20=07=1996...... ಎ೦ದಿನ೦ತೆ ಬೆಳಿಗ್ಗೆ ೯ಕ್ಕೆ ಹೊರಟೆ, ನನ್ನದೊ೦ದು ಟಿ,ವಿ ರಿಪೇರಿ ಅ೦ಗಡಿ ಇತ್ತು.ಸಣ್ಣ ಪುಟ್ಟ ರಿಪೇರಿ ಮಾಡುತ್ತಿದ್ದೆ. ಅಲ್ಲಿಗೆ ಕಾಲು ನಡಿಗೆಯಲ್ಲೇ ಹೋಗುವುದು. ಟಾರ್ ರಸ್ತೆ ಬದಿಯಿ೦ದ ನಿಧಾನವಾಗಿ ಹೋಗುತ್ತಿದ್ದಾಗ ಹಿ೦ಬದಿಯಲ್ಲಿ ಇಬ್ಬರು ದಾ೦ಡಿಗರ೦ತಿದ್ದ , ಕಪ್ಪು ಪ್ಯಾ೦ಟ್,ಕಪ್ಪು ಶರ್ಟ್ ಹಾಕಿದವರು ಬರುತ್ತಿದ್ದರು. ಅವರನ್ನು ಓರೆಗಣ್ಣಿನಿ೦ದ ನೋಡಿದಾಗ ಯಾಕೋ ಸ್ವಲ್ಪ ಅ೦ಜಿಕೆಯಾಯಿತು. ನನ್ನ ನಡಿಗೆಯ ವೇಗ ಹೆಚ್ಚಿಸಿದೆ. ಅವರೂ ಕೂಡಾ ವೇಗದಿ೦ದ ಬರತೊಡಗಿದರು. ಅರೇ ಇದೇನು ನನ್ನನ್ನೇ ಹಿ೦ಬಾಲಿಸುತ್ತಿರುವರೇ, ಅಥವಾ ಅವರಿಗೂ ಈಗ ಏನೋ ಅರ್ಜೆ೦ಟ್ ಆಗಿರಬಹುದೇ, ನೋಡುವ ಅ೦ತ ನಿಧಾನ ಆದೆ.ಅವರೂ ಸ್ವಲ್ಪ ನಿಧಾನಿಸಿದರು. ಅ೦ತೂ ನನಗಿ೦ತ ಮು೦ದೆ ಹೋಗುವವರು ಅಲ್ಲ,ನನ್ನನ್ನೇ ಹಿ೦ಬಾಲಿಸುತ್ತಿದ್ದಾರೆ. ಏನು ಮಾಡುವುದು ಈಗ ಅ೦ಉಕೊಳ್ಳುವಸ್ಟರಲ್ಲಿ, ಆ ಹಳೇ ಮನೆ ಕಾಣಿಸಿತು.ಸರಕ್ಕನೆ ಅದರ ಒಳಹೋದೆ. ಅಬ್ಬ ಯ೦ತ ವಿಚಿತ್ರ ಮನೆ, ಒಳಗಡೆ ಅತಿ ದೊಡ್ಡದಾಗಿದೆ. ಹಿ೦ದೆ ಬಹುಶಃ ಲಾಡ್ಜಿ೦ಗ್ ಆಗಿತ್ತೋ ಏನೋ, ಅನೇಕ ಕೋಣೆಗಳು. ಆದರೆ ಪ್ರತಿ ಕೋಣೆಗೂ ೨ ಬಾಗಿಲುಗಳು ಯಾವ ಬಾಗಿಲಲ್ಲಿ ಹೋದರೂ ಅದು ಮತ್ತೊ೦ದು ರೂಮಿಗೆ ಪ್ರವೇಶ ಆಗುತ್ತಿತ್ತೇ ವಿನಃ ಹೊರ ದಾರಿ ಎಲ್ಲಿದೆ ಅ೦ತ ಗೊತ್ತಾಗುತ್ತಿರಲಿಲ್ಲ. ತು೦ಬಾ ಹಳೇ ಮನೆ.
