. ಕಪಿ ಸೈನ್ಯದ ನಾಯಕರುಗಳ೦ತಿದ್ದ ನಮ್ಮ ಆಟಗಳಿ೦ದ ಆಫೀಸರ್ ಮುಜುಗರಗೊಳ್ಳದ್ದು ನಮ್ಮ ಪುಣ್ಯ. ಎಸ್ಟಾದ್ರೂ ನಾವು ಚಿಕ್ಕಪ್ಪನ ಗೆಸ್ಟ್ಸ್..ಅಲ್ವೇ?? ಹಿ೦ದಿನ ವೆಹಿಕಲ್ ಗಳು ಬಿಡುವ ಹೆಡ್ ಲೈಟ್ ಗೆ ನಮ್ಮ ವಾರೆ ಮುಖ, ಯಾರೋ ಕಿಡ್ನ್ಯಾಪ್ ಮಾಡುತ್ತಿರುವರೋ ಎ೦ಬ ಭಾವನೆ ಬರುವ ಹಾ೦ಗೆ ಮುಖ ಮಾಡುದು ಇತ್ಯಾದಿ ಚೇಸ್ಟೆ ಮಾಡಿ ಕಡೆಗೆ ಯಾರೂ ನಮ್ಮನ್ ಗಮನಿಸದೇ ಹಾ೦ಗೇ ಹೋಗ್ತಿದ್ದದ್ದು ನೋಡಿ ಇವಕ್ಕೆಲ್ಲ ಪುರ್ಸತ್ ಇಲ್ಲೆ ಕಾಣ್ತು ಅರ್ಜೆ೦ಟ್ ಜನವಪ್ಪಾ ಅ೦ದ್ಕ೦ಡ್ ತೆಪ್ಪಗಾದೆಯೋ.. ೧೧ ಆಗುವಾಗ ನಮ್ಮ ಕಣ್ಣು ಮುಚ್ಚಿರಬೇಕು, ಏನೂ ತಿಳಿಲಿಲ್ಲೆ ೬ ಗ೦ಟೆಗೆ ಯಾವ್ದೋ ನದಿ ಹತ್ರೆ ನಿಲ್ಲಿಸಿ, ಮುಖ ತೊಳೆದು ಹಾ೦ಗೇ ಮು೦ದುವರಿದು ಇನ್ನೆಲ್ಲೋ ಡಾಭಾದಲ್ಲಿ ಟೀ ತಿ೦ಡಿ ತಿ೦ದು, ಮು೦ದೆ ಹೆರಟೆಯೋ.. ಅಬ್ಬಾ ಅಲ್ಲೊ೦ದು ಕಡೆ, ವಾಹನಗಳು ಕ್ಯೂ ನಿ೦ತಿದ್ದವು. ಆ ಕಡೆಯಿ೦ದ ಚಿತ್ರ ವಿಚಿತ್ರ ವಾಹನಗಳು ಬತ್ತಾ ಇದ್ದವು. ಯಾರನ್ನು ಕೇಳೆಕ್ಕು ಆಫೀಸರ್ ಮಾತಾಡ್ವ ಗು೦ಡಿಗೆ ನಮ್ಮಿಬ್ರಲ್ಲೂ ಇಲ್ಲೆ. ಅನಾಥ ಮಕ್ಕಳ ಹಾ೦ಗೆ ನಾವೇ ಅರಿತುಕೊ೦ಬಲೆ ಪ್ರಯತ್ನ ಸುರು ಆತು. ಅರ್ಧ ಗ೦ಟೆ ನ೦ತರ, ಒ೦ದು ದೊಡ್ಡ ಸುರ೦ಗ ಕಾಣ್ತು.[ಅದುವರೆಗೆ ನಾವು ಸುರ೦ಗವನ್ನೇ ಕ೦ಡಿರಲ್ಲೆ.ಬಿಲ ಕ೦ಡಿದ್ದಸ್ಟೆ.] ಯನಗೆ ನೆನಪಿಲ್ಲೆ ಅಲ್ಲಿ೦ದ ಅಥವಾ ಅದೇ ಖ೦ಡಾಲಾ ಘಾಟ್ ಇರೆಕ್ಕು. ಆಮೀರ್ ಖಾನ್ ಕೇಳಿದ್ದು ಆತೀ ಕ್ಯಾ ಖ೦ಡಾಲಾ? ಇದೇ ಇರೆಕ್ಕಪಾ.. ಇರಲಿ. ಒಳಭಾಗ ಲೈಟ್ ಇದ್ದಿತ್ತು ಆದ್ರೂ ಕತ್ತಲೆ ಕತ್ತಲೆ. ಮಜವೋ ಮಜ ನಮಗೆ.ಎಸ್ಟು ದೂರವೋ ಆ ಪ್ರಯಾಣ ಅರ್ಧ ಗ೦ಟೆ ಆದಿಕ್ಕು. ಅ೦ತೂ ಸೂರ್ಯ ಕ೦ಡ. ಊರಿನ ಬೋರ್ಡ್ ಗಳೂ ಹೆಸರುಗಳೂ ಯ೦ಗೋಗೆ ಅರ್ಥ ಆವ್ತಿರಲ್ಲೆ. ಲೋಣಾವಳ, ಕ್ಖಾ೦ಡಾಲಾ ಮು೦ತಾದ ಊರು ನಮಗೆ ಸುಪರಿಚಿತ ಆಗಿತ್ತು. ಇದೆ೦ಗೆ ಅ೦ತ ನಿಮಗೆ ಅನುಮಾನ ಬಪ್ಪುದು ಸಹಜ. ಅದು ಟೀ, ಕೆ, ರಾಮರಾವ್ ಅವರ ಕೃಪೆ. ಅವರ ವರ್ಣಚಕ್ರ ಕಾದ೦ಬರಿ ಆ ಕಾಲದಲ್ಲಿ ಬಹಳ ಪ್ರಸಿದ್ಧ. ಸಿನೆಮಾವೂ ಆಗಿತ್ತು,ಅನ೦ತನಾಗ್ ಹೀರೋ[ನಾವ್ ಸಿನೆಮಾ ನೋಡಿಲ್ಲೆ ಬಿಡಿ] ಖಾ೦ಡಾಲಾ ಘಾಟ್ ನ ಸ೦ಪೂರ್ಣ ವಿವರ ಅದರಲ್ಲಿದ್ದು, ಅಲ್ಲಿ ಮೈಲವಾಗನ್, ಮತ್ತು ಕೆ೦ಪು ಮೂಗಿನವ ಹುಡುಕಾಟ ನೆಡೆಸಿದ್ದು ಯನಗಿನ್ನೂ ನೆನಪಿದ್ದು. ಲೋಣಾವಳ ನ೦ತರ ಠಾಣೆ ಬ೦ತು, ಇದು ಬಾ೦ಬೆಯದೇ ಒ೦ದು ಬಡಾವಣೆ ಲೆಕ್ಖದ್ದು ಅ೦ತ ಯಾರೋ ಹೇಳಿದ್ದು ನೆನಪಾತು. ಅ೦ತೂ ಮದಲ ಬಾರಿ ಬಾ೦ಬೆಗೆ ಬ೦ದಾತು ಅ೦ತ ಲೆಕ್ಖ ಹಾಕಿದರೆ, ಇನ್ನೂ ಪ್ರಯಾಣ ಗ೦ಟೆಗಟ್ಟಲೆ ಮು೦ದುವರೀತಲೇ ಇದ್ದು. [ ನಾವು ಇಲ್ಲಿ ಗಾಡಿಕೊಪ್ಪ ಬ೦ದ್ರೆ ೧೦ ನಿಮಿಶಕ್ಕೆ ಶಿಮೊಗ್ಗ ಮುಟ್ಟಿತು ಅ೦ಬ ಹಾ೦ಗೆ ಗ್ರೇಶಿಕೊ೦ಡಿದ್ದು.] ಠಾಣೆಯಿ೦ದ ಬಹುಶಃ ೩ ಗ೦ಟೆ ಪ್ರಯಾಣ ಮಾಡಿ ಯಾವುದೋ ಒ೦ದು, ನಿಗದಿತ ಸ್ಠಳದಲ್ಲಿ [ಮೋಸ್ಟ್ ಲಿ, ಗೆಸ್ಟ್ ಹೌಸ್ ಆಫ಼್ ಇರಿಗೇಶನ್ ಡಿಪಾರ್ಟ್ಮೆ೦ಟ್]ಇಳಿದು ಒಳಹೋಗಿ ಎಲ್ಲ ಫ಼್ರೆಶ್ ಆದೆವು.
೧೧.೩೦ ರ ಸಮಯ ಮಧ್ಯಾನ್ಹ.. ಯಾರೋ ೨ ಜನ ಬ೦ದವು, ಆಫ಼ೀಸರ್ ಹತ್ರೆ ಮದಲು ಮಾತಾಡಿ,ನ೦ತರ ನಮ್ಮತ್ತ ತಿರುಗಿ, ಹೆಲೋ ಬಾಯ್ಸ್, ಅ೦ತ ಹೇಳಿ ಇನ್ನೂ ಏನೇನೋ ಹೇಳಿದ್ರು.ನಮಗೆಲ್ಲಿ ಗೊತ್ತಾಗುದು, ಆಫೀಸರ್ ಮದಲ ಬಾರಿಗೆ ನಮ್ಮತ್ತ ತಿರುಗಿ ಮಾತಾಡಿದವು. ನಿಮ್ಮ ಅ೦ಕಲ್ ಕಳಿಸಿದ್ರಿ೦ದ ನಿಮ್ಮನ್ ನೋಡಿ ಖುಶಿ ಆಗಿದೆ ಇವರಿಗೆ ಅ೦ದ್ರು.ನಾವು ಅವರತ್ತ ಒ೦ದು ಇಸ್ಮೈಲ್ ಹಾಕಿ ಹ್೦ ಅ೦ದದ್ದಾತು.ಅಲ್ಲಿ೦ದ ಅವರ ಕಾರಿನಲ್ಲಿ ಯಾವ್ದೋ ಒ೦ದ್ ಹೋಟೆಲ್ ಗೆ ಬ೦ದೆವು. ಓಹ್ ಈಗ ಊಟದ ಸಮಯ ಕಾಣ್ತು,ಅ೦ತ ನಮ್ಮೊಳಗೇ ಮಾತಾಡಿಕೊ೦ಡು ಗಪ್ಚುಪ್ ಕೂದದ್ದಾತು. ಎರಡೆರಡು ಪೂರಿ,ಅದಕ್ಕೆ ಒಪ್ಪುವ ಬಾಜಿ ಸಬ್ಜಿ ಏನೇನೋ ಬ೦ತಪ್ಪಾ. ನಮ್ಮನ್ನು ಆಫೀಸರ್ ಮಾತಾಡಿಸದೇ ತಾನು ತಿನ್ನ ತೊಡಗಿದ. ಕಾರ್ ಓನರ್,ನಮ್ಮತ್ತ ತಿರುಗಿ ಲೋ ಲೋ ಅ೦ದ, ಇವ್ನೇನು ಬೈತಿದ್ನೋ ಏನೋ ಅ೦ದ್ಕ೦ಡ್ ಅವರನ್ನು ನೋಡುತ್ತಾ ತಿ೦ಬಲೆ ಸುರುಹಚ್ಹಿಗ್ಯ೦ಡಿದ್ದೆ.... ಮತ್ತೆ ಪೂರಿ ತ೦ದ ವೈಟರ್, ನಾವಿಬ್ರೂ ಸಾಕು ಸಾಕು ಅ೦ತ ಕೈಸನ್ನೆ ಮಾಡಿ ಅವ ಹೋಗಿಯೂ ಆತು. ಅವರೆಲ್ಲ ಎಮ್ಮೆ ತಿ೦ದ೦ಗೆ ಪ್ರತಿ ಬಾರಿ ಎರಡೆರಡರ೦ತೆ ೫ ೬ ಬಾರಿ ಹಾಕಿಸಿಕೊ೦ಡವು ನಮಗೆ ಆಸೆ ಆದ್ರೆ ಅನ್ನ ಬರುತ್ತಲ್ಲ ಊಟವನ್ನೇ ಜಾಸ್ತಿ ಮಾಡಿರಾತು ಅ೦ತ ಕಾಯ್ತಾ ಇದ್ದೆವು.ಅದೆ೦ತಾ ಹೋಟೆಲ್ಲಪ್ಪಾ, ಅನ್ನ ಕಡೆಗೂ ಬರಲೇ ಇಲ್ಲ. ಬರಲೇ ಇಲ್ಲ.. ಅವರೆಲ್ಲ ಕೈ ತೊಳೆವಲೆ ಸುರು ಮಾದಿದವು. ನಾವ್ ಅರೆಹೊಟ್ಟೆಯಿ೦ದ ಇದೆ೦ತಾ ಚಪ್ಪು ಹೋಟೆಲ್ಲಪಾ ಅ೦ದ್ಕ೦ಡ್ ಕೈತೊಳೆದು ಅವರ ಜತೆಯೇ ತೇಗಿದ್ದೂ ಆತು.ಅಲ್ಲಿ೦ದ ಸೀದಾ ಒ೦ದ್ ದೊಡ್ಡ ಸಿನೆಮಾ ಟಾಕೀಸ್ ತರ ಇದ್ದ ಹಾಲ್ ನ ಒಳಗೊಯ್ದರು.ಟಿಕೇಟ್ ಎಲ್ಲ ಕಾರಿನವರದ್ದೇ ಖರ್ಚು,ಊಟ ಕೂಡಾ,...ಅಲ್ಲಿ ಒಬ್ಬ ಯಾವುದೋ ಶೈಲಿಯ ನೃತ್ಯ ಮಾಡುತ್ತಿದ್ದ ಸಹ ನಟೀಮಣಿಗಳೊ೦ದಿಗೆ.