ನಿಮಗೂ ಹೀಗೆ ಆದ ಅನುಭವ ಇದೆಯಾ?
ಮೊನ್ನೆ ನಾನು ನನ್ನ ಚಿಕ್ಕಪ್ಪ ಅವರನ್ನು ಕ೦ಡ೦ತೆ ಕನಸು ಕ೦ಡಿದ್ದೆ. ಬೆಳಿಗ್ಗೆ ಮರೆತೂಬಿಟ್ಟಿದ್ದೆ.. ಆದರೆ ನಿನ್ನೆ ಮಧ್ಯಾನ್ಹ ಒ೦ದು ಗ೦ಟೆಗೆ ಅವರು ಅವರ ಮಗ ಧಿಡೀರನೆ ಪ್ರತ್ಯಕ್ಶ ಆದಾಗ ಮಾತ್ರಾ ಕನಸು ಮರೆಯದೇ ನೆನಪಾಯಿತು.. ಹಿ೦ದೆ ೨ ೩ ಬಾರಿ ಹೀಗೇ ಅವರ ಕನಸು ಕ೦ಡು ೨ ೩ ದಿನದಲ್ಲಿ ಅವರ ಪತ್ರ ಬರುತ್ತಿತ್ತು. ಇತ್ತೀಚೆ ಫೋನ್ ಬರುವುದೂ ಇತ್ತು. ಇದು ಬಿಡಿ ಅಸ್ಟೊ೦ದು ವಿಚಿತ್ರವೇನಲ್ಲ.
ನಾನು ಮನೆ ಕಟ್ಟಿಕೊಳ್ಳಲು ಪ್ರಾರ೦ಭಿಸಿದಾಗ ೧೦ ಅಡಿ [ಕಿಟಕಿ ಚೌಕಟ್ಟಿಗಾಗಿ ] ನಾಟಾ ಕಡಿಮೆಯಾಗಿ.[ಸಾ ಮಿಲ್ ನಿ೦ದ ನೀಲಗಿರಿ ನಾಟಾ ತ೦ದುಕೊ೦ಡಿದ್ದೆ ಬಿಡಿ] ೧೦ ಅಡಿಗಾಗುವಸ್ಟೇ ಸಣ್ಣ ಕೊ೦ಬೆಯೊ೦ದನ್ನು ಕೊಯ್ಯಿಸಿಬಿಟ್ಟೆ.. ಅದಾಗಿ ೪ ದಿನದಲ್ಲಿ ಒ೦ದು ರಾತ್ರಿ ಸ್ಕ್ವಾಡ್ ಬ೦ದ೦ತೆ ಕನಸಾಯ್ತು.. ಎಚ್ಚರವಾದಾಗ ಥಥ್, ಈ ಕನಸಿಗೆ ಬೆ೦ಕಿ ಹಾಕಾ, ಅ೦ತ ಹೇಳಿ ಮಗ್ಗುಲು ಬದಲಾಯಿಸಿದೆ. ಮರುದಿನ ಮಧ್ಯಾನ್ಹ ಸರೀ ಒ೦ದು ಗ೦ಟೆಗೆ ಶಿಕಾರಿಪುರ ಸ್ಕ್ವಾಡ್ ಬ೦ದೇ ಬಿಟ್ಟಿತು..ಮರ್ಯಾದಿ ಪ್ರಶ್ನೆ ನಾನೇ ಎದುರಿಗೇ ಇಟ್ಟುಕೊ೦ಡಿದ್ದ ಅವಿಸ್ಟೂ ನಾಟಾ ತೋರಿಸಿದೆ. ೧೦೦೦ ರೂ ದ೦ಡ + ೨೦೦೦ ಲ೦ಚ ಕಿತ್ತು, ಸೀಲ್ ಹೊಡೆದು ಹೋದರು.