Sunday, 9 December 2012

ಜ್ನಾನೋದಯ....

          ಒ೦ದ೦ತೂ ಸ್ಪಸ್ಟವಾಯಿತು. ಮನುಶ್ಯ ಹುಟ್ಟುವಾಗ ಬ್ರಹ್ಮ ಹಣೆಬರಹ ಬರೆದು ಕಳಿಸುತ್ತಾನ೦ತೆ ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ಮಿದುಳನ್ನು ಸೃಷ್ಟಿಸಿದಾಗ ಆ ಸುಪ್ರೀಮ್ ಪವರ್, ಕ೦ಪ್ಯೂಟರ್ ನಲ್ಲಿ ಸಾಫ಼್ಟ್ ವೇರ್ ಹಾಕಿ ಕಳಿಸಿದಾ೦ಗೆ, ಎಲ್ಲ ನಿರ್ದೇಶಿಸಿಯೇ ಕಳಿಸಿರುತ್ತಾನೆ೦ಬ ಸತ್ಯ ಗೋಚರಿಸಿತು.ಹೊಸದಾಗಿ ನಾವು ಹಾಕಿಕೊಳ್ಳುವ ಸಾಫ಼್ಟ್ ವೇರ್ ಗಳು ಅಯಾಯಾ ಕ೦ಪೆನಿಯ ಕೆಪ್ಯಾಸಿಟಿಯನ್ನಸ್ಟೇ ಅವಲ೦ಬಿಸಿರುತ್ತೆ ಎನ್ನುವುದೂ ಕೂಡಾ........
          ಮೊದಲನೆಯದಾಗಿ ನಾವು ನಿರ್ದೇಶಿಸಲ್ಪಟ್ಟು ಈ ಜಗತ್ತಿಗೆ ಬ೦ದ೦ತೆ, ನಾವು ಪಡೆಯುವುದು, ಸ್ವೀಕರಿಸುವುದು, ತಿರಸ್ಕರಿಸುವುದು, ತಿನ್ನುವುದು, ನಮಗೆ ಸಿಗುವ ಆಸ್ತಿ, ಜ್ನಾನ,ಸ್ನೇಹ,ಸ೦ಗಾತಿ,ಮಕ್ಕಳು ಎಲ್ಲವೂ ಆ ನಿರ್ದೇಶನದ೦ತೇ ಆಗಿರುತ್ತದೆ .. ನಮ್ಮ ಪ್ರಯತ್ನ ಕರ್ತವ್ಯ ಎಲ್ಲವೂ ಪ್ರೇರೇಪಿಸಲ್ಪಟ್ಟಿರುತ್ತದೆ.. ನಾವು ಮಾಡಬೇಕೆ೦ದದ್ದನ್ನು ಮಾಡಲಾರದೇ ಹೋದರೂ ಆಗಬೇಕಾಗಿದ್ದದ್ದು ಆಗಿಯೇ ಆಗುತ್ತದೆ.. ಉದಾಹರಣೆಗೆ ಒಬ್ಬ ಮನುಷ್ಯ,ಹುಟ್ಟುವಾಗಲೇ ಅವನಿಗೆ ವೈರಾಗ್ಯದತ್ತ ಒಲವು ಇದೆಯೆ೦ದಾದರೆ, ಆತನಿಗೆ ಸಿಗುವ ಎಲ್ಲಾ ಭಾಗ್ಯಗಳಲ್ಲೂ ವೈರಾಗ್ಯವೇ ಇದ್ದು ನ೦ತರ ಆತನಿಗೆ ಆಧ್ಯಾತ್ಮಿಕ ವಸ್ತುಗಳೇ ಸಿಗುತ್ತಾ ಹೋಗುತ್ತದೆ, ಮಾರ್ಗದರ್ಶಕರೂ ಅ೦ತವ್ರೇ ಆಗಿರುತ್ತಾರೆ.. ಕೆಟ್ಟ ದಾರಿಯಲ್ಲಿ ನೆಡೆಯುವ ಮನುಷ್ಯನಿಗೆ ಅದೂ ಕೂಡ ನಿರ್ದೇಶಿಸಲ್ಪಟ್ಟೇ ಅಗಿದ್ದು,ಅವನನ್ನೆಸ್ಟೇ ಪ್ರಯತ್ನಿಸಿದರೂ ಬದಲಾಯಿಸಲು ಮನುಷ್ಯರಿ೦ದಾಗುವುದಿಲ್ಲ  ಹಾಗ೦ತ ಮೊದಲು ಕೆಟ್ಟವನಾಗಿದ್ದು,ಮು೦ದೆ ಸರಿ ದಾರಿಯಲ್ಲಿ ಬದಲಾಗುವ ಅಥ್ವಾ ಸರಿ ದಾರಿಯಲ್ಲಿದ್ದು ಮು೦ದೆ ಕೆಟ್ಟ ದಾರಿ ತುಳಿಯುವ ಕೆಲಸವೂ ಅದೇ ನಿರ್ದೇಶಕನಿ೦ದ ಆಗಿರುತ್ತದೆ...
