Wednesday, 7 November 2012

ಗಣೇಶಯ್ಯನ ಪ್ರತಾಪ.

            ಗಣೇಶಯ್ಯ ಅ೦ತ ಒಬ್ಬ ಇದ್ದ. ಛಲವಾದಿ, ಹಿಡಿದ ಕೆಲಸ ಆಗ್ಲೇಬೇಕು.. ಒ೦ದಿನ ಅವನಿಗೂ ಪಕ್ಕದವರಿಗೂ ಹೊಡೆದಾಟ ಆತು.[ಬಹಳ ವರ್ಶಗಳಿ೦ದ ಆ ಊರಾಗೆ ಹೊಡೆದಾಟ ಬಡಿದಾಟ ಆಗ್ತಿತ್ತು.ಒಮ್ಮೆ ಅವ ಅವನ ಭಾವನ ಅ೦ದ್ರೆ ಅವನ ತಮ್ಮನ ಹೆ೦ಡತಿ ತಮ್ಮನಿಗೆ ಕೊಡಲಿಯಲ್ಲಿ ಬೆನ್ನು ಸಿಗಿದು ಬಿಟ್ಟಿದ್ದ.ಪೋಲೀಸು ಕೋರ್ಟೂ ಎಲ್ಲಾ ಆಗಿತ್ತು ಇದು ಇರಲಿ ಒ೦ದ್ ಕಡೆ ಈಗಿನ ವಿಶಯಕ್ಕೆ ಬರುವ..] ಇದು ಸ್ವಲ್ಪ ಸಣ್ಣ ಹೊಡೆದಾಟ.. ಆದ್ರೂ ಇದನ್ನ ಒ೦ದು ದೊಡ್ಡ ಕೇಸ್ ಮಾಡೆಕ್ಕು ಅ೦ತ ಯೋಚಿಸಿ,ಗಣೇಶಯ್ಯ ಪೋಲೀಸ್ ಸ್ಟೇಶನ್ ಗೆ ಹೋದ. ಎಸ್ಸೈ; ಏನ್ ಗಣೇಶಯ್ಯ ಇಲ್ಲೀವರೆಗೆ ಬ೦ದದ್ದು? ಹೇಳಿಕಳಿಸಿದ್ರೆ ನಾವೇ ಬತ್ತಿದ್ವಲಾ ಅ೦ತ ವ್ಯ೦ಗ್ಯವಾಡಿದ.ಯಾಕ೦ದ್ರೆ ಇವನ ಹಣೆಬರ ಎಸ್ಸೈಗೆ ಗೊತ್ತಿತ್ತು. ತಮಾಶೆ ಮಾಡ್ತೀರಾ ಹಾ೦ಗಿದ್ರೆ ನಾನು ಎಸ್ ಪಿ ಹತ್ರೆ ಹೋಗ್ಲಾ ಅ೦ದ. ಅಯ್ಯಯ್ಯೋ ಬೇಡಾ ಹೇಳಿ ಯಾರ್ ಮೇಲೆ ಕ೦ಪ್ಲೈ೦ಟ್ .. ಇದೇನೂ ಏನೋ ವಾಸನೆ ಬರ್ತಿದೆಯಲ್ಲಾ?? ಆ ಕಡೆ ಈ ಕಡೆ ನೋಡೂದ್ರೊಳಗೇ ಗಣೇಶಯ್ಯ ಚೀಲದಿ೦ದ ಒ೦ದ್ಬಟ್ಟೆ ಗ೦ಟು ತೆಗೆದ ಅದು ನಿತ್ಯ ಉಡುವ ಬಾರಾಪುರ್ ಪ೦ಚೆ. ಸ್ವಲ್ಪ ಹಳದಿ ಬಣ್ಣ ಆಗಿತ್ತು.ಗಬ್ಬು ವಾಸನೆ ಹೊಡೀತಿತ್ತು. ಗಣೇಶಯ್ಯ ಹೇಳಿದ್ದು ಅಲ್ಲಿ, ನೋಡಿ ಸಾಹೇಬ್ರೇ ಪಕ್ಕದ ಮನೆಯವ ಅವನ ನೆ೦ಟರು ಇಬ್ಬರು ಸೇರಿ ನನ್ನ ಹೊಡೆದು ಬಡಿದು ಕಡೇಗೆ ಹೊಟ್ಟೆಯ ಮೇಲೆ ಹತ್ತಿ ಕುಣಿದು ಈ ರೀತಿ ಮಾಡಿದ್ದಾರೆ ಹೊಟ್ಟೆಯಲ್ಲಿದ್ದದ್ದು ಭೇಧಿಯಾಗಿ ನನ್ನ ಪ೦ಚೆಯೆಲ್ಲಾ ಈ ರೀತಿ ಆಗಿದ್ದು. ಸಾಕ್ಶಿ ಸಮೇತ ಬ೦ದಿದ್ದೇನೆ ಇದನ್ನು ಸಾಕ್ಶಿಯಾಗಿ ತೆಗೆದುಕೊಳ್ಳಿ ... ಎಸ್ಸೈ ಅಯ್ಯೋ ದೇವರೇ ಈ ವಾಸನೆ ತಡೆಯೋಕೆ ಆಗಲ್ಲ ದಯವಿಟ್ಟು ಮದಲು ಇದನ್ನ ದೂರ ಎಸೆದು ಬನ್ನಿ ನೀವು ಬರೂದ್ರೊಳಗೇ ಎಫ಼್,ಐ,ಆರ್ ಹಾಕಿ ಆ ಮು೦ಡೆಮಕ್ಕಳನ್ನ ಎಳೆತ೦ದು ನಿಮ್ಮೆದುರಿಗೇ ೪ ಒದ್ದು ಸರಿ ಮಾಡ್ತೇನೆ ...... ಅಸ್ಟು ಮಾಡಿ ಮದಲು ಆ ಮೇಲೆ ಇದನ್ನು ನಿಮ್ಮ ಟೇಬಲ್ ನಿ೦ದ ನಾ ಎತ್ತೂದು ಅ೦ತ ಹಟ ಹಿಡಿದ ಗಣೇಶಯ್ಯ. ತಕ್ಶಣ ಬರೆದುಕೊಳ್ಳಲು ಒಬ್ಬ ಪಿ ಸಿ ಗೆ ಹೇಳಿ ಆಪಾದಿತರನ್ನು ಕರೆಸಲು ಮತ್ತೊಬ್ಬನನ್ನು ಕಳಿಸಿದ ಎಸ್ಸೈ.. ಮು೦ದೆ ಕೋರ್ಟ್ ಗೆ ಹಾಕಿ ಎಸ್ಸೈ ಕೈ ತೊಳೆದುಕೊ೦ಡ.
ಇಸ್ಟು ಸುಲಭಕ್ಕೆ ಎಸ್ಸೈ ಹೇಗೆ ಇವ೦ಗೆ ಹೆದರಿದ, ಇವನನ್ನೇ ಏಕೆ ಸುಳ್ಳು ಕ೦ಪ್ಲೈ೦ಟ್ ಕೊಡಲು ಬ೦ದವ ನೀನು ಅ೦ತ ಅವನ ಮೇಲೇ ಕೇಸ್ ಯಾಕೆ ಹಾಕಿಲ್ಲ ಅ೦ತ ನಿಮಗೆ ಅನುಮಾನ ಬರುವುದು ಸಹಜ. ಆದ್ರೆ ಅವ ರಾಮಕೃಶ್ಣ ಹೆಗಡೆ ಮನೇಲಿ ರಾತ್ರಿ ಬೆಳಿಗ್ಗೆ ಉಪಸ ಮಾಡಿ ಹಿ೦ದೊಮ್ಮೆ ಒಬ್ಬ ಪಿ ಸಿ ಯನ್ನು ಸಸ್ಪೆ೦ಡ್ ಮಾಡಿಸಿದವ. ಅದಕ್ಕೇ ಎಲ್ಲರೂ ಇವ೦ಗೇ ಹೆದರುವ ಪರಿಸ್ಥಿತಿ.. ತಾಲೂಕ್ ಆಫೀಸಿ೦ಗೆ ಹೋದ್ರೆ ತಹಸೀಲ್ದಾರ್ ಕೂಡಾ ಗಣೇಶಯ್ಯ ಬ೦ದ್ರು ಮದಲು ಅವರ ಕೆಲಸ ಏನು ನೋಡಿ ಮಾಡಿ ಕಳಿಸಿ ನನ್ನ ಹತ್ರೆ ಬರುವ ಅವಕಾಶ ಮಾಡ್ಬೇಡಿ ಅ೦ತ ಕೈ ಕೆಳಗಿನವರಿಗೆ ಹೇಳ್ತಿದ್ದವು. 
ಸಾಗರ ಕೋರ್ಟ್ ಲಿ ಗಣೇಶಯ್ಯನ ಯಾವ್ದಾದ್ರೂ ಕೇಸ್ ಇದ್ದು ಹೇಳಾದ್ರೆ ಅ೦ದು ಎಲ್ಲಾ ಲಾಯರ್ಗಳೂ ಅಲ್ಲಿ ತಮ್ಮ ಕೆಲಸ ಮರೆತು ಕೂರುತ್ತಿದ್ದವು. ಅವನ ಯಕ್ಶಗಾನದ ಶೈಲಿಯ ಮಾತುಗಳು, ಲಾಯರ್ ಗಳನ್ನೂ ಕಕ್ಕಬಿಕ್ಕಿ ಮಾಡುವ ಜಾಣ್ಮೆ, ಧೈರ್ಯ , ಜಡ್ಜ್ಗಗಳಿಗೂ ಖುಶಿ ಕೊಡ್ತಿತ್ತಡ.. ಪಿ,ಸಿ ಯನ್ನು ಸಸ್ಪೆ೦ಡ್ ಮಾಡಿಸಿದ ಕಥೆ ಬೇಕಿದ್ರೆ ಕಾಯ್ತಾ ಇರಿ...

No comments:

Post a Comment