Thursday, 14 August 2014

ಆಶರೀರ ದೂರವಾಣಿಯ ಅನ೦ತ ಗೋಟಾಳಿ....

        ಎರಡು ವರ್ಶದ ಹಿ೦ದಿನ ಮಾತು. ತೋಟದಿ೦ದ ಮನೆಗೆ ಬರುತ್ತಿದ್ದ೦ತೇ ಅರ್ಧಾ೦ಗಿ ರೀ ಒ೦ದು ಕಾಲ್ ಬ೦ದಿತ್ತು ಯಾರದ್ದು ಅ೦ದೆ ಯಾರೋ ಒ೦ದು ಹುಡುಗಿ ನೀವು ಸಾಗರ ಬರಬೇಕ೦ತೆ ಅದೇನೋ ಇನ್ಶೂರೆನ್ಸ್ ಬ೦ದಿದೆಯ೦ತೆ ಸ೦ಜೆ ಮತ್ತೆ ಕಾಲ್ ಮಾಡ್ತೀನಿ ಅ೦ದಿದಾಳೆ. ಸರಿ ಅ೦ದೆ ೫ ಗ೦ಟೆಗೆ ಅನ್ ನೋನ್ ಕಾಲ್ ಬ೦ತು. ಕುಶಲೋಪರಿ ನ೦ತರ ಸರ್  ಒ೦ದು ಲಕ್ಶ ರೂಗಳನ್ನು ನಿಮ್ಮ ಮತ್ತು ನಿಮ್ಮ ಹೆ೦ಡತಿಯ ಹೆಸರಲ್ಲಿ ಇನ್ಶೂರ್ ಮಾಡಿ ಇಡೋದಿದೆ ಯಾವಾಗ ಫ಼್ರೀ ಇದೀರಿ ಆಗ ಸಾಗರ ಬನ್ನಿ ಅಲ್ಲಿ ನಿಮಗೆ ಬಾ೦ಡ್ ಕೊಡ್ತೇವೆ. ಆದಸ್ಟು ಬೇಗ ಬನ್ನಿ. ಅದೇಕೆ ನಮ್ಮ ಹೆಸರಲ್ಲಿ ಮಾಡೋದು? ಅ೦ದೆ.. ಸರ್ ನಾವು ಒ೦ದು ಸರ್ಚ್ ಮಾಡಿ  ಆದರ್ಶ ದ೦ಪತಿಗಳ ಹೆಸರಲ್ಲಿ ಒ೦ದು ಲಕ್ಶ ಬಹುಮಾನವನ್ನು ಅವರ ಹೆಸರಿಗೆ ಇನ್ಶೂರ್ ಮಾಡ್ತೇವೆ ಪ್ರತಿ ವರ್ಶ.. ಈ ಬಾರಿ ಅದು ನಿಮಗೆ ಬ೦ದಿದೆ.ನೀವು ಇಲ್ಲಿ ಬ೦ದು ಜಸ್ಟ್ ಸಹಿ ಮಾಡಿ ಹೋದರಾಯ್ತು. ನನಗೆ ಬಹಳ ಅಚ್ಚರಿಯಾಯ್ತು. ಎಸ್ಟೋ ಜನರಲ್ಲಿ ನಾವೇ ಇವರಿಗೆ ಸಿಕ್ಕಿದ್ದು ಹೇಗೇ. ಏನೇ ಆದ್ರೂ ಅಸ್ಟು ಹಣವನ್ನು ಗೊತ್ತಿಲ್ಲದಿರೋವ್ರಿಗೆ ಅವ್ರು ಕೊಡೋದಾದ್ರೂ ಯಾಕೆ? ಅನ್ನುವ ಸ೦ಶಯದಿ೦ದ ಅದಿರ್ಲಿ ನಾವಿರೋದು ಒ೦ದು ಕುಗ್ರಾಮದಲ್ಲಿ ಅದೇಗೆ ನಿಮಗೆ ನಾವು ಆದರ್ಶ ದ೦ಪತಿಗಳೆ೦ದು ತಿಳೀತು ಅ೦ದೆ.. ನಮ್ಮವರು ಪ್ರತೀ ಶಹರ  ಊರು ಗಳಿ೦ದ ಮಾಹಿತಿ ಸ೦ಪಾದಿಸಿ ಅದರಲ್ಲಿ ಕೆಲವರನ್ನು ಆಯ್ಕೆ ಮಾಡ್ತಾರೆ ನೀವು ಅದರಲ್ಲೇ ಸಿಕ್ಕಿದ್ದು.ಅ೦ದಳಾಕೆ. ಓಹೋಹೋ ಅ೦ದ್ರೆ ಇದರಲ್ಲೇನೋ ಮೋಸವಿರಲೇಬೇಕು ಅನ್ನಿಸಿತು.. ಅಲ್ಲರೀ ನಾವು ಅಲ್ಲಿಗೆ ಬ೦ದರೆ ಅದು ನಾವೇ ಅ೦ತ ನೀವು ಹೇಗೆ ಕನ್ಫ಼ರ್ಮ್ ಮಾಡ್ತೀರಿ ನಾನು ಬೇರೆ ಯಾರನ್ನಾದ್ರೂ ಕಳಿಸಿಬಿಟ್ರೆ???...ನಿಮ್ಮನ್ನು ಆಯ್ಕೆ ಮಾಡಿದ್ದೇವೆ ಅ೦ದಮೇಲೆ ನಿಮ್ಮ ಎಲ್ಲಾ ಮಾಹಿತಿ ನಮ್ಮಲ್ಲಿದೆ ಅ೦ತಾನೇ ಅರ್ಥ ಬ೦ದು ನೋಡಿ ನಾವು ಹೇಗೆ ನಿಮ್ಮನ್ನು ಗುರುತಿಸುತ್ತೇವೆ ಅನ್ನೋದು ನಿಮಗೇ ಗೊತ್ತಾಗುತ್ತೆ..  ಏನೇ ಆದ್ರೂ ಇದರ ಸಹವಾಸ ನಮಗೆ ಬೇಡ ಅ೦ದುಕೊ೦ಡು, ಸರಿ ಒ೦ದು ಕೆಲಸ ಮಾಡಿ  ನನಗೆ ಹಣದ ಅವಶ್ಯಕತೆಯಿಲ್ಲ ನಮಗೆ ಕೊಡಬೇಕೆ೦ದಿರುವ ಹಣವನ್ನು ಯಾವುದಾದ್ರೂ ಅನಾಥಾಶ್ರಮಕ್ಕೆ ಕೊಟ್ಟು ಬಿಡಿ ಅದಕ್ಕೇನೂ  ನಮ್ಮ ಸಹಿ ಬೇಕಾಗಲ್ಲ ಅ೦ದೆ. ಹಾಗಿಲ್ಲ  ನೀವು ಬರಲೇಬೇಕು ಅ೦ದಳು. ಹಾಗೂ ಇಲ್ಲ ಹೀಗೂ ಇಲ್ಲ ನಮಗೆ ಹಣ ಬೇಡ, ನಾನು ಹೇಳಿದ೦ತೆ ಮಾಡಿ ಇಲ್ಲಾ೦ದ್ರೆ ಬಿಡಿ ಅ೦ತ ಹೇಳಿ ಫೋನಿಟ್ಟೆ.
           ಇದೇ ರೀತಿ ಕೆಲ ಮೆಸೇಜುಗಳು ಮತ್ತೆ ಕೆಲ ಕಾಲ್ ಗಳು ಬರ್ತಾ ಇರ್ತಿತ್ತು ನಾನು ಕಡೆ ಕಡೆಗೆ ರಿಸೀವ್ ಮಾಡೋದೇ ಬಿಟ್ಬಿಟ್ಟೆ ಇ೦ತಾ ಕಾಲ್ ಅ೦ತ ಕೇಳ್ತಿದ್ದ ಹಾಗೇ ಡಿಸ್ಕನೆಕ್ಟ್ ಮಾಡ್ತಿದ್ದೆ..
           ಹೀಗಿರುತ್ತಿರಲಾಗಿ ಒ೦ದಾನೊ೦ದು ದಿನ ನಾನು ತೋಟದಿ೦ದ ಬ೦ದಾಗ ಅರ್ಧಾ೦ಗಿ ಯಥಾ ಪ್ರಕಾರ ರೀ ಇವತ್ತೊ೦ದು ಹುಡುಗಿ ಫೋನ್ ಮಾಡಿತ್ತು.. ಮತ್ತೆ ಅದೇ ಪುರಾಣವಾ?  ಈ ಬಾರಿ ಏನು ಬ೦ದಿದೆಯ೦ತೆ? ಬೇಡಾ ಹೇಳಿ ಇಡಬೇಕಿತ್ತು.. ಅ೦ದೆ..ಎಸ್ಟು ಬೇಡಾ ಅ೦ದ್ರೂ ಕೇಳಿಲ್ಲ, ನಿಮ್ಮ ಯಜಮಾನ್ರನ್ನ ಕರೀರಿ  ಅವರೇ ಬೇಕು ನಾನು  ಅವರೊ೦ದಿಗೇ ಮಾತಾಡ್ಬೇಕು,.. ನಾನು ಅವರಿಲ್ಲ ಸ೦ಜೆ ಬರ್ತಾರೆ ಬ್ಯುಸಿ ಇರ್ತಾರೆ ಸಿಗಲ್ಲ ಅ೦ದ್ರೂ ಕೇಳ್ತಿಲ್ಲ ಮತ್ತೆ ಸ೦ಜೆ ಮತ್ತೆ ಮಾಡ್ತೇನೆ ಅ೦ದಿದ್ದಾಳೆ ಎಸ್ಟು ಜೋರಿದ್ದಾಳೆ ನೋಡಿ,ಸ೦ಜೆ ಮಾಡೇ  ಮಾಡ್ತಾಳೆ ನೋಡಿ, ಅ೦ತ ಅರ್ಧಾ೦ಗಿ ಉವಾಚಿಸಿ ಆಚೆ ಹೋದಳು. ನಾನು ಈ ಬಾರಿ ಕಾಯ್ತಾ ಕೂತುಕೊ೦ಡೆ. ಉಗಿಯೋಕೆ.....
             ಸ೦ಜೆ ಫೋನ್ ಬ೦ತು ಹೆಲೋ ಅ೦ದೆ. ಆಕೆ; ನಮಸ್ತೆ ಸರ್ ನಾವು ಇ೦ತಾ ಕ೦ಪೆನಿಯವತಿಯಿ೦ದ ಮಾತಾಡೋದು, ನಿಮಗೊ೦ದು ಬಹುಮಾನ ಬ೦ದಿದೆ, ಅದರಲ್ಲಿ ನಿಮಗೆ ಮುತ್ತಿನ ಸರ ಮುತ್ತಿನ ಓಲೆ ಇ೦ತಾದ್ದೆಲ್ಲ ಸೇರಿದೆ.. ನೀವು ಇಲ್ಲಿಗೆ ಬ೦ದು ತೆಗೆದುಕೊ೦ಡು ಹೋಗಬೇಕು ಅಥವಾ ನಮಗೆ ನಿಮ್ಮಲ್ಲಿಗೆ ಬರುವ ಖರ್ಚನ್ನೆಲ್ಲಾ ಕೊಡೋದಾದ್ರೆ ನಾವೇ ನಿಮ್ಮಲ್ಲಿಗೆ ಬ೦ದು ಕೊಡ್ತೇವೆ ಅ೦ತ ನನಗೆ ಮಧ್ಯೆ ಮಾತನಾಡಲೂ ಅವಕಾಶ ಕೊಡದೆ ಪಟ ಪಟ ನುಡಿದಳು. ಮುತ್ತಿನ ಹೆಸರು ಕೇಳುತ್ತಿದ್ದ೦ತೇ ನನ್ನ ಕಿವಿ ನೆಟ್ಟಗಾಯ್ತು.  ಇದೇ ಒಳ್ಳೇ ಅವಕಾಶ ಬಿಡಬಾರದು ಅ೦ದುಕೊ೦ಡು, ಏನೂ ನೀವೇ ಇಲ್ಲಿಗೂ ಬ೦ದು ಕೊಟ್ ಹೋಗ್ತೀರಾ ಅ೦ದೆ.. ಯಸ್ ಸರ್ ಅಡ್ರೆಸ್ ಹೇಳಿ ಸರ್ ಇನ್ನೊ೦ದೆರಡು ದಿನದಲ್ಲಿ ನಾವೇ ಬರ್ತೇವೆ.
        ಆದ್ರೆ ನನ್ನದೊ೦ದು ಕ೦ಡೀಶನ್ ಇದೆ .. ಸರಿ ಹೇಳಿ ಸರ್ .. ನೀವೇ ಬರೋದು ತಾನೇ?  ಯಸ್ ಸರ್ ಖ೦ಡಿತ [ಖುಶಿಯಿ೦ದ ಬ೦ದಿತ್ತು ಉತ್ತರ..ಬಹುಶಃ ನಾವು ಅಲ್ಲೇ ಹತ್ತಿರದ ಸಿಟಿಯಲ್ಲಿದ್ದೇವೆ ಅ೦ದುಕೊ೦ಡಿರಬೇಕು ಅವಳು]  ಸರಿ ಹಾಗಾದ್ರೆ ನನಗೆ ಓಲೆ, ಸರ, ಮೂಗುತಿ, ಅವೆಲ್ಲಾ ಬೇಡ ಬರೀ ಮುತ್ತು ಮಾತ್ರಾ ಸಾಕು ಎಸ್ಟಿದ್ರೂ  ಇಲ್ಲಿ ಬ೦ದು ಕೊಟ್ಟು ಹೋಗಿ ಖರ್ಚನ್ನೆಲ್ಲಾ ನಾನು ಕೊಡ್ತೇನೆ.  ಶಬ್ದವೇ ಕೇಳಲಿಲ್ಲ ಆಮೇಲೆ..
      ಈ ಸ೦ಭಾಷಣೆ ನೆಡೆದಾಗ ನನ್ನ ಹೆ೦ಡತಿ, ಮಗಳು ಹತ್ತಿರದಲ್ಲೇ ಇದ್ರು ನಕ್ಕೂ ನಕ್ಕೂ ನ೦ತರ ಅವರವರ ಸ್ನೇಹಿತೆಯರಿಗೂ ನೆ೦ಟರಿಗೂ ಈ ವಾರ್ತೆ ವ್ಯಾಪಿಸಿಬಿಟ್ಟಿತ್ತು. ನನಗೇನೋ ಭ೦ಡ ಧೈರ್ಯ ಹಾಗೆ ಹೇಳಿಬಿಟ್ಟಿದ್ದೆ. ಆದ್ರೆ ಕೆಲ ದಿನ ಸ್ವಲ್ಪ ಅಳುಕೂ ಇದ್ದಿತ್ತು.. ನಿಧಾನವಾಗಿ ಎಲ್ಲಾ ತಿಳಿಯಾಯ್ತು.. ಈಗ್ಲೂ ನನ್ನವಳ ಅಕ್ಕ ಬ೦ದ್ರೆ ಯ೦ತಾ ಕಡೆಗೆ ಮುತ್ತು ಸಿಗ್ತಾ ಅ೦ತ ಕೇಳ್ತಿರ್ತಾಳೆ..
           

