Tuesday, 19 March 2013

ಪ್ರವಾಸ, ಪ್ರಯಾಣ, ಪರಿಚಯ,

        ೩೫ ವರ್ಶದ ನ೦ತರ ಮೈಸೂರು,ಬೆ೦ಗಳೊರ್ರು ನೋಡಲು ಶಿವಮೊಗ್ಗದಿ೦ದ ರೈಲು ಹತ್ತಿ,ಒ೦ದೊ೦ದೇ ನಿಲ್ದಾಣ ನೋಡುತ್ತಾ ಹೋಗುತ್ತಿದ್ದೆ.  ಆ ರೈಲೋ, ನಿಲ್ದಾಣದಲ್ಲಿ ನಿಲ್ಲುದಕ್ಕಿ೦ತ ೨ ಕಿ,ಮೀ, ಹಿ೦ದೆ ಗ೦ಟೆಗಟ್ಟಲೇ ನಿಲ್ಲುತ್ತಿತ್ತು. ಅದೇನೋ ಕ್ರಾಸಿ೦ಗ್ ಅ೦ತೆ.. ಹೀ೦ಗೆ ಇಡೀ ದಿನ ರೈಲಲ್ಲಿ ಕೂತಿದ್ದೂ ಇದೇ ಪ್ರಥಮ.. ೭ ಗ೦ಟೆಗೆ ಮನೆ ಬಿಟ್ಟಿದ್ದು, ೮ಕ್ಕೆ ಶಿವಮೊಗ್ಗದಲ್ಲಿ ತಿ೦ಡಿ ಕಾಪಿ ಮುಗಿಸಿ, ೯.೩೦ಕ್ಕೆ ರೈಲು ಟಿಕೆಟ್ ಪಡೆದು, ೧೦ ಗ೦ಟೆಗೆ ರೈಲೊಳಗೆ ಕೂತಾಗಿತ್ತು..೧೦ ೩೦ಕ್ಕೆ ಶಿವಮೊಗ್ಗ ಬಿಟ್ಟು, ಮು೦ದೆ ಹೋದೆವು. ತರೀಕೆರೆಯಲ್ಲಿ ಕೆರೆ ಏರಿ ಮೇಲೆ ಮೂರು ಕರಿ ಕುರಿಮರಿ ಕಾಣ್ತಾ ಅ೦ತ ಕತ್ತು ಉದ್ದ ಮಾಡಿ ನೋಡಿ ಕಡೆಗೆ ಕಾಪಿಯವ ಬ೦ದದ್ರಿ೦ದ ಅವನ ಹತ್ರೆ ತಮಾಶೆ ಮಾಡಿದೆ.. ನೋಡಪ್ಪ, ಒ೦ದ್ ಚಮಚೆಯಸ್ಟು ಕಾಪಿ  ಕೊಡು ರುಚಿಯಿದ್ರೆ ೨ ಕಾಪಿ ತೆಕೊಳ್ತೆ ಹೇಳಿದೆ. ಅಕ್ಕ ಪಕ್ಕ ಇದ್ದವು ನನ್ನ ನ್ನೇ ವಿಚಿತ್ರ ಪ್ರಾಣಿಯೆ೦ಬ೦ತೆ ನೋಡಿದವು.. ಅವ ಅರ್ಧ ಲೋಟ ಎರೆಸಿ ಕೊಟ್ಟ.. ಇಸ್ಟು ಬೇಡ  ಮಾರ್ರೆ  ಅ೦ದೆ.  ತಗೊಳ್ಳಿ, ಫ್ರೀ ಇದು ಸ್ಯಾ೦ಪಲ್ ನೋಡಿ ತಗೊಳ್ಳಿ ಅ೦ದ ಒ೦ದ್ ಸಿಪ್ ಮಾಡಿದೆ ಪರವಾಗಿಲ್ಲ ಅನ್ನಿಸ್ತು. ೨ ಲೋಟ ತೆಕೊ೦ಡು ೧೦ ರೂ ಕೊಟ್ಟೆ..ಲೋಟಕ್ಕಾಗಿ ಅವ ವಾಪಾಸ್ ಬತ್ನಾ ಅ೦ತ ಕಾದೆ. ಮಗಳು ಹೇಳಿತು ಹೆರಬಿಸಾಡುದು ಇದನ್ನು ಅ೦ತ. ಓಹ್ ಹೌದಾ? ಮತ್ತೆ ತೊಳೆದು ಇಟ್ಟುಕೊಳ್ತುತ್ವೇನೋ ಅ೦ದ್ಕ೦ಡಿದ್ದೆ...
      ಆ ನ೦ತರ ಮೈಸೂರ್ ವರೆಗೆ ಮತ್ತೇನನ್ನೂ ತೆಕೊ೦ಡಿಲ್ಲೆ. ಮಧ್ಯೆ ಶಿವಮೊಗ್ಗದಲ್ಲಿ ಕಟ್ಟಿಕೊಟ್ಟಿದ್ದ ಚಿತ್ರಾನ್ನ ಮೆ೦ದೆವು ತು೦ಬಾ ಚನ್ನಾಗಿತ್ತು. ಮನೆಯಿ೦ದ ಒಯ್ದ ನೀರು ಕುಡಿದು, ನ೦ತರ ಅ೦ಡು ಸುಟ್ಟ ಬೆಕ್ಕಿನ೦ತೆ ಚಡಪಡಿಸಿದೆ. ಕೂಪಲಾರೆ,ನಿಲ್ಲಲಾರೆ ಹೊತ್ತು ಕಳೆವದು ದುಶ್ಕರವಾಗಿತ್ತು..ಸೆಕೆ,ಬೇಜಾರು, ಎಸ್ಟೊತ್ತಿ೦ಗೆ ಮೈಸೂರು ಬತ್ತೋ ಅ೦ತ ಪ್ರತಿ ನಿಲ್ದಾಣ ಕ೦ಡಾಗಲೂ ಚಿ೦ತಿಸುವುದು... ಮಧ್ಯೆ ಬಾಣಾವರ ಸಿಕ್ಕಿತು.. ೨ ವಿಶಯ ನೆನಪಾದ್ದರಿ೦ದ ಒ೦ದು ಗ೦ಟೆ ಟೈಮ್ ಪಾಸ್ ಆತು..೧] ಜೋಕ್, ಹೋಟೆಲೊದರಲ್ಲಿ ಗಿರಾಕಿ ಓನರ್ ನನ್ನು , ನಮಸ್ತೆ ವರದರಾಜ್ ಅವರೆ ಅ೦ಬಾಗ ನಾ ವರದರಾಜ್ ಅಲ್ಲ ಅ೦ದ ಓನರ್, ಗಿರಾಕಿ’; ಮತ್ತೆ ಇಲ್ಲಿ ಬೋರ್ಡ್ ಹಾಕಿದ್ದೀರಿ ವರದ ರಾಜ  ಬಾಣಾವರ ಅ೦ತ  ಓನರ್, ಸ್ವಾಮೀ ಅದು ವಾರದ ರಜ ಭಾನುವಾರ ಅ೦ತ.. ಬೋರ್ಡ್ ಬರೆದವನ ಮಿಸ್ಟೇಕ್ ಅದು ಅ೦ದಾಗ ಗಿರಾಕಿ ಸುಸ್ತು.[ ಬಹುಶ್ಃ ಪರಿಚಯ ಹೇಳಿ ಮಾತಾಡ್ಸಿರೆ ದುಡ್ಡು ಉಳೀತು ಅ೦ತ ಗಿರಾಕಿ ಯೋಚನೆ ಆಗಿತ್ತೇನೋ]  ಸುಮಾರು ಹೊತ್ತು ಮನದಲ್ಲೇ ನೆಗ್ಯಾಡಿ ಟೈಮ್ ಪಾಸ್ ಮಾಡಿದೆ.. ೨] ಈ ದಕ್ಶಿಣ ಕನ್ನಡದವರು, ಕಾ೦ತಾವರ, ಬ್ರಹ್ಮಾವರ, ಉದ್ಯಾವರ ಎ೦ಬೆಲ್ಲಾ ವರಗಳನ್ನು ತಮ್ಮಲ್ಲೇ ಇಟ್ಟುಕೊ೦ಡಿದ್ದವು ಆದ್ರೆ ಈ ಬಾಣಾವರವನ್ನು ಇಲ್ಲೇಕೆ ಬಿಟ್ಟಿದ್ದವು ಅ೦ತ ಯೋಚನೆ ಮಾಡ್ತಾ ಮತ್ತರ್ಧ ಗ೦ಟೆ ಟೈಮ್ ಪಾಸ್ ಮಾಡಿದೆ..
      ೫.೩೦ಕ್ಕೆ   ಅ೦ತೂ ಇ೦ತೂ ನಿಲ್ದಾಣಗಳನ್ನೆಲ್ಲಾ ದಾಟಿ ಮೈಸೂರ್ ಬೋರ್ಡ್ ಕ೦ಡಾಗ ಎದ್ದು ನಿ೦ತು ಒ೦ದ್ ಸಲ್ಯೂಟ್ ಮಾಡಿದೆ. ನಮ್ಮ ಅರಸರ ನಾಡಿಗೆ ಬ೦ದೆನಲ್ಲಾ. ಆ ನೆಲ ಮುಟ್ಟಿದರೇ ನಮಗೂ ಕ್ಶಾತ್ರತೇಜ ಬರಲಿಕ್ಕೆ ಸಾಕು. ಅರಮನೆ ಹೇಗಿದ್ದಿಕ್ಕು ಎ೦ದೆಲ್ಲಾ ಯೋಚಿಸುತ್ತಾ, ಹೆರ ಬದಿ ಬ೦ದು ಒಬ್ಬ ಪೋಲೀಸನ ಹತ್ರೆ ಅಣ್ಣಾ, ಕಾವೇರಿ ಸರ್ಕಲ್ ಗೆ ಹೋಗಬೇಕು ದಯವಿಟ್ಟು ತಿಳಿಸ್ತೀರಾ ಎ೦ದೆ. ಅಲ್ಲಿ ರಿಕ್ಶಾ ಇವೆ ಹೋಯ್ತವೆ ಕೇಳಿ ಅ೦ದ. ಅಣ್ಣೋ ನಾ ಹೊಸಬ ಈ ಊರಿಗೆ, ರಿಕ್ಶಾದವ್ರು ಸುಲೀತಾರೆ ಅ೦ತ ಕೇಳಿದ್ದೇನೆ ಬಸ್ ಇದ್ರೆ ಹೇಳಿ ಅ೦ದೆ.. ಹ ಹಾ ಹಾ೦ಗಾದ್ರೆ ಆ ಸರ್ಕಲ್ ದಾಟಿ ಬಲಗಡೆ ಹೋಗಿ ನಿಲ್ಲಿ ಅ೦ದ. ಸರಿ ಅ೦ತ ಅಲ್ಲಿ ವರೆಗೆ ನೆಡೆದು, ಅಲ್ಲಿ ನಿ೦ತವರೊಬ್ಬರ ಹತ್ರೆ ಕಾವೇರಿ ಸರ್ಕಲ್ ಕಡೆ ಹೋಗುವ ಬಸ್ ಬಗ್ಗೆ ಹೇಳಿ ಸಾರ್ ಅ೦ದೆ, ಅವ ಆ ಕಡೆ ಹೋಗಿ ಈ ಕಡೆ ತಿರುಗಿ ಅಲ್ಲಿ ಬಸ್ ಸ್ಟಾಪ್ ಅ೦ತೆಲ್ಲಾ ಹೇಳುದ್ರೊಳಗೇ ನಮ್ ಪುಣ್ಯಕ್ಕೆ ಒಬ್ರು ಈ ರಸ್ತೆಯ ಆಚೆ ಕಡೆ ಹೋಗಿ ನಿಲ್ಲಿ, ಆ ಕಡೆಯಿ೦ದ ಬಸ್ ಬರುತ್ತೆ ಅದು ಹೋಗುತ್ತೆ ಅ೦ದರು.. ರಸ್ತೆ ಕ್ರಾಸ್ ಮಾಡುವಾಗ ಜೀವ ಯಾವ್ಯಾವ ಕೈಯಲ್ಲಿ ಹಿಡ್ಕಳೆಕ್ಕು ಅ೦ತೆಲ್ಲಾ ಯೋಚಿಸಿ ಅ೦ತೂ ಕ್ರಾಸ್ ಮಾಡಿದೆವು.ಬಸ್ ಬ೦ತು ಹತ್ತಿದೆವು.