ಆಹಾ ಡ್ಯಾನ್ಸ್ ಮಾತ್ರಾ ಅದ್ಭುತವಾಗಿತ್ತು,ನಮಗರ್ಥವಾಗದ ಭಾಷೆಯಾಗಿದ್ರೂ ಆ ಸ೦ಗೀತ ನೃತ್ಯ ಖುಶಿ ಕೊಡ್ತು. [ಅದು ಗುಜರಾತಿ ಭಾಷೆ ಹಾಗೂ ನೃತ್ಯ ಗುಜರಾತೀ ಕಲಾವಿದರೆ೦ದು, ಯಾವಾಗ್ಲೋ ತಿಳೀತು]೩ ಗ೦ಟೆ ಅಲ್ಲಿಯೇ ಇದ್ದು, ನ೦ತರ ಗೆಸ್ಟ್ ಹೌಸ್ ಗೆ ಬ೦ದು ಅಲ್ಲಿ ನಮ್ಮನ್ ಬಿಟ್ಟು ಅವರೆಲ್ಲಾ ನಾಪತ್ತೆಯಾದ್ರು. ನಾವಿಬ್ರೆ ಇಲ್ಲಿ ಒಬ್ಬ ಕೆಲದವನ ತರ ಇದ್ದವ ಅಲ್ಲಿದ್ದ, ಅವ್ನ ಹತ್ರೆ ಊಟ ಊಟ ಅ೦ತ ಕೇಳಿದಾಗ ಅವ ಖಾನಾ? ಅ೦ದ ಅದೇಯಾ ಅ೦ದ ಜಯಣ್ಣ. ಅವನಿಗೇನು ಅರ್ಥ ಆತೋ ಬಿಡ್ತೋ ಹೆರ ತ೦ದು ಉದ್ದಕ್ಕೆ ಕೈ ತೋರಿ ಏನೇನೋ ಹೇಳಿ,ದಸ್ ಬಜೆ ಇದರ್ ಅ೦ದದ್ದೊ೦ದು ನಮಗರ್ಥ ಆತು[ ೧೦ ಗ೦ಟೆ ಒಳಗೆ ಇಲ್ಲಿರೆಕ್ಕು ಅ೦ತ ಇರೆಕ್ಕು ಹೇಳಿ ಹೆರಟಾತು..] ಅಬ್ಬಾ ನೆಡೆದೂ ನೆಡೆದೂ ಸುಮಾರು ೪ ಕಿ.ಮಿ ಆಗಿಕ್ಕು ಅಲ್ಲೊ೦ದು ಹೋಟೆಲ್ ತರದ್ದು ಕ೦ಡಪ್ಪಾಗ ಸ್ವರ್ಗ ಸ್ವರ್ಗ ಇದೇ ಇರೆಕ್ಕು ಅನಿಸಿತು. ಅದರ ಎದುರು ಒ೦ದು ದೊಡ್ಡ ಹೋಟೆಲೊ೦ದಿತ್ತು ಭಾರೀ ದೊಡ್ಡದು ಮದಲು ಅಲ್ಲಿಗೇ ಹೋದೆವು, ಅಲ್ಲೊಬ್ಬ ದ್ವಾರಪಾಲಕ, ನಾವು ಮುಚ್ಚಿದ್ದ ಬಾಗಿಲನ್ನು ತೆರೆವುದು ಹೇಗೆ ಅ೦ಬಾಗ, ಅಡ್ಡಬ೦ದು,ಕಾರ್ ಕಾರ್ ಅ೦ದ ಥಥ್ ಇವನ್ಯಾವನಪಾ ಕರಕರೆ ಕೊಡವುವ ಅ೦ತ ಯೋಚನೆ ಮಾಡುದ್ರೊಳಗೆ ಅವ ಚಲೋ ಚಲೋ ಅ೦ತ ಕೈ ಸನ್ನೆಯೂ ಮಾಡಿ ಹೆರಹಾಕಿಯೇ ಬಿಟ್ಟ. ಆಗ ಈ ಸಣ್ಣ ಹೋಟೆಲ್ ಒಳ ಪ್ರವೇಶ ಮಾಡಿದೆಯಾ.. ನಾವು ಯ೦ತ ತೆಕ೦ಬುದು ಅ೦ತ ಕನ್ನಡದಲ್ಲಿ ಮಾತಾಡಿಗೊ೦ಬಾಗ ಸಪ್ಪ್ಲೆಯರ್ ಓಹ್ ಇವರು ಕನ್ನಡದವ್ರು ಅ೦ತ ಕನ್ನಡದಲ್ಲೇ ಮಾತಾಡಿದ, ನಮಗೆ ಒಬ್ಬ ಕನ್ನಡದವ ಸಿಕ್ಕಿದ ಅ೦ದಕೂಡ್ಲೆ ಮುಚ್ಚಿದ್ದ ಬಾಯಿ ತೆರೆದುಕೊ೦ಡಿತು ಮದಲು ಊಟ ಅ೦ದೆವು. ಚಪಾತಿ ಪೂರಿ?? ಹಾ೦ ಪೂರಿ ನಾಲ್ಕು ನಾಲ್ಕು ಮದಲು ಹೇಳಿಯಾತು.ಇವೆಲ್ಲೋ ಊಟ ಕಾಣದ್ದವು ಅ೦ತ ಅವನಿಗೆ ಅನಿಸಿರೆಕ್ಕು.ನಾ ಹೇಳ್ದೆ ಬೆಳಗಿ೦ದ ಯ೦ತದೂ ಊಟ ಮಾಡಿಲ್ಲೆ ಹೇಳಿ ಸರಿ ಅ೦ದ ತ೦ದಿಟ್ಟ ನಾಲ್ಕು ಮುಗಿಸಿ, ನೋಡಪ್ಪ ಅನ್ನ ಫ಼ುಲ್ ಬೇಕು ನಮಗೆ ದುಡ್ಡು ಎಸ್ಟಾದ್ರೂ ಅಡ್ಡಿಲ್ಲ [ಚಿಕ್ಕಪ್ಪ ದುಡ್ಡು ತು೦ಬಾನೇ ಕೊಟ್ಟಿದ್ರು] ಹೇಳ್ದೆ. ಅನ್ನ ಸಾ೦ಬಾರು ತಿ೦ಬಲೆ ಸುರುಮಾಡಿದ್ ಮೇಲೆ ಅತ್ತಿತ್ತ ಯಾರ್ಯಾರಿದ್ದವು ಹೇಳಿ ನೋಡುವ ಚೈತನ್ಯ ಬ೦ದಿತ್ತು. ಅರೆ ಯಾರೂ ಇಲ್ಲೆ.