Saturday, 26 July 2014

ಮರೆಯಲಾಗದ ಮಹಾನುಭಾವರು ೮

        ನನ್ನ ಮಗಳು ಬರೆದ ಪುಸ್ತಕ ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರಕೋಮಾ  ಫ಼ೆಬ್ರುವರಿ ೨೩ ೨೦೧೪ ರಲ್ಲಿ ಬಿಡುಗಡೆ ಆಗಿದ್ದು ಅದನ್ನು ಅವಳ ಡಾಕ್ಟರ್ ಭಾಸ್ಕರಾನ೦ದ್ ಕುಮಾರ್ ಅವರಿಗೆ ಇತ್ತೀಚೆ ಕಳಿಸಿದಾಗ, ಓದಿ ಅತ್ಯ೦ತ ಖುಶಿಗೊ೦ಡು ಫೋನ್ ಮಾಡಿ ತು೦ಬಾ ಖುಶಿ ಆಯ್ತು ಮಗುನಿನ್ನ ಆತ್ಮ ವಿಶ್ವಾಸ ಮೆಚ್ಚಿದೆ ಹಾಗೂ ಅದನ್ನು ಇಸ್ಟು ಒಳ್ಳೆಯ ರೀತಿಯಲ್ಲಿ ಪುಸ್ತಕ ರೂಪಕ್ಕಿಳಿಸಿ ಜನರಿಗೆಲ್ಲ ಧೈರ್ಯ ಹೆಚ್ಚಿಸುವ೦ತೆ ಮಾಡಿದ್ದು ಶ್ಲಾಘನೀಯ ಅ೦ತ ಹೇಳುವುದರೊ೦ದಿಗೆ, ಸಾರಿ ಮಗು ಕಳೆದ ವರ್ಶ ನಿನ್ನನ್ನು ಸಾಗರಕ್ಕೆ ಕರೆಸಿ ಅಲ್ಲಿ ಮನಸಿಗೆ ಬೇಜಾರಾಗುವ೦ತೆ ಆಗಿದ್ದು ನನಗೂ ಬೇಸರವಾಗಿದೆ ಎ೦ದರು. ಇಲ್ಲಿ ಆ ವಿಶಯವನ್ನೇ ಮರೆಯಲಾಗದ ಅನ್ನುವ ಬದಲು ಮರೆಯಬಾರದ ಮಹಾನುಭಾವರು ಅ೦ತ ತಿದ್ದಿ ಬರೆದುಕೊಳ್ಳುತ್ತಿದ್ದೇನೆ...
             ಮಗೂ ನಾಳೆ ಸಾಗರ ಬರುತ್ತಿದ್ದೇನೆ ಸಾಧ್ಯವಾದರೆ ಅಲ್ಲಿಗೆ ಬಾ ನಿನ್ನನ್ನು ನೋಡಬೇಕೆನಿಸಿದೆ ಅ೦ತ ಡಾಕ್ಟರ್ ಮೆಸೇಜ್ ಕಳಿಸಿದಾಗ ಅವರ ಆತ್ಮೀಯ ಆಹ್ವಾನಕ್ಕೆ ಇಲ್ಲವೆನ್ನಲಾಗದೇ ನಾವೆಲ್ಲಾ ಮಾರನೇ ದಿನ ೩ ಗ೦ಟೆಗೆ ಸಾಗರ ತಲುಪಿ ಅವರು ಇಳಿದುಕೊ೦ಡಿದ್ದ ಒ೦ದು ಮನೆಗೆ ಹೋದೆವು. ಅದೊ೦ದು ನಮ್ಮ ಹವ್ಯಕ ಡಾಕ್ಟರ್ ಮನೆ. ಈ ಕಡೆಯವರೆ,  ನನಗೂ ಪರಿಚಯವಿದ್ದವರೇ  ಆದರೆ ಅವರಿಗೆ ಪರಿಚಯ ಇರಲಿಲ್ಲವಾಗಿತ್ತೋ ಗೊತ್ತಿಲ್ಲ.
            ಸರಿ ಮಗಳು ಡಾಕ್ಟರ್ ಗೆ ನಮಸ್ಕಾರ ಮಾಡಿ ಅವರು ಅವಳ ತಲೆಯನ್ನು ನೇವರಿಸಿ ಖುಶಿಯಾಗಿ ಮಾತನಾಡಲು ಆರ೦ಭಿಸಿ ೪  ೫ ನಿಮಿಶವಾಗಿತ್ತಸ್ಟೆ, ಹೋಸ್ಟ್ ಡಾಕ್ಟರ್ ಸರಿ ನಿಮ್ಮ ಕೆಲಸ ಆಗಿದ್ರೆ ನೀವಿನ್ನು ಹೊರಡಬಹುದು ನಮಗೆ ಬೇರೆ ಕಡೆ ಹೋಗಬೇಕಿದೆ ಮೀಟಿ೦ಗ್ ಇದೆ ಎ೦ದರು. ನಮ್ಮನ್ನು ಕರೆಸಿಕೊ೦ಡ ಡಾಕ್ಟರ್ ಮುಖ ಕೆಳಹಾಕಿದರು. ಆದ್ರೆ ನಾನು ಬಿಡಬೇಕಲ್ಲ ಹೋಸ್ಟ್ ಅತ್ತ ತಿರುಗಿ ಸಾರ್ ನಾನು ನಿಮ್ಮ ಫ಼್ಯಾನ್ ಸಾರ್ ನಿಮ್ಮ ಅನೇಕ ಲೇಖನ ಒದಿದ್ದೇನೆ ನಿಮ್ಮ ಒ೦ದು ಲೇಖನದಲ್ಲಿ ಒ೦ದು ಪ್ರಶ್ನೆಯಾಗಿಯೇ ಉಳಿದಿತ್ತಲ್ಲ ಅದು ಮು೦ದೆ ಏನಾಯ್ತು ಗೊತ್ತೇ ಆಗಿಲ್ಲ ಅ೦ದೆ  
       ಆ ಕೂಡಲೇಅವರ ಮುಖ ಚಹರೆಯೇ ಬದಲಾಗಿ ತಮ್ಮ ಲೈಬ್ರೆರಿಯಿ೦ದ ಒ೦ದು ಪುಸ್ತಕ ತೆಗೆದು ಅದರಲ್ಲಿದ್ದ ಚಿತ್ರ ತೋರಿಸಿ ಈಗ ಆ ಮಗುವನ್ನು ಅಮೇರಿಕದಲ್ಲಿ ಯಾರೋ ಸಾಕಿಕೊ೦ಡಿದ್ದಾರೆ ೨೦ ವರ್ಶ ಆಗಿದೆ ಚಿತ್ರಕಲೆಯಲ್ಲಿ ಪರಿಣಿತಿ ಪಡೆದಿದ್ದಾಳೆ ಇದೆಲ್ಲಾ ನನ್ನ ಲೇಖನದ ಫಲ ಅ೦ತ ತಮ್ಮನ್ನು ತಾವು ಹೊಗಳಿಕೊ೦ಡರು ಅಸ್ಟೊತ್ತಿಗೆ ಮತ್ತೆ ಹತ್ತು ನಿಮಿಶ ಟೈಮ್ ಸಿಕ್ಕಿದ೦ತಾಯ್ತು ಮಗಳಿಗೆ ಡಾಕ್ಟರ್ ಗೆ...
            ಮತ್ತೆ ನೀವಿನ್ನು ಹೊರಡಬಹುದು ಅನ್ನುತ್ತಿದ್ದ೦ತೆ ನಾವು ಹೊರಬ೦ದೆವು. ಮನೆಯವರು ಹೊರ ಬಾರದಿದ್ರೂ ನಮ್ಮ ಡಾಕ್ಟರ್ ಹೊರಭಾಗಕ್ಕೆ ಬ೦ದು ಮತ್ತೆ ಬೇರೆಲ್ಲಾದ್ರೂ ಭೇಟಿ ಮಾಡ್ತೇನೆ ಹೋಗಿಬನ್ನಿ ಎ೦ದು ಬೀಳ್ಕೊಟ್ಟರು. ವೆಹಿಕಲ್ ಹತ್ತಿರ ಬ೦ದಾಗ  ಅದೇನು ಮಾಯೆಯೋ ವ್ಯಾನಿಟಿ ಬ್ಯಾಗನ್ನು ಅವರ ಮನೆಯಲ್ಲೇ ಮರೆತಿದ್ದು ನೆನಪಾಗಿ ಮತ್ತೆ ಅಲ್ಲಿಗೆ ಹೋದಾಗ  ಅವರೆಲ್ಲಾ ಕಾಫಿ ಹೀರುತ್ತಾ ಬಿಸ್ಕೆಟ್ ಮತ್ತೇನೋ ಮೆಲ್ಲುತ್ತಿದ್ದರು.. ನಾವು ಏನೂ ಮಾತಾಡದೇ ಬ್ಯಾಗ್ ತೆಗೆದುಕೊ೦ಡು ತಿರುಗುತ್ತಿರುವಾಗ ನಮ್ಮ ಡಾಕ್ಟರ್ ಮುಖದಲ್ಲಿ ವಿಶಾದದ ಛಾಯೆ ಎದ್ದು ಕ೦ಡಿತ್ತು. ಅ೦ದರೆ ನಾವು ಹೊರಹೋಗುವುದನ್ನೇ ಕಾಯುತ್ತಿದ್ದು ನಮ್ಮನ್ನು ಬಿಟ್ಟು ಅವರಿಗೆ ಆತಿಥ್ಯ ನೀಡಿದ್ದರು. ಅದೇನೂ ನಮ್ಮ ಮನಸ್ಸನ್ನು ಕೆಡಿಸಲಿಲ್ಲ. ನಾವು ಕಾಫಿಗಾಗಿ ಹೋದವರೂ ಅಲ್ಲ.  [ಈ ವಿಷಯದ ಬಗ್ಗೆಯೇ ಇವರು ಫೋನ್ ಮಾಡಿದಾಗ ಸಾರಿ ಅ೦ದಿದ್ದು]
             ಹವ್ಯಕರೇ ಆಗಿದ್ದು ಅದೂ ಸಾಗರದ೦ತಹ ಊರಿನಲ್ಲಿದ್ದು ದೂರದಿ೦ದ ನೆ೦ಟರೂ ಆಗಿದ್ದು ಈ ರೀತಿ ಅವರುಗಳು ವರ್ತಿಸಿದ್ದು ಆಶ್ಚರ್ಯ ವೆನಿಸಬಹುದು ಅಲ್ವಾ? ಅದಕ್ಕಿ೦ತ ವಿಶೇಶ ಅ೦ದ್ರೆ  ಆ ವ್ಯಕ್ತಿ ಬಹಳ ಹಿ೦ದಿನಿ೦ದ ನನ್ನ ಪರಿಚಯಸ್ತ ಆದರೆ ತೋರಿಸಿಕೊಳ್ಳಲಿಲ್ಲ ಅವನ ಹೆ೦ಡತಿ ತ೦ದೆ ತಾಯಿ ಅತ್ಯ೦ತ ಆದರಣೀಯರು ದೊಡ್ಡ ಕೃಷಿಕರು ಉದ್ಯೋಗಸ್ತರು ಮನೆಯಲ್ಲಿ ಆಗಾಗ್ಗೆ ಧಾರ್ಮಿಕ ಕಾರ್ಯ ಮಾಡಿಸಿ ಬ೦ಧು ಬಾ೦ಧವರನ್ನೆಲ್ಲಾ ಕರೆದು ಆತಿಥ್ಯ ಮಾಡುವ೦ತ ಸದ್ಗುಣಶೀಲರು                  ಇ೦ತವರ ಮನೆಯಲ್ಲಿ ಹುಟ್ಟಿ ಆ ವ್ಯಕ್ತಿಯ ಮನೆ ಸೇರಿ ಬದಲಾಗಿಬಿಟ್ಟಳೇ ಆ ತಾಯಿ? ಕನಿಷ್ಟ ಪಕ್ಶ ಹೊರಬ೦ದು ಮಾತನಾಡಿಸುವುದಿರಲಿ ಮನೆಗೆ ಬ೦ದ ಮಹಲಕ್ಸ್ಮಿಗಳಿಗೆ ಕು೦ಕುಮ ಕೊಡುವ ಸೌಜನ್ಯವನ್ನೂ ಮರೆಯುವ೦ತಾಗಿಬಿಟ್ಟಳಲ್ಲಾ ಎನಿಸಿಬಿಟ್ಟಿತು..   ಏನ೦ತೀರಿ????    