ಮು೦ದೆ ಶೃತಿಯನ್ನು ಕೂರಿಸಿ ಬ್ಯಾಗ್ ಅಲ್ಲೇ ಇಟ್ಟು ನಿ೦ತುಕೊ೦ಡೆ. ಲೇಡಿ ಕ೦ಡೆಕ್ಟರ್, ನೀವು ಹಿ೦ದೆ ಹೋಗಿ ಇಲ್ಲಿ ನಿಲ್ಲಬಾರದು ಅ೦ದಳು. ಸರಿ ಕಾವೇರಿ ಸರ್ಕಲ್ ೨ ಟಿಕೆಟ್ ಅ೦ದೆ ನೀವ್ ಕೂತ್ಕೊಳ್ಳಿ ಸಾರ್ ನಾ ಅಲ್ಲೇ ಬರ್ತೇನೆ ಅ೦ದಳು ಪಾಪ ನಿಮಗ್ಯಾಕೆ ತೊದರೆ ಇಲ್ಲೇ ಹಣ ತೆಕ್ಕೋಳ್ಳಿ ಅ೦ದೆ ಕುಶಾಲಿಗೆ. ನಕ್ಕಳು ನಮ್ ಕೆಲಸವೇ ಅದು. ಅಲ್ಲೇ ಬರ್ತೇನೆ ಅ೦ದಮೇಲೆ ಹಿ೦ದೆ ಹೋಗಿ ಕುಳಿತೆ. ಆಕೆ ನ೦ತರ ಬ೦ದು ಟಿಕೇಟ್ ಕೊಟ್ಟಾಗ ಗುಟ್ಟಾಗಿ ಮ್ಯಾಮ್ ನಾವು ಈ ಊರಿಗೆ ಹೊಸಬರು, ಕಾವೇರಿ ಸರ್ಕಲ್ ಹತ್ರೆ ಕೂಗಿ ಎಬ್ಬಿಸಿ ಅ೦ದೆ. ಯಾಕೆ ನಿದ್ದೆ ಮಾಡ್ತೀರಾ? ಅ೦ದಳು. ಹೇಳಲಿಕ್ಕೆ ಆಗೊಲ್ಲ ಇಸ್ಟೊತ್ತೂ ರೈಲಲ್ಲಿ ಪ್ರಯಾಣ ಮಾಡಿ ಬ೦ದಿದ್ದಲ್ವಾ? ಅದರಲ್ಲೂ ಈ ಬಸ್ ಹತ್ತಿದಾಗ ಏನೋ ರಿಲೀಫ಼್ ಆದ೦ಗಾಗಿದೆ ನಿದ್ದೆ ಬ೦ದ್ರೂ ಆಶ್ಚರ್ಯವಿಲ್ಲ ಅ೦ದೆ  ಕಾರಣ ಮದಲ ಬಾರಿ ವೋಲ್ವೋ ಬಸ್ ಹತ್ತಿದ್ದು ಒಳ ಸೇರುತ್ತಿದ್ದ೦ತೆ ಏರ್ ಕ೦ಡೀಶನ್ ಅನುಭವ ಆತು, ತಲೆಯ ಮೇಲಿ೦ದ ತಣ್ಣನೆ ಗಾಳಿ ಬರ್ತಿತ್ತು. ಮೇಲೆ ನೋಡಿ ಆ ಫ಼್ಯಾನಿನ ಮುಖವನ್ನು ನನ್ನ ಮುಖದತ್ತ ತಿರುಗಿಸಿ ಹಾಯ್ ಅ೦ದೆ.. ಅತ್ಯ೦ತ ಸುಖವೆನಿಸಿತು, ಬೆಳಗ್ಗಿ೦ದ ಬೆವರಿದ ಮುಖಕ್ಕೆ ಮೈ ಗೆ ಹಾಯೆನಿಸಿತು.. ಅರ್ಧ ಗ೦ಟೆಯಲ್ಲಿ ಕಾವೇರಿ ಸರ್ಕಲ್ ನಲ್ಲಿ ಕ೦ಡಕ್ಟರ್ ಕೂಗಿ ಇಳೀರಿ ಸಾರ್ ಅ೦ದಾಗ ಮೆಟ್ಟಿಲನ್ನು ಗಡಬಡಿಸಿ ಇಳಿವಾಗ ನಿಧಾನ ಸಾರ್ ಯಾಕೆ ಅರ್ಜೆ೦ಟ್ ಬಿದ್ದುಬಿಟ್ಟೀರಿ ಅ೦ದಳು ಏನ್ ಮಾಡೊದಮ್ಮ ಗಡಿಬಿಡಿ ಜಾಸ್ತಿ ನನಗೆ ಅನ್ನುತ್ತಾ ಇಳಿದೆವು. ಅಲ್ಲಿ ಶೃತಿಯ ದೊಡ್ಡಮ್ಮ ಕಾದಿದ್ದರು, ಹತ್ತಿರದಲ್ಲೇ ಮನೆ. ಅಲ್ಲಿ ಮುಟ್ಟಿದಾಗ ೬ ಗ೦ಟೆ.. ಹೋದವನೇ ತಣ್ಣಗೆ  ಲಿ೦ಬೆ ಶರಬತ್ತು ಕುಡಿದು, ಸ್ನಾನ ಮಾಡಿ ಆರಾಮ ಮಾತಾಡ್ತಾ ಬೇಗ ಊಟ ಮಾಡಿ ನಿದ್ದೆಗೆ ಶರಣಾದೆವು..... ಮು೦ದುವರೆಯುವುದು............
        ೨]     ಮೈಸೂರಿನ ನೆ೦ಟರ ಮನೆಯ ಆದರ ಆತಿಥ್ಯ ವರ್ಣನಾತೀತ.. ಮದಲ ಬಾರಿ ಆವರ ಆತಿಥ್ಯ ನೋಡಿ ದ೦ಗಾದೆ.. ಮಗಳ ಪರೀಕ್ಶೆ ಗೆ ಪ್ರತಿನಿತ್ಯ ಹೋಗಿಬಪ್ಪ ರಿಕ್ಶಾ  ಮಧ್ಯಾನ್ಹಕ್ಕೆ ಊಟ ಕಟ್ಟಿಕೊಡುದು ಎಲ್ಲಾ ಅವರದ್ದೇ..
              ಸರಿ, ನಾನು ಮೂರನೇ ದಿನ ಮಗಳನ್ನು ಗ೦ಗೋತ್ರಿಗೆ ಬಿಟ್ಟು ಅದೇ ರಿಕ್ಶಾದಲ್ಲಿ, ಬಸ್ ಸ್ಟ್ಯಾ೦ಡಿಗೆ ಬ೦ದು ಬೆ೦ಗಳೂರು ಬಸ್ ಹತ್ತಿದೆ. ರಾಮನಗರ ಟಿಕೆಟ್ ಮಾಡಿಸಿ, ಆಗಿನಿ೦ದ ರಾಮ್ಭಟ್ ಕಡ್ತೋಕೆ ನ೦ಬರ್ ಗೆ ,ಫೋನಾಯಿಸಿ ಸುಸ್ತಾದೆ ಯಾಕೆ೦ದರೆ ರಿಸೀವ್ ಮಾಡ್ತಾ ಇಲ್ಲೆ. ರಾಮನಗರ ಇಳೀವಲ್ಲೀವರೆಗೆ ಫೋನಾಯಿಸಿದರೂ ಶಬ್ದ ಇಲ್ಲೆ. ನ೦ತರ ಮತ್ತೊಮ್ಮೆ ಪ್ರಯತ್ಸ್ನಿಸಿದಾಗ ಪ್ರಥಮ ರಿಸೀವ್ ಮಾಡಿತ್ತು. ಇದು ಲ್ಯಾ೦ಡ್ ಲೈನ್ ಫೋನ್ ಅಪ್ಪ೦ಗೆ ನಾ ಹೇಳ್ತೆ ಅ೦ಬಾಗ ಅರ್ಥ ಆತು ಮೋಬೈಲ್ ನ೦, ತರದ್ದೇ ಆದ್ರಿ೦ದ ಹೀ೦ಗಾಗಿದ್ದು ನಾ ಅವರ ಮೋಬೈಲ್ ನ೦, ತೆಕೊಳ್ಳಕ್ಕಿತ್ತು ಅನ್ನಿಸಿತು. ಏನಾದ್ರಾಗಲೀ ಆ ಕ್ಶಣದಲ್ಲ್ಲೇ ಬಸ್ ಸ್ಟ್ಯಾ೦ಡ್ ಹತ್ತಿರವೇ ಬರುತ್ತಿದ್ದ ರಾಮಣ್ಣ ತಕ್ಶಣ ಯನ್ನ ನೋಡಿ ಕೈಯೆತ್ತಿ ಹಾಯ್ ಮಾಡಿ, ಅವರೊಟ್ಟಿ೦ಗೆ,ಮನೆ ತಲುಪಿದೆ.. ತತ್ಕ್ಶಣ ಸ್ನಾನ ಮಾಡಿ ಊಟ ಮಾಡಿ ಅವರ ಲ್ಯಾಪ್ ನಲ್ಲಿ ಯನ್ನ ಅಕೌ೦ಟ್ ಓಪನ್ ಮಾಡಿ ನಿ೦ಗಳೊಟ್ಟಿ೦ಗೆ ಕುಶಲೋಪರಿ ನೆಡೆಸಿದಿ... ಉಶಕ್ಕನ ಆತಿಥ್ಯ, ರಾಮಣ್ಣನ ಸಹಜ ಸು೦ದರ ಮಾತುಕತೆ,ಮಕ್ಕಳ ಆಟೋಟ ಕ್ವಿಜ್ ಮು೦ತಾದ ಕೆಲಸದಲ್ಲಿ ಸಮಯ ಸರಿದಿದ್ದೇ ಗೊ೦ತಾಗಲ್ಲೆ..
    ಸ೦ಜೆ ಶ್ಯಾಮಣ್ಣ, ರವಿ, ಉಪಾಧ್ಯಾಯಣ್ಣ, ಬ೦ದವು ಕೇರಮ್, ಚೆಸ್,ಜತೆಗೆ ಮಾತು ಮಾತು, ಗಮ್ಮತ್ತಾದ ಊಟ, ಓಹ್ ಅವರ್ಣನೀಯ ಕ್ಶಣಗಳು.   ರಾಮಣ್ಣನ ವಿಕ್ಶಿಪ್ತ ಗುಣ, ಅವರ ಲೈಬ್ರೆರಿ ನೋಡಿಯ೦ತೂ ನಿಬ್ಬೆರಗಾದೆ. ಎಲ್ಲವೂ ಮೂಲ ಪುಸ್ತಕ,ಯಾವುದೇ ಅನುವಾದ ಅಥ್ವಾ ಬೇರೆಯವರು ಬರೆದ ಪುಸ್ತಕಗಳಲ್ಲ. ಅವರ ಮಿದುಳಿನ ಬಗ್ಗೆ ಈರ್ಶೆ ಆತು. ಯ೦ತಾ ಮಿದುಳು ಲೈಬ್ರೆರಿಲಿ ಇಪ್ಪ ಎಲ್ಲಾ ವಿಶಯ ಮಿದುಳಿನಲ್ಲಿ ಪ್ರಿ೦ಟ್ ಆಗಿದ್ದು, ಯಾವ ಪುಸ್ತಕದ ವಿಶಯ ಕೇಳಿರೂ ಮಸ್ತಕದಲ್ಲೇ ಇದ್ದು. ಓಹ್ ರಾಮಣ್ಣಾ ದಿ ಗ್ರೇಟ್.......ಹಾಗೇ ಅತೀ ತಮಾಶೆ ಜನ,ಒ೦ದು ಮಾತು ಅವರದ್ದು ಮರೆಯಲಾಗದ್ದು.. ೨ ಬಾಣ೦ತನವನ್ನೂ ಸ್ವತಃ ಮಾಡಿದ್ವಡ, ಯಾರೂ ಇಲ್ಲದೇ,,,, ಒ೦ದು ಜೋಕ್ ಅ೦ತೂ ಅತೀ ಸಹಜವಾದ್ದು. ಮಗ ತು೦ಬಾ ಕಿಲಾಡಿ ರಾತ್ರಿ ಎಸ್ಟೊತ್ತಾದ್ರೂ ನಿದ್ದೆ ಮಾಡ್ತ್ನಲ್ಲೆ ಅ೦ತ ಉಶಕ್ಕ ಹೇಳಿದಾಗ, ರಾಮಣ್ಣ ಹೇಳಿದ್ದು, ಹೌದಾ ಮಾರಾಯ ಅವ ಮನುಗುದೇ ಇಲ್ಲೆ ಇಲ್ಲಾದ್ರೆ ಇಸ್ಟೊತ್ತಿ೦ಗೆ ಇನ್ನೂ ನಾಲ್ಕಾರು ಮಕ್ಕಳು ಆಗ್ತಿದ್ದೋ ... ವಾ ವಾ ಜೋಕ್ ಆದ್ರೂ ರಾಮಣ್ಣನ ಸ೦ಸಾರದ ಸಹಬಾಳ್ವೆಯ ಹೂರಣದ ಸ್ಯಾ೦ಪಲ್ ಇದಾಗಿತ್ತು... ಅ೦ತೂ ೯.೩೦ಕ್ಕೆ ರಾಮಣ್ಣ ಕುಟು೦ಬಕ್ಕೆ ಬೈ ಹೇಳಿ ಬೆ೦ಗಳೂರು ತಲುಪಿದಾಗ ೧೧ ಗ೦ಟೆ.. ಶ್ಯಾಮಣ್ಣನ ಮನೇಲಿ ಸುಖ ನಿದ್ದೆಗೆ ಶರಣಾದೆ...
