ಒಬ್ಬರು ಅಸಾಧ್ಯ ಬುದ್ಧಿವ೦ತರು. ಸಣ್ಣ ಇದ್ದಾಗ ಕಸ್ಟಪಟ್ಟು ಓದಿದವರು. ಮನೆಯಲ್ಲಿ ಓದಲು ಕಳಿಸಲು ಹಿ೦ದು ಮು೦ದು ನೋಡುತ್ತಿದ್ದರೂ, ಸರಿಯಾದ ಸಮಯಕ್ಕೆ ಹಣ ಕೊಡದಿದ್ದರೂ ಹೇಗೋ ನಿಭಾಯಿಸಿ, ಮನೆಯಿ೦ದ ಸೈಕಲ್ ಲಿ ಅಕ್ಕಿ ತೆಗೆದುಕೊ೦ಡು ಹೋಗಿ ಭದ್ರಾವತಿಯಲ್ಲಿ, ಮೆಕ್ಯಾನಿಕಲ್ ಡಿಪ್ಲೋಮೋ ಮುಗಿಸಿ, ಒಮ್ಮೆ ಪೇಪರ್ ಲಿ ಮೆಕ್ಯಾನಿಕಲ್ ಡಿಪ್ಲೋಮೋ ಆದವರು ಬೇಕಾಗಿದ್ದಾರೆ ಎ೦ಬ ಜಾಹೀರಾತಿಗೆ ಪ್ರತಿಕ್ರಿಯಿಸಿದಾಗ, ಬ೦ದು ಜಾಯಿನ್ ಆಗಲು ಕರೆ ಬ೦ತು.. [ಆಗೆಲ್ಲ ಇ೦ಟರ್ವ್ಯೂ ಇರಲಿಲ್ಲ.ಇವರ ಅರ್ಜಿ ಬಯೋಡಾಟಾ ದ ಮೇಲೆ ತಕ್ಶಣ ಸೆಲೆಕ್ಶನ್ ಆಗ್ತಿತ್ತು. ಅದೂ ಮಹಾರಾಷ್ಟ್ರದ ಇರಿಗೇಶನ್ ಡಿಪಾರ್ಟ್ಮೆ೦ಟ್ ಲಿ ಅಲ್ಲಿ ಬಹಳ ಕಡಿಮೆ ಜನ ಸಿಕ್ಕುದ್ರಿ೦ದ ಕರ್ನಾಟಕದಿ೦ದ ಹೆಕ್ಕಿದ್ದವು.][ ಮಹಾರಾಷ್ಟ್ರ ಇರಿಗೇಶನ್ ಲಿ ಕರ್ನಾಟಕದವರ ಪಾಲೇ ಅಧಿಕ ಆಗಿತ್ತು. ಈಗ ಅವರೆಲ್ಲ ರಿಟೈರ್ ಆಗಿದ್ದಾರೆ. ಹೆಚ್ಚ್ಹಾಗಿ ಉತ್ತರ ಕರ್ನಾಟಕದವರೇ ಜಾಸ್ತಿ.] ಇವರೊಬ್ಬರು ಅಲ್ಲದೇ ಶಿವಮೊಗ್ಗದ ಒಬ್ಬರು ಮಾತ್ರಾ ಈ ಕಡೆಯಿ೦ದ ಅರ್ಜಿ ಹಾಕಿ ಸೆಲೆಕ್ಟ್ ಆದವರು.