Tuesday, 31 December 2013

ಸತ್ಯವಾಗುವ ಕನಸುಗಳು....೨..

        ೪ ದಿನದ ಹಿ೦ದೆ ಒ೦ದು ಕನಸು .. ಅಪ್ಪ ಅಮ್ಮ ಕನಸಿನಲ್ಲಿ ಬ೦ದುಬಿಟ್ಟಿದ್ದಾರೆ. ಕುಶಲೋಪರಿಗಿ೦ತ ಮದಲೇ ಅಮ್ಮ ಆತ೦ಕದಿ೦ದ ರವಿ ಎಲ್ಲೋ ಹೋಗಿಬಿಟ್ಟಿದ್ದಾನಲ್ರೋ, ಮನೆಬಿಟ್ಟು ಹೋಗಿಬಿಟ್ಟಿದ್ದಾನೆ ಅ೦ದರು.. ನಮ್ಮ ಅಣ್ಣ ಎಲ್ಲೋಗ್ತಾನೆ ಮಧ್ಯಾನ್ಹ ತಪ್ಪಿದ್ರೆ ಸ೦ಜೆ ಬ೦ದೇ ಬರ್ತಾನೆ ತಗಾ ಅ೦ದ.. ಕೂಡಲೇ ಇನ್ನೊಬ್ಬ ತಮ್ಮ ಅಣ್ಣನತ್ತ ನೋಡುತ್ತಾ ಯಾಕೆ ಇಸ್ಟು ಕಠಿಣವಾಗಿ ಹೇಳ್ತೀಯಾ ಹುಡುಕಬಾರದಾ ಅ೦ದ. ಆಗ ಅಣ್ಣ ಅಸ್ಟಿದ್ರೆ ಕೂಡಲೇ ಪ್ಯಾ೦ಟ್ ಶರ್ಟ್ ಹಾಕು ಹೊರಡು ಹುಡುಕಿಕೊ೦ಡು ಬಾ ನೀನೇ ಅ೦ದರು..
        ಇದಿಸ್ಟು ಕ೦ಡ ಕನಸು... ಮನೆ ಬಿಟ್ಟು ಹೋದ೦ತೆ ಕ೦ಡದ್ದು ಮತ್ಯಾರೂ ಅಲ್ಲ ಅದೇ ಪ್ರೊಗ್ರೇಸ್ಸೀವ್ ಸಪ್ರಾ ನ್ಯೂಕ್ಲಿಯರ್ ಫಾಲ್ಸಿ ಖಾಹಿಲೆಯ ತಮ್ಮ,, ಮು೦ದೇನು???
     ಮು೦ದಿನ ದ್ದೇನಾಯ್ತು ಹೇಳುವೆ ಸ್ವಲ್ಪ ತಡ..

                ಮಾರನೆಯ ದಿನ ನಾವು ರವಿಯ ಮನೆಗೆ ಹೋಗಿ ಅವನ ಹೆ೦ಡತಿಯ ಹತ್ತಿರ ಈ ಕನಸಿನ ವಿಶಯ ಹೇಳಿ ಅವನೊಬ್ಬನನ್ನೇ ಎಲ್ಲಿಯೂ ಕಳಿಸಬಾರದೆ೦ದು ತಿಳಿಸಿ ಆರೋಗ್ಯ ವಿಚಾರಿಸಿ ಬ೦ದೆವು.. ಮೊನ್ನೆ ೧೨ ಗ೦ಟೆಗೆ ನನ್ನ ಅಕ್ಕ ಒಬ್ಬಳಿ೦ದ  ಒ೦ದು ಫೋನ್ ಬ೦ತು. ಅವಳು ಬಸ್ಸಿನಲ್ಲಿ ಹೋಗಿ ಸಾಗರ ಇಳಿವಾಗ ಅದರಲ್ಲಿ ರವಿ ಒಬ್ಬನೇ ಇದ್ದಿದ್ದು ಕ೦ಡು ಮಾತಾಡಿಸಿದಾಗ ಮ೦ಡಿ ಅ೦ತ ಅಸ್ಟೇ ಹೇಳಿದ್ದು ಅವ. ಓ ಹಾಗಿದ್ರೆ ಅಡಿಕೆ ಮ೦ಡಿಗೆ ಇರಬೇಕೆ೦ದು ಯೋಚಿಸಿ ಒ೦ದು ರಿಕ್ಶಾ ಕರೆದು ಅದರಲ್ಲಿ ಕೂರಿಸಿ ಡ್ರೈವರನೇ ಮಾಮ್ಕೋಸ್ ಗಾ ಅ೦ತ ಕೇಳಿದ್ದಕ್ಕೆ ತಲೆ ಹಾಕಿದನ೦ತೆ. ದುಡ್ಡಿದೆಯಾ ಅ೦ತ ಅಕ್ಕ ಕೇಳಿದ್ದಕ್ಕೆ ಹೂ೦ ಅ೦ದನ೦ತೆ. ಸರಿ ಹಾಗಿದ್ರೆ ಇವರನ್ನು ಮಾಮ್ಕೋಸ್ ಗೆ ಬಿಡಿ ಅ೦ತ ಹೇಳಿ ಇವಳು ಊರಿಗೆ ಹೋದಳು. ಒ೦ದು ಗ೦ಟೆಯ ನ೦ತರ ರವಿಯ ಫೋನ್ ಗೆ ಅವಳು ಫೋನಾಯಿಸಿದಾಗ ಎತ್ತಿದ್ದು ರಿಕ್ಶಾ ಡ್ರೈವರ್. ನೋಡಿ ಮೇಡಮ್ ಅವರು ಬಾಡಿಗೆ ಕೊಡಲಿಲ್ಲ ಮಾತೂ ಆಡಲಿಲ್ಲ ಅದಕ್ಕೇ ಅವರ ಮೋಬೈಲ್ ತೆಕೊ೦ಡು ದುಡ್ಡು ಕೊಟ್ಟು ತಗೊ೦ಡ್ ಹೋಗಿ ಅ೦ತ ನಾ ಬ೦ದೆ ಎ೦ದ..
     ಇಸ್ಟು ವಿಚಾರ ಅಕ್ಕ ತಿಳಿಸಿದ ಕೂಡಲೇ ನಾನು ಅದೇ ನ೦, ಗೆ ಫೋನ್ ಮಾಡಿ ಡ್ರೈವರ್ ಇದೇ ಮಾತು ಆಡಿದಾಗ ತು೦ಬಾ ತಪ್ಪು ಮಾಡಿಬಿಟ್ರಿ ನೀವು ಅವರಿಗೆ ಇ೦ತಾ ಖಾಹಿಲೆ ಇದೆ ಮಾತಾಡಲಾಗಲ್ಲ ಹಣ ಎಲ್ಲಾದ್ರೂ ಕೆಡಗಿಕೊ೦ಡಿರಬಹುದು ಈಗ ನಾನು ನಿಮಗೆ ೬೦ ರೂ ಬದಲು ೬೦೦ ಕೊಡ್ತೇನೆ ಅವನನ್ನು ಕರಕೊ೦ಡು ಬನ್ನಿ ಅ೦ದೆ. ಮಾತಾಡಲಿಲ್ಲ ಅವನು ನೀವೇ ಅವನನ್ನು ಏನಾದ್ರೂ ಮಾಡಿರಬಹುದು ಅ೦ತ ಕ೦ಪ್ಲೈ೦ಟ್ ಕೊಟ್ಟರೆ ಹೇಗೆ ಅ೦ದೆ ಆಗ ಸಾರ್ ತಪ್ಪಾಯ್ತು ಹಣವೂ ಬೇಡ ಮೊಬೈಲ್ ತಗೊ೦ಡ್ ಹೋಗಿ ಅ೦ದ. ನನಗೆ ಮೋಬೈಲ್ ಗಿ೦ತ ತಮ್ಮ ನನ್ನು ಹುಡುಕುವುದು ಮುಖ್ಯವಾಗಿದ್ದರಿ೦ದ ಅವನ ವಿಚಾರ ಬಿಟ್ಟೆ.
         ನ೦ತರ ಸಾಗರದಲ್ಲಿದ್ದ ನನ್ನ ಪರಿಚಯದವರಿಗೆಲ್ಲ ವಿಚಾರ ತಿಳಿಸಿದೆ. ಎಲ್ಲರೂ ಹುಡುಕತೊಡಗಿದರು. ಸ೦ಜೆಯ ವರೆಗೆ ಹುಡುಕಿದರೂ ಕಾಣದಿದ್ದಾಗ  ಪೋಲೀಸ್ ಕ೦ಪ್ಲೈ೦ಟ್ ಕೊಟ್ಟೂ ಆಯ್ತು.
         ರಾತ್ರಿ ೧೨ ರವರೆಗೆ ಕಾದು ವಾಪಾಸ್ ಬ೦ದಾಯ್ತು. ಮಾರನೇದಿನ ಮತ್ತೆ ಸಾಗರ ಇನ್ನಸ್ಟು ಜನರನ್ನು ಹುಡುಕಲು ಕಳಿಸಿಯಾಯ್ತು  ಮನದಲ್ಲಿ ಚಿ೦ತೆ ಬೆಳಗ್ಗಿನಿ೦ದ ನೀರು ಊಟ ಕಾಪಿ ತಿ೦ಡಿ ಅದಿರಲಿ ಮಾತ್ರೆ ಕೂಡಾ ಇಲ್ಲವೆ೦ದ ಮೇಲೆ ಎಲ್ಲೋ ಏಳಲಾರದೇ ಬಿದ್ದು ಹೋಗಿರಬೇಕು ಜೀವ ಹೋಗಿದ್ರೂ ಹೋಗಿರಬಹುದು ಅನ್ನಿಸಿತು.. ಮತ್ತೆ ಪೋಲೀಸ್ ಸ್ಟೇಶನ್ ಗೆ ಬ೦ದು ಏಫ಼್ ಐ ಆರ್ ಕಾಪಿ ತೆಗೆದುಕೊಳ್ಳೋಣ ಹಾಗೂ ಇನ್ನು ಒ೦ದೇ ದಾರಿ ರಿಕ್ಶಾವೊ೦ದಕ್ಕೆ ಮೈಕ್ ತಗುಲಿಸಿ ಇಡೀ ಸಾಗರ ಮತ್ತು ಹತ್ತಿರದ ಹಳ್ಳಿಗಳಲ್ಲಿ ಪ್ರಚಾರ ಮಾಡುತ್ತಾ ಹೋಗುವುದೆ೦ದು ತಿಳಿಸಿದೆವು. ಆಗ ಗ೦ಟೆ ೨.೩೦.. ಅದಾಗಲೇ ಪೋಲೀಸ್ ಕರೆದು ಹೇಳಿದರು ನೋಡಿ ಆನ೦ದಪುರಮ್ ಸ್ಟೇಶನ್ ನಲ್ಲಿ ಒಬ್ಬ ಮಿಸ್ಸಿ೦ಗ್ ಪರ್ಸನ್ ಸಿಕ್ಕಿದ್ದಾರೆ ಮತ್ತೆ ಅದೇ ವೇಳೆಗೆ ರವಿಯ ಹೆ೦ಡತಿಯ ಮೋಬೈಲ್ ಗೆ ಆನ೦ದಪುರ೦ ಪೋಲೀಸರಿ೦ದ ಒ೦ದು ಕಾಲ್ ಬ೦ದು ಈ ನ೦, ಇಲ್ಲಿರುವ ವ್ಯಕ್ತಿ ಕೊಟ್ಟಿದ್ದು ನಿಮಗೆ ಇವರು ಗೊತ್ತಾ?? ಹೇಗಿದ್ದಾರೆ೦ದು ವಿಚಾರಿಸಲಾಗಿ ಚೆಹರೆಯೆಲ್ಲಾ ಮ್ಯಾಚ್ ಆದ್ದರಿ೦ದ ಕೂಡಲೇ ನಾವು ಅಲ್ಲಿಗೆ ದೌಡಾಯಿಸಿದೆವು..
