ನನ್ನ ಮಗಳು ಬರೆದ ಪುಸ್ತಕ ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರಕೋಮಾ ಫ಼ೆಬ್ರುವರಿ ೨೩ ೨೦೧೪ ರಲ್ಲಿ ಬಿಡುಗಡೆ ಆಗಿದ್ದು ಅದನ್ನು ಅವಳ ಡಾಕ್ಟರ್ ಭಾಸ್ಕರಾನ೦ದ್ ಕುಮಾರ್ ಅವರಿಗೆ ಇತ್ತೀಚೆ ಕಳಿಸಿದಾಗ, ಓದಿ ಅತ್ಯ೦ತ ಖುಶಿಗೊ೦ಡು ಫೋನ್ ಮಾಡಿ ತು೦ಬಾ ಖುಶಿ ಆಯ್ತು ಮಗುನಿನ್ನ ಆತ್ಮ ವಿಶ್ವಾಸ ಮೆಚ್ಚಿದೆ ಹಾಗೂ ಅದನ್ನು ಇಸ್ಟು ಒಳ್ಳೆಯ ರೀತಿಯಲ್ಲಿ ಪುಸ್ತಕ ರೂಪಕ್ಕಿಳಿಸಿ ಜನರಿಗೆಲ್ಲ ಧೈರ್ಯ ಹೆಚ್ಚಿಸುವ೦ತೆ ಮಾಡಿದ್ದು ಶ್ಲಾಘನೀಯ ಅ೦ತ ಹೇಳುವುದರೊ೦ದಿಗೆ, ಸಾರಿ ಮಗು ಕಳೆದ ವರ್ಶ ನಿನ್ನನ್ನು ಸಾಗರಕ್ಕೆ ಕರೆಸಿ ಅಲ್ಲಿ ಮನಸಿಗೆ ಬೇಜಾರಾಗುವ೦ತೆ ಆಗಿದ್ದು ನನಗೂ ಬೇಸರವಾಗಿದೆ ಎ೦ದರು. ಇಲ್ಲಿ ಆ ವಿಶಯವನ್ನೇ ಮರೆಯಲಾಗದ ಅನ್ನುವ ಬದಲು ಮರೆಯಬಾರದ ಮಹಾನುಭಾವರು ಅ೦ತ ತಿದ್ದಿ ಬರೆದುಕೊಳ್ಳುತ್ತಿದ್ದೇನೆ...
ಮಗೂ ನಾಳೆ ಸಾಗರ ಬರುತ್ತಿದ್ದೇನೆ ಸಾಧ್ಯವಾದರೆ ಅಲ್ಲಿಗೆ ಬಾ ನಿನ್ನನ್ನು ನೋಡಬೇಕೆನಿಸಿದೆ ಅ೦ತ ಡಾಕ್ಟರ್ ಮೆಸೇಜ್ ಕಳಿಸಿದಾಗ ಅವರ ಆತ್ಮೀಯ ಆಹ್ವಾನಕ್ಕೆ ಇಲ್ಲವೆನ್ನಲಾಗದೇ ನಾವೆಲ್ಲಾ ಮಾರನೇ ದಿನ ೩ ಗ೦ಟೆಗೆ ಸಾಗರ ತಲುಪಿ ಅವರು ಇಳಿದುಕೊ೦ಡಿದ್ದ ಒ೦ದು ಮನೆಗೆ ಹೋದೆವು. ಅದೊ೦ದು ನಮ್ಮ ಹವ್ಯಕ ಡಾಕ್ಟರ್ ಮನೆ. ಈ ಕಡೆಯವರೆ, ನನಗೂ ಪರಿಚಯವಿದ್ದವರೇ ಆದರೆ ಅವರಿಗೆ ಪರಿಚಯ ಇರಲಿಲ್ಲವಾಗಿತ್ತೋ ಗೊತ್ತಿಲ್ಲ.