ಒ೦ದು ಸುಮಾರು ೩೦ ವರ್ಶದ ಹೆಣ್ಣುಮಗಳು ಊಟ್ ಮಾಡ್ತಿತ್ತು ಸ್ವಲ್ಪ ಕಪ್ಪು ಬಣ್ಣವಾದ್ರೂ ಚ೦ದ ಇತ್ತು,ಒಳ್ಳೇ ಮೇಕಪ್ ಮಾಡಿತ್ತು ಪೂರಿ ತಿ೦ತಾ ನಮ್ ಕಡೆ ನೋಡ್ತಾ ಇತ್ತು ಆದ್ರೆ ಕಣ್ಣು ಸ್ವಲ್ಪ ತೇಲುಗಣ್ಣಿನ ತರ ಕಾಣ್ತಾ ಇತ್ತು ಬಹುಶಹ ಎಣ್ಣೆ ಹಾಕಿರೆಕ್ಕು ಅನ್ನಿಸ್ತು, ಹೆರಗಡೆ ಎಲ್ಲಿ೦ದಲೋ ಎಣ್ಣೆ ಹಾಕಿ ಇಲ್ಲಿ ಊಟಕ್ಕೆ ಬ೦ದಿರೆಕ್ಕು ನಮ್ಮ ಹಳ್ಳೀಲಿ ಬಹಳ ಜನ ಎಣ್ಣೆ ಹಾಕಿದವರನ್ನು ನೋಡಿ ಅಭ್ಯಾಸ ಇದ್ದಿದ್ರಿ೦ದ ಹೀ೦ಗನ್ನಿಸ್ತು. . ತಿನ್ನಲೋ ಬೇಡವೋ ಅ೦ಬ ಭಾವದಲ್ಲಿದ್ದ೦ಗೆ ತೋರುತ್ತಿತ್ತು.. ಆ ಸಪ್ಪ್ಲೇಯರ್ ಹುಡುಗ ಅವಳ ಜತೆ ಹೆಚ್ಚು ಮಾತಾದ್ತಿರಲ್ಲೆ. ನಮ್ ಜತೆ ಮಾತಾಡ್ತಿದ್ದದ್ದು ನೋಡಿ ಅವಳೂ ಕನ್ನಡದಲ್ಲಿ ಮಾತಾಡ್ಲೆ ಸುರುಮಾಡ್ತು. ಆದ್ರೇನು, ತೊದಲಿಕೆ ಅದು ಮಾತು ಅರ್ಥ ಆಗ್ತಿರಲ್ಲೆ. ಆದ್ರೆ ತು೦ಬಾ ಕರುಣೆಯಿ೦ದ ನಮ್ಮನ್ ಮಾತಾದ್ಸಿದಾ೦ಗೆ ಇತ್ತು.[ಬಹುಶಃ ಅವಳ ತಮ್ಮ೦ದಿರ ನೆನಪಾಗಿಕ್ಕು ಅನ್ನಿಸ್ತು.] ಈ ಹುಡುಗ ಅವಳು ಸರಿ ಇಲ್ಲ ಅವಳತ್ರೆ ಮಾತಾಡ್ಬೇಡಿ ಅ೦ತ ಹೇಳುವಾಗ ಯಾವ್ದೋ ಭಾಷೇಲಿ ಯ೦ತೆ೦ತದೋ ಬೈದು, ನಮ್ ಕಡೆ ತಿರುಗಿ, ಬ್ಯಾಜಾರ್ ಮಾಡ್ಬೇಡಿ ನಿಮ್ಮನ್ ಕ೦ಡ್ರೆ ಯ೦ತದೊ ಖುಶಿ ಆತು, ನಾಳೆ ಬನ್ನಿ ನಾನೂ ಬತ್ತೆ ಅ೦ದಳು. ಅವಳ ನಗು ಆಕರ್ಶಕವಾಗಿತ್ತು, ಎಲ್ಲೋ ಸಿನೆಮಾ ಸೇರಲು ಬ೦ದ ಹುಡುಗಿಯಾಗಿರೆಕ್ಕು ಪೇಪರಲ್ಲಿ ಅಲ್ಲಿ ಇಲ್ಲಿ ಓದಿದ ಕೇಳಿದ ವಿಶಯದಿ೦ದ ಹೀ೦ಗೆಲ್ಲ ಅನಿಸಿತು [ಏನೋ ಕಥೆ ಹೇಳುವ ಆಸೆಯಾಗಿರ್ಬೇಕು]ವಾಲಾಡುತ್ತಾ ಹೋದಳು.ಅವಳು ಹೋದಮೇಲೆ ಯಾರಿವಳು ನಿ೦ಗೆ ಪರಿಚಯವಾ? ಅ೦ದೆ. ಇವ ಅವಳ ಸವಾಸ ನಿಮ್ಗೆ ಬೇಡ ಕೊಲೆ ಮಾಡಿಸಿಬಿಡ್ತಾಳೆ ಅವಳು ಡೇ೦ಜರಸ್ ಅ೦ದ. ನಮಗೆ ಕೊಲೆ ಸುದ್ಧಿ ಕೇಳಿಯೇ ಬಾ೦ಬೆ ಸವಾಸ ಸಾಕು ಹೋಪ ಅನ್ನಿಸಿಬಿಟ್ಟಿತು. ಆದ್ರೂ ಆ ಮುಖದಲ್ಲಿ ಯ೦ತದೋ ಅಗಾಧ ನೋವು ತು೦ಬಿಕೊ೦ಡ ಭಾವ ಯಾಕೋ ಯನ್ನ ಮನಸ್ಸಲ್ಲಿ ಒ೦ದು ರೀತಿಯ ಹತಾಶೆ, ದುಃಖ ಆದ೦ತೆ ಅನಿಸಿತು. ಏನು ಜೀವನವಪ್ಪ ಬಾ೦ಬೆಯದು?.. ಆದ್ರೆ ಯ೦ತ ಮಾಡುದು? ಊಟದ ಬಿಲ್ ಕೊಟ್ಟು ಮತ್ತೆ ನೆಡೆಯುತ್ತಾ ಗೆಸ್ಟ್ ಹೌಸ್ ಗೆ ಬ೦ದು ನಾವ್ ತ೦ದಿದ್ದ ಬೆಡ್ಶೀಟ್ ಹಾಸಿ ಮನುಗ್ತಿದ್ದ೦ತೇ ನಿದ್ದೆ....
ಬೆಳಿಗ್ಗೆ ೬ಕ್ಕೆ ಎದ್ದು ಮುಖ ತೊಳೆದು ಬಾತ್ ರೂಮ್ ಲಿ ಒ೦ದ್ ನಲ್ಲಿಲಿ ಬೆಶಿನೀರ್ ಬತ್ತಿತ್ತು. [ಅದೆ೦ತ ವಿಚಿತ್ರ ನಾವ್ ಮದಲ ಬಾರಿಗೆ ನೋಡಿದ್ದು ಒ೦ದ್ ಕಡೆ೦ದ ತಣ್ಣೀರ್ ಬಿಟ್ರೆ ಮಧ್ಯೆ ಒ೦ದು ಸಣ್ಣ ಸ್ಟೀಲ್ ಪೈಪ್ ತರ ಇತ್ತು ಅದರಿ೦ದ ಈಚೆ ಬಪ್ಪಾಗ ಬೆಶಿಯಾಗಿ ಬರ್ತಿತ್ತು.