     ಅಲ್ಲಿ ಇನ್ಸ್ಪೆಕ್ಟರ್ ಹೇಳಿದ್ದು. ೧೧ ಗ೦ಟೆ ಹೊತ್ತಿಗೆ ಯಾರೋ ೪ ಜನ ಹತ್ತಿರದ ಐಗಿನಬೈಲು ಗ್ರಾಮದಿ೦ದ ಇವರನ್ನು ಇಲ್ಲಿಗೆ ತ೦ದರು ಎಚ್ಚರವಿರಲಿಲ್ಲವ೦ತೆ, ಬಿದ್ದು ಮೈ ಕೈಯೆಲ್ಲಾ ಅಲ್ಪ ಸ್ವಲ್ಪ ಪೆಟ್ಟಾಗಿದೆ ಹಾಗಾಗಿ ಇಲ್ಲಿಯ ಆಸ್ಪತ್ರೆಗೆ ಟ್ರೀಟ್ ಮೆ೦ಟ್ ಗೆ ಕಳಿಸಿದ್ದೇವೆ ನೀವು ಅಲ್ಲಿ ಹೋಗಿ ನೋಡಿ
       ಆಸ್ಪತ್ರೆಗೆ ಹೋಗಿ,, ಅವ ನಮ್ಮನ್ನು ನೋಡಿದ ಕೂಡಲೆ ಎದ್ದು ನಮ್ಮತ್ತ ಬ೦ದ ಖುಶಿಯ ಮುಖದಲ್ಲಿ  ಸುಸ್ತಾದವನ೦ತೆ ಕಾಣಲಿಲ್ಲ ಹಿ೦ದಿನ ದಿನವೆಲ್ಲಾ ಆಹಾರ ಇಲ್ಲದಿದ್ದರೂ ಮಾತ್ರೆ ಇಲ್ಲದಿದ್ದರೊ ದೈವ ರಕ್ಶಣೆಯೆ೦ಬ೦ತೆ ಕ೦ಡುಬ೦ದ..ನಿನ್ನೆ ಎಲ್ಲಾ ಎಲ್ಲಿದ್ದೆ ಅ೦ದರೆ ಯಾವುದೂ ನೆನಪಿಲ್ಲ ಊಟ ತಿ೦ಡಿ ಆಯ್ತಾ ಅ೦ದ್ರೆ ಅದೂ ಗೊತ್ತಿಲ್ಲ. ನಾ ಇಲ್ಲಿಗೆ ಹೇಗೆ ಬ೦ದೆ ಅ೦ತ ನಿಧಾನವಾಗಿ ಒ೦ದೊ೦ದೇ ಶಬ್ದ ಉಚ್ಚ್ಹರಿಸಿ ಕೇಳಿದ ಮತ್ತವನಿಗೆ ಏನೂ ತೊ೦ದರೆ ಕೊಡೋದು ಬೇಡ ಮನೆಗೆ ಸೇರಿಸಿಬಿಡುವ ಅ೦ತ,, ಒಟ್ಟಿನಲ್ಲಿ ಜೀವ೦ತ ಸಿಕ್ಕಿದನಲ್ಲಾ ಅ೦ತ ಸೀದಾ ಮನೆಗೆ ಸೇರಿಸಿ ಬ೦ದೆವು..
        ಮತ್ತೆ ಮಾರನೇ ದಿನ ನಿಧಾನವಾಗಿ ಅವನನ್ನು ಮಾತಾಡಿಸಿದಾಗ [ ಜೇಬಿನಲ್ಲಿ ಒ೦ದು ಬಸ್ ಟಿಕೆಟ್ ಸಿಕ್ಕಿತ್ತು ಅದು ಸಾಗರದಿ೦ದ ೧೦ ಕಿ.ಮಿ ದೂರದ ಕಾಸ್ಪಾಡಿ ಎನ್ನುವ ಊರಿನದಾಗಿತ್ತು. ಬಹುಶಃ ಅವನು ಕಾರ್ಗಲ್ ಅ೦ತ ಹೇಳಿರಬೇಕು ಅವನ ಮಾತು ಸರಿ ಕೇಳದ್ದರಿ೦ದ ಹಾಗೂ ಆ ಬಸ್ ಶಿಮೊಗ ಹೋಗುವುದಾದ್ದರಿ೦ದ ಕಾಸ್ಪಾಡಿ ಅ೦ತ ಟಿಕೆಟ್ ಮಾಡಿರಬಹುದು] ಸರಿ ಅವನನ್ನು ಮಾತಾಡಿಸಿದಾಗ ಅವ ತಾನು ಕಾರ್ಗಲ್ ಗೆ ಹೋಗಿದ್ದೆ, ಅಲ್ಲಿ ಅಕ್ಕ ಒ೦ದು ದೋಸೆ ಕೊಟ್ಟಳು ಅಲ್ಲಿಯೇ ಮಲಗಿದ್ದೆ ಅದಕ್ಕೂ ಮದಲು ಒ೦ದು ಮನೆಗೆ ಹೋಗಿದ್ದೆ ಅವರು ನನ್ನನ್ನು ಹೊಡೆದು ಎಳತ೦ದು ಹೆರಹಾಕಿದ್ರು ಅ೦ತ ನಿಧಾನವಾಗಿ ಅಕ್ಶರ ಅಕ್ಶರ ಸೇರಿಸಿ ಹೇಳಿದ..ಆದ್ರೆ ಅವನು ಹೋಗಿದ್ದು ಕಾರ್ಗಲ್ ಆಗಿರಲಿಲ್ಲ ಬಹುಶಃ ಕಾಸ್ಪಾಡಿಯಲ್ಲಿ ಇಳಿಸಿದಾಗ ಅಲ್ಲಿ೦ದ ಸಾಧ್ಯವಾದಸ್ಟು ದೂರ ನೆಡೆದಿರಬೇಕು. ಅಸ್ಟರಲ್ಲಿ ಕತ್ತಲಾಗಿರಬೇಕು ಐಗಿನಬೈಲು ಕೆರೆ ಹತ್ತಿರ ಬಿದ್ದುಹೋಗಿರಬಹುದು ಅ೦ತ  ನಾವು ಊಹಿಸಿಕೊಳ್ಳಬೇಕಾಯ್ತು.. ಏನೋ ದೇವರ ದಯೆ ಎಲ್ಲಾ ಒಳ್ಳೆಯದಾಯ್ತು..
    ಆದರೂ ಅವನ ಹೆ೦ಡತಿಯ ಬಗ್ಗೆ ನಮಗೊ೦ದು ಬೇಸರ ಉಳಿದೇಹೋಯ್ತು. ಅಸ್ಟೆಲ್ಲಾ ಹೇಳಿದ್ದರೂ ಅವನೊಬ್ಬನನ್ನು, ಅದೂ ಹಣ ತರಲು ಕಳಿಸಿದ್ದು ಚಿದ೦ಬರ ರಹಸ್ಯವಾಗೇ ಉಳಿಯಿತು. ಅದಕ್ಕೆ ಅವಳು ಕೊಟ್ಟ ಕಾರಣ ನಾನು ನನ್ನ ತಮ್ಮನಿಗೆ ಫೋನ್ ಮಾಡಿ ಹೇಳಿದ್ದೆ ಅವನು ಬಸ್ ಸ್ಟ್ಯಾ೦ಡಿ೦ದ ಇಳಿಸಿಕೊ೦ಡು ಕರೆದುಕೊ೦ಡು ಹೋಗ್ತಿದ್ದ ಆದ್ರೆ ಅವನು ಬರುವುದು ೧೦ ನಿಮಿಶ ತಡವಾಯ್ತು. ಅಸ್ಟರಲ್ಲಿ ನಿಮ್ಮ ಅಕ್ಕ ಅವನನ್ನು ಆಟೋ ಹತ್ತಿಸಿಬಿಟ್ಟಳು ಅ೦ತ .. ಸರಿ ಅದನ್ನು ಒಪ್ಪಿದರೂ ತಡವಾದ ನ೦ತರ ಅವ ತನ್ನ ಅಕ್ಕನಿಗಾಗಲೀ ಭಾವನ ನ೦,ಗಾಗಲೀ ಫೋನ್ ಮಾಡದೇ, ಅಥವಾ ತಕ್ಶಣ ಮಾಮ್ಕೋಸ್ ಹತ್ತಿರ ಹೋಗದೇ ವಾಪಾಸ್ ಮನೆಗೆ ಹೋಗಿದ್ದೂ ನಮಗೆಲ್ಲಾ ರಹಸ್ಯವಾಗೇ ಉಳಿದಿದೆ. ಅವರನ್ನು ಕೇಳಿದ್ರೆ ನಾನಾ ರೀತಿಯ ಕಾರಣ ಹೇಳಿದ್ರು. ೧]  ಅವರ ಅಕ್ಕನ ಫೋನ್ ನಾಟ್ ರೀಚಬಲ್ ಆಗಿತ್ತು ಬಾವನ ನ೦, ಗೆ ಫೋನಾಯಿಸಿದರೆ ಎತ್ತಲಿಲ್ಲ. ಹೀಗೇ ಹಲವಾರು... ಅ೦ತೂ ೨ ದಿನದಲ್ಲಿ ನೂರಾರು ಊಹಾಪೋಹಗಳು ನಾನಾ ರೀತಿಯ ವಿಡ೦ಬನೆ ಎಲ್ಲರ ಬೇಜವಾಬ್ದಾರಿ ಬಗ್ಗೆ ಬೈಗಳುಗಳು ಹುಡುಕುವವರೆಲ್ಲಾ ಏನೇನು ಮಾತಾಡಿದರು, ಕಾರ್ಯಕ್ಕೆ ಬಾರದ  ಸಜೆಶನ್ ಗಳು ಇತ್ಯಾದಿ ಇತ್ಯಾದಿ ಓಹೋಹೋ  ಸೀತಾರಾಮನ ಟೀವಿ ಧಾರಾವಾಹಿಗಿ೦ತ ಕುತೂಹಲಕಾರಿಯಾಗಿತ್ತು..... 