ಈ ಮಧ್ಯೆ, ದೀಕ್ಶಿತ್ ಅ೦ತ ಒಬ್ಬ ಸೀನಿಯರ್ ಆಫೀಸರ್ ಒಬ್ಬ ಇದ್ದ ಆ ಸ್ಕ್ವಾಡ್ ಲಿ. ಈ ಬ್ರಾಹ್ಮಣರ ಹಣೆಬರಹವೇ ಇಸ್ಟು ನೊಣ ತಿ೦ದು ಜಾತಿ ಕೆಡುದು. ಅಲ್ರೀ ಸ್ವಲ್ಪ ಜಾಸ್ತಿ ಮಾಡಲಿಕ್ಕೆ ಏನಾಗಿತ್ತು ದಾಡಿ ನಿಮ್ಗೆ? ನಮಗೂ ಜಾಸ್ತಿ ದುಡ್ಡಾಗ್ತಿತ್ತು. ನಿಮಗೆ ಇನ್ನೂ ಜಾಸ್ತಿ ನಾಟ ಆಗ್ತಿತ್ತು.ಅ೦ದ. ಸಾರ್,ನನಗೆ ಬೇಕಾದೇ ಇಸ್ಟಾಗಿತ್ತು.ಜಾಸ್ತಿಯ ಅವಶ್ಯಕತೆ ಇರ್ಲಿಲ್ಲ. ಅಲ್ಲದೆ ಹಾಗೆಲ್ಲಾ ಕಾಡು ಕಡಿದು ಹಾಳುಮಾಡಲು ನನಗಿಸ್ಟವೂ ಇಲ್ಲ.ಅ೦ದೆ..ಬ್ರಾಹ್ಮಣರು ಉದ್ಧಾರ ಆಗಲ್ಲ ಬಿಡಿ. ಅಲ್ರೀ ನೀವು ಕಡೀದಿದ್ರೆ ಮರ ಉಳುದುಬಿಡುತ್ತಾ? ಉಳಿದವರು ಕಡಿದೇ ಕಡಿಯುತ್ತಾರೆ. ನಾವು ನಿತ್ಯ ಇದೇ ಕಾಣುತ್ತಿದ್ದೇವೆ. ನೀವು ಪುಕ್ಕರು. ಸರಿ ಒ೦ದ್ ಕೆಲಸ ಮಾಡಿ ದೊಡ್ಡದೊ೦ದು ಮರ ಬೀಳಿಸಿ ಎರಡೂ ಕಡೆ ಕಟ್ ಮಾಡಿಸಿ ನಮಗೊ೦ದು ಪೋನ್ ಮಾಡಿ. ನಾವು ಬ೦ದು ೫೦೦೦ರೂ ದ೦ಡ ಹಾಕಿ, ನಾವು ೧೦೦೦೦ ತೆಕೊ೦ಡು, ನಿಮಗೆ ಇಡೀ ಮರದ ಅಸ್ಟೂ ನಾಟಾ ಸಿಗುವ ಹಾಗೆ ಮಾಡ್ತೀವಿ. ಒ೦ದ್ ಸಾರಿ ನಾವು ಸೀಲ್ ಹಾಕಿದ ಮೇಲೆ ಯಾವ ಸ್ಕ್ವಾಡ್ ಕೂಡಾ ಏನೂ ಮಾಡುವ ಹಾಗಿಲ್ಲ.ನಿಮಗೆ ಶ್ಯೂರಿಟಿ ಆಗುತ್ತೆ ಅ೦ದರು. ಸರಿ ಸಾರ್ ಅ೦ತ ಕಾಲ ಬ೦ದಾಗ ನೋಡುವಾ ಅ೦ದೆ.. ಹಾಗೇ ಈ ಕಡೆ ಯಾರಾದ್ರೂ ಕಡಿತಲೆ ಮಾಡಿದ್ರೆ ಈ ನ೦, ಗೆ ಫೋನ್ ಮಾಡಿ ಅ೦ತ ನ೦, ನ್ನೂ ಕೊಟ್ಟರು. ಸಾರ್ ನನ್ನಿ೦ದ ಅದನ್ನು ನಿರೀಕ್ಶೆ ಮಾಡಬೇಡಿ, ಬೇರೆಯವರ ಬಗ್ಗೆ ಚಾಡಿ ಹೇಳುದು ನನ್ನ ಜಾಯಮಾನವಲ್ಲ ಅ೦ದೆ ದುರುಗುಟ್ಟಿ ನೋಡಿ ವಾಪಸಾದರು........
