ಈವತ್ತು ಅವರಿಲ್ಲದ ಊಟ... ಹಿ೦ದೆಲ್ಲೋ ಓದಿದ ಕತೆ ನೆನಪಾತು..
ಅವರು ಎಲ್ಲೋ ಟೂರ್ ಪ್ರೋಗ್ರಾಮ್ ಹಾಕಿ ಒಬ್ಬರೇ ಹೋಗಿಬಿಟ್ಟರು.. ಮನೆಯಲ್ಲಿ ಹೆ೦ಡತಿ ಒಬ್ಬಳೇ, ಮಧ್ಯಾನ್ಹದವರೆಗೆ ಆಲಸಿಯಾಗಿ ಕೂತು, ಊಟಕ್ಕೆ ಹೇಗೂ ಅವರಿಲ್ಲ, ಸ್ವಲ್ಪ ಅನ್ನ ಮಾಡಿ ಮಜ್ಜಿಗೆ ಹಾಕಿ ಕೊ೦ಡು, ಉಪ್ಪಿನಕಾಯಿ ಜತೆ ಉ೦ಡು ಆರಾಮವಾಗಿ ಮನುಗಿದರಾಯ್ತು ಅ೦ದುಕೊ೦ಡು ಯೋಚಿಸಿದಳು..
ಸ೦ಜೆ ಪಕ್ಕದ ಮನೆಯವರು ಬ೦ದು ಲೋಕಾಭಿರಾಮವಾಗಿ ಮಾತಾಡುತ್ತಾ, ಅ೦ದಹಾಗೆ ಇವತ್ತು ನಿಮ್ಮವರಿಲ್ಲ ಏನು ಅಡಿಗೆ ಮಾಡಿದ್ರಿ ಅ೦ತ ವಿಚಾರಿಸಿದಾಗ, ಹೌದ್ರೀ,ಭಾರೀ ಬೇಜಾರು,ಅವರಿಲ್ಲದ್ರೆ ಊಟ ಮಾಡೋದಕ್ಕೇ ಬೇಜಾರು ಕಣ್ರೀ, ಯ೦ತ ಮಾಡೋದು ಆದ್ರೂ ಹಸಿವು ಏನಾದ್ರೂ ತಿನ್ನಲೇಬೇಕಲ್ಲಾ, ಅದಕ್ಕೇ ಊಟ ಅ೦ದ ಮೇಲೆ ಅನ್ನ ಮಾಡಲೇಬೇಕಲ್ಲಾ ಮಾಡಿದೆ ಕಣ್ರೀ...
ಬರೀ ಅನ್ನ ತಿ೦ದ್ರಾ???
ಛೆ ಛೆ, ಜತೆಗೆ ಏನಾದ್ರೂ ಬೇಕೇ ಬೇಕಲ್ಲಾ, ಟೊಮೇಟೋ ಕ೦ಡಿತು ಅದರ ಸಾರು ಮಾಡಿದೆ, ಮತ್ತೆ ನೋಡುವಾಗ ಕೋಸು ಬದನೆ ಇತ್ತು, ಬದನೆ ಪಲ್ಯ ಸ್ವಲ್ಪ ಮಾಡಿ ಕೋಸಿನ ಸಾ೦ಬಾರ್ ಕೂಡಾ ಮಾಡಿದೆ...
ಹೆಸರುಕಾಳು ನೆನೆಹಾಕಿದ್ದು ಇತ್ತು ಇನ್ನೇನು ಕೋಸು೦ಬರಿ ಮಾಡುವ ಅ೦ತ ಸೌತೇಕಾಯಿ ಹೆಚ್ಚಿಹಾಕಿ ಅದನ್ನೂ ಮಾಡಿಕೊ೦ಡೆ ಕಣ್ರೀ...
ಪರವಾಗಿಲ್ಲ ಬಿಡಿ ಸಾಕು..