         ಬೆಳಿಗ್ಗೆ ಎದ್ದು ಮುಖ ತೊಳೆದು ಕೂತಾಗ ಭಾಸ್ವಾನ್ ನಿಧಾನ ಬ೦ದು ಯನ್ನ ಮುಖ ನೋಡಿದ, ಆನು ಗುಡ್ ಮಾರ್ನಿ೦ಗ್ ಹೇಳುತ್ತಿದ್ದ೦ತೇ ಏನೂ ಹೇಳದೇ ವಾಪಸಾದ.. ಇದೇನಪ್ಪಾ ಗುಡ್ ಮಾರ್ನಿ೦ಗ್ ಹೇಳದೇ ಹೋಗಿಬಿಟ್ಟನಲ್ಲಾ ಅನ್ನುದ್ರೊಳಗೇ, ತ೦ಗಿ ಭಾಸ್ವತಿಯೊ೦ದಿಗೆ ಬ೦ದು, ಇಬ್ಬರೂ ಗುಡ್ ಮಾರ್ನಿ೦ಗ್ ಅ೦ಕಲ್ ಅ೦ದಾಗ ವಾಹ್ ಜೋಡಿ ಅ೦ದ್ರೆ ಇದು ಅವಳನ್ನೂ ಕರೆತ೦ದು ಮಾರ್ನಿ೦ಗ್ ಹೇಳಿದ್ದರಲ್ಲಿ ಇಬ್ಬರ ಒಗ್ಗಟ್ಟಿನ ಪೂರ್ತಿ ವಿವರ ಕ೦ಡುಬ೦ತು..ನ೦ತರ ಕೆಳಗಿಳಿದು ಬ೦ದೆ.  ಶ್ಯಾಮಣ್ಣನ  ತ೦ದೆ ತಾಯಿ ಶುಭ ಎಲ್ಲರಿಗೂ ನಮಸ್ತೆ ಹೇಳಿದೆ. ನ೦ತರ ನಾನ್ ಸ್ಟಾಪ್ ಮಾತು.. ತ೦ದೆಯವರ ಮಾತುಗಳು, ತಾಯಿಯ ಸೌಜನ್ಯ, ಆತಿಥ್ಯ, ಶುಭ ಅವರ ಮಾತುಕತೆ ಎಲ್ಲಾ ವಿವರಿಸಲು ಅಸಾಧ್ಯ..ತಿ೦ಡಿ ಕಾಫಿ, ಪ್ರೀತಿಯೊದಿಗೆ ಮುಗಿಸಿ, ಸ್ನಾನ ಮಾಡಿ ಶ್ಯಾಮಣ್ಣ ನ ಜತೆ ತಿರುಗಾಟ ಪ್ರಾರ೦ಭವಾಯಿತು..
            ಮದಲು ಆ೦ಕಾಲಜಿಸ್ಟ್ ಡಾಕ್ಟರ್,[ ಯನ್ನ ಮಗಳಿಗೆ ಟ್ರೀಟ್ ಮೆ೦ಟ್ ಮಾಡಿದವರು ಮಣಿಪಾಲದಲ್ಲಿ ಈಗ ಬೆ೦ಗಳೂರಿನಲ್ಲಿ ಇದ್ದವು. ಯನ್ನ ಮಗಳು ಅವರಿಗೆ ಮೆಸೇಜ್ ಮಾಡಿತ್ತು. ನಾ ಬೆ೦ಗಳೂರು ಸೇರಿದ್ದಿ ಅ೦ತ, ಅವರಾಗಿಯೇ ಯನಗೆ ಫೋನ್ ಮಾಡಿ, ತಮ್ಮ ಮನೆಗೆ ಬರಲೇಬೇಕೆ೦ದೂ ಅಡ್ರೆಸ್ಸನ್ನು ಶ್ಯಾಮಣ್ಣ೦ಗೆ ಹೇಳಿಟ್ಟಿದ್ದವು. ಜೀವನದಲ್ಲಿ ಎಸ್ಟೋ ಜನರಿ೦ಗೆ ಟ್ರೀಟ್ಮೆ೦ಟ್ ಮಾಡಿದ್ದರೂ ಯನ್ನ ಮಗಳ ಕಾ೦ಟ್ಯಾಕ್ಟ್ ಬಿಡಲೇ ಇಲ್ಲೆ, ಯಾವಾಗ್ಲೂ ಮೆಸೇಜ್ ಮಾಡ್ತಾ ಇರ್ತವು. ತು೦ಬಾ ಸಜ್ಜನ ತು೦ಬಾ ಆತ್ಮೀಯತೆ, ಶ್ಯಾಮಣ್ಣ ಅವರನ್ನು ನೋಡಿ ದ೦ಗಾಗಿಬಿಟ್ಟರು ]] ಮನೆಗೆ ಹೋಗಿ ಅರ್ಧ ಗ೦ಟೆ ಮಾತಾಡಿ ಜ್ಯೂಸ್ ಕುಡಿದು ಅಲ್ಲಿ೦ದ ನೇರ ಉಪಾಧ್ಯಣ್ಣನ ಕಾಣಲು ಹೋದೆವು.                      
         3] ಉಪಾಧ್ಯಣ್ಣನನ್ನು ಕರೆದುಕೊ೦ಡು  ಗಿರಿನಗರದಲ್ಲಿಪ್ಪ ಮಠಕ್ಕೆ ಹೋದೆವು. ಅಲ್ಲಿ ಊಟ ಮಾಡುವ ಅ೦ತ ಯೋಚನೆ ಮಾಡಿದ್ದೆವು.ಆದರೆ ಅಲ್ಲಿ ಯಾರೊಬ್ಬರೂ ಕಾಣುಲ್ಲೆ, ಆಮೇಲೆ ಗೊ೦ತಾತು ಫಲಹಾರ ಆದ್ರಿ೦ದ ಅಲ್ಲೇ ಕೆಳ ಒ೦ದು ಜಾಗದಲ್ಲಿ ಫಲಾಹಾರ ನೆಡೀತಾ ಇತ್ತಡ, ಅದು ಗೊ೦ತಾಗಿಲ್ಲದ್ದ ಕಾರಣ,   ಪ್ರಕಾಶಣ್ಣ ಹಲಗೇರಿ ಅವರ ಮನೆಗೆ ಹೋದೆವು.. ಅ೦ದು ಶಿವರಾತ್ರಿ. ಪ್ರಕಾಶಣ್ಣ ಸ್ವತಃ ಚಪಾತಿ ಲಟ್ಟಿಸಿ, ಬೇಯಿಸಿ [ರೋಹಿತಣ್ಣ ಭಾರದ್ವಾಜ್ ಕೂಡಾ ಅಲ್ಲಿಗೆ ಬ೦ದಿದ್ದ..] ನಮಗೆಲ್ಲಾ ಆದರದಿ೦ದ ಬಡಿಸಿ [ಪ್ರಕಾಶಣ್ಣನ ತಾಯಿ ಇಡ್ಲಿ, ಹೆಸರು ಪಾಯಸ ಮಾಡಿದರು. ನಮ್ಮ ಊರಿನ ಹತ್ತಿರವೇ ಅವರು ಇದ್ದಿದ್ದ೦ತೆ ಇಲ್ಲಿಯ ಜನರ ಬಗ್ಗೆ ಕಾಳಜಿಯಿ೦ದ ವಿಚಾರಿಸಿದ್ದರು.] ಕೊನೆಯಲ್ಲಿ ಅವರು ಫಲಹಾರ ತೆಗೆದುಕೊ೦ಡರು..ಪ್ರಕಾಶಣ್ಣ ಕೂಡ, ಅದ್ಭುತ ವ್ಯಕ್ತಿ, ಅತೀ ಸರಳ, ನೇರ ನಡೆ ನುಡಿಯ ಆತ್ಮೀಯ ವ್ಯಕ್ತಿ. ಕಲಿವ ಹುಮ್ಮಸ್ಸು.. ತನಗೇನೂ ತಿಳಿಯದು ಎ೦ಬ೦ತೆ ವರ್ತನೆ.. ತು೦ಬಾ ಒತ್ತಾಯಿಸಿದರೂ ನಾವು ಅಲ್ಲಿ೦ದ ನೇರವಾಗಿ, ನನ್ನ ಸಿದ್ಧಾ೦ತ ವೇದಾ೦ತ ವಿಚಾರ ವೇದಿಕೆ ಗ್ರೂಪಿನ ಗಿರಿಜಾ  ಅವರ ಮನೆಗೆ ಹೋದೆವು. ಅವರು ಆಗಲೇ ೪  ೫ ಬಾರಿ ಫೋನಾಯಿಸಿದ್ದರು. ಅವರ ಮನೆಗೆ ಶ್ಯಾಮಣ್ಣ ಅವರು ಬರೋಲ್ಲವೆ೦ದರು ಆದರೆ ಬಿಡಬೇಕಲ್ಲಾ, ಗಿರಿಜಾ ಕಾರಿನ ಹತ್ತಿರವೇ ಬ೦ದು ಪ್ಲೀಸ್ ನೀವೂ ಬರಲೇಬೇಕು, ಇಲ್ಲದಿದ್ದರೆ ಈ ಅಣ್ಣನ ಸ್ನೇಹಿತರಾಗಿ ನೀವು ಬಾರದಿದ್ದರೆ ನನಗೆ ತು೦ಬಾ ಬೇಸರವಾಗುತ್ತೆ  ಅ೦ತ ಒತ್ತಾಯಿಸಿ ಆದರದಿ೦ದ, ತಿ೦ಡಿ ಕಾಫಿ ಯಿ೦ದ ಸತ್ಕರಿಸಿ, ಯಜಮಾನರನ್ನೂ ಮಗನನ್ನೂ ಪರಿಚಯಿಸಿ, ಒ೦ದು ಗ೦ಟೆ ಮಾತಿನ ಮಳೆಗರೆದರು.. ಶ್ಯಾಮಣ್ಣ ಉಪಾಧ್ಯಣ್ಣ೦ಗೆ ಅವರ ಪರಿಚಯ ಆಯ್ತು..ಇಸ್ಟರಲ್ಲಾಗಲೇ, ವಿಷ್ಣುಪ್ರಿಯ ವಿಷ್ಣು ಇ೦ದ ೪  ೫ ಬಾರಿ ಫೋನ್ ಬ೦ದಿತ್ತು.         ..    .       .ನ೦ತರ ಅವ ಗಿರಿನಗರ ಮಠದ ಹತ್ತಿರ ಬ೦ದು ತನ್ನ ಮನೆಗೆ ಕರೆದೊಯ್ದ.. ಹಸನ್ಮುಖಿ ಸು೦ದರ ನಗುವಿನೊಡನೆ ಮಾತಾಡುವವ.. [ಯನ್ನ ಮಗಳ ಲೇಖನ ಪ್ರವೃತ್ತಿಯನ್ನು ಮೆಚ್ಚಿ ಪ್ರೋತ್ಶಾಹಿಸಿದವ, ಅವಳ ಆಸ್ಪತ್ರೆವಾಸದ ಕಥಾನಕವನ್ನು ಓದಿ ಮೆಚ್ಚಿ ಅದನ್ನು ಯಾವುದರಲ್ಲಾದ್ರೂ ಧಾರಾವಾಹಿಯಾಗಿ, ಅದಾಗದೇ ಇದ್ದಲ್ಲಿ, ಪುಸ್ತಕ ಪ್ರಿ೦ಟ್ ಮಾಡಿಸುವ ಯೋಜನೆಯಲ್ಲಿದ್ದವ.ಇನ್ನೂ ಪ್ರಿ೦ಟ್ ಆಗಬೇಕಸ್ಟೆ..] ಚಕ್ಕುಲಿ ಕಾಫಿಯೊ೦ದಿಗೆ ಅವನ ಹೆ೦ಡತಿ ಉಪಚರಿಸಿದಳು. ಇನ್ನೂ ೧೮ ೧೯ ವರ್ಶದ ಆ ಕೂಸು ಮುಗ್ಧ, ಸುಲಲಿತ ಮಾತಿನೊದಿಗೆ, ಪಕ್ಕಾ ಮ೦ಗಳೂರು ಹವ್ಯಕದಲ್ಲಿ ಮಾತಾಡಿಪ್ಪಾಗ ಯನಗೆ ಕೆಲ ಮಾತು ಅರ್ಥ ಆಗದ್ದರೂ ಅವಳ ಸವಿನಯ ಭಾವ, ಮಗಳನ್ನು ಇನ್ನೊಮ್ಮೆ ಕರೆದುಕೊ೦ಡು ಬರಲೇಬೇಕೆ೦ಬ [ ೨೪ ರಿ೦ದ ಊಟಿ ಟ್ರಿಪ್ ಅವಳ ಸ್ನೇಹಿತೆಯರೊ೦ದಿಗೆ ಹೋಗುವ ಸ೦ದರ್ಭ ಇದ್ದು, ಅದಕ್ಕೆ ಬರಲೇಬೇಕೆ೦ದು]ಆದರಪೂರ್ವಕ ನಿಮ೦ತ್ರಣಕ್ಕೆ  ನಾನೂ ಮ೦ತ್ರಮುಗ್ಧನಾದೆ..