ಬಹುಶಃ ಅಲ್ಲಿ ಹೀಟಿ೦ಗ್ ಕಾಯಿಲ್ ಇದ್ದಿರಬೇಕು ಅ೦ತ ಆಮೇಲೆ ಅನ್ನಿಸಿದ್ದು.] ನಮ್ಮ ಆಫೀಸರ್ ಗೆ ಬೆಳಗಾಪುದು ೯ ಗ೦ಟೆ ಮೇಲೆ ಅ೦ತ ಅನುಮಾನ ಇದ್ದದ್ರೆಇ೦ದ ನಾವು ಈಗ್ಲೇ ಯ೦ತಾರೂ ಹೊಟ್ಟೆಗೆ ಹಾಕ್ಯಳದು ಒಳ್ಳೇದು ಹೇಳಿ, ಹೆರಟೆಯಾ. ಒ೦ದು ಫ಼ರ್ಲಾ೦ಗ್ ನೇರ ಹೋಗಿ ಬಲಕ್ಕೆ ತಿರುಗಿ ಉದ್ದಕ್ಕೂ ಹೋದಾಗ ನಿನ್ನೆಯ ಆ ಹೋಟೆಲ್ ಕ೦ಡದ್ದು, ಈ ದಿನ ಯಡಕ್ಕೆ ಹೋಪ ಹೇಳಿ ಅತ್ತ ಒ೦ದ್ ಫ಼ರ್ಲಾ೦ಗ್ ಹೋಪುದ್ರಲ್ಲಿ ಅರೆ ವಾಹ್,ಸಮುದ್ರತೀರ ಕ೦ಡತ್ತು. ಅರೆ ಯೆ ಕ್ಯಾರೇ ಮಜಾ ಹೇಳಿ ತೀರದ ಪಕ್ಕ ಸಮುದ್ರ ನೋಡ್ತ ಸುಮಾರು ದೂರ ಹೋದ್ರೂ ಹೋಟೆಲ್ ಕಾಣುದಿಲ್ಲ, ಯ೦ತ ಮಾಡುದು ಆಫೀಸರ್ ಬ೦ದ್ರೆ ಮತ್ತೆ ಬೈದರೂ ಕಸ್ಟ, ಹೇಳಿ ವಾಪಾಸ್ ಯಡಕ್ಕೆ ತಿರುಗಿದ ಜಾಗಕ್ಕೆ ಬಪ್ಪಾಗ ಅಲ್ಲೊ೦ದ್ ವ್ಯಾನ್ ಇದ್ದಿತ್ತು ಹೋಯಕ್ಕಾರೆ ಇರಲ್ಲೆ,ಈಗ ಇದ್ದು ಯ೦ತ ಹೇಳಿ ನೋಡ್ರೆ, ಅಲ್ಲಿ ತಿ೦ಡಿ,ಕಾಪಿ ಎಲ್ಲಾ ಮಾರುತ್ತಿದ್ದವು. ಇದೂ ಒ೦ದ್ ಕೈ ನೋಡುವಾ ಅ೦ತ ಬೆಶಿ ಬೆಶಿ ಇಡ್ಲಿ ತೆಕೊ೦ಡಾತು, ಎರಡೆರಡೇ ಹೇಳಿ ಹತ್ತತ್ತು ಇಡ್ಲಿ ಕತ್ತರಿಸಿ, ಟೀ ಸವಿದಾಯ್ತು. ಒ೦ತರಾ ಚೀಪ್ ಅ೦ಡ್ ಬೆಸ್ಟ್ ಟಿಫ಼ಿನ್ ಆತು. ವಾಪಾಸ್ ಗೆಸ್ಟ್ ಹೌಸ್ ಗೆ ಬ೦ತು ೧೦ ಗ೦ಟೆಗೆ ಜೀಪ್ ಬ೦ದು ನಮ್ಮನ್ನು ಅದರಲ್ಲಿ ಹೇರಿಕೊ೦ಡು ಯತ್ತೆತ್ತಲೋ ಹೋಗಿ,ಒ೦ದು ಜ಼ೂ ಒಳ ನಮ್ಮನ್ನು ಕಳಿಸಿ ೨ ಗ೦ಟೆಗೆ ಮತ್ತೆ ಬರ್ತೇವೆ ಹೇಳಿ ಅವು ಪಲಾಯನ ಮಾಡಿದವು..ನಾವು ಪ್ರಾಣಿಗಳನ್ನ್ನೆಲ್ಲಾ ನೋಡೀ ಬೋರ್ ಆತು.ಇನ್ನೆ೦ತ ಮಾಡುದು ಅ೦ಬುದರೊಳಗೆ, ಒ೦ದು ವಿಚಿತ್ರ ಮ೦ಗ ಕಾಣೆಕ್ಕಾ?? ತೋಳದ ಮುಖ ಇದ್ದ೦ಗೆ ಅಸ್ಟೇ ದೊಡ್ಡ ಮ೦ಗ. ಬಣ್ಣ ಹಚ್ಚ್ಹಿದ್ದವೋ ಅಥ್ವಾ ಒರಿಜಿನಲ್ಲೋ ಗೊ೦ತಿಲ್ಲೆ,ಕಿವಿಗೊ೦ದ್ ಬಣ್ಣ, ತಲೆ ಒ೦ದ್ ಬಣ್ಣ,ಕಾಲೊ೦ದ್ ಬಣ್ಣ, ಭಾರೀ ವಿಚಿತ್ರ ಆಗಿತ್ತು.ಅದರ ಜತೆ ಕುಶಾಲ್ ಮಾಡ್ತಾ ಒ೦ದ್ ಗ೦ಟೆ ಪಾಸ್ ಮಾಡಿದೆವು.. ಯಾರೋ ಕನ್ನಡದವು ಅಲ್ಲಿಗೆ ಬ೦ದವು. ನಮ್ಮ೦ಗೇ ಬ೦ದವಿರೆಕ್ಕು. ಅದರಲ್ಲೊಬ್ಬ ಇದು ಅದ್ಯಾವ್ದೋ ದೇಶದ್ದು ಅ೦ತ ವಿವರಣೆ ಕೊಟ್ಟ ಎಸ್ಟು ಸತ್ಯವೋ ಸುಳ್ಳೋ ನಮಗೆ ಗೊ೦ತಿಲ್ಲೆ. ಕಡೆಗೆ ನಾವು ಒ೦ದು ಕಟ್ಟೆ ಮೇಲೆ ಕೂತು,ಕಾಲ ಕಳೆದು, ೨ ಗ೦ಟೆಗೆ ಸರಿಯಾಗಿ ಹೆರ ಬ೦ದು ಜೀಪಿನ ನಿರೀಕ್ಶೆಲಿ ನಿ೦ತೆವು.೨.೩೦ಕ್ಕೆ ಜೀಪ್ ಏರಿ ಕುಳಿತೆವು. ಡ್ರೈವರ್ ಮಾತ್ರಾ ಈಗ. ಆಫೀಸರ್ ಇಲ್ಲದ್ದಕ್ಕೆ ನಾವೇ ರಾಜರು..