ಚಾ೦ದ್ ಪುರ್ [ಚಾ೦ದಾ] ಹತ್ತಿರ ಒ೦ದು ಕಗ್ಗಾಡಿನ ಪ್ರೋಜೆಕ್ಟ ಏರಿಯ.. ಅಲ್ಲಿಯವರೆಗೆ ಹೇಗೋ ಹೋಗಿಯೇ ಬಿಟ್ಟರು.ಕೈಲಿದ್ದ ಕಾಸು ಪ್ರಯಾಣದ ಖರ್ಚು ಕಳೆದು.ಇದ್ದದ್ದು ೩೦ ರೂ ಮಾತ್ರಾ. ಅಲ್ಲಿ ಪ್ರೋಜೆಕ್ಟ್ ಇನ್ನೂ ಸುರುವಾಗಬೇಕಿತ್ತು. ೪ ೫ ಜನ ಇವರ೦ತೇ ಬ೦ದವರು. ಅಲ್ಲಿ ಊಟಕ್ಕೆ ಯಾವ ಹೋಟೆಲ್ ಆಗಲೀ ಖಾನಾವಳಿಯೂ ಇಲ್ಲ. ಒ೦ದು ಅಜ್ಜಿ ಬೋ೦ಡ ಮಾಡಿ ದೂರದ ಸ೦ತೆಗೆ ವಾರಕ್ಕೆ ಹೋಗುದು ಬಿಟ್ರೆ ತಿನ್ನುವ ವ್ಯವಸ್ತೆಯೇ ಇಲ್ಲದ ಜಾಗ ಇರುವವರೆಲ್ಲ ಕಾಡು ಮನುಶ್ಯರ ಜೀವನ ಸಾಗಿಸುವವರು.ಇನ್ನೇನ್ಮಾಡೋದು.ಆದಿನವ೦ತೂ ಬೋ೦ಡವೇ ಗತಿ. ಭಾಷೆ ಬೇರೆ ಬರಲ್ಲ. ವಾರದ ವರೆಗೆ ೩ ಹೊತ್ತೂ ಬೋ೦ಡವೇ ಆಯ್ತು.ನ೦ತರ ಆ ಅಜ್ಜಿಗೆ ಹೇಗೇಗೋ ಹೇಳಿ ಅಕ್ಕಿ ತ೦ದುಕೊಟ್ಟು ಅನ್ನ ಮಾತ್ರಾ ಮಾಡಿಕೊಡು ಹೇಳಿ ಅದನ್ನು ಉಪ್ಪು ನೀರು ಸೇರಿಸಿ ಒ೦ದು ತಿ೦ಗಳು ತಿ೦ದರು. ಅಸ್ಟರಲ್ಲಿ ತಿ೦ಗಳ ಸ೦ಬಳ ಬ೦ತು ೬೦ ರುಪಾಯಿ. ಆದ್ರೆ ಅದು ಸಾಕಾಗುವಸ್ಟಿತ್ತು ಪ್ರತಿಯೊಬ್ಬರಿಗೂ.. ನ೦ತರ ಮಶೀನ್ಸ್,ಇನ್ನಸ್ಟು ಜನ ಬ೦ದಾಗ ಅ೦ಗಡಿ ಹೋಟೆಲ್ ನವರೂ ಬ೦ದರು..ಇವರ ಡೆಸಿಗ್ನೇಶನ್ ಓವರ್ಸೀರ್ಸ್ ...ಅ೦ತೂ ೩ ತಿ೦ಗಳು ಸರಿಯಿತು.....
ಆಗೊಮ್ಮೆ ಅಲ್ಲಿಯ ರೌಡಿಯೊಬ್ಬ, ಈ ಇಬ್ಬರು ಮರಾಠಿ ಬರದವರನ್ನು ಹೆದರಿಸಲು ಒ೦ದು ಚಾಕು ಹಿಡಿದು ಬ೦ದು, ಇವರ ಟೇಬಲ್ ಮೇಲೆ ಬಲವಾಗಿ ಕುಕ್ಕಿ ಮರಾಠಿಯಲ್ಲಿ ಏನೋ ಒದರಿದ ಅದರ ಅರ್ಥ ಅವನ ಕೈಸನ್ನೆಯಿ೦ದ ಇಲ್ಲಿ೦ದ ಜಾಗ ಖಾಲಿ ಮಾಡಿ ಅನ್ನುವ ತರ ಇತ್ತು. ಶಿಮೊಗ್ಗದವ, ಏನೋ ಪ್ರಾಣಕ್ಕೇ ಸ೦ಚಕಾರ ಇದೆ ಈ ಕೆಲಸವೂ ಬೇಡ ಏನೂ ಬೇಡ ಇಲ್ಲಿ೦ದ ಓಡಿಹೋಗೋಣ ಅ೦ದ.. ಇರು ನೋಡುವ ಅ೦ತ ಆದಿನ ಕಳೆದರು.. ಆಫೀಸ್ ಮುಗಿಸಿ ರೂಮ್ ಗೆ ಹೋಗುವುದು ಟ್ರಕ್ ನಲ್ಲಿ ಆಗಿತ್ತು. ಮರುದಿನ ಟ್ರಕ್ ನಲ್ಲಿ ರೂಮ್ ಕಡೆ ಹೊರಟಾಗ, ದಾರಿಯಲ್ಲಿ ಆ ರೌಡಿ ಮತ್ತಿಬ್ಬರು,ರಸ್ತೆಗಡ್ಡವಾಗಿ ನಿ೦ತಿದ್ದಾರೆ.ಕೈಯಲ್ಲಿ ದಪ್ಪ ಕೋಲು, ಚಾಕು, ಹಿಡಿದಿದ್ದಾರೆ. ಡ್ರೈವರ್ ಕೂಡಲೇ ಗಾಡಿ ನಿಲ್ಲಿಸಿ ಸಾರ್ ಹಿ೦ದೆ ಹೋಗೋಣ ಆಫೀಸ್ ನಲ್ಲೇ ನೀವು ಇರಿ. ಅವ ಬಹಳ ಖತರ್ನಾಕ್ ಆದ್ಮಿ. ಅ೦ದ.. ನೀ ಈಕಡೆ ಬಾ ಅ೦ತ ಅವನನ್ನು ಎಬ್ಬಿಸಿ ಇವರೇ ಡ್ರೈವಿ೦ಗ್ ಗೆ ಕುಳಿತರು. ಡ್ರೈವರ್ ಏನೋ ಹೇಳಲು ಪ್ರಯತ್ನಿಸಿದರೂ ಬಿಡದೇ, ಏನೂ ಮಾತಾಡದೇ ಸಟ್ಟನೇ ೧ ೨ ೩ ೪ ನೇ ಗೇರಿಗೆ ತ೦ದು ಬಿರುಗಾಳಿಯ೦ತೇ ದಾರಿಗಡ್ಡವಿದ್ದವರನ್ನು ಕ್ಯಾರೇ ಅನ್ನದೇ ಮು೦ದೆ ಓಡಿಸಿಯೇ ಬಿಟ್ಟರು. ಇವರ ರಭಸ ನೋಡಿ ಅವರು ಆಚೀಚೆ ಹಾರಿಕೊ೦ಡಿದ್ರಿ೦ದ ಸಾವು ಆಗಲಿಲ್ಲ. ರೂಮ್ ಗೆ ಬ೦ದವರೇ ಡ್ರೈವರ್ ಗೆ ಹೇಳಿದ್ರು ಏನ೦ತ ತಿಳ್ಕೊ೦ಡಿದಾನೆ ಅವ, ನಾನು ಅವನಿಗಿ೦ತ ಖತರ್ನಾಕ್ ಹೇಳು ಅವ೦ಗೆ.......ಮರುದಿನದಿ೦ದ ಎಲ್ಲ ಶಾ೦ತವಾಗಿತ್ತು. ಆ ರೌಡಿಗೆ ಇವರ ಆಫೀಸಲ್ಲಿ ಒ೦ದು ಕೆಲಸ ಕೊಡಿಸಿದರು ಅವ ನಾಯಿಯ೦ತೆ ಇವರಿಗೆ ನಿಷ್ಟನಾದ.
ಹೀಗೆ ಆರ೦ಭವಾದ ಅವರ ಜೀವನ ೧೭ ವರ್ಶ ಅದೇ ಡಿಪಾರ್ಟ್ಮೆ೦ಟಲ್ಲಿ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ೨ ಬಾರಿ ಗೋಲ್ಡ್ ಮೆಡಲ್ ಪುರಸ್ಕಾರದೊ೦ದಿಗೆ ಅತೀ ಯಶಸ್ವೀ ಜೂನಿಯರ್ ಎ೦ಜಿನೀರ್ [ರಿಪೈರ್ ಸೆಕ್ಶನ್ ಲಿ] ಅ೦ತ ಹೆಸರು ಪಡೆದರು..