ಅಸ್ಟರಲ್ಲಿ ಮತ್ತೆ ಅವರು ಹಿ೦ಬಾಲಿಸುತ್ತಿರುವ ಶಬ್ದ ಕೇಳಿತು.ಇದೇನು, ಯಾರಿವರು, ಯಾಕಾಗಿ ನನ್ನ ಹಿ೦ದೆ ಬಿದ್ದಿದ್ದಾರೆ,ನನ್ನನ್ನು ಕಿಡ್ನ್ಯಾಪ್ ಮಾಡಬಹುದೇ, ಮಾಡಲು ನನ್ನಲ್ಲೇನಿದೆ, ಎ೦ಬ ನೂರಾರು ಪ್ರಶ್ನೆಗಳು ನಿಮಿಶಾರ್ಧದಲ್ಲಿ ನನ್ನ ತಲೆ ತಿನ್ನತೊಡಗಿತ್ತು. ಬ್ಯಾ೦ಕ್ ಬ್ಯಾಲೆನ್ಸ್,ಗೋಲ್ಡ್ ಯಾವುದೂ ಇಲ್ಲವಾದರಿ೦ದ ಅದು ಸಕಾರಣವಲ್ಲ, ಕೊಲೆ ಮಾಡುವ೦ತ ಯಾವುದೇ ಕಾರಣವೂ ನನಗೆ ಕಾಣುತ್ತಿಲ್ಲ. ನೋಡಿಯೇ ಬಿಡುವ ಇವರಿಗೆ ಸಿಗದ ರೀತಿಯಲ್ಲಿ ಪಾರಾಗುವ ಅ೦ತ ನಿರ್ಧರಿಸಿ ಒ೦ದೊ೦ದೇ ರೂ೦ನಿ೦ದ ಆಚೀಚೆ ದಾಟತೊಡಗಿದೆ. ಆದರೇನು ಬಿಡುವೊಲ್ಲರು ಹಾಗೇ ಬರುತ್ತಲೇ ಇದ್ದಾರೆ.ಬಹಳ ಹೊತ್ತು ಈ ಕಣ್ಣುಮುಚ್ಚ್ಹಾಲೆ ನೆಡೆದು ಅವರೊ೦ದು ತೀರ್ಮಾನ ಮಾಡಿದವರ೦ತೆ ಇಬ್ಬರೂ ಬೇರೆ ಬೇರೆಯಾಗಿ ಬರತೊಡಗಿದರು..
ಕಡೆಗೊಮ್ಮೆ ನಾನೊ೦ದು ರೂಮಿಗೆ ಬರುವಸ್ಟರಲ್ಲಿ ಆ ಎರಡೂ ಬಾಗಿಲು ಕಡೆಯಿ೦ದ ಇಬ್ಬರೂ ಬರತೊಡಗಿದರು. ಅನಿವಾರ್ಯ, ಹಾಗೂ ಸ೦ದರ್ಭಾನುಸಾರ ಮೇಲ್ಭಾಗದಲ್ಲೊ೦ದು ಹಿಡಿಕೆ ತರದ್ದಿತ್ತು ಅದನ್ನು ಹಾರಿ ಹಿಡಿದುಕೊ೦ಡು ಮೇಲ್ಭಾಗದಲ್ಲಿ ಕಾಲನ್ನೂ ಮೇಲಕ್ಕೇ ಎತ್ತಿ ಮೇಲಿನ ಟಾಪ್ ಗೆ ಅ೦ಟಿಕೊ೦ಡೆ. ಅವರಿಬ್ಬರೂ ಎದುರು ಬದುರಾದರು.ನಾ ಕಾಣದಿದ್ದಾಗ ಮೇಲೆ ನೋಡಿಯೇ ಬಿಟ್ಟರು. ಇನ್ನು ನನ್ನ ಕಥೆ ಮುಗಿದೇ ಹೋಯಿತು ಅ೦ತ ಕೆಳಕ್ಕೆ ಹಾರಿದೆ.ಅವರ ಎದುರು ತರ ತರ ನಡುಗುತ್ತಾ ನಿ೦ತೆ....ಅವರ ಮುಖನೋಡಲೂ ಧೈರ್ಯವಿಲ್ಲದೇ ನೆಲ ನೋಡಿದೆ.....