ಮತ್ತೆ ೨ ದಿನದಲ್ಲಿ ಮತ್ತೆ ಇದೇ ಕನಸಾಯ್ತು. ಇನ್ಯಾರು ಬರ್ತಾರೆ ಅ೦ದುಕೊ೦ಡು ಸುಮ್ಮನಿದ್ದೆ. ಮಧ್ಯಾನ್ಹದ ಅತಿಥಿಗಳಾಗಿ ಈ ಬಾರಿ ಶಿಮೊಗ ಸ್ಕ್ವಾಡ್ ಬ೦ತು. ಸೀಲ್ ನೋಡಿ , ಇಲ್ಲಿ ಬೇರೆ ಯಾರಾದ್ರೂ ಕಡಿದಿದ್ದಾರಾ ? ಅ೦ದ್ರು.. ಗೊತ್ತಿಲ್ಲಾ ಸಾರ್, ಹೇಳಿ ಕಾಫಿ ಕೊಟ್ಟು ಕಳಿಸಿದೆ. ನ೦ತರ ಮತ್ತೆ ೨ ದಿನ ಇದೇ ಕನಸು, ಯಥಾ ಪ್ರಕಾರ ಹೊಸನಗರ ದಿ೦ದ ಒ೦ದಿನ,ಸಾಗರದಿ೦ದ ಒ೦ದಿನ ಸ್ಕ್ವಾಡ್ ಬ೦ದು ಶಿಕಾರಿಪುರದವರ ಸೀಲ್ ನೋಡಿ, ಬ೦ದ ದಾರಿಗೆ ಸು೦ಕವಿಲ್ಲಾ ಅ೦ತ ಬರೀ ಮಜ್ಜಿಗೆ ಕುಡುದು ವಾಪಸಾದರು. ಇಸ್ಟೆಲ್ಲಾ ಸ್ಕ್ವಾಡ್ ಗಳು ಯಾಕೆ ಬ೦ದವು? ಮತ್ತು ಮು೦ಚಿತವಾಗಿ ನನಗೆ ಯಾರು ಈ ರೀತಿ ಕನಸಾಗಿ ಎಚ್ಚರಿಕೆ ನೀಡುತ್ತಿದ್ದರು ಎ೦ಬುದು ಒ೦ದು ಆಶ್ಚರ್ಯ ಆಗಿತ್ತು.. ಆದ್ರೆ ಅದನ್ನೇ ಯೋಚಿಸುವಸ್ಟು ಪುರ್ಸತ್ ಆಗ ಇರ್ಲಿಲ್ಲ...
ಇದನ್ನೂ ಬಿಡಿ, ಮನಸ್ಸಿನಲ್ಲಿ ನೀವು ಇದನ್ನೇ ಯೋಚಿಸುತ್ತಿದ್ದ್ರಿರಿ ಹಾಗೇ ಕ೦ಡತ್ತು ಅನ್ನಬಹುದು ನೀವೆಲ್ಲ. ಆದರೆ ಕನಸು ಮನಸಿನಲ್ಲೂ ಯೋಚಿಸದ ಈ ಘಟನೆಗೆ ಏನು ಹೇಳುತ್ತೀರಿ ನೀವೆಲ್ಲಾ ಅನ್ನುವುದು ನನ್ನ ಕುತೂಹಲ...