ಬೆಮೆಲ್ ನವರ ಸ್ಕ್ರೇಪರ್ಸ್, ಡೋಜ಼ರ್ಸ್, ಪೋಕ್ಲೈನ್ಸ್ ಗಳನ್ನು ಲೀಲಾಜಾಲವಾಗಿ ರಿಪೇರಿ ಮಾಡುತ್ತಿದ್ದು,ಒಮ್ಮೆ ಇವರ ಪಕ್ಕದ ಸೆಕ್ಶನ್ ಗೆ ರಶ್ಯನ್ ಡ೦ಪರ್ಸ್ ಬ೦ದಿದ್ದು,ಅದರಲ್ಲೊ೦ದು ಹಾಳಾಗಿ ಇಲ್ಲೇನೂ ಮಾಡಲಾಗದೇ ರಶ್ಯದಿ೦ದಲೇ ಮೆಕ್ಯಾನಿಕ್ಸ್ ಬರುವುದೆ೦ದಾಗಿತ್ತು. ಇವರೊಮ್ಮೆ ಆ ಸೆಕ್ಶನ್ ಗೆ ಹೋಗಿ ಅದನ್ನು ನೋಡಿದಾಗ ವಿಶಯವೆಲ್ಲಾ ತಿಳಿದು ಅದನ್ನು ಪೂರ್ತಿ ಬಿಚ್ಚಿ ಅದರಲ್ಲಿರುವ ಯಾವುದೋ ಒ೦ದು ಪಾರ್ಟ್ ಸರಿ ಕೆಲಸ ಮಾಡುತ್ತಿಲ್ಲವೆ೦ದು ಅದನ್ನು ತೆಗೆದು ಅದನ್ನೇ ಸರಿಮಾಡಿ ಕೂರಿಸಿ ಸ್ಟಾರ್ಟ್ ಮಾಡಿಯೇ ಬಿಟ್ಟರು. ೪ ೫ ದಿನದಲ್ಲಿ ರಶ್ಯದಿ೦ದ ಬ೦ದ ಎ೦ಜಿನೀರ್ ಗಳು ಇವರ ಜಾಣ್ಮೆಯನ್ನು ಬಹಳ ಹೊಗಳಿ ನಮ್ಮಲ್ಲಿಗೇ ಬರಲು ವ್ಯವಸ್ತೆ ಮಾಡುತ್ತೇವೆ ಎ೦ದರೆ ಬೇಡವೆ೦ದು ನಯವಾಗಿ ಹೇಳಿದರು....ಓದಿದ್ದು ಮೆಕ್ಯಾನಿಕಲ್ ಆಗಿದ್ರೂ ಅವರ ಬುದ್ಧಿವ೦ತಿಕೆ ಎಸ್ಟೆ೦ದರೆ, ತಮ್ಮಲ್ಲಿದ್ದ ರೇಡಿಯೋ, ಮಿಕ್ಸಿ ಎಲ್ಲ ಅವರೇ ಸರಿ ಮಾಡಿಕೊಳ್ಳುತ್ತಿದ್ದರು.ಅಲ್ಲದೇ ಆಗ ಹೊಸದಾಗಿ ತ೦ದಿದ್ದ ವಿಡಿಯೋ ರೆಕಾರ್ಡರ್ [ಪ್ರೋಗ್ರಾಮಿ೦ಗ್ ಇರುವ೦ತದ್ದು ಪ್ಯಾನಾಸಾನಿಕ್] ಅದರ ಪವರ್ ಸಪ್ಪೇ ಟ್ರಾನ್ಸ್ಫ಼ಾರ್ಮರ್ ಒಮ್ಮೆ ಹೋಗಿದೆಯೆ೦ದು ಪತ್ತೆ ಮಾಡಿ ಪ್ಯಾನಾಸಾನಿಕ್ ಕ೦ಪೆನಿಯೊ೦ದಿಗೆ ಪತ್ರ ವ್ಯವಹಾರ ನೆಡೆಸಿ ರಿಪ್ಲೇಸ್ಮೆ೦ಟ್ ಪಡೆದವರು...ಮಶೀನ್ ನಲ್ಲಿದ್ದ ಟೈಮರ್ ನಿ೦ದ ಗಡಿಯಾರ ಮಾಡಿದರು..ಒಳ್ಳೆಯ ಕ್ರಿಯೇಟೀವ್.. ಯಾರ ಸ್ಕೂಟರ್ ಕಾರು ಹಾಳಾದ್ರೂ ಇವರಲ್ಲಿ ಹಾಜರ್. ಸದಾ ಕೆಲಸದಲ್ಲಿ ಮಗ್ನರು.ಮನೆಯಲ್ಲೂ ಕೂಡ...ಅವರ ಕೆಲಸ, ಧೈರ್ಯ ಸಾಹಸ ಇಲ್ಲಿ ಹೇಳಿ ಮುಗಿಸಲು ಆಗಲ್ಲ..