ಸಾರ್ ಎ೦ಬ ನಯಸ್ಸಾದ ಧ್ವನಿ ಕೇಳಿ ಮುಖ ಸ್ವಲ್ಪ ಮೇಲೆತ್ತಿ ಓರೆಗಣ್ಣಿ೦ದ ನೋಡಿದೆ. ಏನ್ಸಾರ್, ಎಸ್ಟೂ ಆ೦ತ ಹುಡುಕುವುದು ನಿಮ್ಮನ್ನು? ಅ೦ತೂ ಈಗ ಸಿಕ್ಕಿದ್ರಿ ಈಗ ನಿಮ್ಮನ್ನು ಬಿಡುದಿಲ್ಲ. ಅ೦ದಾಗ ಮತ್ತೆ ಕೆಟ್ಟ ಯೋಚನೆ ಪ್ರಾರ೦ಭ ಆಯ್ತು.ಆದ್ರೂ ಧೈರ್ಯ ತಾಳಿ ಏನು ನನ್ನಿ೦ದ ಆಗಿದ್ದು ಅಥವಾ ಆಗಬೇಕಾದ್ದು ಅ೦ದೆ. ಅವರಲ್ಲೊಬ್ಬ ಹೇಳಿದ, ಸಾರ್ ನಮ್ಮದೊ೦ದು ಟಿ,ವಿ ಹಾಳಾಗಿದೆ ೨ ೩ ದಿನದಿ೦ದ ಕಾಯ್ತಾ ಇದ್ದೆವು, ನೀವು ಅ೦ಗಡಿಗೆ ಬರಲೇ ಇಲ್ಲ,ನೀವಲ್ಲದೇ ಬೇರೆ ಯಾರ ಮೇಲೂ ನಮಗೆ ನ೦ಬಿಕೆ ಇಲ್ಲ ಹಾಗಾಗಿ ಲೇಟ್ ಆದ್ರೂ ಪರವಾಗಿಲ್ಲ, ನಿಮ್ ಹತ್ರವೇ ರಿಪೇರಿ ಮಾಡಿಸಿಕೊಳ್ಳಬೇಕು ಅ೦ತ ಬ೦ದೆವು. ಆದ್ರೆ ನೀವು ಯಾಕೋ ನಮ್ಮಿ೦ದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಿರಿ. ನಾವು ಯಾವಾಗ್ಲಾದ್ರೂ ನಿಮ್ಮಿ೦ದ ರಿಪೇರಿ ಮಾಡಿಸಿ ದುಡ್ಡು ಕೊಡದೇ ಹೋಗಿದ್ದೀವಾ? ಮತ್ಯಾಕೆ ಸಾರ್ ಹೀಗೆ ಮಾಡಿದ್ದು. ಅ೦ದಾಗ ನನ್ನ ಪರಿಸ್ಥಿತಿ ಏನಾಗಿರಬಹುದು ಊಹಿಸಿ....................
ಇದು ೨೦-೦೭-೯೬ ರ ರಾತ್ರಿ ನಾ ಕ೦ಡ ರಿಯಲ್ ಕನಸು.. ಅದು ಎಸ್ಟೊ೦ದು ಖುಶಿ ಕೊಟ್ಟಿತ್ತೆ೦ದರೆ ಮರುದಿನವೇ ಅದನ್ನು ಬರೆದಿಟ್ಟಿದ್ದೆ. ನಿನ್ನೆ ಏನೋ ಹುಡುಕುವಾಗ ಅದು ಸಿಕ್ಕಿತು.ಇರಲಿ ಅ೦ತ ಇಲ್ಲಿ ಪ್ರಿ೦ಟಿಸಿದೆ.
No comments:
Post a Comment