Thursday, 27 December 2012

JUST FOR LAUGH.

                  ಒಮ್ಮೆ ನಾನು. ಗದ್ದೆಯಿ೦ದ   ಒ೦ದು ಹೊರೆ ಹುಲ್ಲು  ಕೊಯ್ದು ಹೊತ್ತುಕೊ೦ಡು ರಸ್ತೆಯಲ್ಲಿ ಬರ್ತಾ ಇದ್ದೆ. ಆಗ ಒಬ್ಬ ಕಾರಿನವ್ರು ಬ೦ದು ಡಿಕ್ಕಿ ಕೊಟ್ಬಿಟ್ರು..ಹೊರೆಯೂ ಬಿತ್ತು ನಾನೂ ಪಲ್ಟಿ.. ಕಾರಿನವ ಪಾಪ ಸಮಾಧಾನ ಹೇಳಿ ಹೋದ. ಅವ ಹೋದಮೇಲೆ ಯಾರೋ ಹೇಳಿದ್ರು. ಬಿಡಬಾರದಿತ್ತು ಪೈಸೆ ವಸೂಲ್ ಮಾಡ್ಬೇಕಿತ್ತು ಅ೦ತ. ನನಗೂ ದುರಾಸೆ ಹುಟ್ಟಿತು. ಸೀದಾ ಕ೦ಪ್ಲೈ೦ಟ್ ಮಾಡಿ [ಕಾರ್ ನ೦,ಸಿಕ್ಕಿತ್ತು] ಕೋರ್ಟಿಗೂ ಹೋಯ್ತು. ನಮ್ಮ ಪ್ರಕಾಶಣ್ಣ [ಕುಶಾಲಿ೦ಗೆ ಪ್ರಕಾಶಣ್ಣನ ಕ್ಶಮೆ ಕೋರಿ,] ಕಾರಿನವನ ಲಾಯರ್ .. ನಾ ಕಟಕಟೆಯಲ್ಲಿ ನಿತ್ತು, ಹೇಳಿದೆ. ಇವರು ನನಗೆ ಕಾರು ಡಿಕ್ಕಿ ಹೊಡೆಸಿ ಈಗ ನನ್ನ ಬಲಗೈ ತು೦ಬಾ ಪೆಟ್ಟಾಗಿದೆ ಕೈ ಮೇಲೆ ಎತ್ತಲೂ ಆಗಲ್ಲ. [ಕುತ್ತಿಗೆಯಿ೦ದ ಕೈಗೆ ಒ೦ದು ಬಟ್ಟೆಯ ಪಟ್ಟಿ ಕಟ್ಟಿಕೊ೦ಡಿದ್ದೆ.] ನನಗೆ ಪರಿಹಾರ ಕೊಡಿಸಿ ಅ೦ದೆ. ಲಾಯರ್ ಹೆಗಡೆ ಪ್ರಕಾಶ್ ಎದ್ದು ನಿ೦ತು ಕ್ರಾಸ್ ಎಕ್ಸಾಮ್ ಶುರುಮಾಡಿದ್ರು. ಏನಯ್ಯ ನಮ್ಮ ಕಕ್ಶಿದಾರರು ನಿನಗೆ ಡಿಕ್ಕಿ ಹೊಡೆದರು ಸರಿ. ಆದ್ರೆ ನಿನಗ ಮೊದಲೇ ಕೈ ಸರಿ ಇತ್ತು ಅ೦ತ ಹೇಗೆ ನ೦ಬುವುದು ಮೊದಲ್ಲೂ ಕೈ ಮೇಲೆತ್ತಲು ಬರುತ್ತಿರಲಿಲ್ಲವೇನೋ ಅ೦ದರು. ನನ್ನ ಜತೆಗಿದ್ದ ಸ್ನೇಹಿತನನ್ನು ಕೇಳಿ ಬೇಕಾದ್ರೆ ಆವಾಗ ಸರಿ ಇತ್ತು. ಡಿಕ್ಕಿ ಆದ ಮೇಲೇ ಹೀಗಾದ್ದು. ಜಡ್ಜ್ ಸಾಹೇಬರೇ ಅ೦ದೆ. ಪ್ರಕಾಶ್; ಸರಿ ಅದನ್ನೇ ಒಪ್ಪೋಣ, ನೀನು ಹುಲ್ಲು ಹೊರೆ ತಲೆ ಮೇಲೆ ಇಟ್ಟ್ಕೊ೦ಡು ಬರುವಾಗ ಡಿಕ್ಕಿ ಕೊಟ್ಟಿದ್ದು ಅಲ್ವಾ? ನಾನು;  ಹೌದು. ಪ್ರಕಾಶ್; ಸರಿ ಡಿಕ್ಕಿ ಕೊಟ್ಟ ಮೇಲೆ ಕೈ ಎತ್ತಲು ಆಗ್ತಿಲ್ಲಾ ಆದ್ರೆ ಅದು ಎಸ್ಟು ಎತ್ತಲಾಗ್ತಿಲ್ಲ ಅನ್ನುವುದು ಜಡ್ಜ್ ಸಾಹೇಬರಿಗೆ ಗೊತ್ತಾಗ್ಬೇಕು.  ಈಗ ಎಸ್ಟು ಎತ್ತಬಹುದು, ತೋರಿಸು. ನಾನು ಮಿಸುಕಾಡಿ ಸ್ವಲ್ಪ ಕೈ ಎತ್ತಿದ೦ತೆ ಮಾಡಿ ಆಹ್ ಅಯ್ಯೋ ಅ೦ದೆ ,. ಪ್ರಕಾಶ್; ಸರಿ ಬಿಡಪ್ಪ ನಿ೦ಗೆ ಕಸ್ಟ ಆಗುತ್ತೆ ಬಿಡು, ಸರಿ ಹೋಗ್ಲಿ ಡಿಕ್ಕಿ ಆಗುವುದಕ್ಕೂ ಮದಲು ಎಸ್ಟು ಎತ್ತರ ಎತ್ತಿದ್ದೆ ತೋರ್ಸು.. ನಾ ಲಗುಬಗೆಯಿ೦ದ ಅನಾಯಾಸವಾಗಿ ಕೈ ಮೇಲೆ ಎತ್ತಿ ತೋರಿಸಿ ಆಗ ಇಸ್ಟು ಎತ್ತರ ಎತ್ತಿದ್ದೆ ಸಾರ್ ಅ೦ದೆ ಜ೦ಭದಿ೦ದ.. ಜಡ್ಜ್ ಜತೆಗೆ ಅಲ್ಲಿದ್ದವರೆಲ್ಲ ನಗುವುದು ಕ೦ಡ ಮೇಲೆ ನನಗರ್ಥವಾದ್ದು ಥೋ ಮ೦ಗ ಆಗ್ಬಿಟ್ಟೆ. ಕಾಸೂ ಹಾಳು, ಮೀಸೇಯೂ ಬೋಳು ಆತಲ್ಲಾ ನನ್ನ ಕೇಸು.. 

No comments:

Post a Comment