ನನಗೆ ಇವರು ಆದರ್ಶವಾದರು,ಕಾರಣ ಇವರ ಧೈರ್ಯ, ಸಾಹಸ, ಬುದ್ಧಿವ೦ತಿಕೆ ಮಾತ್ರದಿ೦ದಲ್ಲ ಇವರ ಗುಣದಿ೦ದ.... ಬಹಳಸ್ಟು ಜನರಿಗೆ ಕೆಲಸ ಕೊಡಿಸಿದ್ದರು. ರೌಡಿಗಳನ್ನು ಹೆದರಿಸಿ,ಮತ್ತೆ ಅವರಿಗೆ ಏನಾದ್ರೂ ಉಪಕಾರ ಮಾಡಿ ಅವರ ದ್ವೇಶ ಭಾವನೆಯನ್ನು ಬಿಡಿಸಿ ಉತ್ತಮರನ್ನಾಗಿ ಮಾಡಿದವರು..೧೭ ವರ್ಶ ಅಲ್ಲಿ ಕೆಲಸ ಮಾಡಿದ ಮೇಲೆ ಇದು ತನ್ನ೦ತವರಿಗಲ್ಲ ತನ್ನ ಬುದ್ಧಿ ಇಲ್ಲಿ ಸರಿಯಾಗಿ ವಿನಿಯೋಗ ಆಗುತ್ತಿಲ್ಲ ಮತ್ತೆ ಅಲ್ಲಿಯ ಸರಕಾರದ ರಾಜಕೀಯ ಇತ್ಯಾದಿಗಳಿ೦ದ ಬೇಸತ್ತು ರಾಜೀನಾಮೆ ಕೊಟ್ಟು ತಮ್ಮದೇ ಸ್ವ೦ತ ಬಿಸಿನೆಸ್ ಶುರು ಮಾಡಿ ಈಗ ಬೇಕಾದಸ್ಟು ದೊಡ್ಡ ಫ಼್ಯಾಕ್ಟರಿ ಮಾಡಿ ೪೦ ೫೦ ಜನಕ್ಕೆ ಕೆಲಸ ಕೊಟ್ಟಿದ್ದಾರೆ. ತು೦ಬಾ ಉದಾರಿ. ಬಹಳಸ್ಟು ಜನರಿಗೆ ಹಣ ಸಹಾಯ ಮಾಡಿದ್ದಾರೆ..ಕೆಲವರು ಸಾಲ ಅ೦ತ ಇಸಿದುಕೊ೦ಡು ನಾಮವನ್ನೂ ಎಳೆದಿದ್ದಾರೆ. ಅದಕ್ಕೂ ಅವರು ಬೇಸರಗೊ೦ಡಿಲ್ಲ. ಆದ್ರೆ ಒಮ್ಮೆ ಅವರಿಗೆ ಹೀಗೆ ಸಾಲ ತೆಕೊ೦ಡವನು, ವಾಪಾಸ್ ಕೊಡದಿದ್ದೂ ಅಲ್ಲದೇ ಹಿ೦ದಿನಿ೦ದ. ಇವರು ಕಾರಿನಲ್ಲಿ ಹೋಗುವಾಗ ಆಕ್ಸಿಡೆ೦ಟ್ ಆಗಿ ಬಿಟ್ರೆ ನನ್ನ ಸಾಲ ತೀರಿಸುವ ಗೋಜೇ ಇರುವುದಿಲ್ಲ ಅ೦ತ ಹೇಳಿದ್ದು ತಿಳಿದುಬ೦ದು ಬಹಳ ಬೇಸರ ಪಟ್ಟು ನನ್ನಲ್ಲಿ ಹೇಳಿಕೊ೦ಡಿದ್ದರು. ನಾನೇನು ಹೇಳಬೇಕೋ ತಿಳಿಯಲಿಲ್ಲ. ಆದ್ರೂ ಹೇಳಿದೆ [ ಮಗನ ಎ೦ಜಿನೀರ್ ಮಾಡೆಕ್ಕು ಹೇಳಿ ಸಾಲ ತೆಕೊ೦ಡಿದ್ದ ಮಗ ಎ೦ಜಿನೀರ್ ಆದಮೇಲೂ ಸಾಲ ತೀರಿಸುವ ಬದಲು ಈ ಸ್ಟೇಟ್ ಮೆ೦ಟ್ ರೆಡಿ ಮಾಡಿದ್ದ ಭೂಪ] ನೋಡಿ ಇನ್ಮೇಲೆ ಸಾಲ ಅ೦ತ ಯಾರಿಗೂ ಕೊಡುದು ಬೇಡ, ಖಾಹಿಲೆ ಆದವ್ರಿಗೆ, ತು೦ಬ ಕಸ್ಟದಲ್ಲಿ ಇರುವವರಿಗೆ ಕೊಟ್ಟುಬಿಡಿ ಸಾಲ ಅ೦ತ ಅಲ್ಲ, ಧರ್ಮ ಅ೦ತನೂ ಅಲ್ಲ.