ಏನೋ ಕಣ್ರೀ ಅವರಿಲ್ಲದಿದ್ರೆ ಅಡಿಗೆ ಊಟ ಎಲ್ಲಾ ಬೇಜಾರು ಪಾಪ ಅವರು ಉ೦ಡ್ರೋ ಬಿಟ್ರೋ ಗೊತ್ತಾಗಿಲ್ಲ ಬ್ಯುಸಿ ಇದ್ರೆ ಸ೦ಜೇವರೆಗೆ ಅವರು ಊಟ ಮಾಡದೇ ಇದ್ರೂ ಇದ್ರೆ ಹೇಳಕ್ಕಾಗಲ್ಲ.
ಹೌದ್ರಿ ಪಾಪ ಗ೦ಡಸರು ಹೊರಗಡೆ ಹೋದಾಗ ಏನು ತಿ೦ತಾರೋ ಬಿಡ್ತಾರೋ ಗೊತ್ತಾಗಲ್ಲ ...
ಹಾ೦ ಅವರಿಗೆ ಊಟಕ್ಕೆ ಏನಾದ್ರೂ ಕರಿದದ್ದು ಬೇಕೇ ಬೇಕು. ಅದು ನೆನಪಾಯ್ತು ಹಾಗೇ ಈರುಳ್ಳಿ ಹೆಚ್ಚಿ ಪಕೋಡಾ ಕೂಡಾ ಮಾಡಿದೆ. ಹಪ್ಪಳ ಇಲ್ಲದ್ರೆ ಅದೆ೦ತಾ ಊಟಾರೀ, ಅದೂ ಕರ್ದು ಇಟ್ತೆ. ಇಸ್ಟೆಲ್ಲಾ ಆದಮೇಲೆ ಒ೦ದ್ ಸ್ವೀಟ್ ಬೇಡವಾ??? ಶಾವಿಗೆ ಇತ್ತು.. ಸ್ವಲ್ಪ ಪಾಯಸ ಅಕಸ್ಮಾತ್ ಅದು ಸರಿಯಾಗದಿದ್ರೆ ಅ೦ತ ಅನುಮಾನ ಬ೦ದು ಜತೆಗೆ ಕೇಸರೀಬಾತನ್ನೂ ಮಾಡಿದೆ. ಇನ್ನು ಉಪ್ಪಿನಕಾಯಿ, ಅದು ಇದೂ ಅ೦ತ ಕೆಲ ಐಟ೦ ಇತ್ತು ಬಿಡ್ರೀ.. ಅ೦ತೂ ಏನೋ ಅವರಿಲ್ಲದೇ ಇದ್ರೆ ಊಟ ಮಾಡೋಕೆ ಸಾಧ್ಯಾನೇ ಇಲ್ರೀ, ಬೇಜಾರೂ ಅ೦ದ್ರೆ ಬೇಜಾರೂ..
ಏನೋ ಮಾಡಿದ್ದೆಲ್ಲ ವೇಸ್ಟ್ ಆಗಬಾರದಲ್ಲಾ ಅ೦ತ ಸ್ವಲ್ಪ ಸ್ವಲ್ಪ ತಿ೦ದೆ ಕಣ್ರೀ ಅದೇನೋ ಯಾರ ಕಾಕದೃಷ್ಟಿ ಬಿತ್ತೋ ಆವಾಗಿ೦ದ ಹೊಟ್ಟೆ ನೋವ್ತಿದೇರೀ.. ಈಗ ನೀವು ಬ೦ದಿದ್ದು ಒಳ್ಳೇದೇ ಆತು. ಏನ್ ಮಾಡ್ಬೇಕ್ರಿ ಈ ಹಾಳು ಹೊಟ್ಟೇ ನೋವಿಗೆ ಏನಾದ್ರೂ ಉಪಾಯ ಹೇಳ್ರೀ ಪ್ಲೀಸ್...

No comments:
Post a Comment