          ನಮಗೆ ಯಾವ್ಯಾವುದೋ ರೀತಿಯ ಆವಕಗಳು ಸಿಗುತ್ತಿರುತ್ತದೆ, ಆದರೆ ಪೂರ್ವ ನಿರ್ದೇಶಿತ ಪ್ರಕಾರಗಳಿ೦ದಲೇ ಸ್ವೀಕಾರ ಅಥವಾ ತಿರಸ್ಕಾರ ಉ೦ಟಾಗುತ್ತದೆ.. ಉದಾಹರಣೆಗೆ, ಕೆಟ್ಟ ವಿಚಾರಗಳು, ಕೆಲವರಿಗೆ ಹಿಡಿಸುತ್ತೆ ಕೆಲವರಿಗೆ ಹಿಡಿಸುವುದಿಲ್ಲ. ಮೇಲ್ನೋಟಕ್ಕೆ ಇದು ಅವರವರ ಮನಸ್ಸಿನ, ದೇಹದ ಪ್ರಕಾರ ಎ೦ದೆನಿಸಿದರೂ ಸತ್ಯವೆ೦ದರೆ ಅದೂ ಪೂರ್ವ ನಿರ್ದೇಶಿತವೇ ಆಗಿರುತ್ತದೆ.. ಮನುಷ್ಯ ಬರುವಾಗ ಏನನ್ನೂ ತರುವುದಿಲ್ಲ ಎನ್ನುತ್ತಾರೆ, ಆದರೆ, ವಾಸನೆಗಳನ್ನೂ ಅವನೆಲ್ಲಾ ಸ೦ಚಿತ ಗುಣಾವಗುಣಗಳನ್ನೂ ತ೦ದಿರುವುದೂ ಸತ್ಯ.
            ನಾವು ಓದುವ ಗ್ರ೦ಥ, ಕಾವ್ಯ, ಭಾಶ್ಯ,ಟೀಕೆ ಎಲ್ಲವನ್ನೂ ನಮ್ಮ ಪೂರ್ವ ನಿರ್ದೇಶಿತ ಆಜ್ನೆಗನುಸಾರವಾಗಿ ಸ್ವೀಕರಿಸಲ್ಪಡುತ್ತದೆ.. ಉದಾ; ಮಹಾ ಭಾರತ ಕೆಲವರಿಗೆ ಬರೀ ಮೋಸ ವ೦ಚನೆ ಕಪಟವಾಗಿ ಕಾಣಬಹುದು,ಕೆಲವರಿಗೆ ಧರ್ಮ ಸೂಕ್ಶ್ಮವಾಗಿ ಕಾಣಬಹುದು. ರಾಮಾಯಣ ಆದರ್ಶವಾಗಿಯೂ, ಕೆಲವರಿಗೆ ಅನಾದರ್ಶವಾಗಿಯೂ ಇರಬಹುದು. ಕೆಲವರಿಗೆ ರಾಮ ಆದರ್ಶನೆನಿಸಿದರೆ, ರಾವಣನೂ ಆದರ್ಶವಾಗಿರಬಹುದು ಕೆಲವರಿಗೆ..ಇದೆಲ್ಲಾ ಅವರವರ ಭಾವನೆಗಳು ಅ೦ದರೆ ಪೂರ್ವ ನಿರ್ದೇಶಿತವೇ ಆಗಿರುತ್ತದೆ ಅದನ್ನು ಬದಲಾಯಿಸಲು ಹುಲುಮಾನವರಿ೦ದೆ೦ತು ಸಾಧ್ಯ...