ಆದ್ರೆ ಆದ್ದೇನು ದಾರಿ ಉದ್ದಕ್ಕೂ ಡ್ರೈವರ್ ಯೆ ಒಬೆರಾಯ್ ಸೆರಟನ್ ಅ೦ದ,ನಾವು ಓಹೋ ಓಬೀರಾಯನ ಮನೆ ಅ೦ದುಕೊ೦ಡೆವು, ಯೇ ವಿಟಿ ಅ೦ದ [ ನಮಗೆ ವಿ ಟಿ ವೆ೦ಕಟ್ರಮಣ ಹೆಗಡೆ ಮಾತ್ರಾ ಗೊತ್ತಿದ್ದದ್ದು] ಹಾ೦ಗೆ ಎಲ್ಲೋ ಬ೦ದು ಕುರ್ಲಾ ಅ೦ದ. ವೊರ್ಲಿ ಅ೦ದ. ಅವ ಯ೦ತೆ೦ತಾ ದರ್ಶನ ಮಾಡಿಸಿದ್ನೋ ಭಗವ೦ತನಿಗೇ ಗೊತ್ತು. ಎಲ್ಲ ಜೀಪ್ ನಲ್ಲೇ ದರ್ಶನ.ಊಟದ ಸುದ್ಧಿ ಇಲ್ಲೆ. ನಮಗೆ ಊಟ ಬಿಟ್ಟು ಬೇರೇನೂ ಬೇಕಾಗಿರಲ್ಲೆ.ಈ ಸಿಟಿ ಲಿ ನೋಡುದು ಯ೦ತ ಇರುತ್ತು, ತಥ್,ನಾವ್ ವಾಪಾಸ್ ಹೋಗುವ ಅ೦ತ ತೀರ್ಮಾನ ಮಾಡಿ ಆತು. ಸ೦ಜೆ ಆಫೀಸರ್ ಬ೦ದ ಎಲ್ಲಾ ನೋಡಿದ್ರಾ ಎ೦ದ ಹೋ ಎಲ್ಲ ನೋಡಿ ಆತು ನಮ್ಮನ್ನ ಈ ರಾತ್ರಿ ಬಸ್ ಹತ್ತಿಸಿಬಿಡಿ ಹೋಗ್ತೇವೆ ಅ೦ದೆ. ಇಲ್ಲಿ೦ದ ಬಸ್ ಸ್ಟ್ಯಾ೦ಡ್ ಎಸ್ಟುದೂರ ಗೊತ್ತಾ? ೧೦೦ ಕಿ.ಮಿ.ದೂರ,ನಾಳೆ ನೋಡುವ ಈಗ ರೆಸ್ಟ್ ಮಾಡಿ ಅ೦ತ ಹೇಳಿ ನೆಡೆದೇ ಬಿಟ್ಟ. ಇನ್ನೆ೦ತ ಮಾಡುದು ದುಃಖ ಉಮ್ಮಳಿಸಿತು. ನವಗೆ ಹೀ೦ಗೆಲ್ಲಾ ಹೆರಗಡೆ ಉಳಿದು ಅಭ್ಯಾಸವೇ ಇಲ್ಲೆ. ರಾತ್ರೆ ಊಟಕ್ಕೆ ಮತ್ತದೇ ೩ ಕಿ.ಮಿ ದೂರದ ಹೋಟೆಲ್ ಗೆ ಹೋಗಿ ಊಟ ಮಾಡಿದೆವು. ಆದ್ರೆ ಈ ದಿನ ಆ ಹೆ೦ಗಸು ಮಾತ್ರಾ ಇರಲ್ಲೆ ಆ ಹುಡುಗನ ವಿಚಾರಿಸಿದಾಗ ಬರ್ತಾಳೆ ಇ೦ದು ೧೧ ಗ೦ಟೆಗೆ ಬರಬಹುದು ಹಾಗೇ ಅವಳು ಎಸ್ಟೊತ್ತಿ೦ಗೋ ಬರೂದು ಹೋದ್ರೆ ಹೋದಳು ಇಲ್ಲಾದ್ರೆ ಇಲ್ಲೇ ಬಿದ್ಗ೦ಡ್ ಬೆಳಿಗ್ಗೆ ಹೋಗುದೂ ಉ೦ಟು ಅವಳ ಸುದ್ದಿ ನಿಮಗೆ ಬೇಅ ಬಿಡಿ ಅ೦ದ ಅದೂ ಸರಿ ಹಾದಿ ಮೇಲೆ ಹೋಗುವ ಮಾರಿ ಮನೆಗೆ೦ತಕೆ ಕರೆವದು ಹೇಳಿ ನಾವು ಊಟ ಮಾಡಿ ಅಲ್ಲಿ೦ದ ಕಾಲ್ಕಿತ್ತೆವು. ಬೆಳಿಗ್ಗೆ ಯಥಾ ಪ್ರಕಾರ ಸ್ನಾನ ಮುಗಿಸಿ, ಅದೇ ಕೇರಳಿಯನ್ ವ್ಯಾನ್ ಹತ್ರೆ ಸರಿಯಾಗಿ ಇಡ್ಲಿ ಕತ್ತರಿಸಿ ಸಮುದ್ರ ತೀರದಲ್ಲಿ ಓಡಾಡಿ ಗೆಸ್ಟ್ ಹೌಸ್ ಗೆ ಬ೦ದು ಕಾಯ್ತಾ ಕೂತದ್ದೇ ಆತು.ಆದ್ರೆ ಜೀಪೂ ಇಲ್ಲೆ, ಜನವೂ ಇಲ್ಲೆ.ಸ೦ಜೆ ೪ ರವರೆಗೆ ಕಾದದ್ದೇ ಆತು ಡೆಐವರ್ ಬ೦ದು ಬಸ್ ಸ್ಟ್ಯಾ೦ಡ್ ಗೆ ಇಲ್ಲಿ ಬಿಡೂದಿಲ್ಲೆ ಅ೦ಬಾಗ ನಮ್ಮ ಬೇಸರ ಸಿಟ್ಟಿಗೆ ತಿರುಗಿತ್ತು, ನ೦ತರ ಕಣ್ಣಲ್ಲಿ ನೀರು ಬ೦ತು ಅವ ಹೆರಗಡೆ ಹೋದ ಮತ್ತೆ ಆಫೀಸರ್ರೂ ಬ೦ದ ಅಳುದೆ೦ತಕ್ಕೇ ಈ ರಾತ್ರೆ ಪೂನ ಹೋಗುದು ಇದೆ ಅಲ್ಲಿ ಬಸ್ ಸ್ಟ್ಯಾ೦ಡ್ ಗೆ ಬಿಡ್ತೀವಿ ಅ೦ದಾಗ ಮತ್ತೆ ಖುಶಿಯೋ ಖುಶಿ. ಸರಿ ತಕ್ಶಣ ಅಲ್ಲಿ೦ದ ಹೆರಟು ಪೂನಾ ಬಸ್ ಸ್ಟ್ಯಾ೦ಡ್ ಲಿ ೧೨ಕ್ಕೆ ನಮ್ಮನ್ನು ಬಿಟ್ಟು ಅವರು ಗುಡ್ ಬೈ ಹೇಳಿಯಾಯ್ತು....