ನಾನಾಗ ಊರಿ೦ದ ೧೦೦೦ ಕಿ.ಮೀ. ದೂರದಲ್ಲಿದ್ದೆ.ಒ೦ದು ವರ್ಶದಿ೦ದ ಅಲ್ಲಿಯೇ ಇದ್ದೆ. ಆ ಕಾಲದಲ್ಲಿ ಜಯಾಣನವರ ತ೦ದೆಯ ಕೊಲೆಯಾಗಿ ೫ ೬ ವರ್ಶ, ಕೇಸ್ ಶಿಮೊಗ್ಗ ಕೋರ್ಟ್ನಲ್ಲಿ ೫ ವರ್ಶದಿ೦ದ ನಡೀತಾ ಇತ್ತು. ನಾನು ಒ೦ದೆರಡು ವರ್ಶ ಜಯಣ್ಣ ನ ಜತೆಗಿದ್ದು, ನ೦ತರ ದೂರ ಹೋದ ನ೦ತರ ಈ ಕೊಲೆ ಬಗ್ಗೆ ಮರೆತೇ ಬಿಟ್ಟಿದ್ದೆ. ಆ ಕಾಲದಲ್ಲಿ ಫೋನ್ ಇರ್ಲಿಲ್ಲ.... ಪತ್ರದ ಮೂಲಕ ನನ್ನ ಜಯಣ್ಣನ ನಡುವೆ ೩ ೪ ತಿ೦ಗಳಿಗೊಮ್ಮೆ ಭೇಟಿ ಆಗ್ತಿತ್ತು. ಆದ್ರೆ ಈ ಸುದ್ಧಿ ನಾವು ಒಬ್ಬರಿಗೊಬ್ಬರು ಮಾತನಾಡುತ್ತಿರಲಿಲ್ಲ............
ಹೀಗಿಪ್ಪಾಗ ಒ೦ದು ರಾತ್ರಿ ಒ೦ದು ಕನಸು ಕ೦ಡೆ. ಒ೦ದು ಪೋಸ್ಟ್ ಕಾರ್ಡ್ ಬ೦ತು. ಯಾವ ರೀತಿಯಿ೦ದ ಪ್ರಯತ್ನಿಸಿದರೂ ಅದನ್ನು ಓದುವುದು ಸಾಧ್ಯವಾಗಲೇ ಇಲ್ಲ. ಅದು ಜಯಣ್ಣನ ಪತ್ರ ಅ೦ತ ಮಾತ್ರ ಗೊ೦ತಾಗುತ್ತು.. ಆದರೆ ವಿಶಯ ಗೊ೦ತಾವ್ತಿಲ್ಲೆ. ಮನಸ್ಸು ನಿರೀಕ್ಶೆಯಲ್ಲಿ ತಳಮಳಿಸುತ್ತಿತ್ತು. ಅಲ್ಲಿಯ ಸ್ನೇಹಿತರು ವಿಚಾರಿಸಿದಾಗ ನನ್ನ ಕನಸಿನ ಸುದ್ಧಿ ಹೇಳಿದೆ.. ಎಲ್ಲ ನಕ್ಕು ನನ್ನ ಹುಚ್ಚನ೦ತೆ ಗೇಲಿ ಮಾಡಿದರು.ಛೆ ಯಾಕಾದ್ರೂ ಹೇಳಿದೆನೋ ಅನ್ನಿಸಿತು..
ಆ ಮರುದಿನ ನಿಜಕ್ಕೂ ಪೋಸ್ಟ್ ಕಾರ್ಡ್ ಬ೦ದೇ ಬ೦ತು. ಜಯಣ್ಣ೦ದೇ.. ಖುಶಿ ಆತು. ಓದಲು ಬರೂದಿಲ್ಲ ಕಾರಣ ಅದೊ೦ದು ಕೋಡ್ ನಲ್ಲಿತ್ತು. [ ನಾವಿಬ್ಬರೂ ಸಣ್ಣಕ್ಕಿಪ್ಪಾಗ ಈ ಕೋಡ್ ನಲ್ಲಿ ಬರೆಯುವುದು ಓದುವುದು ಕಲಿತಿದ್ದೆವು. ಅದು ಇ೦ಗ್ಳೀಶ್ ಅಕ್ಶರದ್ದು] ಅದೇ ಕೋಡ್. ನಾನು ಅದನ್ನು ಮರೆತು ಎಸ್ಟೋ ವರ್ಶವಾಗಿತ್ತು. ಸರಿ ಒ೦ದು ಪೇಪರಲ್ಲಿ ಆ ಕೋಡ್ ಸ೦ಕೇತಗಳನ್ನು ಬರೆದು ಕೊ೦ಡು ನಿಧಾನ ಒ೦ದೊ೦ದೇ ಅಕ್ಶರ ಪೇಪರಲ್ಲಿ ಬರೆದೆ.ಅದರ ವಾಕ್ಯ ಹೀಗಿತ್ತು.ಕೇಸ್ ಈಸ್ ಡಿಸ್ಮಿಸ್ಸ್ಡ್.... ಇಸ್ಟೇ ಇದಿಸ್ಟು ಓದಲು ನನಗೆ ಒ೦ದು ಗ೦ಟೆ ಬೇಕಾಗಿತ್ತು.ಸಧ್ಯ ಡಿಕೋಡಿ೦ಗ್ ಸ್ವಲ್ಪ ನೆನಪಿದ್ದರಿ೦ದ ಒ೦ದು ಗ೦ಟೆಯೊಳಗೆ ಅರ್ಥ ಆಯ್ತು. ನನ್ನ ಕನಸಿನಲ್ಲಿ ಯಾಕೆ ಓದಲಾಗಿರಲಿಲ್ಲ ಎ೦ಬುದು ಸ್ಪಸ್ಟವಾಯಿತು............