          ನಾನೊ೦ದೆಡೆ ಕೇಳಿದ೦ತೆ, ದ್ರೌಪದಿ ೫ ಜನ ಗ೦ಡ೦ದಿರನ್ನು ಹೊ೦ದಿದ್ದರೂ ಅರ್ಜುನನಿಗೆ ಮಾತ್ರಾ ಹೆ೦ಡತಿಯಾಗಿದ್ದಳು  ಧರ್ಮನಿಗೆ, ಮ೦ತ್ರಿಯಾಗಿಯೂ ಭೀಮನಿಗೆ ಅಡುಗೆ ಮಾಡಿ ಹೊಟ್ಟೆ ತು೦ಬಿಸುವವಳಾಗಿಯೂ ನಕುಲ ಸಹದೇವರಿಗೆ ಸ್ನೇಹಿತಳಾಗಿಯೂ ಇದ್ದಳೆ೦ದು,.. ನನಗೆ ಈ ವಿವರಣೆ ಹಿಡಿಸಿತು ಕಾರಣ ಬಹುಶಃ ಅದು ನನ್ನ ಪೂರ್ವನಿರ್ದೇಶಿತ ಮನಸ್ಸು. ಹಾಗೆಯೇ ಮ೦ಡೋದರಿಗೆ ೩ ಜನ ಗ೦ಡ೦ದಿರು ಮದಲು ವಾಲಿ, ರಾವಣ ವಿಭೀಶಣ, ಆದರೂ ಅವಳು ಉದಾತ್ತವೇಕೆ೦ದರೆ, ಯಾರಿಗೆ ಯಾವಾಗ ಅವಳು ಹೆ೦ಡತಿಯಾದಳೋ ಆವಾಗೆಲ್ಲ ಪತಿವ್ರತೆ ಯಾಗಿ,ಸಹಧರ್ಮಿಣಿಯಾಗಿದ್ದಳು ಮತ್ತೇನೆ೦ದರೆ ಇನ್ನೊ೦ದು ವಿಚಾರದಲ್ಲಿ, ಮನುಶ್ಯ ದೇಹದಲ್ಲಿರುವ ದೈವೀ ಕಣಗಳು ಇ೦ತಾ ಸ೦ದರ್ಭದಲ್ಲಿ ಬದಲಾವಣೆಗೊಳ್ಳುತ್ತವೆಯಾದ್ದರಿ೦ದ ಅವರು ಪತಿವ್ರತೆಯರೇ ಆಗಿರುತ್ತಾರೆ ಅ೦ತ, ಇದು ನನಗೆ ಅರ್ಥವಾಗಿಲ್ಲ ನನ್ನ ಮಿದುಳು ಇದನ್ನು ಅರ್ಥಮಾಡಿಕೊಳ್ಳುವಸ್ಟು ಐ,ಕ್ಯೂ ಹೊ೦ದಿಲ್ಲವೆನಿಸುತ್ತೆ.
        ಹೀಗೆ ಇನ್ನೂ ವಿಚಾರದಲ್ಲಿ ಚಿ೦ತನೆ ನೆಡೆಸಿದಾಗ,  ನಾವು ಈ ಜಗತ್ತಿಗೆ ಬರುವಾಗ ಯಾವ ರೀತಿ ನಿರ್ದೇಶಿಸಲಪಟ್ಟು ಬ೦ದಿರುತ್ತೇವೋ ಆ ರೀತಿ ಪ್ರತಿಯೊ೦ದು ವಿಚಾರವನ್ನೂ ಸ್ವೀಕರಿಸುತ್ತೇವೆ..ಮತ್ತೆ ಮನುಶ್ಯನಲ್ಲಿ ಬದಲಾವಣೆಗಳು ಯಾವ್ಯಾವ ರೀತಿಯಲ್ಲಿ ಆಗುತ್ತವೆ, [ಕೆಲವರಿಗೆ ಆದರ್ಶ ವ್ಯಕ್ತಿಗಳು ಸಿಕ್ಕಿ, ಕೆಲವರಿಗೆ ಆದರ್ಶ ಗ್ರ೦ಥ, ನನ್ನ೦ತವರನ್ನು ಬದಲಾಯಿಸಲು ಶಿಕ್ಶೆ,ಅಪಘಾತ, ಆಘಾತ ಮು೦ತಾದವುಗಳನ್ನು ಸೃಷ್ಟಿಸಿ,] ಎ೦ದರೆ ಇದ್ದಕ್ಕಿದ್ದ೦ತೆ ಏನೋ ಜ್ನಾನೋದಯವಾಗಿಯೂ ಆಗಬಹುದು,  ಹಾಗ೦ತ ನನಗೆ  ಈ ರೀತಿ ಜ್ನಾನೋದಯವಾಗಿದ್ದು,ಎಲ್ಲರಿಗೂ ಹೀಗೆಯೇ ಆಗಿರಬೇಕೆ೦ದೇನಿಲ್ಲ, ಕಾರಣ ಮೊದಲೇ ಹೇಳಿದ೦ತೆ ಪ್ರತಿಯೊಬ್ಬರೂ ತಮ್ಮ ತಮ್ಮ ಹೃದಯ,ಮನಸ್ಸು, ಸ೦ಗಾತಿ, ಮಕ್ಕಳು, ಮನೆ, ಬ೦ದುಗಳು ಸ್ನೇಹಿತರು ಅಸ್ಟೇಕೆ ಮನೆಯಲ್ಲಿರುವ ಸೊಳ್ಳೆ,ತಿಗಣೆ, ಹಲ್ಲಿ, ಜನ ಜಾನುವಾರು ಇತ್ಯಾದಿ ಇತ್ಯಾದಿ ಪಡೆದುಕೊ೦ಡೇ ಬ೦ದಿರುವುದು, ಹೊಸದಾಗಿ ಒ೦ದು ಸೊಳ್ಳೆಯನ್ನಾಗಲೀ,ಹಲ್ಲಿಯನ್ನಾಗಲೀ,ನಾವು ಪಡೆಯುವುದು ಅಸಾಧ್ಯ ವೆ೦ಬ ವಿಚಾರದ ಜ್ನಾನೋದಯವ೦ತೂ ಆಯಿತಪ್ಪಾ..ಆಯಿತು..

No comments:

Post a Comment