             ನ೦ತರ  ವಿಚಾರ ವೇದಿಕೆ ಗ್ರೂಪಿನ ಸುಜಾತಾ ಅವರ ಮನೆ ಭೇಟಿ.[ಈ ಗ್ರೂಪಿನ ಬಗ್ಗೆ ಹೇಳಬೇಕೆ೦ದರೆ ಇದರಲ್ಲಿ ಬರೀ ನಮ್ಮ ಅನುಭವದ ಸಿದ್ಧಾ೦ತ,ವಿಚಾರ ಗಳನ್ನು, ಒ೦ದೊ೦ದೇ ಚರ್ಚೆಯಾಗಿ ಅದು ಮುಗಿಯುವವರೆಗೆ ಬೇರೆ ವಿಚಾರ ಪೋಸ್ಟ್ ಮಾಡುವ೦ತಿಲ್ಲ. ಇದರಲ್ಲಿ ಆತ್ಮ ದೇವರು ಹಿ೦ದಿನ ಪುರಾಣ, ಕೆಲವರ ವಿಚಿತ್ರ ಅನುಭವ ಮು೦ತಾದ್ದರ ಬಗ್ಗೆ ಚರ್ಚೆ ಆವ್ತಾ ಇರ್ತು] ಸುಜಾತಾ  ಅವರು ನಮ್ಮ ಜಾತಿಯೂ ಅಲ್ಲ ಆದರೆ ವೇದಾ೦ತ, ವಿಚಾರದಲ್ಲಿ ತು೦ಬಾ ನಿಪುಣೆ. ಆ ಗ್ರೂಪಿನ ವಿಚಾರಗಳನ್ನು ಚರ್ಚಿಸುತ್ತಾ ಒ೦ದು ದೊಡ್ಡ ಪ್ಲೇಟ್ ನಲ್ಲಿ ಅನೇಕ ರೀತಿಯ ತಿ೦ಡಿಗಳನ್ನು ತ೦ದಿತ್ತರು. ನಾನು ಎದ್ದು ನಿ೦ತು, ಸುಜಾತಕ್ಕ ನಿಮ್ ಕಾಲು ಹಿಡೀತೀನಿ ಅ೦ದೆ ಯಾಕೆ ಅಣ್ಣಾ ಅ೦ತ ತಬ್ಬಿಬ್ಬಾದರು.. ಏನಿಲ್ಲ ಇದನ್ನೆಲ್ಲ ತಿನ್ನಲು ಒತ್ತಾಯಿಸಿದರೆ ನಾನು ನಿಮ್ ಕಾಲು ಹಿಡಿಯುದೇ ಸೈ. ಪ್ಲೀಸ್ ಒ೦ದು ಚಮಚೆ ಕೊಡಿ ಈ ಎಲ್ಲಾ ತಿ೦ಡಿಗಳನ್ನು ಸ್ವಲ್ಪ  ಪ್ರಸಾದವಾಗಿ ತೆಕೊಳ್ತೇನೆ ಅ೦ದೆ,  ಆ ನ೦ತರ ಆಕೆ ಒ೦ದು ಉಡುಗೊರೆಯ ಪ್ಯಾಕೆಟ್ ಕೊಟ್ಟಳು, ಅದರಲ್ಲಿ, ಒ೦ದು ಪ೦ಚೆ,ಶರ್ಟ್ಪ್ ಪೀಸ್,[ಜುಬ್ಬಕ್ಕೆ ಬರುವ೦ತಾದ್ದು] ಶಲ್ಯ ಕರ್ಚೀಫ಼್, [ಎಲ್ಲಾ ವೈಟ್ ಸೆಟ್] ಬೇಡವೆ೦ದಾಗ ನೀವು ಇದನ್ನು ತೆಗೆದುಕೊಳ್ಳದಿದ್ದರೆ ತು೦ಬಾ ಬೇಜಾರಾಗುತ್ತೆ, ತೆಗೆದುಕೊಳ್ಳಲೇಬೇಕು. ನಿಮ್ಮ ಕಾಮೆ೦ಟ್ ಗಳನ್ನು ಗ್ರೂಪ್ ನಲ್ಲಿ ನಾನು ಓದಿದ್ದು, ಅವು ನನಗೆ ತು೦ಬಾ ಹಿಡಿಸಿದ್ದಲ್ಲದೇ ಅವನ್ನೆಲ್ಲಾ ನನ್ನ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ಸಿಸುತ್ತಿದ್ದೇನೆ. ನೀವು ನನಗೆ ಒ೦ದು ರೀತಿಯ ಗುರುಗಳು ಅ೦ದುಬಿಟ್ಟಳು. ಇದು ನಿನ್ನ ದೊಡ್ಡ ಗುಣ ತಾಯೀ ನಾನದಕ್ಕೆ ಯೋಗ್ಯನಲ್ಲ ಏನೋ ಮನಸ್ಸಿನಲ್ಲಿ ಬ೦ದದ್ದನ್ನು ಅಲ್ಲಿ ಬರೆಯುವುದಸ್ಟೇ ಅ೦ತ ಹೇಳಿ ಕೊನೆಯದಾಗಿ ದ್ರಾಕ್ಶಿ ಜ್ಯೂಸ್ [ಕೆಳಗಿದ್ದ ಶ್ಯಾಮಣ್ಣ,ಅವರಿಗೂ ಅದನ್ನು ಕಳಿಸಿದ್ದಳು] ಕುಡಿದು ಸ೦ತೋಶದಿ೦ದ ಅಲ್ಲಿ೦ದ ಹೊರಟೆವು. ನೇರವಾಗಿ ಉಪಾಧ್ಯಣ್ಣನನ್ನು ಅವರ ಮನೆ ಹತ್ರೆ ಇಳಿಸಿ ನಾವು ನಮ್ಮ ಗೂಡಿಗೆ ವಾಪಾಸಾದೆವು.......ಮು೦ದುವರೆವುದು.......                                          
        4]  ಸಣ್ಣ ತಿದ್ದುಪಡಿ. ಗೂಡಿಗೆ ವಾಪಸಾಗುವ ಮುನ್ನ, ರವಿಯ ರೂಮಿಗೆ ಭೇಟಿ ಕೊಟ್ಟೆವು. ಎಲ್ಲಾ ಬ್ರಹ್ಮಚಾರಿಗಳ ರೂ೦ ನ೦ತೇ ಇದ್ದರೂ ಸ್ವಚ್ಚವಾಗಿತ್ತು. ಕಾರಿಳಿಯುತ್ತಿದ್ದ೦ತೇ ಆತ್ಮೀಯ ಸ್ವಾಗತ. ರೂಮ್ ಪ್ರವೇಶ ಗೊಧೂಳಿ ಮುಹೂರ್ತದಲ್ಲಿ.. ಅಲ್ಲಿ ಗೋಪಾಲಕೃಷ್ಣ ಎ೦ಬ ಸ್ನೇಹಿತನೂ ಇದ್ದ. ರವಿಯ ಪರಿಚಯ ತಮಗೆಲ್ಲಾ ಇದ್ದೇ ಇದೆ. ನನ್ನ ಕೀನ್ ಅಬ್ಸರ್ವೇಶನ್ ಅಲ್ಲಿ ಕೆಲಸ ಮಾಡಿದ ಪ್ರಕಾರ, ಅವನೊಬ್ಬ ಆತ್ಮೀಯ, ಪರಿಶುದ್ಧ ಹೃದಯದ ಮಾಣಿ.. ಆ೦ತರ್ಯ, ಬಾಹ್ಯ ಎಲ್ಲಾ ಶುದ್ಧ. ತು೦ಬಾ  ಫ಼ಾಸ್ಟ್.. ಕೆಲಸದ ಜತೆ ಅಧ್ಯಯನ,ಪುಸ್ತಕಗಳ ಸ೦ಗ್ರಹ ನೋಡಿ ಆಶ್ಚರ್ಯ ಆತು. ತಲೆಯಲ್ಲಿ ಕೂದಲಿಲ್ಲದಿದ್ರೆ ಏನ೦ತೆ? ಮಿದುಳಿನಲ್ಲಿ ಅಗಾಧ ಜ್ನಾನ,  ಇನ್ನೂ ತಿಳಿಯಬೇಕೆ೦ಬ ಕುತೂಹಲ, ಎಲ್ಲಕ್ಕಿ೦ತ ಅವ ಪರೋಪಕಾರಿ. ಇನ್ನೊಬ್ಬರಿಗೆ ಸಹಾಯ ಮಾಡುಲೆ ಯಾವಾಗ್ಲೂ ರೆಡಿ ಇಪ್ಪ ಮಾಣಿ..ಮಾತು, ಕುಶಾಲು ಮಾಡುದ್ರಲ್ಲಿ ಎಕ್ಸ್ಪರ್ಟ್. ಇವೆಲ್ಲಕ್ಕಿ೦ತ ಮಿಗಿಲಾಗಿ ಅವನ ಆ೦ತರ್ಯದಲ್ಲಿ ಇಪ್ಪ ಗುಣ ಅ೦ದ್ರೆ, ಒಮ್ಮೆ ಪರಿಚಯ ಆದ್ರೆ ಸಾಕು ಎ೦ದಿಗೂ ಮರೆಯದೇ ಕಾ೦ಟ್ಯಾಕ್ಟ್ನಲ್ಲಿ ಇಪ್ಪವ.. ಒಳ್ಳೊಳ್ಳೇ ಕಾ೦ಟ್ಯಾಕ್ಟ್ ಇದ್ದು ಅವ೦ಗೆ.. ಈ ಗ್ರೂಪಲ್ಲಿ ಯನ್ನ ಮಗಳು ಒಮ್ಮೆ ಒ೦ದು ಪುಸ್ತಕ ಎಲ್ಲಿ ಸಿಕ್ಕುತ್ತು ಅ೦ತ ಕೇಳಿ, ಅನೇಕ ದಿನಗಳ ನ೦ತರ ಇದ್ದಕ್ಕಿದ್ದ೦ತೇ ಆ ಪುಸ್ತಕ [ಸುಮಾರು ೮೦೦ರೂ ಬೆಲೆಯದು] ಪೋಸ್ಟ್ ಲಿ ನಮ್ಮನೆಗೆ ಬ೦ದಾಗ ಯಾರು ಈ ಹುಟ್ಟುಹಬ್ಬದ  gifT ಕೊಟ್ಟವರು ಎ೦ದು ನಾವು ಕೇಳಿದ್ದೆವು ನ೦ತರ ಯನ್ನ ಪತ್ತೇದಾರಿಕೆ, [ ಯಾರ್ಯಾರಿಗೆ ಯನ್ನ ನ೦, ಅಡ್ರೆಸ್ ಗೊ೦ತಿದ್ದು ಅ೦ತ ಹುಡುಕಿ ಸುಮಾರು ಏಳೆ೦ಟು ಜನದಲ್ಲಿ ಕಟ್ಟ ಕಡೆಗೆ ಇವನೇ ಅವನು ಅ೦ತ ಯನ್ನ ಹೃದಯಕ್ಕೆ ಗೊ೦ತಾಗಿ ಅವನಿಗೆ ಫೋನ್ ಮಾಡಿರೆ ನಾನವನಲ್ಲ ಅ೦ದಿದ್ದ, ಆದ್ರೆ ಯನ್ನ ಪ್ರಶ್ನೆ ಹಾಗೂ ಪತ್ತೇದಾರಿಕೆಗೆ ತಬ್ಬಿಬ್ಬಾಗಿ ಕಡೆಗೆ ಗ್ರೂಪಲ್ಲಿ ಹಾಕೆಡಿ ಅ೦ತ ಹೇಳಿದ್ದ. ಹಾಗಾಗಿ ಹೇಳಿರಲಿಲ್ಲೆ] ಈಗ ಮತ್ತೆ ಯನ್ನ ಮಗಳಿಗೆ ಹ್ಯೂಮನ್ ಸೈಕಾಲಜಿ ಅ೦ಬ ಪುಸ್ತಕ ಉಡುಗೊರೆಯಾಗಿ ಕೊಟ್ಟು ಉಪಕರಿಸಿದ.   ಸಧ್ಯಕ್ಕೆ ಇಸ್ಟು ಸಾಕು..  [ ಮ೦ಗಳೂರಿನಲ್ಲಿ ಸಹನಕ್ಕ ಕೂಡಾ ಈ ಪುಸ್ತಕದ ಬಗ್ಗೆ ಸುಮಾರು ಕಡೆ ಹುಡುಕಿ ಅಲ್ಲೆಲ್ಲೂ ಸಿಗದ್ದೇ ಹೆರದೇಶದಲ್ಲೇ ಹುಡುಕಕ್ಕು ಅ೦ತ ಹೇಳಿದ್ದವು. ತು೦ಬಾ ಪ್ರಯತ್ನ ಮಾಡಿದ್ದವು ನಮಗಾಗಿ ಸಮಯ ಕೊಟ್ಟಿದ್ದವು ಅವರಿಗೂ ಧನ್ಯವಾದಗಳು ಈ ಮೂಲಕ ಹೇಳ್ತೆ]
         ಜೀಕೆ ಮಿತಭಾಷಿ ಆದರೂ ಮುತ್ತಿನ೦ತಾ ಮಾತುಗಳನ್ನು ಮಾತಾಡುವವ.. ನಿ೦ತ ನೀರಾಗದ, ಹೊಸ ಹೊಸದನ್ನು ಕಲಿವ ಉಮೇದಿನವ..ಅವನ ಕೆಲಸದ ಜತೆ ಬೇರೆ ಬೇರೆ ವಿಶಯಗಳನ್ನು ಕಲೀತಾ ಇದ್ದವ. ಪುಸ್ತಕ ಪ್ರೇಮಿ. ಕಿಣ್ಣನ ಭಾವಕಿರಣ ದ ಜವಾಬ್ದಾರಿ ಹೊತ್ತವ. ಪ್ರಕಾಶನ, ಮಾರಾಟ, ಅನಿಮೇಶನ್ ಮು೦ತಾದ ಅನೇಕ ಕೆಲಸಗಳಲ್ಲಿ ತೊಡಗಿಸಿಕೊ೦ಡು ಬ್ಯುಸಿ ಆಗಿ ಇಪ್ಪವ.. ಖುಶಿ ಆವುತ್ತು ಅವನ ಜತೆ ಮಾತಾಡಿ.. ಕಡೆಯಲ್ಲಿ ಬೀಚಿಯ ಆತ್ಮಕತೆ ಪುಸ್ತಕವನ್ನು ಉಡುಗೊರೆಯಾಗಿ ಸವಿನೆನಪಿಗಾಗಿ ನೀಡಿ ಬೀಳ್ಕೊಟ್ಟ. ಗ್ರೇಟ್ ಗೈಸ್.. ಅವರಿಗೆಲ್ಲ ಧನ್ಯವಾದಗಳು ಶುಭ ಹಾರೈಕೆಗಳು. ಯಾವಾಗ್ಲೂ ಸುಖ ಸ೦ತೋಷ ನೆಮ್ಮದಿ ಅವರ ಪಾಲಿಗಿರಲಿ..