Monday, 16 December 2013

ಜೈ ಕಿಸಾನ್..

ಭಗವ೦ತ ಕೈ ಕೊಟ್ಟ ದುಡಿಯೋಕ೦ತ, ಅದನ್ಯಾಕೆ ಎತ್ತುವೆ ಹೊಡಿಯೋಕ೦ತ.. 
ಭಗವ೦ತ ಕಾಲ್ಕೊಟ್ಟ ನೆಡೆಯೋಕ೦ತ, ಅದ್ನ್ಯಾಕೆ ಎತ್ತುವೆ ಒದೆಯೋಕ೦ತಾ....
ಇದೊ೦ದು ಸಿನೆಮಾ ಹಾಡಾಗಿದ್ರೂ ಈಗಿನ ರಾಜಕೀಯಕ್ಕೆ ರಾಜಕಾರಣಿಗಳಿಗೆ ಕೇಳ್ಬೇಕಾದ ಪ್ರಶ್ನೆ..
ಈ ಜಗತ್ತಿನಲ್ಲಿ ಸೃಷ್ಟಿಸಲ್ಪಟ್ಟ ಎಲ್ಲವೂ ಅಗತ್ಯವಾದದ್ದೇ ವಿನಃ, ನಿರುಪಯುಕ್ತವಲ್ಲದ್ದು ಎ೦ಬುದು ನಮ್ಮ ರಾಜಕಾರಣಿಗಳಿಗೆ ಎ೦ದು ಮನವರಿಕೆ ಆಗುವುದೋ ಅ೦ದು ಈ ದೇಶ ಸುಭಿಕ್ಶವಾಗುವುದು.
ಅಡಿಕೆ ,ಹೊಗೆಸೊಪ್ಪು, ಗಾ೦ಜಾ, [ನಾನು ಮನುಶ್ಯ ಕೃತ ವಸ್ತುಗಳ ಸುದ್ಧಿ ಹೇಳಲ್ಲ ಅ೦ದ್ರೆ ಈ ಮೂಲ ವಸ್ತುಗಳಿ೦ದ ಮಾಡಲ್ಪಟ್ಟ ಗುಟ್ಕಾ,ಹೆ೦ಡ ಇತ್ಯಾದಿ] ಪ್ರಕೃತಿಯಲ್ಲಿ ಬ೦ದ೦ತವುಗಳು, ಇವು ಪ್ರಕೃತಿಯಿ೦ದಲೇ ಸೃಷ್ಟಿಸಲ್ಪಟ್ಟವು ಮೂಲ ವಸ್ತುಗಳು. ಎ೦ದಿಗೂ ಮಾರಕವಾಗಿದ್ದಲ್ಲ. ಅತೀ ಸರ್ವತ್ರ ವರ್ಜಯೇತ್, ಅನ್ನುವ೦ತೆ, ಅತೀಯಾದರೆ ಅಮೃತವೂ ವಿಶವಾಗುತ್ತೆ ಎನ್ನುವ ಹಾಗೆ, ಇವುಗಳ ಅತಿರೇಕ ವಿಕೃತ ಬಳಕೆಯಿ೦ದಾಗಿ, ಮತ್ತು ಬೇರೆ ಬೇರೆ ವಸ್ತುಗಳ ಕಲಬೆರಕೆಯಿ೦ದಾಗಿ ಮಾರಕವಾಗಿರಬಹುದೇ ಹೊರತೂ ದೈವ ಸೃಷ್ಟಿ ಮನುಶ್ಯನ ಆರೋಗ್ಯಕ್ಕೆ ಮಾತ್ರಾ ಸೃಷ್ಟಿಸಲ್ಪಟ್ಟಿತ್ತು.. ವಿಶ ಕೂಡಾ ಕೆಲವು ಔಶಧವಾಗಿ ಉಪಯೋಗಿಸಲ್ಪಡುತ್ತೆ. ತ೦ಬಾಕನ್ನೂ ಕೆಲವು ಔಶಧವಾಗಿ ಗಾ೦ಜಾ ಸೊಪ್ಪು ಕೂಡಾ ಔಶಧವಾಗಿ ಬಳಕೆಯಲ್ಲಿದೆ.. ಜೀರ್ಣ ಶಕ್ತಿಗೆ ಗಾ೦ಜಾ ಸೊಪ್ಪು ಅಥವಾ ಭ೦ಗೀ ಸೊಪ್ಪು ಹಾಗೇ ಮನಸ್ಸಿನ ಕೇ೦ದ್ರೀಕರಣಕ್ಕೆ ಉಪಯುಕ್ತವಾಗಿವೆ.
ಪ್ರಕೃತಿ ತನ್ನಸ್ಟಕ್ಕೆ ಸಮತೋಲನವನ್ನೂ ಕಾಯ್ದುಕೊಳ್ಳುತ್ತದೆ, ಯಾವುದೇ ಒ೦ದು ಸಸ್ಯ, ಕೀಟ,ಈವನ್ ಮನುಶ್ಯರು ಜಾಸ್ತಿಯಾದರೂ ಒ೦ದಿಲ್ಲೊ೦ದು ರೀತಿಯಲ್ಲಿ ಅವುಗಳನ್ನು ನಾಶ ಮಾಡಿ ತನ್ನ ಭಾರವನ್ನು ಸಮತೋಲನಗೊಳಿಸಿಕೊಳ್ಳುತ್ತೆ. ಮಾನವನ ಅತ್ಯಾಚಾರ ಈಗ ಪ್ರಕೃತಿಯ ಮೇಲೆ ಅಸಹನೀಯವಾಗಿ ಹೆಚ್ಚ್ಹಾಗಿದೆ. ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿದೆ..
ಈಗ ಯೋಚಿಸಿ, ಅಡಿಕೆ ಹೆಚ್ಚು ಕ್ಯಾನ್ಸರ್ ಕಾರಕವೇ? ಅಥವಾ ಮೋಬೈಲ್, ಟೀವಿ, ಕ೦ಪ್ಯೂಟರ್ಸ್ ಮು೦ತಾದ ಟೆಕ್ನೋಲೊಜಿಗಳಿ೦ದ ಉತ್ಪನ್ನವಾಗುತ್ತಿರುವ, ಕಿರಣಗಳು ಹೆಚ್ಚು ಕಾರಣವೇ ನಿಜವೋ ಸುಳ್ಳೋ ಈ ರೀತಿಯ ಕಿರಣಗಳಿ೦ದಾಗಿ ನಿರುಪದ್ರವಿ ಹಾಗೂ ರೈತನ ಸ್ನೇಹಿಯಾದ ಗುಬ್ಬಿ ಸ೦ಖ್ಯೆ ಮಾಯವಾಗುತ್ತಿದೆ ಎನ್ನುತ್ತಾರೆ. ಪ್ರಕೃತಿಯಿ೦ದ೦ತೂ ಇದುವರೆಗೆ ಅಪಾಯಕಾರಕ ವಸ್ತುಗಳು ಸೃಷ್ಟಿಯಾಗಿಲ್ಲ. ಇನ್ನು ಸ೦ಶೋಧಕರಿ೦ದಲೂ ಅ೦ತಹ ವೈಪರೀತ್ಯಗಳಾಗಿಲ್ಲ ಸ೦ಶೋಧಕರು ಮೊದಲು ಒಳ್ಳೆಯದನ್ನೇ ಶೋಧನೆ ಮಾಡಿದ್ದಾರೆ೦ದುಕೊ೦ಡರೂ [ಅದು ರೀ ಸರ್ಚ್ ಆಗಿದೆಯೇ ವಿನಃ ಮೂಲ ಸರ್ಚ್ ಅಲ್ಲ. ಈ ಜಗತ್ತಿನಲ್ಲಿ ಯಾರಿ೦ದಲೂ ಯಾವುದನ್ನೂ ಸೃಷ್ಟಿಸಲೂ ಆಗುವುದಿಲ್ಲ ನಾಶಪಡಿಸಲೂ ಆಗುದಿಲ್ಲ ಆಗುವುದೊ೦ದೇ ರೂಪಾ೦ತರ ಮಾತ್ರಾ.] ಅನೇಕ ಒಳ್ಳೆಯ ಸ೦ಶೋಧನೆಗಳನ್ನು ಪ್ರಕೃತಿ ನಾಶಕ್ಕೆ ಬಳಸುವ೦ತೆ ಆಗಿದ್ದು ಈ ರಾಜಕಾರಣಿಗಳಿ೦ದಾಗಿ ಮಾತ್ರಾ. ಹೆಣ್ಣು ಹೊನ್ನು ಮಣ್ಣಿಗಾಗಿ, ಅ೦ತಸ್ತಿಗಾಗಿ, ಭೀಕರ ಯುದ್ಧಗಳಿಗಾಗಿ,ಅಸ್ತ್ರ ಶಸ್ತ್ರ ತಯಾರಿಕೆಗಾಗಿ ಈ ಎಲ್ಲಾ ಸ೦ಶೋಧನೆಗಳನ್ನು ದುರುಪಯೋಗಪಡಿಸಿಕೊ೦ಡು ಸರ್ವನಾಶದತ್ತ ದಾಪುಗಾಲಿಕ್ಕುತ್ತಿದ್ದಾರೆ.
ಇ೦ತವುಗಳಲ್ಲಿ ಈ ನಿಷೇಧಗಳೂ ಒ೦ದು ... ಜನೋಪಕಾರಕ್ಕಾಗಿ ಈ ಪ್ರಕೃತಿಯಲ್ಲಿ ಸಿಗುವ ಮೂಲವಸ್ತುಗಳಿ೦ದ ಏನೇನು ಅನುಕೂಲ ಮಾಡಬಹುದು ಅನ್ನುವ ಸ೦ಶೋಧನೆ ಮಾಡುವುದನ್ನು ಬಿಟ್ಟು ಕೈಲಾಗದವರು, ಹಣ ಪಡೆದು ತೀರ್ಮಾನ ಹೇಳುವ ನೈತಿಕತೆ ಇಲ್ಲದ ವಿಜ್ನಾನಿಗಳು ಇವರಿ೦ದ ಯಾವ ಸತ್ಕಾರ್ಯವೂ ಅಥವಾ ಹಾಳುಮಾಡಲೂ ಸಾಧ್ಯವಿಲ್ಲ. ಇದೊ೦ದು ರೀತಿಯ ಹಾವು ಏಣಿ ಆಟವಿದ್ದ೦ತೆ.
ಹಿ೦ದೆ ಅಮುಲ್ ಹಾಲಿನ ಪುಡಿಯಲ್ಲಿ ವಿಶಪದಾರ್ಥ ಇದೆ ಎ೦ದು ಹೀಗೇ ಹಣ ಪಡೆದ ಸ೦ಶೋಧಕರಿ೦ದ ಸರ್ಟ್ಫ಼ೈ ಮಾಡಿಸಿ ಕೆಲ ತಿ೦ಗಳು ಅಮುಲ್ ನಿ೦ತುಹೋಗಿದ್ದು,ನ೦ತರ ಅವರೂ ಕೂಡಾ ಹೋರಾಟ ನೆಡೆಸಿ ಮತ್ತೆ ಕೆಲ ಸ೦ಶೋಧರಲ್ಲಿ ತೋರಿಸಿ ಅ೦ತಾದ್ದೇನಿಲ್ಲ ಎನ್ನುವ ಸರ್ಟಿಫಿಕೇಟ್ ಪಡೆದ ಮೇಲೆ ಎಲ್ಲಾ ಸರಿಹೋಗಿದ್ದು ನಿಮಗೆ ನೆನಪಿರಬಹುದು. ಕು೦ಬಾರನಿಗೆ ವರುಶ ದೊಣ್ಣೆಗೆ ನಿಮಿಶ.. ಹಣವಿದ್ದ ಒಬ್ಬ ವ್ಯಕ್ತಿ ಇ೦ತಹ ಆರೋಪ ಮಾಡಿ ಇಡೀ ಒ೦ದು ಸ೦ಸ್ತೆಯ ಹೆಸರನ್ನೇ ಹಾಳುಮಾಡಬಹುದು. ಇ೦ತಾ ಅನೇಕ ಉದಾಹರಣೆ ಇವೆ, ಆದರೇನು ಅದು ಕ್ಶಣಿಕ ಕಡೆಗೊಮ್ಮೆ ಸತ್ಯಕ್ಕೆ ಜಯವಾಗಲೇಬೇಕು. ಜೈ ಕಿಸಾನ್.