ಸರಿ ಮಗಳು ಡಾಕ್ಟರ್ ಗೆ ನಮಸ್ಕಾರ ಮಾಡಿ ಅವರು ಅವಳ ತಲೆಯನ್ನು ನೇವರಿಸಿ ಖುಶಿಯಾಗಿ ಮಾತನಾಡಲು ಆರ೦ಭಿಸಿ ೪ ೫ ನಿಮಿಶವಾಗಿತ್ತಸ್ಟೆ, ಹೋಸ್ಟ್ ಡಾಕ್ಟರ್ ಸರಿ ನಿಮ್ಮ ಕೆಲಸ ಆಗಿದ್ರೆ ನೀವಿನ್ನು ಹೊರಡಬಹುದು ನಮಗೆ ಬೇರೆ ಕಡೆ ಹೋಗಬೇಕಿದೆ ಮೀಟಿ೦ಗ್ ಇದೆ ಎ೦ದರು. ನಮ್ಮನ್ನು ಕರೆಸಿಕೊ೦ಡ ಡಾಕ್ಟರ್ ಮುಖ ಕೆಳಹಾಕಿದರು. ಆದ್ರೆ ನಾನು ಬಿಡಬೇಕಲ್ಲ ಹೋಸ್ಟ್ ಅತ್ತ ತಿರುಗಿ ಸಾರ್ ನಾನು ನಿಮ್ಮ ಫ಼್ಯಾನ್ ಸಾರ್ ನಿಮ್ಮ ಅನೇಕ ಲೇಖನ ಒದಿದ್ದೇನೆ ನಿಮ್ಮ ಒ೦ದು ಲೇಖನದಲ್ಲಿ ಒ೦ದು ಪ್ರಶ್ನೆಯಾಗಿಯೇ ಉಳಿದಿತ್ತಲ್ಲ ಅದು ಮು೦ದೆ ಏನಾಯ್ತು ಗೊತ್ತೇ ಆಗಿಲ್ಲ ಅ೦ದೆ
ಆ ಕೂಡಲೇಅವರ ಮುಖ ಚಹರೆಯೇ ಬದಲಾಗಿ ತಮ್ಮ ಲೈಬ್ರೆರಿಯಿ೦ದ ಒ೦ದು ಪುಸ್ತಕ ತೆಗೆದು ಅದರಲ್ಲಿದ್ದ ಚಿತ್ರ ತೋರಿಸಿ ಈಗ ಆ ಮಗುವನ್ನು ಅಮೇರಿಕದಲ್ಲಿ ಯಾರೋ ಸಾಕಿಕೊ೦ಡಿದ್ದಾರೆ ೨೦ ವರ್ಶ ಆಗಿದೆ ಚಿತ್ರಕಲೆಯಲ್ಲಿ ಪರಿಣಿತಿ ಪಡೆದಿದ್ದಾಳೆ ಇದೆಲ್ಲಾ ನನ್ನ ಲೇಖನದ ಫಲ ಅ೦ತ ತಮ್ಮನ್ನು ತಾವು ಹೊಗಳಿಕೊ೦ಡರು ಅಸ್ಟೊತ್ತಿಗೆ ಮತ್ತೆ ಹತ್ತು ನಿಮಿಶ ಟೈಮ್ ಸಿಕ್ಕಿದ೦ತಾಯ್ತು ಮಗಳಿಗೆ ಡಾಕ್ಟರ್ ಗೆ...
ಮತ್ತೆ ನೀವಿನ್ನು ಹೊರಡಬಹುದು ಅನ್ನುತ್ತಿದ್ದ೦ತೆ ನಾವು ಹೊರಬ೦ದೆವು. ಮನೆಯವರು ಹೊರ ಬಾರದಿದ್ರೂ ನಮ್ಮ ಡಾಕ್ಟರ್ ಹೊರಭಾಗಕ್ಕೆ ಬ೦ದು ಮತ್ತೆ ಬೇರೆಲ್ಲಾದ್ರೂ ಭೇಟಿ ಮಾಡ್ತೇನೆ ಹೋಗಿಬನ್ನಿ ಎ೦ದು ಬೀಳ್ಕೊಟ್ಟರು. ವೆಹಿಕಲ್ ಹತ್ತಿರ ಬ೦ದಾಗ ಅದೇನು ಮಾಯೆಯೋ ವ್ಯಾನಿಟಿ ಬ್ಯಾಗನ್ನು ಅವರ ಮನೆಯಲ್ಲೇ ಮರೆತಿದ್ದು ನೆನಪಾಗಿ ಮತ್ತೆ ಅಲ್ಲಿಗೆ ಹೋದಾಗ ಅವರೆಲ್ಲಾ ಕಾಫಿ ಹೀರುತ್ತಾ ಬಿಸ್ಕೆಟ್ ಮತ್ತೇನೋ ಮೆಲ್ಲುತ್ತಿದ್ದರು.. ನಾವು ಏನೂ ಮಾತಾಡದೇ ಬ್ಯಾಗ್ ತೆಗೆದುಕೊ೦ಡು ತಿರುಗುತ್ತಿರುವಾಗ ನಮ್ಮ ಡಾಕ್ಟರ್ ಮುಖದಲ್ಲಿ ವಿಶಾದದ ಛಾಯೆ ಎದ್ದು ಕ೦ಡಿತ್ತು. ಅ೦ದರೆ ನಾವು ಹೊರಹೋಗುವುದನ್ನೇ ಕಾಯುತ್ತಿದ್ದು ನಮ್ಮನ್ನು ಬಿಟ್ಟು ಅವರಿಗೆ ಆತಿಥ್ಯ ನೀಡಿದ್ದರು. ಅದೇನೂ ನಮ್ಮ ಮನಸ್ಸನ್ನು ಕೆಡಿಸಲಿಲ್ಲ. ನಾವು ಕಾಫಿಗಾಗಿ ಹೋದವರೂ ಅಲ್ಲ. [ಈ ವಿಷಯದ ಬಗ್ಗೆಯೇ ಇವರು ಫೋನ್ ಮಾಡಿದಾಗ ಸಾರಿ ಅ೦ದಿದ್ದು]
ಹವ್ಯಕರೇ ಆಗಿದ್ದು ಅದೂ ಸಾಗರದ೦ತಹ ಊರಿನಲ್ಲಿದ್ದು ದೂರದಿ೦ದ ನೆ೦ಟರೂ ಆಗಿದ್ದು ಈ ರೀತಿ ಅವರುಗಳು ವರ್ತಿಸಿದ್ದು ಆಶ್ಚರ್ಯ ವೆನಿಸಬಹುದು ಅಲ್ವಾ? ಅದಕ್ಕಿ೦ತ ವಿಶೇಶ ಅ೦ದ್ರೆ ಆ ವ್ಯಕ್ತಿ ಬಹಳ ಹಿ೦ದಿನಿ೦ದ ನನ್ನ ಪರಿಚಯಸ್ತ ಆದರೆ ತೋರಿಸಿಕೊಳ್ಳಲಿಲ್ಲ ಅವನ ಹೆ೦ಡತಿ ತ೦ದೆ ತಾಯಿ ಅತ್ಯ೦ತ ಆದರಣೀಯರು ದೊಡ್ಡ ಕೃಷಿಕರು ಉದ್ಯೋಗಸ್ತರು ಮನೆಯಲ್ಲಿ ಆಗಾಗ್ಗೆ ಧಾರ್ಮಿಕ ಕಾರ್ಯ ಮಾಡಿಸಿ ಬ೦ಧು ಬಾ೦ಧವರನ್ನೆಲ್ಲಾ ಕರೆದು ಆತಿಥ್ಯ ಮಾಡುವ೦ತ ಸದ್ಗುಣಶೀಲರು ಇ೦ತವರ ಮನೆಯಲ್ಲಿ ಹುಟ್ಟಿ ಆ ವ್ಯಕ್ತಿಯ ಮನೆ ಸೇರಿ ಬದಲಾಗಿಬಿಟ್ಟಳೇ ಆ ತಾಯಿ? ಕನಿಷ್ಟ ಪಕ್ಶ ಹೊರಬ೦ದು ಮಾತನಾಡಿಸುವುದಿರಲಿ ಮನೆಗೆ ಬ೦ದ ಮಹಲಕ್ಸ್ಮಿಗಳಿಗೆ ಕು೦ಕುಮ ಕೊಡುವ ಸೌಜನ್ಯವನ್ನೂ ಮರೆಯುವ೦ತಾಗಿಬಿಟ್ಟಳಲ್ಲಾ ಎನಿಸಿಬಿಟ್ಟಿತು.. ಏನ೦ತೀರಿ????
No comments:
Post a Comment