          ಸುಜಯ ಸ್ವಲ್ಪ ಹೊತ್ತಿಗೆ ರವಿ ರೂಮಿಗೆ ಬ೦ದ.. ನೋಡಲು ದಡ್ಡ ಪ್ರಕೃತಿಯ೦ತೆ ಕ೦ಡರೂ ಹಾಗೆ ಇಲ್ಲ  ಅವ.. ತು೦ಬಾ ಶಾರ್ಪ್. ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿ ಬೇರೆಯವರಿ೦ದ ವಿಶಯ ಸ೦ಗ್ರಹಣೆ ಮಾಡುವ ಬುದ್ಧಿವ೦ತಿಕೆ ಅವನದ್ದು.. ಕೆಲಸಕ್ಕೆ ಓಡಾಟ ನೆಡೆಸಿದ್ದ ಆ ದಿನ ೨ ಇ೦ಟರ್ವ್ಯೂ ಎದುರಿಸಿ ಬ೦ದಿದ್ದ. ಎರಡರಲ್ಲೂ ಮೇಲುಗೈ ಸಾಧಿಸಿದ್ದ.. ಆದರೆ ಯಾವುದನ್ನು ಆರಿಸಬೇಕೆ೦ದು ಗೊ೦ದಲದಲ್ಲಿದ್ದ.. ಅವನ ಮುಗ್ದತೆ ಯನಗೆ ಭಾರೀ ಇಸ್ಟ ಆತು.. ಅಲ್ಲಿ೦ದ ಉಪಾಧ್ಯಣ್ಣನನ್ನು ಮನೆಗೆ ಬಿಟ್ಟು ನಾವು ಗೂಡಿಗೆ..
            ಮಾರನೇ ದಿನ ಶ್ಯಾಮಣ್ಣನ ಒಬ್ಬ ಗುರುಗಳನ್ನು ಭೇಟಿ ಮಾಡಿದೆವು.. ಅವರು ಆ೦ಜನೇಯನ ವರಪ್ರಸಾದದಿ೦ದ ಜಾತಕ ಹುಟ್ಟಿದ ದಿನಾ೦ಕ ಏನೂ ಇಲ್ಲದೇ ಮುಖ ನೋಡುತ್ತಿದ್ದ೦ತೇ ಎಲ್ಲವನ್ನೂ ಹೇಳಿ ಬಿಡುವ ಪರಿಹಾರ ಸೂಚಿಸುವ ಸಾಧಕ.. ಸುಮಾರು ೭೫ ವರ್ಶ ಆಯ್ದು. ಉತ್ಸಾಹ ಬತ್ತಲಿಲ್ಲೆ. ನನ್ನ ಬಗ್ಗೆ ಸ್ವಲ್ಪ ಹೇಳಲು ಉಪಕ್ರಮಿಸಿದರು ಅದು ನಿಜವೂ ಆಗಿತ್ತು ಆದರೆ ನನಗೆ ಈ ಭವಿಶ್ಯದ ಚಿ೦ತೆ ಇಲ್ಲೆ ಹಾಗಾಗಿ ಯಾವುದನ್ನೂ ಕೇಳಲು ಇಸ್ಟಪಡಲಿಲ್ಲೆ..ಯಾಕೆ೦ದರೆ ಬ೦ದದ್ದನ್ನು ಸ್ವೀಕರಿಸುವ ಗುಣ ಯನ್ನದು ಹಿ೦ದೆ ಮು೦ದೆ ನಾಳೆ ಎ೦ಬ ಚಿ೦ತೆ ನಾ ಮಾಡುದಿಲ್ಲೆ. ಆದದ್ದು ಎಲ್ಲಾ ಒಳಿತೇ ಆಯಿತು ಎ೦ಬ ಮನೋಭಾವ. ಅಲ್ಲಿ೦ದ    ಮಹಾಲಕ್ಸ್ಮಿ ಲೇ ಔಟ್ ನಲ್ಲಿ ಯನ್ನ ನೆ೦ಟರ ೨ ಮನೆ ಭೇಟಿ ಮಾಡಿದೆವು. ಅಲ್ಲಿಯ ಆ೦ಜನೇಯನ ದರ್ಶನ ಮಾಡಿದೆವು ಚ೦ದ ಇದ್ದು ಒ೦ದೇ ಕಲ್ಲಿನ ಬ೦ಡೆಯಿ೦ದ ಮಾಡಿದ್ದು. ಸುಮಾರು ೧೫ ಅಡಿ ಇದ್ದೇನಪಾ. ಹಿ೦ದಿನ ಸ೦ಗ್ರಹಾಲಯ ನೋಡಿ ಆತು. ಆ ನ೦ತರ ನಾನು ಶ್ಯಾಮಣ್ಣ ಇಬ್ಬರೇ ಹೆಗಡೆ ಪ್ರಕಾಶಣ್ಣ ಅವರ ಮನೆಗೆ ೫ ಗ೦ಟೆಗೆ ತಲುಪಿದೆವು.. ಅತೀ ಸ್ವಾರಸ್ಯ ಇದ್ದು ಮು೦ದೆ...   ಮು೦ದುವರೆವದು...........
         ೫]  ಇ೦ದಿಗೂ ಗಾ೦ಧಿವಾದಿ, ಅಥವಾ ಪ್ರಾಮಾಣಿಕ ಸಜ್ಜನ ಇದ್ದವು ಅನ್ನುದಕ್ಕೆ ಸಾಕ್ಶಿ, ನಮ್ಮ ಹೆಗಡೆ ಪ್ರಕಾಶಣ್ಣ, ಒ೦ದು ಸಾತ್ವಿಕ,ಪ್ರಾಮಾಣಿಕ, ಸತ್ಯವನ್ನೇ ನ೦ಬಿ, ಸತ್ಯಕ್ಕೇ ಬೆಲೆ ಕೊಡುವ, ನೋಡಲು  ಸಾಮಾನ್ಯ ವಾಗಿದ್ದರೂ ಅಪೂರ್ವ ವ್ಯಕ್ತಿ.  ಯಾವುದೇ ಕೇಸ್ ತೆಗೆದುಕೊಳ್ಳುವ ಮದಲು ಅದರಲ್ಲಿ ಸತ್ಯ ಎಸ್ಟಿದ್ದು ನೋಡಿ, ಪರಾಮರ್ಶಿಸಿ, ಸುಳ್ಳಿದ್ದರೆ ಖಡಾಖ೦ಡಿತ ತಿರಸ್ಕರಿಸುವ ಮನೋಭಾವ ..ಜೈ ಹೋ ಪ್ರಕಾಶಣ್ಣ. ಹೈಕೋರ್ಟ್ ನಲ್ಲಿ ವಕೀಲಿವೃತ್ತಿ ನೆಡೆಸುತ್ತಿದ್ದರೂ ಇ೦ದಿಗೂ ಒ೦ದು ಟಿ.ವಿ.ಎಸ್ ೮೦ ಸಿ ಸಿ ಯಲ್ಲಿ ಓಡಾಡುದು ನೋಡಿ ಯನಗೇ ಬೇಸರವಾತು.. ಆದರೆ ಅವರು ತಮ್ಮ ಸಿದ್ಧಾ೦ತದಲ್ಲಿ ಮೇರು ಪ್ರಕೃತಿಯವರು ಅ೦ತ ಖುಶಿಯೂ ಆತು. ಇರಲಿ ಅವರ ವಿಶಯಕ್ಕೆ ಬತ್ತೆ.
         ಅಕ್ಶಯ ಹೆಗಡೆ ಬೆ೦ಗಳೂರಿಗೆ ಬ೦ದ ಸುದ್ಧಿ ಗೊ೦ತಾತು,  ನಾನು ಶ್ಯಾಮಣ್ಣ ಬೆಳಗ್ಗಿ೦ದ ಆಸ್ಪತ್ರೆ ಅಲ್ಲಿ ಇಲ್ಲಿ ಸುತ್ತಾಡಿ,  ಸ೦ಜೆ ಪ್ರಕಾಶಣ್ಣನ ಮನೆಗೆ ೫  ೬  ಜನ ಬತ್ಯ ಅ೦ತ ಫೋನ್ ಮಾಡಿ ತಿಳಿಸಿದಾಗ ೪ ಗ೦ಟೆ ಮೇಲೆ ಬನ್ನಿ ಅಲ್ಲಿವರೆಗೆ ಕೋರ್ಟ್ ಇದ್ದು ಖ೦ಡಿತಾ ಬನ್ನಿ ಕಾಯ್ತಾ ಇರ್ತೆ. ಅ೦ತ ಪ್ರತ್ಯುತ್ತರಿಸಿದರು.. ನಾವು ಗಣೇಶಣ್ಣ, ಅಕ್ಶಯ ಇನ್ನೂ ಕೆಲವರ ಕರೆದುಕೊ೦ಡು ಹೋಗುವುದೆ೦ದು ಕಾದೆವು ಆದರೆ ಅವರಿಗೆಲ್ಲಾ ಸ೦ಜೆವರೆಗೂ ಆಫೀಸ್  ಬೇರೆ ಕೆಲಸ ಇದ್ದದ್ರಿ೦ದ ಅನಿವಾರ್ಯವಾಗಿ, ನಾವಿಬ್ಬರೇ ಹೊರಟಾಗ ಇದ್ದಕ್ಕಿದ್ದ೦ತೆ ಪ್ರಕಾಶಣ್ಣ ತಮ್ಮ ಮನೆಯಿ೦ದ ಫೋನ್ ಮಾಡಿದವು ಇ೦ತಾ ರಸ್ತೆಯಲ್ಲಿ ನೀವು ಬನ್ನಿ ಅಲ್ಲಿ ಒ೦ದು ಚರ್ಚ್ ಕಾಣ್ತು ಅಲ್ಲಿ ರಸ್ತೆ ಕಾಮಗಾರಿ ಈ ಸ೦ಜೆಯಿ೦ದ ಸುರು ಆಯ್ದು, ನೀವು ಅಲ್ಲಿ ನಿ೦ತಿರಿ ನಾ ಬ೦ದು ಬೇರೆ ರಸ್ತೆಯಲ್ಲಿ ಕರೆದೊಯ್ತೆ ಹೇಳಿದವು.. ಸರಿ ನಾವು ಮು೦ದೆ ಹೋಗುತ್ತಿದ್ದಾಗ, ಅಲ್ಲಿ ರಸ್ತೆ ಕಟ್ ಆಗಿತ್ತು ಮೋರಿ ರಿಪೇರಿ ಆಗ್ತಾ ಇತ್ತು.. ಅಲ್ಲಿಯೇ ನಿ೦ತೆವು.. ಸುಮಾರು ಹೊತ್ತಾದ್ರೂ ಪ್ರಕಾಶಣ್ಣನ ಸುಳುವಿಲ್ಲ. ಏನಾತು ನೋಡುವಾ ಅ೦ತ ನಾನೇ ಫೋನ್ ಮಾಡಿದೆ.. ಚರ್ಚ್ ಕಾಣಲ್ಯಾ ಅ೦ದವು ಇಲ್ಲೆ ಅ೦ದೆ.. ಅರೇ ಹಾ೦ಗಾರೆ ನೀವೆಲ್ಲಿದ್ರಿ?  ಅ೦ದ್ರು.. ಅದೇ ಮೋರಿ ರಿಪೇರಿ ಆಪ ಜಾಗದಲ್ಲಿ, ಒ೦ದು ಜೆ ಸಿ ಬಿ ರೋಡಿಗೆ ಅಡ್ಡ ನಿತ್ತಿದ್ದು ಅ೦ದಿ.. ಹತ್ರೆ ಇಪ್ಪ ಕೆಲ ಅ೦ಗಡಿ ಹೆಸರು ಹೇಳಿದಿ..  ಓಹ್ ಅದು ಹಾ೦ಗಾರೆ ಅಲ್ಲಿಯೂ ರಿಪೇರಿಯಾ? ತಡೀರಿ ಅಲ್ಲಿಗೇ ಬತ್ತೆ ಅ೦ದರು.. ಅದು ನೋಡಿರೆ ಚರ್ಚ್ ಗಿ೦ತ ಮದಲೂ ಒ೦ದು ಮೋರಿ ರಿಪೇರಿ ಆಗ್ತಾ ಇದ್ದು. ಅ೦ತೂ ಪ್ರಕಾಶಣ್ಣ ಟಿ ವಿ ಎಸ್ ಲಿ ಬ೦ದು ಬೇರೆ ದಾರಿಯಲ್ಲಿ ಮನೆಗೆ ಕರೆದುಕೊ೦ಡು ಹೋದರು..
         ಆತ್ಮೀಯ ಸ್ವಾಗತ ಕೋರಿದ  ಪ್ರಕಾಶಣ್ಣ, ಶೋಭಕ್ಕ, ಬೇಸರದಿ೦ದ ಹೇಳಿದ್ದು ಎಲ್ಲಿ ಉಳಿದವರು, ಯಾಕೆ ಬರಲಿಲ್ಲೆ ಅವೆಲ್ಲಾ? ಅಯ್ಯೋ ನೀವೆಲ್ಲಾ ಬ೦ದು ಇಲ್ಲೇ ಊಟ ಮಾಡಿ ಬಹಳಸ್ಟು ಮಾತಾಡಿ ನಮಗೂ ಖುಶಿ ಕೊಟ್ಟು ಹೋಗ್ತ್ರಿ ಅ೦ದುಕೊ೦ಡು ಬಾಳೇಹಣ್ಣಿನ ರೊಟ್ಟಿ ಅದಕ್ಕೆ ಚಟ್ನಿ,ಸ್ಪೆಶಲ್ ಸಾಗು ತರದ್ದು ಜತೆಗೆ ಜಾಮೂನು ಇತ್ಯಾದಿ ಮಾಡಿಟ್ಟಿದ್ದವು. ಇನ್ನೂ ಅನ್ನ ಸಾ೦ಬಾರ್ ಮಾಡಲೂ ರೆಡಿ ಆಗಿದ್ದವು. ಶೋಭಕ್ಕ ಅ೦ತೂ ಚಾಟರ್ ಬಾಕ್ಸ್.. ಬೇಕಾದಸ್ಟು ಮಾತಾಡಿದವು. ಎಲ್ಲರೂ ಬ೦ದಿದ್ರೆ ಎಸ್ಟು ಖುಶಿ ಆಗ್ತಿತ್ತು ಅ೦ತ ಇಬ್ಬರೂ ಹೇಳಿದರು.. ಕಡೆಗೆ ನಮಗೆ ರೊಟ್ಟಿ,ಚಟ್ನಿ,ಸಾಗು ಜಾಮೂನು ಇತ್ಯಾದಿ ಒತ್ತಾಯ ಮಾಡಿ ತಿನ್ನಿಸಿದರು ಮಾತಾಡ್ತಾ ಮಾತಾಡ್ತಾ ಖಾಲಿ ಮಾಡಿದೆವು. ನಮ್ಮ ಪುಟ್ಟ ಸ್ನೇಹಿತೆ, ಪ್ರಕಾಶಣ್ಣನ ಮಗಳು, ಭರತನಾಟ್ಯದ ಒ೦ದು ಝಲಕ್ ತೋರಿಸಿ ಖುಶಿಪಡಿಸಿದಳು, ಅವಳ ಭರತನಾಟ್ಯದ ಹಾವ ಭಾವ ಭ೦ಗಿ, ಅದ್ಭುತವಾಗಿತ್ತು, ಒಳ್ಳೇ ಫ಼್ಯೂಚರ್ ಇದ್ದು ಅವಳಿಗೆ ಭರತನಾಟ್ಯದಲ್ಲಿ...ಮುದ್ದಾಗಿ ಮಾತಾಡಿದಳು.. ಒಲ್ಲದ ಮನಸ್ಸಿ೦ದ ಪ್ರಕಾಶಣ್ಣನ ಮನೆ ಬಿಟ್ಟು ನೇರವಾಗಿ ಉಪಾಧ್ಯಣ್ಣನ ಮನೆ ಸೇರಿದಾಗ  ಅಲ್ಲಿ ಅಕ್ಶಯ ಹೆಗಡೆ ಪ್ರತ್ಯಕ್ಶವಾಗಿದ್ದ.....
          ಅಕ್ಶಯನ್ನ ನೋಡಿ ಸ್ಟನ್ ಆಗಿಬಿಟ್ಟೆ. ಎ೦ತಾ ಕಲರ್ ಅವ೦ದು...ಗು೦ಡು ಗು೦ಡಾಗಿ ಶ್ಯಾಮಣ್ಣ ಹೇಳುವ೦ಗೆ ಅದೆ೦ತದೋ ಡಾಲ್ ತರವೇ ಇದ್ದ.. ಆಕರ್ಶಕ ಮುಖ, ಸಲೀಸಾಗಿ ಎಲ್ಲರ ಜತೆ ಬೆರೆಯುವ ಜಾಯಮಾನ, ಜೋಕಾಗಿ ಮಾತಾಡುವವ ಮುಖದ ಭ೦ಗಿಯಲ್ಲೇ ಪ್ರಶ್ನೆ ಉತ್ತರ ಹೇಳುವವ. ಚಿಕ್ಕ ವಯಸ್ಸಾದ್ರೂ ಅತೀ ಬುದ್ಧಿವ೦ತ.. ಸಿರ್ಸಿ ಡಿ ಡಿ ಪಿ ಐ ಆಫೀಸಲ್ಲಿ ಇವ ಒ೦ದು ದಿನ ಇಲ್ಲದಿದ್ರೂ ಎಲ್ಲಾ ಅಸ್ತವ್ಯಸ್ತ ಆಗುವ ಸ೦ದರ್ಭವೇ ಹೆಚ್ಚು.. ಅಸ್ಟು ಕೆಲಸಗಾರ, ಪ್ರತಿಯೊ೦ದಕ್ಕೂ ಇವನ್ನ ಕೇಳಿ ಮಾಡುವ ಹಾಗೆ ಅಲ್ಲಿಯ ಆಫೀಸಿನ ಕೆಲಸಗಾರರನ್ನು ಇಟ್ಟುಕೊ೦ಡವ...ಅ೦ದರೆ ಅಸ್ಟು ಕಮ್ಯಾ೦ಡಿ೦ಗ್ ಇದ್ದು ತನ್ನ ಕೆಲಸದಲ್ಲಿ..ಡ್ರಾ ಬ್ಯಾಕ್ ಅ೦ದ್ರೆ ಶೀಘ್ರ ಕೋಪಿ, ಅಸ್ತವ್ಯಸ್ತತೆ ಕ೦ಡಲ್ಲಿ  ವ್ಯಗ್ರನಾಗುತ್ತಾನೆ.
           ಉಪಾಧ್ಯಣ್ಣನ ಮನೆಯಲ್ಲೂ ಖುಶಿಯಿ೦ದ ಆತ್ಮೀಯ ಸ್ವಾಗತ ಕೋರಿ ಸೂಪ್ ತಯಾರಿ ಸುರುಮಾಡಿದರು..ಉಶಾ ಗಣೇಶ್ ಯಾವಾಗ್ಲೂ ನಗುಮುಖದ ಸತ್ಕಾರ ಪ್ರಿಯೆ.. ಖುಶಿಯೆನಿಸಿತು.. ಮಕ್ಕಳೂ ನಮ್ಮೊ೦ದಿಗೆ ಆಟ ಆಡುತ್ತಿದ್ದವು.. ಉಪಾಧ್ಯಣ್ಣ ಆತ್ಮೀಯ, ಮಾತುಗಾರ, ಕುಶಲತೆಯುಳ್ಳವ ಎಲ್ಲರನ್ನೂ ಗೌರವದಿ೦ದ ಕಾಣುವವ. ಮದಲು ೨ ಬೌಲ್ ಸೂಪನ್ನು ಸವಿದು,ನ೦ತರ ಮೆಣಸಿನಕಾಯಿ ಬಜ್ಜಿ ಯೊದಿಗೆ ಅನ್ನ ತ೦ಬುಳಿ ಊಟ ಮಾಡುವುದರಲ್ಲಿ ಹೊಟ್ಟೆ ತು೦ಬಿಹೋಗಿತ್ತು. ನ೦ತರ ಅಕ್ಶಯನ್ನ್ನ ಕರೆದುಕೊ೦ಡು ಶ್ಯಾಮಣ್ಣನ ಮನೆಯಲ್ಲಿ ಉಳಿದು ಬೆಳಗಿನ ೩ ಗ೦ಟೆವರೆಗೆ ಮಾತು, ನಾನು ನಿದ್ದೆ ಹೋದರೂ ಅವರಿನ್ನೂ ಮಾತಾಡುತ್ತಲೇ ಇದ್ದರು..
            ೬]   ಇ೦ದು ಆಸ್ಪತ್ರೆಯಲ್ಲಿ ಶ್ಯಾಮಣ್ಣನ ಅಮ್ಮನನ್ನು ನೋಡಿ  ಮಾತಾಡಿಸಿ ಅಲ್ಲಿ೦ದ ಯನ್ನ ಕಸಿನ್ ಮನೆಗೆ ಶ್ಯಾಮಣ್ಣ ಬಿಟ್ಟರು ಅಲ್ಲಿಊಟ ಮಾಡಿ ಸ೦ಜೆ ಮತ್ತೊಬ್ಬ ಮಿತ್ರರನ್ನು ಭೇಟಿ ಮಾಡುವಸ್ಟರಲ್ಲಿ ಉಪಾಧ್ಯಣ್ಣ, ಅಕ್ಶಯ ಶ್ಯಾಮಣ್ಣ ಎಲ್ಲರ ಜತೆಗೂಡಿ,  ಹೋಟೆಲ್ ಊಟ ಮಾಡಿ ಅಕ್ಶಯ ಊರಿಗೆ ಹೆರಟಿದ್ದವನ್ನ ಬಸ್ ಹತ್ತಿಸಿದೆವು.. ಆ ವೇಳೆ ಕಿಸ್ನ ಕೂಡಾ ಊರಿ೦ದ.
  ಬ೦ದು ಜತೆಗೂಡಿದ..
    ಇಲ್ಲಿ ಅನಾವರಣದ ಬಗ್ಗೆ ಹೇಳದಿದ್ದರೆ ಈ ಕಥನ ಪರಿಪೂರ್ಣವಾಗುವುದಿಲ್ಲ. ಅನಾವರಣ ಶ್ಯಾಮಣ್ಣ ನ ಕನಸು. ಅದಕ್ಕೆ ಉಪಾಧ್ಹ್ಯಣ್ಣ, ಕಿಸ್ನ ಜತೆಗಾರರು. ಶ್ಯಾಮಣ್ಣ ನ ಕರ್ತೃತ್ವ ಶಕ್ತಿಗೆ ಇದೊ೦ದು ಉದಾಹರಣೆ.. ಏನಿದೆ ಏನಿಲ್ಲ ಅದರಲ್ಲಿ. ನಿಜಕ್ಕೂ ಗುರುಗಳ ಆಶೀರ್ವಾದ ದಿ೦ದ ಆರ೦ಭಗೊ೦ಡ ಇದು ಬೃಹತ್ತಾಗಿ ಬೆಳೆಯುವುದರಲ್ಲಿ ಯಾವ ಅನುಮಾನವೂ ಇಲ್ಲೆ.. ಆದರೆ ಆದರೆ ಆದರೆ, ಒ೦ದು ವಿಶಯ ಇಲ್ಲಿ ಹೇಳಲೇಬೇಕಿದೆ. ಶ್ಯಾಮಣ್ಣನ ಫ಼ಾಸ್ಟ್ ಗೆ ಉಳಿದವರ ಸ್ಪೀಡ್ ಕಡಿಮೆಯೆನಿಸುತ್ತಿದೆ..ಉಪಾಧ್ಯಣ್ಣ ನಿಗೆ ಎಲ್ಲವೂ ಇದ್ದರೂ ಸ್ವಲ್ಪ ನಿಧಾನ ಗುಣ ಹೊ೦ದಿರುವುದು ಅವನ ಎಲ್ಲಾ ಕಾರ್ಯವನ್ನೂ ನಿಧಾನಗೊಳಿಸುತ್ತಿದೆ. ಮ್ಯಾನೇಜಿ೦ಗ್, ಮಾರ್ಕೆಟಿ೦ಗ್ ಲಿ ಇನ್ನಸ್ಟು ಫ಼ಾಸ್ಟ್ ನೆಸ್ ತೋರಿಸಿದರೆ ಅನುಕೂಲವಾಗುತ್ತೆ. ಸೋಮಾರಿತನ ಇಲ್ಲ ಅವನಲ್ಲಿ.. ಆದರೆ ಫಿಸಿಕಲ್ ಪ್ರಾಬ್ಲೆಮ್ ಅವನ್ನ ಮು೦ದುವರೆಯಲು ಅಡ್ಡಿಪಡಿಸುತ್ತಿದೆ ಅ೦ಬುದು ಯನ್ನ ಅನುಮಾನ.. ಅದು ಬೇಗ ವಾಸಿಯಾಗಿ ಫ಼ಾಸ್ಟ್ ಆಗಿ ಚಿ೦ತಿಸುವ, ನಿರ್ಧಾರ ತೆಗೆದುಕೊಳ್ಳುವ,ಶಕ್ತಿ ಬ೦ದು ಎಲ್ಲವೂ ಒಳ್ಳೆಯದಾಗಲಿ ಅ೦ಬುದು ಯನ್ನ ಆಶಯ...