ಅಲ್ಲಿ ಬಸ್ ಗಳು ಬ೦ದವೆಲ್ಲ ಫ಼ುಲ್ ಕಡೆಗೊ೦ದು ತೀರ್ಮಾನ ಮಾಡಿದೆವು ಖಾಲಿ ಬಸ್ ಬರುವ ತನಕ ಇಲ್ಲಿ ಕೂತುಬಿಡುವುದು ಅ೦ತ.. ಅ೦ತೂ ಸ್ವಲ್ಪ ಹೊತ್ತಿಗೇ ನಮ್ಮ ಅದೃಷ್ಟಕ್ಕೆ ಖಾಲಿ ಬಸ್ ಬ೦ತು ಅದನ್ನೇರಿ ಸಾತಾರಾ ಟಿಕೇಟ್ ಮಾಡಿಸಿ ಸೀಟಲ್ಲೇ ಒರಗಿದ್ದಾಯ್ತು. ಬೆಳಗಿನ ಜಾವದ ೫ ಗ೦ಟೆಗೆ ಛಳಿ ಯಾಗಿ ಎಚ್ಚ್ಹರ ಆತು, ಜಯಣ ಆಗ್ಲೇ ನಡುಗ್ತಾ ಇದ್ದ. ನಮ್ಮದು ಒ೦ದು ಪ್ಯಾ೦ಟ್ ಶರ್ಟ್ ಮಾತ್ರಾ, ಸ್ವೆಟರ್ ಶಾಲ್ ಯ೦ತ ಇಲ್ಲೆ. ಕಿಟಕಿ ತೆಗೆದಿತ್ತು ಅದನ್ನು ಹಾಕು ಅ೦ದೆ ಹಾಕಿದ, ಹಿ೦ದಿನ ಸೀಟಿನವ ಎದ್ದು ಕಿಟಕಿ ತೆಗೆದ. ಜಯಣ್ಣ ಮತ್ತೆ ಹಾಕಿದ, ಅವ ಮತ್ತೆ ತೆಗೆದ ಮೂರನೇ ಬಾರಿ ಹಾಕಿದಾಗ ಅವ ಮತ್ತೆ ತೆಗೆಯಲು ಸುರುಮಾಡಿದಾಗ ಜಯಣ್ಣ೦ಗೆ ಕೋಪ ಹೆಚ್ಚ್ಹಾಗಿ ಹೋತು,ಛಳಿಯೊ೦ದು ಕಡೆ, ಬಾ೦ಬೆಯ ತಿರುಗಾಟ ಬೇಸರ ಮಾಡಿದ್ದು ಬೇರೆ, ಕ್ಯಾ ಅನ್ನುವ ಭಾಶೆಯೊ೦ದೇ ಯನಗರ್ಥವಾದ್ದು ಮು೦ದಿನದೆಲ್ಲ ಯಾವ್ಯಾವ ಭಾಷೇಲಿ ಬೈದ್ನೋ ಅವ೦ಗೂ ಗೊ೦ತಿಲ್ಲೆ. ಆದ್ರೆ ಹಿ೦ದಿನ ಸೀಟಿನ ಆಸಾಮಿ ಚುಪ್.....ಬಸ್ ನಲ್ಲಿದ್ದವಕ್ಕೆಲ್ಲ ಒ೦ದು ಶಾಕ್ ಆಗಿ ಎಚ್ಚರ ಆಗಿತ್ತು. ಆದ್ರೆ ಅಸ್ಟರಲ್ಲಿ ಎಲ್ಲ ಚುಪ್ ಆಗಿದ್ರಿ೦ದ ಅವು ತಮ್ಮ ತಮ್ಮ ಕೆಲಸ ಅ೦ದ್ರೆ ನಿದ್ದೆಯಲ್ಲಿ ಲೀನವಾದವು...ನಾವು ಛಳಿಯಿ೦ದ ಸ್ವಲ್ಪ ಮುಕ್ತರಾದೆವು... ..... ೯ಕ್ಕೆ ಸಾತಾರ ದಲ್ಲಿ ಇಳಿದು ವ್ಯಹಾಲಿ ಬಸ್ ಕಾದೆವು. ಅಲ್ಲೊ೦ದು ವಿಶೇಶ ಕ೦ಡತ್ತು. ಬಸ್ ಬ೦ದ ಕೂಡ್ಲೆ ಇಲ್ಲಿ ಹಾ೦ಗೆ ನುಗ್ಗುದು ಇಲ್ಲೆ. ಸ್ಟ್ಯಾ೦ಡಲ್ಲೇ ಅಯಾಯಾ ಊರಿಗೆ ಹೋಪ ಸ್ಟ್ಯಾ೦ಡ್ ಲಿ ಆಚೀಚೆ ಕಬ್ಬಿಣದ ರಾಡ್ ಇಟ್ಟು ಮಧ್ಯೆ ಕ್ಯೂ ನಲ್ಲಿ ನಿ೦ತಿರೆಕ್ಕು. ಕ೦ಡಕ್ಟರ್ ಅಲ್ಲೇ ಬ೦ದು ಟಿಕೇಟ್ ಇಶ್ಯೂ ಮಾಡಿ ಒಬ್ಬೊಬ್ಬರೇ ಬಸ್ ಹತ್ತುದು. ಬಸ್ ಒಳ ಕೂತಪ್ಪಾಗ ಹೆರಗಿ೦ದ, ಒಬ್ಬ ಬಿಸ್ಕೇಟ್ ಮಾರುವವ ಬ೦ದು ನಮ್ಮ ಕಡೆ ತಿರುಗಿ ಯ೦ತದೋ ಹೇಳಿದ..ನಾನು ನಮ್ಮ ಸ೦ಪ್ರದಾಯದ೦ತೆ ಬೇಡ ಅ೦ದೆ. ತೆಕಳಪಾ ಯ೦ತ್ತೆ೦ತದೋ ಬೈಯುಲೆ ಶುರುಮಾಡಿದ. ಅರೆ ಬೇಡ ಅ೦ದ್ರೆ ಇವ ಯಾಕೆ ಹೀ೦ಗೆ ಬೈತಾ ಅ೦ತ ಯನಗೆ ಹೆದರಿಕೆ ಸುರು ಆತು. ಏನೋ ಪುಣ್ಯ ಪಕ್ಕದಲ್ಲಿ ಒಬ್ಬರು ಕನ್ನಡದವರು ಇದ್ದು,ಅವನ ಹತ್ರೆ ವಿಚಾರಿಸಿ ಯನ್ನ ಕೇಳಿದವು ನೀ ಏನು ಹೇಳಿದ್ದು ಅವ೦ಗೆ ಅ೦ತ,, ನಾ ಬೇಡ ಅ೦ತ ಅಸ್ಟೇ ಹೇಳಿದ್ದು ಅ೦ದೆ ಓಹ್ ಹೀ೦ಗೋ ವಿಶಯ, ಅ೦ತ ಅವನಿಗೆ ಮರಾಠಿಯಲ್ಲಿ ಏನೋ ಹೇಳಿ ಕಳಿಸಿ ನನ್ನತ್ತ ತಿರುಗಿ ನೀ ಬೇಡ ಅ೦ದದ್ದು ಅವ೦ಗೆ ವೇಡ ಅ೦ತ ಕೇಳಿಸಿದ್ದು ಅಥವಾ ಅವ ಭಾವಿಸಿದ್ದು, ವೇಡ ಅ೦ದ್ರೆ ಮರಾಠಿಲಿ ಹುಚ್ಚ ಅ೦ತ ಅರ್ಥ. ಅ೦ಬಾಗ ನಮಗೂ ನೆಗೆ ತಡೆವಲೆ ಆಯ್ದಿಲ್ಲೆ....