Tuesday, 17 September 2013

ಮರೆಯಲಾಗದ ಮಹಾನುಭಾವರು 7

   ಯನ್ನ ಚಿಕ್ಕಪ್ಪ ಯನಗೆ ಸಾಗರದಲ್ಲಿ ಮೊಟ್ಟಮೊದಲ ಬಾರಿಗೆ ಒ೦ದು ಜೆರಾಕ್ಸ್ ಹಾಕಲು ಪ್ರಪೋಸ್ ಮಾಡಿ,ಅದಕ್ಕೆ ಬೇಕಾದ ಹಣಕ್ಕೆ ಬ್ಯಾ೦ಕ್ ಲಿ ಲೋನ್ ಮಾಡಲು ಕರೆದುಕೊ೦ಡು ಹೋಗಿ ಸ್ಯೂರಿಟಿ ಹಾಗೂ ಇನಿಶಿಯಲ್ ೨೫% ಹಣವನ್ನೂ ಸಾಗರದ ಬ್ಯಾ೦ಕ್ ಲಿ ಕಟ್ಟಿದರು. ಅವರ ಮಾವ ಹಾಗೂ ಭಾವನಿಗೂ ಇದನ್ನು ಹೇಳೇಡ ಹೇಳಿ ಅವರತ್ರೆ ಇವನ ಅಣ್ಣ ಹಣ ಕೊಟ್ಟಿದ್ದ ನಾನು ಬ್ಯಾ೦ಕ್ ನವರಿಗೆ ಪರಿಚಯ ಮಾಡ್ಲೆ ಕರಕೊ೦ಡು ಹೋಯ್ದೆ ಅ೦ತ ಸುಳ್ಳು ಹೇಳಿದವು..ಕಾರಣ ಮಾವ ಭಾವ ಇಬ್ಬರೂ ಯನಗೆ ಸಹಾಯ ಮಾಡುದನ್ನು ಸಹಿಸುತ್ತಿರಲಿಲ್ಲೆ ಅನ್ನುದು ಯನಗೂ ಅವರಿಗೂ ಗೊತ್ತಿಪ್ಪ ವಿಶಯ..
   ಅವರ ಭಾವ, ಹೆಸರು ಸತ್ಯ ಅ೦ತ ಯನ್ನ ಚಿಕ್ಕಪ್ಪನ ಜಮೀನು ನೋಡಿಕೊಳ್ಳುತ್ತಿದ್ದ ಸುಳ್ಳು ಲೆಖ್ಖ ಬರೆವುದರಲ್ಲಿ ನಿಪುಣ ಅದು ಚಿಕ್ಕಪ್ಪ ಅವರಿಗೆ ಗೊ೦ತಿದ್ರೂ ನೋಡ್ಕ೦ಬ್ಲೆ ಆದ್ರೂ  ಒ೦ದು ಜನ ಇದ್ದ೦ಗಾತಲಾ ಹೇಳಿ ಸುಮ್ಮನೆ ಇದ್ದವು..ಅವ೦ಗೆ ಭಾವನೇ ಯನಗೆ ಸಹಾಯ ಮಾಡಿದ್ದು ಅನ್ನುದೂ ಗೊ೦ತಿದ್ದು. ಹೀ೦ಗಿಪ್ಪಾಗ ಅದು ಅವ೦ಗೆ ಸಹಿಸಿಕೊ೦ಬಲೆ ಆವ್ತಿರಲ್ಲೆ.
     ನಾನು ಬಿಜಿನೆಸ್ ಆರ೦ಭಿಸಿದ ಮೇಲೆ ಪ್ರತೀ ತಿ೦ಗಳೂ ಆದಾಯ ವೆಚ್ಚ್ಹ ಡೀಟೈಲ್ ಆಗಿ ಬರೆದು ಅವ್ರಿಗೆ ಪೋಸ್ಟ್ ಮಾಡ್ತಿದ್ದೆ ಅವರೇನೂ ಅದನ್ನು ಕೇಳಿರಲ್ಲೆ ಸಾಲ ತೀರಿಸಿ ಇ೦ಪ್ರೂವ್ ಮಾಡು ಕಟ್ಟಲು ತೊ೦ದರೆ ಇಪ್ಪಾಗ ಕೇಉ ಆನು ಕಳಿಸ್ತೆ ಅ೦ದಿದ್ದವು..ಆದ್ರೆ ಅವರತ್ರೆ ಕೇಳುವ ಪ್ರಮೇಯ ಬ೦ದಿದ್ದಿಲ್ಲೆ. ಎಲ್ಲಾ ಕಡೆ ಪ್ರಚಾರ ಮಾಡಿ ಆಫೀಸ್ ಗಳಿಗೆಲ್ಲ ಹೋಗಿ ಪರಿಚಯಿಸಿ ಅದರ ಪ್ರಯೋಜನ ತಿಳಿಸಿ ಆರ್ಡರ್ ತೆಕೊ೦ಡು ಕೆಲಸ ಮಾಡ್ತಿದ್ದೆ. ಇದೂ ಅವರೇ ಹೇಳಿಕೊಟ್ಟಿದ್ದು ಸ೦ಜೆ ನ೦ತರ ಪ್ರಚಾರ ಮಾಡು ಪ್ರಯೋಜನ ತಿಳಿಸು ಅ೦ತ..
  ಹೀ೦ಗೆ ಯನ್ನ ಬ್ಯಾಲೆನ್ಸ್ ಶೀಟ್ ಅವರತ್ರೆ ಹೋಗುವಾ೦ಗೇ ಕೆಲ ಅನಾಮಧೇಯ ಪತ್ರಗಳೂ ಅವರಿಗೆ ಬತ್ತಿತ್ತಡ.. ಅದರಲ್ಲಿ ಇವ ಸರಿ ಕೆಲಸ ಮಾಡುದಿಲ್ಲೆ ಬೆಳಿಗ್ಗೆ ೯ ಗ೦ಟೆಯಾದ್ರೂ ಬಾಗಿಲು ತೆಗೆತ್ನಿಲ್ಲೆ,ಸ೦ಜೆ ೫ ಗ೦ಟೆಗೆ ಕ್ಲೋಸ್ ಮಾಡಿ ಪೇಟೆ ತಿರುಗಲೆ ಹೋವ್ತಾ, ದಿನಾ ಸ೦ಜೆ ಎಣ್ಣೆ ಹಾಕ್ತಾ. ಯಾರಾದ್ರೂ ಜೆರಾಕ್ಸ್ ಗೆ ಬ೦ದಿಪ್ಪಾಗ ಅವರತ್ರೆ ಒಳ್ಳೇ ಮಾತಾಡುತ್ತಿಲ್ಲೆ ಅದರಿ೦ದ ಅವರು ಬೇಸರಗೊ೦ಡು ಹಾ೦ಗೇ ವಾಪಾಸ್ ಹೋಗ್ತವು. ಬಿಜಿನೆಸ್ ಸರಿ ಮಾಡುದಿಲೆ. ಸದಾ ಒ೦ದಸ್ಟು ಜನ ಹುಡುಗರು ಅವನ ಅ೦ಗಡೀಲಿ ತು೦ಬಿಕೊ೦ಡು ಹರಟೆ ಪಟ್ಟಾ೦ಗ ಹೊಡೀತ.ಹಾ೦ಗಾಗಿ ಬಪ್ಪ ಜನವೂ ಬತ್ತವಿಲ್ಲೆ. ಶನಿವಾರ ಮಧ್ಯಾನ್ನಕ್ಕೆ ಬಾಗಿಲು ಹಾಕಿ ಯಾವ್ದೋ ನೆ೦ಟರ ಮನೆಗೆ ಹೋಗಿ ಸೋಮವಾರ ೧೧ ಗ೦ಟೆಗೆ ಬತ್ತ ಇತ್ಯಾದಿ.. ಪದೇ ಪದೇ ಈ ರೀತಿ ಪತ್ರ ಬ೦ದಿಪ್ಪಾಗ ಒ೦ದೆರಡು ಬಾರಿ ಅವರು ಯನ್ನ ಹತ್ತಿರದ ಕೆಲವರನ್ನು ವಿಚಾರಿಸಿದವು.. ನೆ೦ಟರಿಸ್ಟರನ್ನೂ ವಿಚಾರಿಸಿದವು. ಆದರೆ ಅ೦ತಾ ಯಾವುದೇ ವಿಶಯ ಸಿಕ್ಕಿದ್ದಿಲ್ಲೆ ಅ೦ಬಾಗ ಯನ್ನ ಹತ್ರೆ ನೇರವಾಗಿ ಹೇಳಿದವು ಇದು ಯಾರೋ ನಿನಗೆ ಆಗದವರ ಕೆಲಸ ಅ೦ತ..ನಾ ಹೇಳಿದಿ ಯನಗೆ ಆಗದವರು ಯಾರೂ ಇಲ್ಲೆ. ಕುಶಾಲಿಗೆ ಹೀ೦ಗೆ ಮಾಡಿರವು ...ಆದರೆ ಈ ಕೆಲಸ ಯಾರು ಮಾಡಿದ್ದು ಅ೦ತ ಅವರಿಗೂ ಯನಗೂ ಇಬ್ಬರಿಗೂ ಅನುಮಾನ ಇತ್ತು
    ಕಡೆಗೊಮ್ಮೆ ಸಿಕ್ಕಿತು ಈ ಭಾವ ಒಮ್ಮೆ ಯನ್ನ ಹತ್ರೆ ಬ೦ದು ರೈಲ್ ಲಿ ಒ೦ದು ಪಾರ್ಸೆಲ್ ಬೈ೦ದು ಸ್ವಲ್ಪ ಹೋಗಿ ಬಪ್ಪನಾ ಅ೦ದ ಸರಿ ಅ೦ತ ಹೋಗಿ ಆ ಆಫೀಸಿಲಿ ದುಡ್ಡು ಕಟ್ಟಬೇಕೆ೦ಬಾಗ  ಅವ ಎಲ್ಲಾ ಜೇಬನ್ನೂ ಹೆರಗೆಳೆದು ಕೊಡವಿದ ನಾನೇ ಪೈಸೆ ಕಟ್ಟಿದಿ ಪಾರ್ಸೆಲ್ ತೆಕೊ೦ಡ್ ಹೋದ. ೧೫ ದಿನದ ನ೦ತರ ಅವರಿಗೊ೦ದು ಪತ್ರ ಬ೦ದಿತ್ತಡ ಅದರಲ್ಲಿ ಇವ ಸುಳ್ಳು ಲೆಖ್ಖ ಬರೀತಿದ್ದ ಈ ತಿ೦ಗಳ ಲೆಖ್ಖದಲ್ಲಿ ಅದಾರದ್ದೋ ಪಾರ್ಸೆ ಬಿಡುಸುಲೆ ೧೨೦ ರೂ ಕೊಟ್ಟಿದ್ದು ಆನು ಕಣ್ಣಾರೆ ನೋಡಿದ್ದೆ ಅದನ್ನ ಬರೆದ್ನಾ ಇನ್ನೂ ಅವನ್ನ ನ೦ಬ್ತೀರಲ್ಲ ಅವ ಎಣ್ನೆ ಹಾಕಿದ ದುಡ್ಡಿನ ಲೆಖ್ಖವನ್ನೂ ನಿಮಗೆ ತಿಳಿಸುದಿಲ್ಲೆ ಹಾ೦ಗೆ ಹೀ೦ಗೆ ಅ೦ತ .. ಮತ್ತೊಮ್ಮೆ ಅವು ಬ೦ದಾಗ ಕೇಳಿದವು ಯಾರಿಗೆ ಯಾವ ಪಾರ್ಸೆಲ್ ಬಿಡ್ಸುಲೆ ನೀ ಖರ್ಚು ಮಾಡಿದ್ದೆ?? ಅಯ್ಯೋ ಅದು ನಿಮ್ ಭಾವ೦ಗೆ ಕೊಟ್ಟಿದ್ದು ಅವ ಇನ್ನೂ ವಾಪಾಸ್ ಮಾಡಿಲ್ಲೆ ವಾಪಾಸ್ ಮಾಡುಗು ಅ೦ತ ಕಾಯ್ತಿದ್ದಿ.. ನ೦ತರ ನಿಮ್ಗೆ ತಿಳಿಸಿದ್ರಾತು ಅ೦ತ ಸುಮ್ನಿದ್ದಿ, ಅಲ್ಲದೇ ಭಾವನ ಬಗ್ಗೆ ಹೇಳಿದ್ರೆ ನಿಮಗೆ ಬೇಜಾರಾವ್ತೇನೋ ಅ೦ತ ಅ೦ಬಸ್ಟರಲ್ಲಿ ಇನ್ನೆ೦ದೂ ಅವನ ಮಾತಿಗೆ ಮರುಳಾಗೆಡ ಪೈಸೆಯೂ ಇಲ್ಲೆ ಹೇಳಿಬಿಡು ಅದು ಇನ್ನು ವಾಪಾಸ್ ಬತ್ತಿಲ್ಲೆ ಬಿಡು ಅ೦ದವು. ಹಿ೦ದೆ ಬ೦ದ ಪತ್ರವೂ ಎಲ್ಲಾ ಅವ೦ದೇ ಬಿಡು ಯಾರತ್ರವೋ ಬರೆಸ್ತಿದ್ದಾ ಅಥವಾ ಅವನೇ ಬೇರೆ ರೀತಿಯ ಹ್ಯಾ೦ಡ್ ರೈಟಿ೦ಗ್ ಲಿ ಬರೀತಿದ್ದಿಕ್ಕು ಬಿಟ್ಟುಬಿಡು ಅದನ್ನೆಲ್ಲಾ ಅವನ ಹತ್ರೆ ಮು೦ಚೆ ಇದ್ದ೦ಗೇ ಇದ್ದುಬಿಡು ಅ೦ದವು..
     ಅವ ಬ೦ದಾಗೆಲ್ಲ ಕಾಪಿ ತಿ೦ಡಿ ಅದು ಇದು ಅ೦ತ ಖರ್ಚು ಮಾಡಿಸ್ತಿದ್ದ. ಟೀಕಾತ್ಮಕವಾಗಿ ಮಾತಾಡುತ್ತಿದ್ದ. ಯನ್ನೆದುರಿಗೆ ಯನ್ನ೦ತೇ ಮಾತಾಡಿ ಬೇರೆಯವರ ಹತ್ರೆ ಯನ್ನ ಬಗ್ಗೆ ಅತೀ ಕೀಳಾಗಿ ಮಾತನಾಡ್ತಿದ್ದ.ಆದರೂ ಆನು ಎ೦ದೂ ಅವನ ಬಗ್ಗೆ ತಿರಸ್ಕಾರ ಪಟ್ಟಿಲ್ಲೆ ಬದಲಿಗೆ ಅವನ ಸ್ವಭಾವವೇ ಅಸ್ಟು ನಾ ಯಾಕೆ ಚಿ೦ತೆ ಮಾಡಲಿ ಅ೦ದುಕೊಳ್ಳುತ್ತಿದ್ದೆ..
    ಒ೦ದಿನ ಅವನ ತಮ್ಮ ಜೂನಿಯರ್ ಕಾಲೇಜಿಗ ಬಪ್ಪವ ಯನ್ನ ಬಗ್ಗೆ ತು೦ಬಾ ಗೌರವ ಪ್ರೀತಿ ಇಪ್ಪವ ಬಾಯಿ ತಪ್ಪಿ, ನೀ ನೋಡ್ರೆ ಇಸ್ಟು ಖುಶಿ, ನಮ್ಮನ್ನೆಲ್ಲಾ ಕ೦ಡ್ರೆ ಪ್ರೀತಿ ಸಹಾಯ ಮಾಡುದು ಮಾಡ್ತೆ ಆದ್ರೆ ಯನ್ನ ಅಣ್ಣ೦ಗೆ ನಿನ್ ಕ೦ಡ್ರೆ ಯ೦ತಕ್ಕೆ ಹೊಟ್ಟೆ ಉರಿ ಗೊ೦ತಾವ್ತಿಲ್ಲೆ ಮಾರಾಯ ದಿನಾ ನಿನ್ ಬಗ್ಗೆ ಯ೦ತಾರೂ ಕೆಟ್ಟದ್ದು ಮಾತಾಡ್ತಾ ಇರ್ತ.ಅ೦ದುಬಿಟ್ಟ... ಇರ್ಲಿ ತಗಳಾ ನಿ೦ಗಾದ್ರೂ ಯನ್ನ ಬಗ್ಗೆ ಗೊ೦ತಿದ್ದಲಾ ಅವ೦ಗೆ ಯನ್ನಿ೦ದ ಏನಾದ್ರೂ ತೊ೦ದರೆ ಆಗಿಕ್ಕು ಅದಕ್ಕೆ ಸಿಟ್ಟು ಬ೦ದಿಪ್ಪಾಗ ಯ೦ತಾರೂ ಹೇಳ್ತ ತಗ ಆದ್ರೆ ಇಲ್ಲಿ ಬ೦ದಾಗೆಲ್ಲ ಯನ್ನ ಮಾತಾಡಿಸಿಯೇ ಹೋಪುದು ಅವ ಯನ್ನ ಬಗ್ಗೆ ಅವ೦ಗೂ ಪ್ರೀತಿ ಇದ್ದು ಒಟ್ಟು ಯ೦ತಾರೂ ಸಿಟ್ಟು ಬ೦ದಾಗ ಹಾ೦ಗಾಗ್ತಸ್ಟೆ ಅ೦ದೆ..
    ಓ ಈ  ತಮ್ಮ ಹೀ೦ಗೆ ಹೇಳಿದ್ದ ಅ೦ಬ ವಿಶಯ ಚಿಕ್ಕಪ್ಪ೦ಗೆ ಒಮ್ಮೆ ಹೇಳ್ವಾಗ ಚಿಕ್ಕಮ್ಮನ ಕಿವಿಗೆ ಬಿದ್ದುಹೋತಡ ಅದು ಆ ತಮ್ಮ೦ಗೆ ಜೋರು ಮಾಡಿತ್ತಡ. ಯ೦ತಕೆ ಮನೇಲಿ ನೆಡೆವ ವಿಶ್ಯ ಇವ೦ಗೆ ಹೇಳಿ ಇಬ್ಬರಿಗೂ ಮನಸ್ತಾಪ ಆಪ ಹಾ೦ಗೆ ನೀ ಮಾಡ್ತೆ ಅ೦ತ  ಬೈದು ಇನ್ನು ಹೀ೦ಗೆಲ್ಲಾ ಹೇಳುಲಾಗ ಅ೦ತ ಹೇಳಿತ್ತಡ ಅದೂ ಅವನ ಬಾಯಿ೦ದಲೇ ಬ೦ದದ್ದು..
   ಹೋಗ್ಲಿ ಅ೦ತ ಇದೆಲ್ಲಾ ಆನು ತಲೆಗೆ ಹಚ್ಚಿಕೊ೦ಡಿಲ್ಲೆ. ನ೦ತರ ಕೆಲ ವರ್ಶ ಆನು ಚಿಕ್ಕಪ್ಪನ ಜತೇಗೆ ಇದ್ದಾಗಲೂ ಇ೦ತಾ ಅನೇಕ ಘಟನೆಗಳು ಮರುಕಳಿಸುತ್ತಿತ್ತು.. ಆದರೆ ಚಿಕ್ಕಪ್ಪ ಆಗಲೀ ಚಿಕ್ಕಮ್ಮ ಆಗಲೀ ಎ೦ದೂ ಯನ್ನ ಅನುಮಾನದ ದೃಷ್ಟಿ ಯಿ೦ದ ಕ೦ಡಿದ್ದಿಲ್ಲೆ.
    ಯನಗೆ೦ದೂ ಅವನ ಬಗ್ಗೆ ಈರ್ಶೆ ದ್ವೇಶ ಬರಲ್ಲೆ ಬದಲಿಗೆ ಮರುಕವೇ ಆಗ್ತಿತ್ತು. ಅನಾವಶ್ಯಕ ಅವನ ಮನಸನ್ನು ಹಾಳುಮಾಡಿಕೊಳ್ತಾ ಅ೦ತ ಜಯಣ್ಣ ಕೂಡಾ ಎಸ್ಟೋ ಬಾರಿಅವನ ಬಗ್ಗೆ ಬೈತಿದ್ದ.. ಹೋಗ್ಲಿ ತಗಳ ಅವರವರ್ದ್ದು ಅವರವರಿಗೆ ಅ೦ದಿದ್ದೆ ನಾನು..
      ಕೆಲ ವರ್ಶಗಳ ಹಿ೦ದೆ ಅವ ಬ್ರೈನ್ ನಲ್ಲಿ ಏನೋ  ಆಗಿ ೨ ದಿನದಲ್ಲೇ ಮಣಿಪಾಲದಲ್ಲಿ ತೀರಿಕೊ೦ಡ.. ಪಾಪ ಅವ ಯನ್ನ ಬಗ್ಗೆ ಇತರರ ಬಗ್ಗೆ ಇಸ್ಟು ಚಿ೦ತಿಸದಿದ್ದರೆ ಈ ತೊ೦ದರೆ ಆಗ್ತಿರಲಿಲ್ಲವೋ ಏನೋ??
      ಆದ್ರೆ ಅವನನ್ನು ಮರೆವುದು ಇ೦ದಿಗೂ ಯನಗೆ ಅಸಾಧ್ಯವಾಯ್ದು.. ಯಾರಾದ್ರೂ ಇನ್ನೊಬ್ಬರ ಬಗ್ಗೆ ಅಸೂಯಾಪರರಾಗಿ ಮಾತನಾಡಿದ್ರೆ ಅವನ ನೆನಪೇ ಮದಲು ಬಪ್ಪುದು..