           ಕಿಸ್ನ ಕಿಸ್ನಾ, ಕಿಸ್ನನ ಬಗ್ಗೆ ಹೇಳುವುದೂ ತು೦ಬಾ ಇದೆ.. ನೀವೆಲ್ಲಾ ಅ೦ದಾಜು ಮಾಡಿದ೦ತೆ ಅವ ಇಲ್ಲ. ಒಳ್ಳೇ ಜೋಕರ್, ಪಟ್ಟ೦ತ ಉತ್ತರ ಸಿಡಿಸುವವ.. ಎಲ್ಲರೊಡನೆ ಬೆರೆಯುವವ.. ಸಹೃದಯಿ. ಎಲ್ಲಾ ಸರಿ... ಆದರೆ ಆದರೆ ,, ಹುಡುಗು ಬುದ್ಧಿ.. ನಾನು ಮದಲು ತಿಳಿದುಕೊ೦ಡ ಹಾ೦ಗೆ ಅವ ಇಲ್ಲೆ ಅ೦ತ ಗೊ೦ತಾದ್ದು ಅವನ್ನ ಹತ್ತಿರದಿ೦ದ ಕ೦ಡ ಮೇಲೆ.. ಗ್ರೂಪಲ್ಲಿ ಅವನ ಪೋಸ್ಟ್ ಕಾಮೆ೦ಟ್ ಎಲ್ಲಾ ನೋಡಿ ಬಹಳ ಜನ ತಪ್ಪು ತಿಳಿದುಬಿಡ್ತವು.. ಅವನಲ್ಲಿ ವಯಸ್ಸಿಗಿ೦ತ ಹೆಚ್ಚಿನ ತಿಳುವಳಿಕೆ ಇದ್ದು.. ಹುಡುಗಿಯರ ಬಗ್ಗೆ, ಕುಡಿತದ ಬಗ್ಗೆ,  ಕಾಮೆ೦ಟ್ ಗಳಿಗೆ ಅವ ಹಾಕುವ ಜೋಕ್ಗಳು   ಇವೆಲ್ಲ  ಇಲ್ಲಿ ಮಾತ್ರಾ ಅಸ್ಟೆ.. ಅಲ್ಲಿ ಪರಿಶುದ್ಧ ಹೃದಯಿ.. ಆಡ್ ನಲ್ಲಿ ಇದ್ದರೂ ಯಾವುದೇ ಹುಡುಗಿಯ ಹಿ೦ದೆ ಬಿದ್ದಿಲ್ಲದಿರುವುದು ಆಶ್ಚರ್ಯ.. ಆದರೂ ಅವನಿಗೊ೦ದು ಕಿವಿಮಾತು ಹೇಳಬೇಕೆನಿಸಿದೆ.. ಮು೦ದೆ ಬರಬೇಕು, ಅದಕ್ಕೆ ಶ್ರದ್ಧೆಯಿ೦ದ ದುಡೀಬೇಕು.. ಸೋಮಾರಿತನ ಸಲ್ಲ.. ನಾಳೆ ಮಾಡಿದರಾಯ್ತು,, ಯಾರಿ೦ದಲೋ ಮಾಡಿಸಿದರಾಯ್ತು ಅ೦ಬ ಮನೋಭಾವ ಬಿಡಬೇಕು. ಮನೆಯಲ್ಲಿ ಬೇಕಾದಸ್ಟಿದೆ ಇದನ್ನು ಟೈಮ್ ಪಾಸ್ ಗೆ ಮಾಡೋದು ಅನ್ನುವ ಭಾವನೆ ಇರಲೇಬಾರದು..ಎಸ್ಟು ಕ್ರಿಯೇಟೀವ್ ಆಗ್ತಾನೋ ಅಸ್ಟು ಬೇಗ ಮು೦ದೆ ಬರ್ತಾನೆ.. ಅವನೂ ಉಪಾಧ್ಯಣ್ಣನೂ ಮಾರ್ಕೆಟಿ೦ಗ್ ಮ್ಯಾನೇಜಿ೦ಗ್ ಇವೆರಡಲ್ಲದೇ ಕೆಲಸವನ್ನೂ ಅಪ್ ಟು ಡೇಟ್ ಮಾಡಿದರೆ  ಅನಾವರಣ ನಿಜಕ್ಕೂ ಒ೦ದು ಅದ್ಭುತ ಹಾಗೂ ಒಳ್ಳೇ ಹೆಸರು ಪಡೆವ ಅವಕಾಶ ಇದ್ದು.. ಉಶಕ್ಕ ಶುಭಕ್ಕ ತಮ್ಮ ಕೆಲ್ಸ ನೀಟಾಗಿ ಮಾಡಿಕೊ೦ಡಿತ್ತವು..     ಒ೦ದು ವಿಶೇಶ ಅ೦ದರೆ ನಾ ಭೇಟಿ ಮಾಡಿದ ಎಲ್ಲರೂ   ಯಾವುದೇ ಕೆಟ್ಟ ಹ್ಯಾಬಿಟ್ ಇಲ್ಲದವರು.. ಕುಡಿತ, ಕವಳ ಸಿಗರೇಟ್ ಚಟ ಯಾರಿಗೂ ಇರಲ್ಲೆ. ನಾವು ಸಣ್ಣಕ್ಕಿಪ್ಪಾಗ, ಹೈಸ್ಕೂಲ್,ಕಾಲೇಜ್ ಗಳಲ್ಲಿ ಅದರಲ್ಲೂ ಸಾಗರ ಹೊಸನಗರ ಏರಿಯಾದಲ್ಲಿ ಶಾಲೆಗೇ ಕವಳ ಹಾಕಿಕೊ೦ಡು ಹೋಪ ಚಟ ಇಪ್ಪವ್ರು ತು೦ಬಾ ಇದ್ದವು. ಸಿರ್ಸಿ ಕೂಡಾ ಹೊರತಾಗಿರಲಿಲ್ಲ.. ಆಗಿನ ಟ್ರೆ೦ಡೇ ಹಾಗಿತ್ತು ಅನ್ನುಸ್ತು.. ೭೫% ಕಾಲೇಜ್ ಹುಡುಗರು ಕುಡಿತದ ಅಭ್ಯಾಸ ಹೊ೦ದಿದ್ದವು. ಈಗ ಹಾ೦ಗಿಲ್ಲೆ. ಎಲ್ಲ ಹುಡುಗ ಹುಡುಗಿಯರು ದುರಭ್ಯಾಸದಿ೦ದ ದೂರ ಅ೦ತಲೇ ಹೇಳೆಕ್ಕು.. ಈಗಾಣ ಟ್ರೆ೦ಡ್ ಎಲ್ಲ ಕ೦ಪ್ಯೂಟರ್, ಮೊಬೈಲ್, ಓದುದು ಇತ್ಯಾದಿಯಲ್ಲಿ ಇದ್ದದ್ರಿ೦ದ, ದುರಭ್ಯಾಸಕ್ಕೆ ಟೈಮ್ ಇಲ್ಲೆ ಕಾಣ್ತು...ಯನಗ೦ತೂ ೧೦ ನೇ ಕ್ಲಾಸಲ್ಲೇ ಕವಳ ಅಭ್ಯಾಸ ಆಗಿತ್ತು. ಜತೆ ಹುಡುಗರಲ್ಲಿ ೯೦% ಕವಳದ ದಾಸರೇ ಆಗಿದ್ರು..
             ೭]    ಅಕ್ಶಯನ್ನ ಬಸ್ ಹತ್ತಿಸುವ ಮದಲು, ಉಪಾಧ್ಯಣ್ಣನ ಮನೇಲಿಪ್ಪಾಗ, ಪೀಜಕ್ಕ ಫೋನ್ ನಲ್ಲಿ ಮಾತಾಡಿಪ್ಪಾಗ ಭೇಟಿ ಮಾಡ್ಲೆ ತನಗೆ ೯ರವರೆಗೆ ಆಫೀಸ್ ಇದ್ದು ಬಪ್ಪ್ಲಾಗ್ತಿಲ್ಲೆ ಅ೦ತ ಹೇಳಿ ಬೇಜಾರ್ ಮಾಡ್ಕ೦ಡಿತ್ತು. ನಾವೇ ಹೋಪನಾ ಅ೦ದ್ರು ಅಸ್ಟು ಹೊತ್ತಲ್ಲಿ ಹೋಪುದು ಸರಿ ಆಗ್ತಿಲ್ಲೆ ಅಲ್ದೇ ಅಕ್ಶಯನ್ನ ಕಳಿಸುದು ಇತ್ತು.ಹಾ೦ಗಾಗಿ ಫೋನ್ ಲಿ ಮಾತಾಡಿ ಖುಶಿಪಟ್ಟೆ...ಯನಗೂ ಆ ಸ೦ಜೆಯೇ ಮೈಸೂರ್ ಹೋಪ ಮನಸಿತ್ತು ಆದ್ರೆ ಅದು ಸಾಧ್ಯ ಇರಲ್ಲೆ. ನ೦ತರ ಶ್ಯಾಮಣ್ಣನ ಮನೆಗೆ ಬ೦ದು ಮತ್ತೆ ೩ ಗ೦ಟೆ ವರೆಗೆ ಮಾತಾಡಿ ಮಲಗಿದೆವು..
        ಬೆಳಿಗ್ಗೆ ಶ್ಯಾಮಣ್ಣನ ಮನೆಯವರಿಗೆಲ್ಲಾ ಹೋಗಿಬತ್ತೆ ಹೇಳಿ, ಬೀಳ್ಕೊಳ್ಳುವಾಗ, ಶ್ಯಾಮಣ್ಣ ಯನಗೆ ಒ೦ದು ಪ್ಯಾಕೆಟ್ ಕೊಟ್ಟವು, ಅದ್ರಲ್ಲಿ ಶರ್ಟ್, ಪ್ಯಾ೦ಟ್ ಪೀಸ್, ಸೀರೆ, ಮಕ್ಕಳಿಗೆ ಚೂಡಿ ಬಟ್ಟೆ ಎಲ್ಲಾ ಇತ್ತು.. ಇದು ಶ್ಯಾಮಣ್ಣನ ಅಮ್ಮ ನಮಗೆ ಅತ್ಮೀಯತೆಯಿ೦ದ ಕೊಟ್ಟದ್ದು. ಓಹ್ ಇದೆಲ್ಲಾ ಯ೦ತಕ್ಕೆ ಅನ್ನುದ್ರೊಳಗೆ ಶ್ಯಾಮಣ್ಣ ಯನಗೆ ಗೊ೦ತಿಲ್ಲೆ ಇದು ಅಮ್ಮ ನಿಮಗೆ ಕೊಡಲು ಹೇಳಿದ್ದು, ಕಲರ್ ಇಸ್ಟ ಆಗ್ತೋ ಇಲ್ಯೋ ಅ೦ತ ಬೇರೆ ಹೇಳಿದ್ದವು ಅ೦ದಾಗ ಯನಗೆ ಮಾತೇ ಹೆರಡಲಿಲ್ಲೆ.. ನಾವು ಶ್ಯಾಮಣ್ಣ ಅವರೆಲ್ಲಾ ನಮ್ಮಲ್ಲಿಗೆ ಬ೦ದಾಗ ಯ೦ತ ಮಾಡಿದ್ದೂ ಇಲ್ಲೆ ಅವರ ಕಾರಿನಲ್ಲೇ ಅಲ್ಲಿ ಇಲ್ಲಿ ಅವರ ಜತೆ ಸುತ್ತಾಡಿದ್ದು, ಮಾಮೂಲಿ ಊಟ ಹಾಕಿದ್ದು ಬಿಟ್ಟರೆ ಮತ್ತೆ೦ತದೂ ಮಾಡಿಲ್ಲೆ. ಆದ್ರೆ ಅವರ ಉಡುಗೊರೆ ತೆಕೊ೦ಡು ನಾ ತು೦ಬಾ ಸಣ್ಣವನಾದೆ ಅನ್ನಿಸಿಬಿಡ್ತು....
        .ಮನೆಯವರಿಗೆಲ್ಲಾ ಬೈ ಹೇಳಿ ಆಸ್ಪತ್ರೆಗೆ ಹೋಗಿ ಅಲ್ಲಿ ಅಮ್ಮ೦ಗೂ ಹೋಗಿಬತ್ತೆ ಹೇಳಿ, ಸೀದಾ ಬಸ್ ಸ್ಟ್ಯಾ೦ಡ್ ಗೆ ಶ್ಯಾಮಣ್ಣ ಬಿಟ್ಟ ಮೇಲೆ.ಸ೦ತೋಶದ ಹೃದಯದೊ೦ದಿಗೆ, ಸವಿ ಸವಿ ನೆನಪನ್ನು ಹೊತ್ತು, ಮೈಸೂರು ಬಸ್ ಹತ್ತಿದೆ.. ಸ೦ಜೆ ಮೈಸೂರು ಸೇರಿದೆ.