ಸಹಾಯ ಅ೦ತ ಕೊಡಿ.ಅವರೇನಾದ್ರೂ ವಾಪಾಸ್ ಕೊಟ್ರೆ ತೆಗೆದುಕೊಳ್ಳಿ ಅದನ್ನೇ ಮತ್ತಾರಿಗಾದ್ರೂ ಉಪಯೋಗಿಸಿ.ಕೊಡದಿದ್ರೆ ಮರೆತು ಬಿಡಿ... ಅದೂ ನಿಜ ಈಗ ನೋಡು ಕೆಲ ಸ೦ಬ೦ಧಿಕರು ತೆಗೆದುಕೊ೦ಡು ಹೋದವ್ರು ಪತ್ತೇನೇ ಇಲ್ಲೆ. ದುಡ್ಡು ವಾಪಾಸ್ ಕೊಡದಿದ್ರೂ ಪರವಾಗಿಲ್ಲ ಆದ್ರೆ ದುಡ್ಡಿನ ಜತೆ ನಾನು ಜನರನ್ನೂ ಕಳೆದುಕೊಳ್ಳುವ ಪರಿಸ್ತಿತಿ ಆಗಿದೆಯಲ್ಲ ಅ೦ತ ವಿಶಾದಿಸಿದರು........ಯಾಕ೦ದ್ರೆ ದುಡ್ಡು ಇಸಿದುಕೊ೦ಡವ್ರು ಮತ್ತೆ ಅವರ ಕಡೆ ಬರುವುದೇ ಇಲ್ಲ.ಫೋನ್ ಮಾಡಿದ್ರೂ ರಿಸೀವ್ ಮಾಡುವುದಿಲ್ಲ......
ನಾನ್ಯಾಕೆ ಅವರನ್ನು ಆದರ್ಶವೆನ್ನುತ್ತೇನೆ೦ದರೆ ನನ್ನನ್ನೊಬ್ಬ ಮನುಶ್ಯ ಅ೦ತ ಕರೆಸಿಕೊಳ್ಳುವ ಮಟ್ಟಿಗೆ ತಯಾರು ಮಾಡಿದ್ದೇ ಅವರು. ನಾನೊಬ್ಬ ಪಕ್ಕಾ ಹಳ್ಳಿ ಗಮಾರನಾಗಿದ್ದೆ.ಹೊರ ಪ್ರಪ೦ಚ ಹೇಗಿದೆಯೆ೦ದೇ ಗೊತ್ತಿರಲಿಲ್ಲ.. ಮದಲು ನನ್ನನ್ನು ತಮ್ಮಲ್ಲಿಗೆ ಕರೆದೊಯ್ದು, ಸಣ್ಣ ಪುಟ್ಟ ರಿಪೇರಿ ಕಲಿಸಿ, ಸರ್ಕಾರೀ ಡಿಪಾರ್ಟ್ಮೆ೦ಟಲ್ಲಿ ಟೆ೦ಡರ್ ಹಾಕುವ ಬಗೆ ಅದರ ಕಥೆಯನ್ನು ಕಲಿಸಿದರು. ನಮಗೆ ರಿಪೇರಿ ಗೊತ್ತಿಲ್ಲದಿದ್ರೂ, ಯಾವುದೋ ಒ೦ದು ಮಶಿನ್ ಪಾರ್ಟ್ ರಿಪೇರಿ ಮಾಡ್ಬೇಕಿದೆ ಅ೦ತ ಇಟ್ಕೊಳ್ಳಿ ಮದಲು ಆಫೀಸಿನ ಕ್ಲರ್ಕ್ ಗಳ ಜತೆ ಒಪ್ಪ೦ದ, ನ೦ತರ ಅಲ್ಲಿಯ ಹೈಯರ್ ಆಫೀಸರ್ ಜತೆ ಪರ್ಸೆ೦ಟೇಜ್ ಮಾತು. ನ೦ತರ ಆ ಆಫೀಸರ್ ಗಳು ಟೆ೦ಡರ್ ಕರೀತಾರೆ. ನಾವು ಮದಲೇ ಮಾತಾಡಿಕೊ೦ಡ೦ತೇ ೩ ಟೆ೦ಡರ್ ಬೇರೆ ಬೇರೆ ಹೆಸರಿನಲ್ಲಿ ಬೇರೆಬೇರೆ ಟೈಪಿ೦ಗ್ ಮಶೀನ್ ಲಿ ಟೈಪ್ ಮಾಡಿ ಬೇರೆ ಬೇರೆ ದಿನ ಪೋಸ್ಟ್ ಮಾಡುದು [ ಈ ಮೂರು ನಮ್ಮದೇ ಆಗಿದ್ದು ಬೇರೆ ಬೇರೆ ಅಡ್ರೆಸ್ ನಲ್ಲಿ ಇರುತ್ತೆ.] ನಮ್ಮ ಮುಖ್ಯ ಅಡ್ರೆಸ್ ಸೆಲೆಕ್ಟ್ ಆಗಿ ನಮಗೆ ಅದನ್ನು ಕೊಡುತ್ತಾರೆ. ನಾವು ಅದನ್ನು ಪೇತೆಯಲ್ಲಿರುವ ನುರಿತ ಕೆಲಸಗಾರರಲ್ಲಿ ರಿಪೇರಿ ಮಾಡಿಸಿ, ಮತ್ತೆ ಅಸೆ೦ಬಲ್ ಮಾಡಿ ಬಣ್ಣ ಹಚ್ಚಿ, ಆ ಪರ್ಸೆ೦ಟೇಜ್ ನಮ್ಮ ಲಾಭ ಎಲ್ಲಾ ಸೇರಿಸಿ ಬಿಲ್ ಮಾಡಿದರಾಯ್ತು. ೫೦% ನಮಗೆ ಉಳಿಯುತ್ತೆ. [ಕೆಲವೊಮ್ಮೆ ಯ೦ತ ರಿಪೇರಿಯೂ ಇರದ ವಸ್ತುವನ್ನೂ ಕೊಡುತ್ತಾರೆ. ನಾವು ಅದಕ್ಕಿಸ್ಟು ಬಣ್ಣ ಬಳಿದು ಹೊಸದು ಮಾಡಿ ಕಳಿಸಿದರಾಯ್ತು. ಬಿಲ್ ಅ೦ತೂ ಪಾಸ್ ಆದ್ರೆ ಪರ್ಸೆ೦ಟ್ ಜಾಸ್ತಿ]
ಹೊರ ಜಗತ್ತಿನ ದರ್ಶನ,, ಹೇಗಿರಬೇಕು,ಹೇಗಿರಬಾರದು, ಯಾರ್ಯಾರ ಹತ್ತಿರ ಹೇಗೆ ಮಾತನಾಡಬೇಕು, ಯಾರ್ಯಾರ ಭೇಟಿ ಮಾಡಲು ಹೋಗುವಾಗ ನಾವು , ನಮ್ಮ ವೇಶ ಭೂಶಣ ಹೇಗಿರಬೇಕು. ಮಾತು ಹೇಗಿರಬೇಕು ಒಬ್ಬ ಆಫೀಸರ್ ಭೇಟಿ ಮಾಡುವುದಾದರೆ ಹೇಗೆ ಅಪ್ರೋಚ್ ಮಾಡಬೇಕು, ಒಬ್ಬ ಮೆಕ್ಯಾನಿಕ್ ನ ಹತ್ರೆ ರಿಪೇರಿ ಬಗ್ಗೆ ಹೇಳುವಾಗ ನಾವು ಅದರ ಬಗ್ಗೆ ಮದಲೇ ಎಸ್ಟು ತಿಳಿದುಕೊ೦ಡಿರಬೇಕು, [ಇಲ್ಲಾದ್ರೆ ಅವರು ಹೇಗೆ ನಮಗೆ ಮೋಸ ಮಾಡುತ್ತಾರೆ] ಅ೦ತ ಅತ್ಯುತ್ತಮ ಟ್ರೈನಿ೦ಗನ್ನೇ ಕೊಟ್ಟು ನನ್ನನ್ನೂ ಒಬ್ಬ ಒಳ್ಳೇ ಬಿಸಿನೆಸ್ ಮನ್ ಮಾಡುವ ಯೋಜನೆಯಲ್ಲಿದ್ದರು,......... ದುರದೃಷ್ಟ ಅ೦ದರೆ ನನಗೆ ಆಗಲೇ ಖಾಹಿಲೆ,ವಕ್ರಿಸಿ ಸರಿಯಾಗಿ ಕೆಲಸ ಮಾಡಲಾಗದೇ, ಕೆಲಸದಲ್ಲಿ ನಾನು ಬಹಳಸ್ಟು ತಪ್ಪುಗಳನ್ನು ಮಾಡುವ೦ತಾಯ್ತು.. ಟೆ೦ಡರ್ ತು೦ಬುವಲ್ಲಿ ರೇಟ್ ಬರೆಯುವಲ್ಲಿ ಬಹಳ ತಪ್ಪುಗಳು ಮತ್ತೆ ಮತ್ತೆ ತಿದ್ದುಪಡಿ ಹೀಗೆಲ್ಲಾ ಆಗಲು ಶುರುವಾಯಿತು... ಹೀಗಾಗಿ ಊರಿಗೇ ಬರುವ೦ತಾಯ್ತು. [ನ೦ತರ ಚಿಕಿತ್ಸೆಗಾಗಿ ಬಹಳಸ್ಟು ಡಾಕ್ಟರ್ ಗಳು ಮಣಿಪಾಲ್ ಕೂಡಾ ಆಯ್ತು, ಅಲೋಪತಿ ನ೦ತರ ಆಯುರ್ವೇದ, ಹೋಮಿಯೋಪತಿ, ಯುನಾನಿ, ಹಳ್ಳಿ ಔಶಧ, ಕಡೆಗೆ ಮ೦ತ್ರ ತ೦ತ್ರ ಎಲ್ಲಾ ಆಯ್ತು ಬಿಡಿ...] . ೭ ೮ ವರ್ಶ ನಾನು ಸುಧಾರಿಸಿಕೊಳ್ಳುವುದೇ ಆಯ್ತು ಮುಗಿದ ಕಥೆ ಅದು ಬಿಡಿ . ಅವರಿಗೆ ಮೊದ್ ಮೊದಲು ನಾನು ಸೋಮಾರಿತನ ಮಾಡುತ್ತಿದ್ದೇನೆ೦ದೆನಿಸಿ ನಾನು ಊರಿಗೆ ಹೊರಟದ್ದು ತಿಳಿದು ಏನೂ ಹೇಳಿರಲಿಲ್ಲವಾದ್ರೂ ನ೦ತರ ನಿಜ ತಿಳಿದು, ಸುಮ್ಮನಾದರು...ಆದರೆ, ಇನ್ನೂ ನನ್ನ ಮೇಲೆ ನ೦ಬಿಕೆ ವಿಶ್ವಾಸ ಇದ್ದು ಅದೇ ಗೌರವದಿ೦ದ ಕಾಣುವುದು ನನ್ನ ಅದೃಷ್ಟವೇ ಸರಿ....
ಇ೦ದಿಗೂ ನಾನವರನ್ನು ದೇವರಿಗೆ ಸಮಾನವಾಗಿ ನೋಡುತ್ತೇನೆ ಇವರನ್ನು ಮರೆಯುವುದು ಅಸಾಧ್ಯ..ಅವರ ಮಾತನ್ನೆ೦ದಿಗೂ ಮೀರುವುದಿಲ್ಲ.. ತಪ್ಪೇನಿಲ್ಲ ತಾನೇ??? ಇವರ ಸಾಹಸಗಳನ್ನು ಬರೆಯಹೋದರೆ ಒ೦ದು ಕಾದ೦ಬರಿಯೇ ಆಗಬಹುದು...
ಇ೦ದಿಗೂ ನಾನವರನ್ನು ದೇವರಿಗೆ ಸಮಾನವಾಗಿ ನೋಡುತ್ತೇನೆ ಇವರನ್ನು ಮರೆಯುವುದು ಅಸಾಧ್ಯ..ಅವರ ಮಾತನ್ನೆ೦ದಿಗೂ ಮೀರುವುದಿಲ್ಲ.. ತಪ್ಪೇನಿಲ್ಲ ತಾನೇ??? ಇವರ ಸಾಹಸಗಳನ್ನು ಬರೆಯಹೋದರೆ ಒ೦ದು ಕಾದ೦ಬರಿಯೇ ಆಗಬಹುದು...
No comments:
Post a Comment