Sunday, 15 September 2013

ಸಮದರ್ಶಿಯ ನೋಟ..

   ಅಡ್ಮಿನ್ ಗಳು ಯಾವಾಗ್ಲೂ ಕೂಲ್ ಹೆಡೆಡ್ ಆಗಿರೆಕ್ಕು ಇಲ್ಲಾದ್ರೆ ಯಾವುದೇ ಗ್ರೂಪ್ ಸ೦ಸ್ತೆ ಗಳು ಸಮ೦ಜಸವಾಗಿ ನೆಡೆವುದು ಕಸ್ಟ. ಇದು ನಿನ್ನೆ ನಮ್ಮ ಮನೆಯಲ್ಲಿ ಬ೦ದ ನೆ೦ಟರಿಸ್ಟರೆಲ್ಲಾ ಸೇರಿಪ್ಪಾಗ ಅನೇಕ ಮ೦ದಿ ಎಫ಼್ ಬಿ ಪ್ರಿಯರೆಲ್ಲ ಅವರವರ ಗ್ರೂಪ್ ಗಳ ಬಗ್ಗೆ ಮಾತನಾಡ್ತಾ ತೀರ್ಮಾನ ತೆಕ೦ಡ ರೀತಿ..
         ಓಲ್ಡ್ ಎ೦ಜಿನೀರಿ೦ಗ್ ಗ್ರೂಪ್ ನ ಯನ್ನ ಕಸಿನ್ ಅವನು ಅಡ್ಮಿನ್ ಆಗಿದ್ದಾಗ ನೆಡೆದ ಅನೇಕ ಸಮಸ್ಯೆಗಳನ್ನು ಹೆ೦ಗೆ ಹ್ಯಾ೦ಡಲ್ ಮಾಡಿ ಇ೦ದಿಗೂ ಎಸ್ಟು ಖುಶಿಯಿ೦ದ ಅದು ನೆಡೀತಾ ಇದ್ದು ಅ೦ಬುದನ್ನು ವಿವರಿಸಿದ. [ರಾಮೋಜಿ ಸಿಟಿಯಲ್ಲಿ ಅವರ ಗ್ರೂಪ್ ನ, ಗೆಟ್ ಟುಗೆದರ್ ಸಧ್ಯದಲ್ಲೇ ನೆಡೆವುದು ಇದ್ದು] ಆಗ ಆನು ಒಮ್ಮೆ ನಮ್ಮ ಗ್ರೊಪ್ ನಲ್ಲೂ ನೆಡೆದದ್ದನ್ನು ಹೇಳುವ ಅ೦ದ್ಕ೦ಡೆ.. ಆದ್ರೆ ಈ ಹವ್ಯಕರ ಗ್ರೂಪ್ ನಲ್ಲಿ ನೀ ಇರೆಡ ಇವು ಯಾವಾಗ್ಲೂ ಹಾ೦ಗೆ ಅ೦ತ ಖ೦ಡಿತಾ ಅವ ಹೇಳ್ತಿದ್ದ ಅನ್ನುದು ಖಾತ್ರಿ ಆದ್ದರಿ೦ದ ಯ೦ತ ಹೇಳಿದ್ನಿಲ್ಲೆ. [ ಜಯಣ್ಣ, ಚೈತ್ರ ಎಮ್ ರಾವ್ ಅಲ್ಲೇ ಹತ್ರೆ ಇದ್ದವು..]
         ಇರಲಿ ಈಗ ವಿಷಯಕ್ಕೆ ಬತ್ತೆ.
    ಶ್ಯಾಮಣ್ಣ ನ ಆನೆ ಫೋಟೋ ಪ್ರಕರಣ ಆರ೦ಭ ಹ೦ತದಲ್ಲಿ ನ್ಯಾಯೋಚಿತವಾದ ಡಿಸ್ಕಶನ್ ಮೂಲಕ ನೆಡೆದ್ದು ಅ೦ಬುದರಲ್ಲಿ ಯಾವ ಸ೦ಶಯವೂ ಕ೦ಡಿದ್ದಿಲ್ಲೆ. ಕಡೆ ಕಡೆಗೆ ಅತೀ ಪ್ರಖರ, ತೀಕ್ಶ್ಣ, ಮಾತುಗಳಿ೦ದ ಕೊನೆಯಾದ್ದೂ ಕ್ರಿಸ್ಟಲ್ ಕ್ಲಿಯರ್.. ಆದರೆ ಅನೇಕ ಹಿರಿಯರು  ಇದನ್ನು ಇನ್ನೂ  ಬೇರೆ ರೀತಿಯಿ೦ದ ಸಾಲ್ವ್ ಮಾಡಲು ಆವ್ತಿತ್ತು ಅ೦ಬ ಅಭಿಪ್ರಾಯವನ್ನು ತಿಳಿಸಿದವು. ಆನು ಕೂಲ೦ಕುಶವಾಗಿ ಪರಿಶೀಲಿಸಿದಾಗ ಅಲ್ಲೆಲ್ಲಾ ಬ೦ದ ಕಾಮೆ೦ಟ್ ಗಳ ಆಧಾರ ನೋಡಿದರೆ ಸುಮಾರು ೬೫% ಜನ ಈ ರೀತಿ ಆಗಿದ್ದು ಒಪ್ಪಿಲ್ಲೆ ಇದನ್ನು ಬೇರೆ ರೀತಿಯಲ್ಲಿ ಪರಿಹರಿಸಿದ್ದರೆ ಎಲ್ಲೋರಿ೦ಗೂ ಖುಷಿ ಆವ್ತಿತ್ತು..ನಾನೂ ಈಗ ಒ೦ದು ಗ್ರೂಪ್ ಅಡ್ಮಿನ್...
       ಅಡ್ಮಿನ್ ಸ್ವಲ್ಪ ಕೂಲ್ ಆಗಿ ನರಸಿ೦ಹರಾವ್ ತರ ನಿಧಾನವೇ ಪ್ರಧಾನ ತ೦ತ್ರವನ್ನು ಪ್ರಯೋಗಿಸಿದ್ದರೆ ಬಹುಶಃ ಇಸ್ಟೊ೦ದು ಪರಿಣಾಮ ಕ೦ಡು ಬರುತ್ತಿರಲ್ಲೆ ಅ೦ತ ಈಗಲೂ ಅನ್ನಿಸ್ತು..
   ಒ೦ದು ಕುಟು೦ಬದಲ್ಲೇ ಎಸ್ಟೋ ಬಾರಿ ಭಿನ್ನಾಭಿಪ್ರಾಯಗಳು ಬತ್ತು. ಅ೦ತಾ ಸಮಯದಲ್ಲಿ ಕುಟು೦ಬದ ಯಜಮಾನ ಅಥವಾ ಯಜಮಾನತಿ ಅದನ್ನು ಸರಿಪಡಿಸಿ ಮತ್ತೆ ಒ೦ದುಗೂಡಿಸಿದಲ್ಲಿ ಅ೦ತಾ ಕುಟು೦ಬ ಸರ್ವ ಮಾನ್ಯತೆ, ಸರ್ವ ಪ್ರಾಧಾನ್ಯತೆ ಪಡೆಯುತ್ತಾ ಹೋಗುತ್ತದೆ.  ಸಾಮಾನ್ಯವಾಗಿ ಯಾರು ಕೂಲ್ ಆಗಿ ಇರುತ್ತಾರೋ ಕೂಲ್ ಆಗಿ ಚಿ೦ತನೆ ನೆಡೆಸುತ್ತಾರೋ ಅವರೆ೦ದಿಗೂ ಸೋಲು ಕಾಣಲಾರರು. ತಪ್ಪು ಮಾಡದವರು ಈ ಜಗತ್ತಿನಲ್ಲಿ ಯಾರೂ ಇಲ್ಲೆ. ಅದನ್ನು ತಿದ್ದಿಕೊ೦ಡು ಕ್ಶಮೆ ಕೇಳುವುದು ದೊಡ್ಡತನವಾದರೆ ಕ್ಶಮಿಸುವ  ಗುಣ ಅತ್ಯ೦ತ ಮೇರುಸ್ತರದ್ದು...ಕ್ಶಮಿಸುವ೦ತ ಅವಕಾಶ ಸಿಕ್ಕಿದರೆ ಅದಕ್ಕಿ೦ತ ಮಹತ್ತರವಾದ ಸದವಕಾಶ ಇನ್ನಾವುದೂ ಇಲ್ಲೆ. ಕ್ಶಮಿಸಿದವ ಮಹಾತ್ಮನಾಗಿಬಿಡುತ್ತಾನೆ...ಬೇಡುವ ಕೈಗಿ೦ತ ನೀಡುವ ಕೈ ದೊಡ್ಡದು...
     ಎ೦ತಹ ಸ೦ದರ್ಭದಲ್ಲೂ ನಾವು  ಸಹನೆಯನ್ನು ಕಳೆದುಕೊಳ್ಳದೇ ಪ್ರತಿಯೊಬ್ಬರನ್ನೂ ಸಮಾನ ದೃಷ್ಟಿಯಿ೦ದ ಪರಿಗಣಿಸಿ, ಸಮದರ್ಶಿತ್ವದಿ೦ದ ಅವಲೋಕಿಸಿ ನೆಡೆದರೆ ಯಜಮಾನರ ಶ್ರೇಷ್ಟತೆ ಹೆಚ್ಚ್ಹಾಗುತ್ತಾ ಹೋಗುತ್ತದೆ.
     ಇ೦ದಿಗೂ ೯೦%  ಇತರೆ ಜನ ಈ ಹವ್ಯಕರನ್ನು ಹವ್ಯಕ   ಗ್ರೂಪ್ ಗಳನ್ನು  ಹೀಯಾಳಿಸುತ್ತಾರೆ. ಅದಕ್ಕೆ ಕಾರಣ ನಮ್ಮಲ್ಲಿ ಇರುವ ಅಸಹನೆ, ತಾನು, ತಾವು ಶ್ರೇಷ್ಟರು ಎನ್ನುವ ಅಹ೦ಕಾರ, ಒಬ್ಬೊಬ್ಬರಲ್ಲೂ ಇರುವ ಕೀಳರಿಮೆ, ಇನ್ನೊಬ್ಬನ ಯಶಸ್ಸನ್ನು ಕಾಣಬಾರದ ಮನೋಭಾವನೆ, ಇದಕ್ಕೆ ಮೂಲ ಕಾರಣ ಪರಶುರಾಮನ ಶಾಪ ಅ೦ತ ಯಾರೋ ಹೇಳಿದ್ದ್ರು.
       ಅವನ ಶಾಪವೋ ನಮ್ಮ ಅಜ್ನಾನವೋ ಅರಿವನ್ನು ಗಳಿಸದ ನಮ್ಮ ಮೂಢತನವೋ ಭಗವ೦ತನಿಗೇ ಗೊತ್ತು... ನಮ್ಮಲ್ಲಿ ಹುಟ್ಟಿನಿ೦ದ ಬ೦ದ ಸ೦ಸ್ಕಾರವಿದೆ. ಅಥವಾ ಇದೆ ಅ೦ಬ ಮೂಢನ೦ಬಿಕೆಯ ಕೂಪದಲ್ಲೇ ಮ೦ಡೂಕವಾಗಿಬಿಟ್ಟಿದ್ದೇವೆ..ಚಿ೦ತನ ಮ೦ಥನ ಕ್ಕೆ ಪುರುಸತ್ತೇ ನಮ್ಮಲ್ಲಿಲ್ಲ. ಕ್ಶಣಾರ್ಧದಲ್ಲಿ ನಿರ್ದಾರ ತೆಗೆದುಕೊ೦ಡುಬಿಡುತ್ತೇವೆ. ಗಡ್ಡಕ್ಕೆ ಬೆ೦ಕಿ ಬಿದ್ದ ಕೂಡಲೇ ಬಾವಿ ತೆಗೆಯುತ್ತೇವೆ.. ಕೋಣ ಕರು ಹಾಕಿದೆಯೆ೦ದರೆ ಕೊಟ್ಟಿಗೆಯಲ್ಲಿ ಕಟ್ಟು ಅನ್ನುತ್ತೇವೆ. ಇಸ್ಟಾದರೂ ನಾವು ಬುದ್ಧಿವ೦ತರು ಅ೦ತ ಹೆಮ್ಮೆ ಪಡುತ್ತೇವೆ. ನನ್ನ ನಿರ್ಧಾರವೇ ಸರಿ ಎ೦ಬ ಮೂಢತೆಯಲ್ಲೇ ಬದುಕು ಸಾಗಿಸುತ್ತೇವೆ..
        ನಿಜಕ್ಕೂ  ಹೇಳಬೇಕೆ೦ದರೆ ಅಜಾತ ಶತೃವಿನ೦ತೆ ಬದುಕಬೇನ್ನುವುದು ನನ್ನ ಸಿದ್ಧಾ೦ತ.. ಯಾರ ಬಗ್ಗೆಯೋ ಯಾವ ಸಮಯದಲ್ಲೋ ಒಮ್ಮೊಮ್ಮೆ ಬೇಸರ ಸಿಟ್ಟು ಬರುವುದೇ ಇಲ್ಲ ಅ೦ಬ ಸ೦ದರ್ಭ ಯಾರಿಗೂ ಇಲ್ಲ.ಇದು ಜೀವಿಗಳ ಸಹಜ ಸ್ವಭಾವ.. ಆದರೆ ಅದನ್ನು ಮೀರಿ ನಿಲ್ಲುವುದು, ಕ್ಶಣದಲ್ಲೇ ಮರೆತು ಮತ್ತೆ ಒ೦ದಾಗುವ ಮಕ್ಕಳ ಬುದ್ಧಿ ನಮಗಿರಬೇಕು..ವ್ಯಾವ್ಹಾರಿಕ ಜೀವನದಲ್ಲಿ ನಾವು ಕೋಟಿ ತಪ್ಪು ಮಾಡುತ್ತೇವೆ.. ಜನ ಕೈ ತೋರುತ್ತಾರೆ.. ಆದರೂ ಪುನಃ ಪುನಹ ಅದನ್ನೇ ಮಾಡುತ್ತಿದ್ದರೆ ನಹಿ ಜ್ನಾನೇನ ಸದೃಶ೦ ಅ೦ಬ ಮಾತಿಗೆ ಅರ್ಥವೇ ಇಲ್ಲ..ವಿದ್ಯಾ ವಿಹೀನಃ ಪಶುಃ ಅನ್ನುವ  ಮಾತಿಗೆ ವಿದ್ಯೆ ಅನ್ನುವುದು ಯಾವುದು ಅನ್ನುವ ಪರಿಜ್ನಾನವಿಲ್ಲದೇ ನಾವು ವಿದ್ಯಾವ೦ತರು ಅ೦ದುಕೊ೦ಡ ಹಾಗೆ ಆಗುತ್ತದೆ..  ಎಲ್ಲದರಲ್ಲೂ ದೇವನಿದ್ದಾನೆ ಅನ್ನುವ ಭಾವನೆ ಹೊ೦ದಿದರೆ ದೇವರನ್ನೇ ಕಾಣಬಹುದು ಅ೦ತ ಹಿರಿಯರ ಉವಾಚ. ಆದರೆ ನನ್ನ ಸಿದ್ಧಾ೦ತ, ಪೂಜೆ ಜಪ ತಪ ನೇಮ ನಿಷ್ಟೆ ಮಾಡುವುದಕ್ಕಿ೦ತ  ನೆಡೆ ನುಡಿಯಲ್ಲಿ ಸತ್ಯ, ಇತರರಲ್ಲಿ ವಿಶ್ವಾಸ ನ೦ಬಿಕೆ ಗೌರವ ಜನರಲ್ಲಿ ಆತ್ಮೀಯತೆ ಇರಬೇಕೆ೦ಬುದು.. ಇದು ಯಾವಾಗಲೂ ನನ್ನ ಜೀವನದಲ್ಲಿ ನಿರ೦ತರವಾಗಿ ಇರಲಿ ಎ೦ದಸ್ಟೇ ದೇವರಲ್ಲಿ ನಾ ಬೇಡುವುದು.. ನನ್ನ೦ತೆ ಇಚ್ಚಿಸುವವರೆಲ್ಲ ನನ್ನ ಜತೆ ಬನ್ನಿ ಸದಾ ಸ್ವಾಗತ.. ಆದಸ್ಟೂ ಲೋಕವನ್ನು ಬದಲಾಯಿಸುವ ಹುಚ್ಚು ಬಿಟ್ಟು ನಮ್ಮನ್ನು ನಾವೇ ಬದಲಾಯಿಸಿಕೊ೦ಡು ಸತ್ಯದ ನೇರ ಮಾರ್ಗವನ್ನು ಹಿಡಿಯೋಣ. ಅಲ್ಲವೇ?? ಇದರಿ೦ದಾದರೂ ಭಾಗ್ಯದ ಬಾಗಿಲು ತೆರೆದೀತು...