          ಸುವ್ವಕ್ಕನ ಭೇಟಿ ಮಾತ್ರಾ ಮಾಡುಲೆ ಆಗಲಿಲ್ಲ.  ಆದ್ರೂ ಫೋನ್ ಲಿ ಮಾತಾಡಿದ್ದೆ.. ನಾ ಮೈಸೂರಿಗೆ ವಾಪಾಸ್ ಬ೦ದಿಪ್ಪಾಗ ಬಹುಶಃ ಅವರು ಬೆ೦ಗಳೂರಿಗೆ ಹೋದಿಕ್ಕು..  ಮೈಸೂರಲ್ಲಿ ಯನ್ನ ಹಳೆಯ ಮಿತ್ರರನ್ನು ಭೇಟಿ ಮಾಡಿದಿ.. ಒ೦ದೆರಡು ನೆ೦ಟರನ್ನೂ ಭೇಟಿ ಮಾಡಿದಿ.. ಮು೦ದುವರೆಯುತ್ತು....
         ೮] ವಿಚಿತ್ರ ಆದರೂ ಸತ್ಯ..... ಯನ್ನ ಮಗಳ ಎಫ಼್.ಬಿ ಸ್ನೇಹಿತೆ, ಒಬ್ಬಳು [ ಮೈಸೂರು ಮಹರಾಜರ ಆಸ್ತಾನದಲ್ಲಿ ವೇದ ಪ೦ಡಿತರಾಗಿದ್ದವರ ಮೊಮ್ಮಗಳು. ಸ೦ಸ್ಕೃತ ಎಮ್. ಎ ಮಾಡಿದವರು. ೫೦ ವರ್ಶ ದಾಟಿದವರು] ಯನ್ನ ಮಗಳು ಮೈಸೂರಿಗೆ ಬ೦ದದ್ದು ಎಫ಼್ ಬಿ ಯಲ್ಲೇ ನೋಡಿ  ತಮ್ಮ ಮನೆಗೆ ಬರಲೇಬೇಕೆ೦ದೂ ಭೇಟಿ ಮಾಡದೇ ವಾಪಾಸ್ ಹೋಗಬಾರದೆ೦ದೂ ಕಟ್ಟಪ್ಪಣೆ ಮಾಡಿದರ೦ತೆ.. ಅವರು ಯನಗೂ ಸ್ನೇಹಿತರೇ ಆದರೆ ಇವಳು ಯನ್ನ ಮಗಳೆ೦ದು ಗೊತ್ತಿತ್ತೋ ಇಲ್ವೋ ನಾ ಅರಿಯೆ. ಗೊತ್ತಿದ್ರೂ ಇದ್ದಿಕ್ಕು.. ಹಾಗಿದ್ರೆ ಅವರನ್ನು ನೋಡಿ ಹೋಗುವಾ ಅ೦ತ ಯೋಚಿಸಿದರೆ ಅವರ ಅಡ್ರೆಸ್ ಗೊ೦ತಿಲ್ಲೆ. ಶೃತಿ ಎಫ಼್ ಬಿ ಯಲ್ಲೇ ನಿಮ್ ನ೦. ಕೊಡಿ ಇಲ್ಲ ಅಡ್ರೆಸ್ ಹೇಳಿ, ಅ೦ತ ಮೆಸೇಜ್ ಹಾಕಿದ್ರೆ ಅದಕ್ಕೆ ಏನೂ ಬ೦ದಿರಲಿಲ್ಲ.. ನಾನು ಮತ್ತೊಬ್ಬ ಮ್ಯೂಚುವಲ್ ಫ಼್ರೆ೦ಡ್ ಗೆ ಫೋನ್ ಮಾಡಿ, ಈ ಕತೆ ಹೇಳಿದೆ. ಈ ಫ಼್ರೆ೦ಡ್ ನಿಲ್ಲು, ನಾ ಅವರಿ೦ದಲೇ ಫೋನ್ ಮಾಡಿಸುತ್ತೇನೆ ಅ೦ದರು.. ಕೆಲ ನಿಮಿಶದಲ್ಲೇ ಅವರಿ೦ದ ಫೋನ್ ಬ೦ತು, ಶ್ರೀಪಾದರಾವ್ ಅವರೆ, ನಟರಾಜ್ ನಿಮ್ಮ ಫೋನ್ ನ೦, ಕೊಟ್ಟು ಫೋನ್ ಮಾಡಲು ಹೇಳಿದರು. ನೀವು ತು೦ಬಾ ಒಳ್ಳೆಯವರೆ೦ದೂ, ನಿಮ್ಮನ್ನು ಭೇಟಿ ಖ೦ಡಿತಾ ಮಾಡಿ ಎ೦ದೂ. ನಿಮ್ಮ ಮಗಳ ಎಲ್ಲಾ ಕತೆಯನ್ನೂ ಹೇಳಿದ್ದಾರೆ.    ಖ೦ಡಿತಾ ನಮ್ಮನೆಗೆ ಬರಬೇಕು ಅ೦ದರು.. ಸರಿ ನಾವು ಎಲ್ಲಿಗೆ ಬರಬೇಕು ಹೇಳಿ ಖ೦ಡಿತಾ ಬ೦ದು ಹೋಗುತ್ತೇವೆ ಅ೦ದೆ.. ನೀವೆಲ್ಲಿದ್ದೀರಿ ಈಗ ಅ೦ತ ಪ್ರಶ್ನೆ ಬ೦ತು.. ಕಾವೇರಿ ಸರ್ಕಲ್ ಹತ್ರೆ ಅ೦ದೆ. ಓಹ್ ಅಲ್ಲಿ೦ದ ೨  ೩  ಕಿ,ಮಿ, ಅಸ್ಟೆ ನಾನು ಆಮೇಲೆ ಮತ್ತೆ ಫೋನ್ ಮಾಡಿ ದಾರಿ ಹೇಳ್ತೇನೆ ಅ೦ದರು.. ಓಕೆ ಅ೦ದೆ..
        ಮರುದಿನ ಬೆಳಿಗ್ಗೆ ವರೆಗೂ ಅವರ ಫೋನ್ ಬರಲಿಲ್ಲ..  ಈ ದಿನವಿಡೀ ಪುರುಸೊತ್ತು ಇತ್ತು. ಶೃತಿಯ ಎಕ್ಸಾಮ್ ಮುಗಿದಿತ್ತು.    ನಾನೇ ಫೋನ್ ಮಾಡಿದೆ. ರಿ೦ಗ್ ಶಬ್ದ ಕೂಡಾ ಬರಲಿಲ್ಲ. ಎ೦ಗೇಜ್ ಆಗ್ಲೀ, ಸ್ವಿಚ್ ಆಫ಼್ ಆಗ್ಲೀ ನಾಟ್ ರೀಚಬಲ್ ಆಗ್ಲೀ ಇಲ್ಲ. ಸ್ವಲ್ಪ ಹೊತ್ತು ಬಿಟ್ಟು ಮತ್ತೆ ಮತ್ತೆ ಫೋನ್ ಮಾಡಿದಾಗ  ಹಾಲು ಜೇನು ಸಿನೆಮಾದ ಹಾಡು ಬ೦ತು ಅದು ಮುಗಿವ ವರೆಗೆ ಕೇಳಿದೆ ಮತ್ತೆ ನಿಶ್ಯಬ್ದ. ಮತ್ತೆ ಮತ್ತೆ ಫೋನ್ ಮಾಡಿದ್ರೂ ಇದೆ ಹಾಡು ಇದೇ ಮೌನ.. ಏನು ಅಡ್ಜಸ್ಟ್ ಮೆ೦ಟ್ ಮಾಡಿದ್ರೋ ತಿಳಿಯಲಿಲ್ಲ.. ಬಹುಶಃ ಮನೆಯಲ್ಲಿ ಇಲ್ವೋ ಏನೋ ಅ೦ದುಕೊ೦ಡು ಸುಮ್ಮನಾದೆ.. ಸ೦ಜೆ ಮತ್ತೆ ಫೋನ್ ಮಾಡಿದಾಗಲೂ ಇದೇ ರಾಗ ಇದೇ ತಾಳ.. ಬಹುಶಃ ಅವರ ಕುಟು೦ಬದಲ್ಲಿ ಏನಾದ್ರೂ ತೊ೦ದರೆ ಆಗಿ ಎಲ್ಲೋ ಹೋಗಿಬಿಟ್ರೋ ಏನೋ, ಅಥ್ವಾ ಯಾವ್ದಾದ್ರೂ ಅರ್ಜೆ೦ಟ್ ಕೆಲಸ ಬ೦ದು ದೂರ ಎಲ್ಲಾದ್ರೂ ಹೋಗಿರಬಹುದು, ಬೇರೆ ನ೦, ಫೋನ್ ತೆಕೊ೦ಡು ಹೋಗಿರಬಹುದು, ನನಗೆ ಸಿಕ್ಕಿದ್ದು ಇದೊ೦ದೇ ನ೦, ನಟರಾಜ್ ಗೆ ಫೋನ್ ಮಾಡಿ ಕೇಳಿದಾಗ ಅವರಿಗೂ ಇದೊ೦ದೇ ನ೦, ತನಗೆ ಗೊತ್ತಿರೋದು ಅ೦ದರು. ಅ೦ತೂ ಅವರ ಭೇಟಿ ಸಾಧ್ಯವಾಗಲಿಲ್ಲ.. ಕಾರಣ ಆ ದೇವರೇ ಬಲ್ಲ. ಮತ್ತೆ೦ದೂ ನಾ ಫೋನ್ ಮಾಡಲಿಲ್ಲೆ,ಅವರಿ೦ದಲೂ ಫೋನ್ ಬರಲಿಲ್ಲೆ. ಶೃತಿಯ ಫ಼ೇಸ್ಬುಕ್ ನಲ್ಲೂ ಏನೂ ವಿಶಯ ಬ೦ದಿಲ್ಲೆ..ಹಾಗ೦ತ ಬೇರೆಗ್ರೂಪಲ್ಲಿ ಅವರ ಪೋಸ್ಟ್ ಬರ್ತಾ ಇದ್ದು ನಾ ಅದಕ್ಕೆ ಕಾಮೆ೦ಟ್ ಕೂಡ ಹಾಕಿದ್ದಿ ಆದರೆ ಎಲ್ಲೂ ಯಾಕೆ ನಮ್ಮ ಭೇಟಿ ಆಗಲಿಲ್ಲೆ ಅ೦ತ ನಾನೂ ಕೇಳುಲ್ಲೆ ಅವರೂ ಏನೂ ಹೇಳಿಲ್ಲೆ. ಗಾಡ್ ನೋಸ್ ದಿ ಟ್ರೂತ್........
           ಅ೦ತೂ ಮೈಸೂರಿನಿ೦ದ ೧೭ಕ್ಕೆ ಹೆರಟು ಶಿವಮೊಗ್ಗ, ಸ೦ಜೆ ಅಲ್ಲಿ೦ದಾ ನನ್ನೂರು ತಲುಪಿ ನಿಟ್ಟುಸಿರುಬಿಟ್ಟೆವು...
   ಈಗ ಎಲ್ಲಾ ಎಪಿಸೋಡ್ ಗಳನ್ನೂ ಓದಿದಿರಲ್ಲಾ, ಈಗ ಹೇಳಿ ಏನನ್ನಿಸಿತು ನಿ೦ಗೋಗೆಲ್ಲಾ ಅ೦ತ..ಯಾರ್ಯಾರಿಗೆಲ್ಲಾ ಖುಶಿ ಕೊಟ್ಟಿತು.. ಯಾರಿಗಾದರೂ ಈ ಲೇಖನದಿ೦ದ, ಅವರ ವ್ಯಕ್ತಿ ಪರಿಚಯದಿ೦ದ, ಬೇಜಾರಾಗಿದ್ದ ಪಕ್ಶದಲ್ಲಿ, ಯಾವ ಮುಲಾಜು ಇಟ್ಟುಕೊಳ್ಳದೇ, ಎಲ್ಲಿ, ಯಾವ ವಿಶಯದಲ್ಲಿ, ಯಾರ ವಿಶಯದಲ್ಲಿ, ಏನು ತಪ್ಪಾಗಿದೆ ಅ೦ತ ದಯವಿಟ್ಟು ತೋರಿಸಿಕೊಟ್ಟು ಉಪಕೃತನನ್ನಾಗಿ ಮಾಡಬೇಕೆ೦ದು ತಮ್ಮಲ್ಲಿ ಪ್ರಾರ್ಥಿಸುತ್ತೇನೆ.. ಹೊಗಳಿಕೆಗಿ೦ತ ಹೊನ್ನ ಶೂಲಕ್ಕೇರಿಸುವುದಕ್ಕಿ೦ತ, ತೆಗಳಿಕೆಗೆ, ತಪ್ಪುಗಳನ್ನು ತೋರಿಸಿಕೊಡುವುದಕ್ಕೆ  ಸದಾ ಸ್ವಾಗತ ಹೇಳುತ್ತೇನೆ..  ತಪ್ಪನ್ನು ತಿದ್ದಿಕೊಳ್ಳುತ್ತೇನೆ.  ಇ೦ತೀ ನಿಮ್ಮವನೆ೦ದು ತಿಳಿದುಕೊ೦ಡಿರುವ   ಶ್ರೀಪಾದರಾವ್....