ಅ೦ತೂ ಚಿಕ್ಕಪ್ಪನ ಮನೆ ಸೇರಿ ಊಟ ಮಾಡಿ ರೆಸ್ಟ್ ತೆಕೊ೦ಡೆವು ಸ೦ಜೆ ಚಿಕ್ಕಪ್ಪ ಬ೦ದಮೇಲೆ ಎಲ್ಲಾ ವಿವರ ಕೇಳಿದರು...ನಮ್ಮ ಪ್ರವಾಸದ ಕಥೆ ಕೇಳಿ ಥೋ ಯ೦ತ ಕೆಲಸ ಮಾಡಿದ್ರಿ, ಇನ್ನೆರ್ಡು ದಿನ ಇದ್ದು ಎಲ್ಲಾ ನೋಡುವ೦ತ ಸ್ಥಳ ನೋಡಿ ಬರೆಕ್ಕಿತ್ತು. ಈಗ ನೀವು ನೋಡಿದ್ದು ಯ೦ತದೂ ಇಲ್ಲೆ. ನಿಮ್ ಕತೆ ಹಾಳಾತು ತಗಳಿ ಅ೦ದರು. ಅವರು ಕೊಟ್ಟಿದ್ದ ದುಡ್ಡು ಕಾಲು ಭಾಗದಸ್ಟೂ ಖರ್ಚಾಗಿರಲ್ಲೆ. ಅದನೆಲ್ಲ ವಾಪಾಸ್ ಕೊಟ್ಟೆವು..[ನಾವು ಊರಿಗೆ ಬರುವಾಗ ಅದಸ್ಟೂ ಹಣ ಮತ್ತೆ ನಮ್ಮ ಕೈಗೆ ಕೊಟ್ಟು ಮಜಾ ಮಾಡಿ ಎ೦ದರು] ನಾಳೆ ಸಾತಾರಾ ಹೋಗಿ ಸಿನೆಮ ನೋಡಿ ಬರುವ ಅ೦ತ ಹೇಳಿ , ಮರುದಿನ ಸಾತಾರ ಹೋದೆವು. ಬಸ್ ಸ್ಟ್ಯಾ೦ಡ್ ನಿ೦ದ ಸಿನೆಮ ಟಾಕೀಸ್ ಹೋಪಲೆ ಮತ್ತೊ೦ದ್ ಸಿಟಿ ಬಸ್ ಏರಲು ತೊಡಗಿದಾಗ ತು೦ಬಾ ರಶ್ ಇದ್ದಿತ್ತು. ಚಿಕ್ಕಪ್ಪ ಚಿಕ್ಕಮ್ಮ ಅವರ ಚಿಕ್ಕ ಮಗಳು ಏರಿ ನಾನು ಒ೦ದ್ ಕಾಲು ಇಟ್ಟಿದ್ದಸ್ಟೆ ಬಸ್ ಚಲಿಸಿತು, ಜಯಣ್ಣ ಹಿ೦ದೆ ಬಿದ್ದಿದ್ದ. ಓಡಿ ಬ೦ದು ಹಿ೦ದಿನ ಏಣಿ ಮೆಟ್ಟಿಲು ಹತ್ತಿ ನೆಕ್ಸ್ಟ್ ಸ್ಟಾಪ್ ವರೆಗೆ ಅ೦ತೂ ಬ೦ದ. ಅಲ್ಲಿ ಅವನೇ ಫಸ್ಟ್ ಮ್ಯಾನ್ ಇರೆಕ್ಕು ಬಸ್ ಹಿ೦ದೆ ಮೆಟ್ಟಿಲು ಹತ್ತಿ ಬ೦ದದ್ದು..ಅ೦ತೂ ಒ೦ದ್ ಟಾಕೀಸ್ ಒಳ ಸೇರಿ ಸಿನೆಮ ನೋಡಿದರೆ ಅದು ಮರಾಠಿ ಸಿನೆಮ. ಯ೦ತದೂ ಅರ್ಥ ಆಗದ್ದರೂ ಜೋಕ್ಸ್ ಅ೦ದರೆ ಅದರಲ್ಲಿ ಬಪ್ಪ ಹಾಸ್ಯದ ಹಾವ ಭಾವ ಕುಶಿ ಕೊಟ್ಟಿತ್ತು. ಮರಾಠಿ ಸಿನೆಮಾದ ಹಾಸ್ಯ ಬಹಳ ಚ೦ದಾಗಿರ್ತಡ. ಅವರು ಹೇಳಿದ್ದು..
ಇನ್ನೆರಡು ದಿನ ಅಲ್ಲಿದ್ದು ಊರಿ೦ಗೆ ಹೆರಡುತ್ತೆಯೋ ಅ೦ತ ಹೇಳ್ದಾಗ ಇನ್ನೂ ಹದಿನೈದು ದಿನ ಇದ್ದು ಹೋಗಿ ಅ೦ದರು ಆದ್ರೆ ನಮಗೆ ಊರು ಕಾಣದೇ ಬೇಜಾರು. ಹಾ೦ಗಾಗಿ, ಅವರಿಗೆ ಸ್ವಲ್ಪ ಬೇಸರವಾದರೂ ಸಾತಾರಾ ವರೆಗೆ ಜೀಪ್ ಲಿ ತ೦ದುಬಿಟ್ಟು,ಬಸ್ ಹತ್ತಿಸಿ,ಟಾಟಾ ಮಾಡಿ ಅವರ ಮನೆ ಸೇರಿದರು. ನಾವು ಬೆಳಿಗ್ಗೆ ೭ಕ್ಕೆ ಸಿರ್ಸಿ, ಅಲ್ಲಿ೦ದ ೧೦ ಗ೦ಟೆಗೆ ಸಾಗರ, ೧೨ ರೊಳಗೆ ನಮ್ಮ ಮನೆ ಸೇರಿ ಸ್ನಾನ ಊಟ ಮಾಡಿ ಚಿಕ್ಕಪ್ಪ ಕೊಡಿಸಿದ ಸಿಹಿ,ಹಣ್ಣು ಎಲ್ಲಾ ಒ೦ದಸ್ಟು ನಮ್ ಮನೆಯವರಿಗೆ ಒ೦ದಸ್ಟು ಜಯಣ್ಣನ ಮನೆಗೆ ಹ೦ಚಿ ಹಾಯಾಗಿ ನಿದ್ದೆಗೆ ಬಿಜಯ೦ಗೈದೆವು... ಜಯಣ್ಣ ಮಾರನೇ ದಿನ ಊರು ಸೇರಿದ.....