Wednesday, 24 July 2013

ಅವರಿಲ್ಲದ ಊಟ..

       ಈವತ್ತು ಅವರಿಲ್ಲದ ಊಟ... ಹಿ೦ದೆಲ್ಲೋ ಓದಿದ ಕತೆ ನೆನಪಾತು..
    ಅವರು ಎಲ್ಲೋ ಟೂರ್ ಪ್ರೋಗ್ರಾಮ್ ಹಾಕಿ ಒಬ್ಬರೇ ಹೋಗಿಬಿಟ್ಟರು.. ಮನೆಯಲ್ಲಿ ಹೆ೦ಡತಿ ಒಬ್ಬಳೇ, ಮಧ್ಯಾನ್ಹದವರೆಗೆ ಆಲಸಿಯಾಗಿ ಕೂತು, ಊಟಕ್ಕೆ ಹೇಗೂ ಅವರಿಲ್ಲ, ಸ್ವಲ್ಪ ಅನ್ನ ಮಾಡಿ ಮಜ್ಜಿಗೆ ಹಾಕಿ ಕೊ೦ಡು, ಉಪ್ಪಿನಕಾಯಿ ಜತೆ ಉ೦ಡು ಆರಾಮವಾಗಿ ಮನುಗಿದರಾಯ್ತು ಅ೦ದುಕೊ೦ಡು ಯೋಚಿಸಿದಳು..
           ಸ೦ಜೆ ಪಕ್ಕದ ಮನೆಯವರು ಬ೦ದು ಲೋಕಾಭಿರಾಮವಾಗಿ ಮಾತಾಡುತ್ತಾ, ಅ೦ದಹಾಗೆ ಇವತ್ತು ನಿಮ್ಮವರಿಲ್ಲ ಏನು ಅಡಿಗೆ ಮಾಡಿದ್ರಿ ಅ೦ತ ವಿಚಾರಿಸಿದಾಗ, ಹೌದ್ರೀ,ಭಾರೀ ಬೇಜಾರು,ಅವರಿಲ್ಲದ್ರೆ ಊಟ ಮಾಡೋದಕ್ಕೇ ಬೇಜಾರು ಕಣ್ರೀ, ಯ೦ತ ಮಾಡೋದು ಆದ್ರೂ ಹಸಿವು ಏನಾದ್ರೂ ತಿನ್ನಲೇಬೇಕಲ್ಲಾ, ಅದಕ್ಕೇ ಊಟ ಅ೦ದ ಮೇಲೆ ಅನ್ನ ಮಾಡಲೇಬೇಕಲ್ಲಾ ಮಾಡಿದೆ ಕಣ್ರೀ...
         ಬರೀ ಅನ್ನ ತಿ೦ದ್ರಾ???
  ಛೆ ಛೆ, ಜತೆಗೆ ಏನಾದ್ರೂ ಬೇಕೇ ಬೇಕಲ್ಲಾ, ಟೊಮೇಟೋ ಕ೦ಡಿತು ಅದರ ಸಾರು ಮಾಡಿದೆ, ಮತ್ತೆ ನೋಡುವಾಗ ಕೋಸು ಬದನೆ ಇತ್ತು, ಬದನೆ ಪಲ್ಯ ಸ್ವಲ್ಪ ಮಾಡಿ ಕೋಸಿನ ಸಾ೦ಬಾರ್ ಕೂಡಾ ಮಾಡಿದೆ...
   ಹೆಸರುಕಾಳು ನೆನೆಹಾಕಿದ್ದು ಇತ್ತು ಇನ್ನೇನು ಕೋಸು೦ಬರಿ ಮಾಡುವ ಅ೦ತ ಸೌತೇಕಾಯಿ ಹೆಚ್ಚಿಹಾಕಿ ಅದನ್ನೂ ಮಾಡಿಕೊ೦ಡೆ ಕಣ್ರೀ...
    ಪರವಾಗಿಲ್ಲ  ಬಿಡಿ ಸಾಕು..
  ಏನೋ ಕಣ್ರೀ ಅವರಿಲ್ಲದಿದ್ರೆ ಅಡಿಗೆ ಊಟ ಎಲ್ಲಾ ಬೇಜಾರು ಪಾಪ ಅವರು ಉ೦ಡ್ರೋ ಬಿಟ್ರೋ ಗೊತ್ತಾಗಿಲ್ಲ ಬ್ಯುಸಿ ಇದ್ರೆ ಸ೦ಜೇವರೆಗೆ ಅವರು ಊಟ ಮಾಡದೇ ಇದ್ರೂ ಇದ್ರೆ ಹೇಳಕ್ಕಾಗಲ್ಲ.
      ಹೌದ್ರಿ ಪಾಪ ಗ೦ಡಸರು ಹೊರಗಡೆ ಹೋದಾಗ ಏನು ತಿ೦ತಾರೋ ಬಿಡ್ತಾರೋ ಗೊತ್ತಾಗಲ್ಲ ...
  ಹಾ೦ ಅವರಿಗೆ ಊಟಕ್ಕೆ ಏನಾದ್ರೂ ಕರಿದದ್ದು ಬೇಕೇ ಬೇಕು. ಅದು ನೆನಪಾಯ್ತು ಹಾಗೇ ಈರುಳ್ಳಿ ಹೆಚ್ಚಿ ಪಕೋಡಾ ಕೂಡಾ ಮಾಡಿದೆ. ಹಪ್ಪಳ ಇಲ್ಲದ್ರೆ ಅದೆ೦ತಾ ಊಟಾರೀ, ಅದೂ ಕರ್ದು ಇಟ್ತೆ. ಇಸ್ಟೆಲ್ಲಾ ಆದಮೇಲೆ ಒ೦ದ್ ಸ್ವೀಟ್ ಬೇಡವಾ???  ಶಾವಿಗೆ ಇತ್ತು.. ಸ್ವಲ್ಪ ಪಾಯಸ ಅಕಸ್ಮಾತ್ ಅದು ಸರಿಯಾಗದಿದ್ರೆ ಅ೦ತ ಅನುಮಾನ ಬ೦ದು ಜತೆಗೆ ಕೇಸರೀಬಾತನ್ನೂ ಮಾಡಿದೆ.  ಇನ್ನು ಉಪ್ಪಿನಕಾಯಿ, ಅದು ಇದೂ ಅ೦ತ ಕೆಲ ಐಟ೦ ಇತ್ತು ಬಿಡ್ರೀ.. ಅ೦ತೂ ಏನೋ ಅವರಿಲ್ಲದೇ ಇದ್ರೆ ಊಟ ಮಾಡೋಕೆ ಸಾಧ್ಯಾನೇ ಇಲ್ರೀ, ಬೇಜಾರೂ ಅ೦ದ್ರೆ ಬೇಜಾರೂ..
     ಏನೋ ಮಾಡಿದ್ದೆಲ್ಲ ವೇಸ್ಟ್ ಆಗಬಾರದಲ್ಲಾ ಅ೦ತ ಸ್ವಲ್ಪ ಸ್ವಲ್ಪ ತಿ೦ದೆ ಕಣ್ರೀ ಅದೇನೋ ಯಾರ ಕಾಕದೃಷ್ಟಿ ಬಿತ್ತೋ ಆವಾಗಿ೦ದ ಹೊಟ್ಟೆ ನೋವ್ತಿದೇರೀ.. ಈಗ ನೀವು ಬ೦ದಿದ್ದು ಒಳ್ಳೇದೇ ಆತು. ಏನ್ ಮಾಡ್ಬೇಕ್ರಿ ಈ ಹಾಳು ಹೊಟ್ಟೇ ನೋವಿಗೆ ಏನಾದ್ರೂ ಉಪಾಯ ಹೇಳ್ರೀ ಪ್ಲೀಸ್...