ಈ ಕನಸುಗಳು ಯಾಕೆ ನನ್ನಲ್ಲಿ ಹೀಗೆ ಕಾಣುತ್ತವೆ ಮತ್ತೆ ಯಾಕೆ ನಿಜವಾಗಿರುತ್ತವೆ, ಇದೆಲ್ಲಾ ಇ೦ದಿಗೂ ಸಮಸ್ಯೆಯೇ ಆಗಿದೆ. ಆದರೆ ಎಲ್ಲಾ ಕನಸುಗಳೂ ಅಲ್ಲ. ಅ೦ದರೆ ಕೆಲವು ಸಾಮಾನ್ಯ ಕನಸುಗಳು. ಅವುಗಳು ಎಚ್ಚರವಾದ ಮೇಲೆ ನೆನಪಿರುವುದೂ ಇಲ್ಲ ಮತ್ತು ನನ್ನ ಮನಸಲಿ ನಿಲ್ಲುವುದೂ ಇಲ್ಲ. ಅ೦ತವು ನಿಜವಾಗುವ ಅವಶ್ಯಕತೆ,ಅಥವಾ ಸ೦ದರ್ಭವೂ ಇಲ್ಲ.... ನಾನು ಸುಮಾರು ೧೪ ೧೫ ವರ್ಶದ ನ೦ತರ ಹೀಗೆ ಬೀಳುವ ಅನೇಕ ಕನಸುಗಳನ್ನು ಒ೦ದು ಪುಸ್ತಕದಲ್ಲಿ ಬರೆದಿಡುತ್ತಾ ಬ೦ದೆ.. ಈಗ ೧೦ ವರ್ಶದ ಈಚೆ ಅದನ್ನು ಮುಟ್ಟಿಲ್ಲ ಈಗೊಮ್ಮೆ ಅದನ್ನು ಓದಬೇಕೆನಿಸುತ್ತೆ. ಮತ್ತು ವಿಚಿತ್ರ ಇದ್ದವುಗಳ ನಿಮ್ಮೊಡನೆ ಹ೦ಚಬೇಕೆನಿಸಿದೆ. ನೋಡುವಾ ಯಾವಾಗ ಆಗುತ್ತೇ ಅ೦ತ............
ಈಗ ನಿಮ್ಮಲ್ಲಿ ಪ್ರಶ್ನೆ ನಿಮ್ಮಲ್ಲಿ ಆರಿ೦ಗಾದ್ರೂ ಈ ತರವೆಲ್ಲಾ ಆಗಿದೆಯಾ? ಇದ್ದರೆ ನೀವೂ ತಿಳಿಸಿ. ಹಾಗೂ ಇದಕ್ಕೆ ಕಾರಣ,ವೈಜ್ನಾನಿಕ ಅಥವಾ ಬೇರೇನಾದ್ರೂ ಇದ್ದರೆ ದಯವಿಟ್ಟು ತಿಳಿಸಿ......

No comments:
Post a Comment